ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನಿನ್ನ ಮೌನ ಸಹವಾಸ ಬೇಡ ಅನ್ನುವಂತಿದೆ ಮಾತಾಡು ಸಖಿ
ನಿನ್ನ ಇಣುಕು ನೋಟ ಕಾಡುವಂತಿದೆ ಮಾತಾಡು ಸಖಿ

ದಿನ ದಿನವೂ ನನ್ನ ಸುತ್ತ ಸುಳಿಯುತ್ತಿದ್ದವಳು ನೀನು
ನಿನ್ನ ಕಣ್ಣು ಮುಚ್ಚಾಲೆ ಕೊಲ್ಲುವಂತಿದೆ ಮಾತಾಡು ಸಖಿ

ನೀ ಬರೆದ ಓಲೆಯ ಪದಗಳು  ನನ್ನ ಮನ ತುಂಬಿ ನಲಿದಾಡುತ್ತಿದ್ದವು
ನಿನ್ನ ಸಂದೇಶ ಬರದೆ ಮನ ಮೂಕವಾದಂತಿದೆ ಮಾತಾಡು ಸಖಿ

ನಡೆವ ಹೆಜ್ಜೆಗೆ ಅಡಿಗಡಿಗೆ ದಾರಿ ತೋರಿಸಿದವಳು ನೀನು
ನಿನ್ನ ಬೆಳಕಿಲ್ಲದೆ ಕಣ್ಣು ಕುರುಡಾದಂತಿದೆ ಮಾತಾಡು ಸಖಿ

ನೀನಿಲ್ಲದೆ ಬದುಕ ಬಲ್ಲೆನಾದರೂ ಸಗ್ಗವಿಲ್ಲ ಆ ಬಾಳಲ್ಲಿ
ಭಾಗ್ಯದ ನಿನ್ನ ನುಡಿಯಿಲ್ಲದೆ ಮೌನ ನರಕದಂತಿದೆ ಮಾತಾಡು ಸಖಿ.


About The Author

2 thoughts on “ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್”

Leave a Reply

You cannot copy content of this page

Scroll to Top