ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್


ಜ್ವಲಿಸುವ ಪ್ರೀತಿಯ ಸಹಿಸಿ ನುಂಗಲೆಂಗ ಹೇಳು
ಸುಡುವ ಕೆಂಡವ ಕಟ್ಟಿಕೊಂಡು ತಾಳಲೆಂಗ ಹೇಳು
ಬಯಕೆ ಬಾಂದಳ ತೋಟ ನಳನಳಿಸುತಿದೆ ನೋಡು
ಒಲವಿನೊರತೆಯ ಒತ್ತರವ ತಡೆಯಲೆಂಗ ಹೇಳು
ಮನಸು ಕಂಡ ಆಸೆಯೆಲ್ಲಾ ಫಲಿಸದೆಂದು ನಾ ಬಲ್ಲೆ
ಪ್ರೇಮದುಯ್ಯಾಲೆಯ ಏರಿಳಿತ ತಾಳಲೆಂಗ ಹೇಳು
ಜೀವ ಜೀವಕಂಟಿದ ನಂಟಿನ ಗಂಟು ಬಿಡಿಸಲುಂಟೆ
ಪ್ರೇಮಾಮೃತವೇ ವಿಷವಾದರೆ ಬಾಳಲೆಂಗ ಹೇಳು
ಒಡಲಾಳ ವಿರಹ ಭೋಗ೯ರೆತಕೆ ಸಿಕ್ಕು ತಪ್ತವಾಗಿದೆ
ತುಟಿಯ ಮಧು ಹೆಪ್ಪುಗಟ್ಟಿದರೆ ಉಸುರಲೆಂಗ ಹೇಳು
ಸರಸವಿಲ್ಲದ ಕೋಲಾಹಲ ಅವುಡುಗಚ್ಚಿಸಿ ಚುಚ್ಚುತಿದೆ
ಹಾರಬೇಕೆನುವ ಬಯಕೆ ಪುಕ್ಕವ ಕತ್ತರಿಲೆಂಗ ಹೇಳು
ಹುಚ್ಚೆದ್ದ ಆಸೆಗಳ ಸೊಕ್ಕನೆಲ್ಲ ಮುರಿಯಲಾಗುತಿಲ್ಲ
ಕುದಿವ ಬೆಚ್ಚನೆಯ ಆ ಭಾವ ಹೊಚ್ಚಲೆಂಗ ಹೇಳು
ಅನುಳೆದೆಯಲ್ಲೆ ಅಚ್ಚಾದ ಚಿತ್ರ ಕೊಚ್ಚಿ ಕತ್ತರಿಸಲುಂಟೆ
ಚಿತ್ತ ಬಿತ್ತಿಯ ನೆನಪು ವಿಧಿ ಚೋರಗ ಒಪ್ಪಿಸಲೆಂಗ ಹೇಳು//
ಡಾ ಅನ್ನಪೂರ್ಣ ಹಿರೇಮಠ



