ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಹುಣ್ಣಿಮೆಯ ಚಂದಿರ ಬಾನಲಿ ಬಂದಿಹನು ಗೆಳೆಯ.
ತಣ್ಣನೆಯ ಗಾಳಿಯಲಿ ಅಲೆಗಳ ತಂದಿಹನು ಗೆಳೆಯ.

ಸಮುದ್ರದ ಮಧ್ಯದಲಿ ಮೋಹಕ ಬೆಳಕು ಹರಡಿದೆಯಲ್ಲವೇ
ಕೌಮುದಿಯ ಸೊಬಗ‌‌ ಬೀರುತ ನಿಂದಿಹನು ಗೆಳೆಯ

ಎತ್ತರದ ಸಾಲಿನಲಿ ಮಿನುಗುವ ದೀಪಗಳು ಕಾಣುತಿವೆ 
ಉತ್ತರದ ದಿಕ್ಕಿನಲಿ ಮಾರುತ ಕುಂದಿಹನು ಗೆಳೆಯ.

ಒಟ್ಟಾಗಿ ಹೆಜ್ಜೆಗಳ ಸೇರಿಸುತ ಮೆಟ್ಟಿಲುಗಳ ಏರೋಣ 
ಪಟ್ಟಾಗಿ ಗೆಜ್ಜೆಯ ನಾದದಲಿ ಮಿಂದಿಹನು ಗೆಳೆಯ

ಶಶಿಯ ಸನಿಹ ಜಯಳಿಗೆ ಲಜ್ಜೆಯ ತೋರಿದೆ 
ನಿಶೆಯ ಒಲವೇ ಸಂಭ್ರಮ ಎಂದಿಹನು ಗೆಳೆಯ 


About The Author

Leave a Reply

You cannot copy content of this page

Scroll to Top