ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ನನ್ನ ನೆರಳು”


ಬೆಳಕಿನ ಹಾದಿಯಲಿ
ನೀ ಜೊತೆಯಾಗಿ ನಡೆವೆ,
ಕತ್ತಲೆಯ ಕೋಣೆಯಲಿ
ಮೌನವಾಗಿ ಅಡಗುವೆ.
ಸುಖದ ದಿನಗಳಲಿ
ನೀಳವಾಗಿ ಬೆಳೆಯುವೆ,
ಕಷ್ಟದ ದಿನಗಳಲಿ
ನಿನ್ನೊಳಗೆ ಕರಗುವೆ.
ಮೌನಕ್ಕೆ ಜಾರುವೆ
ನಾ ನಕ್ಕರೆ ನೀ ನಗುವೆ ,
ನಾ ಅತ್ತರೆ ನೀ ಮರುಗುವೆ .
ನನ್ನ ಹೆಜ್ಜೆಗೆ ನಿನ್ನ ಹೆಜ್ಜೆ ,
ಸಾಗುವೆ ನೀನು ನನ್ನ
ಒಲವಿನ ದನಿ.
ಬಿಸಿಲಿಗೆ ಬೆಂದು
ಮಳೆಗೆ ನೆನೆದು
ಚಳಿಯಲ್ಲಿ ಕೊರಗುವೆ
ಒಳಗೆ ನೊಂದು
ಜಗದ ಜನ ಕೈಬಿಟ್ಟರೂ ,
ನೀನು ಜೊತೆ ಇದ್ದೆ
ಪ್ರತಿ ಘಳಿಗೆ.
ನನ್ನದೇ ಪ್ರತಿಬಿಂಬ,
ನನ್ನದೇ ಒಡನಾಡಿ,
ನೀನೇ ನನ್ನ ಪ್ರಾಣ
ಸಾರ್ವಕಾಲಿಕ ಗೆಳೆಯ,
ನಿತ್ಯ ಹಿಂಬಾಲಿಸುವ
ಓ ನನ್ನ ನೆರಳು!
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ




“ನನ್ನ ನೆರಳು “ತುಂಬಾ ಅರ್ಥಪೂರ್ಣವಾದ ಕವನ .ಧನ್ಯವಾದಗಳು ಸರ್.
ಅರ್ಥಪೂರ್ಣ ಕವನ ಸರ್
ಸುಂದರ ವಾದ ಕವನ ಸರ್.