ಕಾವ್ಯ ಸಂಗಾತಿ
ಸುಹಾಸ್ ಶ್ರೀವತ್ಸ
ಭಾವಗೀತೆ


ಈ ಬದುಕ ಬದುಕುವುದ ಕಲಿಯಲು ಈ ಬದುಕು ಸಾಕೇ?
ಈ ಬದುಕ ಸವಿಯ ಸವಿಯಲು ಈ ಬದುಕು ಸಾಕೇ?
ನಿನ್ನ ಜೀವನವೇ ಒಂದು ಹಾಡು,
ಅದರ ಸಾಲು ಬರೆದವರಾರು?
ಅರಿಯದ ಪದಗಳಿಗೂ ಅರ್ಥವಿದೆ,
ಲಯದಲಿ ಹಾಡಿದರೆ ಹಿತವಿದೆ.
ಹಾಡಿನ ಭಾಷೆಯೇ ಬೇರಾದರೂ,
ಭಾವಕ್ಕೆ ಬೇಕಿಲ್ಲ ಭಾಷಾಂತರ;
ಇದ್ದರೂ ಬದುಕಿನಲ್ಲಿ ಎಷ್ಟೇ ಅಂತರ,
ನಿನ್ನ ಬದುಕನ್ನು ಪ್ರೀತಿಸು ನೀ ನಿರಂತರ.
ಯಾರದೋ ರಾಗಕ್ಕೆ, ಯಾರದೇ ತಾಳಕ್ಕೆ,
ನಿನ್ನ ಸ್ವರವನ್ನು ಶ್ರುತಿಯಲಿ ಸೇರಿಸು;
ಜೀವವು ಜನನಿಯದು,
ಜೀವನ ನಿನ್ನದು.
ಸುಹಾಸ್ ಶ್ರೀವತ್ಸ




ಚನ್ನಾಗಿದೆ
ಹೃದಯಕ್ಕೆ ತುಂಬಾ ಹತ್ತಿರವಾಗುವ ಸಾಲುಗಳು. ತುಂಬಾ ಚೆನ್ನಾಗಿದೆ.
ತುಂಬ ಚೆನ್ನಾಗಿದೆ
Nice one
ಬದುಕಿನ ಸಾರವನ್ನು ತುಂಬಾ ಸರಾಗವಾಗಿ ತಿಳಿಸಿದ್ದಿರಿ