ಕಾವ್ಯ ಸಂಗಾತಿ
ಗೊರೂರು ಅನಂತರಾಜು
ಹನಿಗವನಗಳು


ಇದು ಸರಿಯೇ..?
ಹುಡುಗಿ
ಈ ಭೂಮಿಗೆ
ಗುರುತ್ವಾಕರ್ಷಣಿ ಶಕ್ತಿ
ಇರುವಂತೆ ನಿನ್ನಲ್ಲೂ ಇದೆ
ಇದು ಸರಿಯೇ..?
ಹುಡುಗ
ಕೈ ಹಿಡಿಯುವುದಾಗಿ ನಂಬಿಸಿ
ನನ್ನ ಬಯಕೆಗಳಿಗೆ
ಬೆಂಕಿ ಸುರಿದು
ಈಗ ಸಾರಿ ಎಂದು
ತಣ್ಣೀರು ಸುರಿಯುತ್ತಿರುವೆ
ಇದು ಸರಿಯೇ..?
ಹುಡುಗಿ
ನನ್ನ ಬಾಳೇ ಗಾಳಿಗೋಪುರ
ಇನ್ನೂ ನಿನ್ನ ಪ್ರೀತಿಗಾಗಿ
ತಾಜ್ ಗೋಪುರ ಕಟ್ಟಿಸಲು
ಕೇಳುವೆಯಲ್ಲಾ
ಇದು ಸರಿಯೇ..?
ಹುಡುಗ
ನೀನಿದ್ದ ಮನೆಗೆ
ನಮ್ಮಪ್ಪನಿಗೆ ಬಾಡಿಗೆ ನೀಡಿದೆ
ಆದರೆ ನನ್ನ ಮನದಲ್ಲಿ
ನೆಲೆಸಿದ್ದಕ್ಕೆ ಬಾಡಿಗೆ
ನೀಡದೆ ಓಡಿಹೋದೆ
ಇದು ಸರಿಯೇ..?
ಹುಡುಗಿ
ಆ ಶ್ರೀಕೃಷ್ಣ ತನ್ನ ಭಕ್ತನಿಗೆ
ಗೋಡೆ ಒಡೆದು
ದಶ೯ನ ಭಾಗ್ಯ ಕರುಣಿಸಿದ
ನಿನ್ನ ಭಕ್ತ ಈ ಕರುಣಾಕರನಿಗೆ
ಮನೆಯ ಕಿಟಕಿ ತೆರೆದು
ಮುಖ ತೋರದೆ ಕಾಡಿಸುವೆಯಲ್ಲಾ
ಇದು ಸರಿಯೇ…?
ಹುಡುಗ
ಮದುವೆಗೆ ಮೊದಲು ನೀ
ನನಗೆ ಗುರಿಯಿಟ್ಟೆ
ಈಗ ನನ್ನ ದಾರದ
ಬುಗುರಿ ಆಗಿಬಿಟ್ಟೆಯೆಲ್ಲಾ
ಇದು ಸರಿಯೇ…?
ಗೊರೂರು ಅನಂತರಾಜು,



