ಕಾವ್ಯ ಸಂಗಾತಿ
ಕಾವೇರಿ ಪಾಟೀಲ ಶಹಾಪುರ
“ಮತ್ತೆ ಭಾವ ಚಿಗುರಿತು”


ಬರಿದಾಗಿದ್ದ ಎದೆಯ
ಬರಡು ಮರದಲ್ಲಿ,
ಮೌನ ಆವರಿಸಿದ
ರೆಂಬೆ ಕೊಂಬೆಯಲ್ಲಿ,
ಹಳೆಯ ನೆನಪಿನ
ಎಲೆಯು ಉದುರಿ,
ಹೊಸದೊಂದು ಆಸೆ
ಮೂಡಿತು ಚೈತ್ರ ಚೆಲುವು.
ಬಾಗಿದ ಬಾಡಿದ ಹೂವಿನ
ಒಣಗಿದ ಗಿಡಕೆ,
ಒಲವಿನ ಹನಿಗಳು
ತಗುಲಿದ ತಕ್ಷಣ,
ನಿದ್ದೆಗೆ ಜಾರಿದ
ಕನಸುಗಳೆಲ್ಲ,
ಕಣ್ಣಿನ ಅಂಚಲಿ
ನರ್ತಿಸದ ಕ್ಷಣ.
ಕೇಳದೆ ಬಂದ
ಆ ಭಾವ ಕನ್ನಿಕೆ,
ಹೇಳದೆ ಮೂಡಿಸಿದ
ಪ್ರೀತಿಯ ಭಾವ,
ಅಲೆಯಿಲ್ಲದ ಪ್ರಶಾಂತ
ತುಂಬಿದ ಕಡಲಲಿ,
ಎದ್ದಿದೆ ಈಗ ಹೊಸದೊಂದು
ತೀವ್ರ ಚಲನೆ.
ತುಟಿಗಳ ಮೇಲೆ
ಮೂಡಿದೆ ನಗುವು,
ಮನಸಿನ ತುಂಬೆಲ್ಲಾ
ಹಸಿರ ಸಿರಿಯು,
ಕಾಲದ ಮರೆಯಲ್ಲಿ
ಅಡಗಿದ್ದ ಒಲವು,
ಮತ್ತೆ ಚಿಗುರಿ ಅರಳಿತು ಇಂದು!
ಬರುವ ನಾಳೆ ನನ್ನದು
ಕಾವೇರಿ ಪಾಟೀಲ ಶಹಾಪುರ



