ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಹಿಂದೆಂದಿನಂತೆ ನೀಲಿ ಚಪ್ಪರದಲ್ಲಿ
ಚುಕ್ಕಿ-ಚಂದ್ರಮರ ತೋರಣ ಕಟ್ಟಿ,
ಕಾಮನಬಿಲ್ಲಿನ ರಂಗೋಲಿ ಹಾಕಿ,
ಕುಣಿವ ಮುಂಗಾರಿನ ಕೋಲ್ಮಿಂಚುಗಳಿಗೆ
ಬೆಳ್ಳಿ ಒಡ್ಯಾಣವ ತೊಡಿಸಿ ಸಂತೈಸಿ,
ಕರಿಮೋಡ ಬಳಿ ಕರೆದು ಕನಿಕರದಿ
ಮಳೆ ಸುರಿಸೆಂದು ಬಿನ್ನವಿಸಿದೆ.

ಮುತ್ತಿನ ಮಳೆ ಸುರಿಯಲು ಗುಬ್ಬಿ,
ಬೆಳ್ಳಕ್ಕಿಗಳ ನೆಂಟರು
ಬರುವರೆಂದು ಕಾದು ಕುಳಿತಾಗ,
ಬಡಿಯಿತು ಬರಸಿಡಿಲು!!

ಹೇ ಕೃತಘ್ನ, ಅರಿವಾಗದೆ ನಮ್ಮ
ಪ್ರೀತಿ ಸೌಹಾರ್ದಗಳ ಅಂತರಾಳ,
ನಿನ್ನ ಡೈನಮೈಟ್ ಸದ್ದಿಗೆ, ಮುಸುಕಿದ ಕಾರ್ಮೋಡಕೆ,
ನೀನಿಟ್ಟ ಕೊಳ್ಳಿಗೆ ಮೈ ಸುಟ್ಟ ಭೂತಾಯಿ
ನೋಡಿ,
ಮುಂಗಾರಿನ ಸಿಡಿಲಿಗೂ ಹೆದರದವ
ನಿನ್ನ ಅಟ್ಟಹಾಸಕೆ ನಡುಗಿ ಹೋದೆ!!
ಆಗರಿವಾಯಿತು –
ಇದು ರಕ್ಕಸರ ನಾಡು! ಮತಾಂಧರ ಬೀಡು! ಎಂದು,

ಗುಡ್ಡ ಕುಸಿದು ರಕ್ತ ಬಸಿದು, ಇಟ್ಟ ಕೊಳ್ಳಿಯಲಿ
ಬೆಂದ ಕಂದಮ್ಮಗಳ ಭಸ್ಮ ಧರಿಸಿ, ಆಣೆ ಮಾಡಿ ಹೇಳುವೆ,
ಖಂಡಿತ ಇದು ಒಳಿತಿಗಲ್ಲ, ಅವಸಾನದ ಕಾಲ.
ಅದರಾಚೆಗೆ.. ಹಾ.. ಕೇಳಿಲ್ಲಿ…

ನಾ ಕಾಣುತ್ತಿರುವ ಕನಸಿನ ಮಾತನು,
ಖಂಡಿತ ನೀ ಸುಟ್ಟ
ಭೂತಾಯಿಯ ಹೊಟ್ಟೆಯಿಂದ
ಮತ್ತೆ ಹುಟ್ಟಿ ಬರುವರು, ರಕ್ಷಿಸಲು ಬಸವೇಶ, ಕಾರಂತರಂತ ಪುಣ್ಯಾತ್ಮರು,
ಆಗ ಮತ್ತೆ ಚಿಗುರುವ ಹಸಿರು,
ಮತ್ತ ಕೋಗಿಲೆಗಳ ಋತುಗಾನ,
ಓಹ್!!
ಮತ್ತೆ ಕಾಣುವೆ ಈ ನೀಲಾಗಸದ ಹಸಿರು ಬೆಟ್ಟದಡಿ
ಆ ಕಾಮನಬಿಲ್ಲಿನ ಅದೇ ಬೆಳ್ಳಿ ದಿಗಂತದ
ಚಂದ್ರ-ತಾರೆಗಳ ಮೋಹಕ ದಿಬ್ಬಣ!!


About The Author

1 thought on “ ಶಶಿಕಲಾ ಚಂದ್ರಶೇಖರ ಅವರ ಕವಿತೆ “ನೀಲಾಗಸದ ಕನಸು””

Leave a Reply

You cannot copy content of this page

Scroll to Top