ಕಾವ್ಯ ಸಂಗಾತಿ
ಜಯಶ್ರೀ ಭ.ಭಂಡಾರಿ
ಗಜಲ್


ಹುಣ್ಣಿಮೆಯ ಚಂದಿರ ಬಾನಲಿ ಬಂದಿಹನು ಗೆಳೆಯ.
ತಣ್ಣನೆಯ ಗಾಳಿಯಲಿ ಅಲೆಗಳ ತಂದಿಹನು ಗೆಳೆಯ.
ಸಮುದ್ರದ ಮಧ್ಯದಲಿ ಮೋಹಕ ಬೆಳಕು ಹರಡಿದೆಯಲ್ಲವೇ
ಕೌಮುದಿಯ ಸೊಬಗ ಬೀರುತ ನಿಂದಿಹನು ಗೆಳೆಯ
ಎತ್ತರದ ಸಾಲಿನಲಿ ಮಿನುಗುವ ದೀಪಗಳು ಕಾಣುತಿವೆ
ಉತ್ತರದ ದಿಕ್ಕಿನಲಿ ಮಾರುತ ಕುಂದಿಹನು ಗೆಳೆಯ.
ಒಟ್ಟಾಗಿ ಹೆಜ್ಜೆಗಳ ಸೇರಿಸುತ ಮೆಟ್ಟಿಲುಗಳ ಏರೋಣ
ಪಟ್ಟಾಗಿ ಗೆಜ್ಜೆಯ ನಾದದಲಿ ಮಿಂದಿಹನು ಗೆಳೆಯ
ಶಶಿಯ ಸನಿಹ ಜಯಳಿಗೆ ಲಜ್ಜೆಯ ತೋರಿದೆ
ನಿಶೆಯ ಒಲವೇ ಸಂಭ್ರಮ ಎಂದಿಹನು ಗೆಳೆಯ
ಜಯಶ್ರೀ ಭ.ಭಂಡಾರಿ.



