ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು

(ಪ್ರಪಂಚದಾದ್ಯಂತ ದಿ.19ರಂದು ವಿಶ್ವ ಛಾಯಾಗ್ರಾಹಕರ ದಿನವನ್ನು ಆಚರಿಸಲಾಗುತ್ತದೆ ತನ್ನಿಮಿತ್ಯ ಈ ಲೇಖನ )  ***                    ಕಣ್ಣಿಗೆ ಕಾಣುವ ಒಂದು ಕ್ಷಣವನ್ನು ಕ್ಯಾಮೆರಾದ ಕಣ್ಣಿನ ಮೂಲಕ ಸೆರೆಹಿಡಿದು, ಅದನ್ನು ಮುಂದಿನ ಪೀಳಿಗೆಗಳಿಗೂ ಉಳಿಸಿಕೊಡುವ ಛಾಯಾಗ್ರಾಹಕರ ಸೃಜನಶೀಲತೆ ಮತ್ತು ಪರಿಶ್ರಮವನ್ನು ಗೌರವಿಸುವ ದಿನವಿದು.

ಛಾಯಾಗ್ರಹಣವೆಂದರೆ ಕೇವಲ ಒಂದು ಚಿತ್ರ ತೆಗೆಯುವ ತಂತ್ರವಲ್ಲ; ಅದು ಕಾಲವನ್ನು ದಾಖಲಿಸುವ ಕಲೆ. ಒಂದು ಛಾಯಾಚಿತ್ರದಲ್ಲಿ ವ್ಯಕ್ತಿಯ ಭಾವನೆ, ಸಮಾಜದ ಸ್ಥಿತಿ, ಪ್ರಕೃತಿಯ ಸೌಂದರ್ಯ, ಇತಿಹಾಸದ ಹೆಜ್ಜೆಗುರುತು ಹಾಗೂ ಬದುಕಿನ ಅನೇಕ ನೆನಪುಗಳು ಅಡಗಿರುತ್ತವೆ. ಮಾತುಗಳಿಂದ ಹೇಳಲಾಗದ ಭಾವವನ್ನೂ ಒಂದು ಉತ್ತಮ ಛಾಯಾಚಿತ್ರ ಹೇಳಬಲ್ಲದು.

ಒಬ್ಬ ಛಾಯಾಗ್ರಾಹಕ ಸಾಮಾನ್ಯ ದೃಶ್ಯದಲ್ಲಿಯೂ ಅಸಾಮಾನ್ಯ ಸೌಂದರ್ಯವನ್ನು ಕಂಡುಕೊಳ್ಳುತ್ತಾನೆ. ಬೆಳಕು–ನೆರಳು, ಬಣ್ಣ–ಭಾವ, ಕ್ಷಣ–ಕಾಲ ಇವೆಲ್ಲವನ್ನೂ ಸಮನ್ವಯಗೊಳಿಸಿ ಒಂದು ಚಿತ್ರಕ್ಕೆ ಜೀವ ತುಂಬುತ್ತಾನೆ. ಕೆಲವೊಮ್ಮೆ ಒಂದು ಛಾಯಾಚಿತ್ರವೇ ಸಾವಿರಾರು ಪದಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾತನಾಡುತ್ತದೆ.

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್‌ಗಳಲ್ಲಿಯೇ ಅತ್ಯಾಧುನಿಕ ಕ್ಯಾಮೆರಾಗಳು ಲಭ್ಯವಾಗಿವೆ. ಪ್ರತಿಯೊಬ್ಬರೂ ಛಾಯಾಚಿತ್ರ ತೆಗೆಯಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಚಿತ್ರ ತೆಗೆಯುವುದು ಬೇರೆ, ಚಿತ್ರವನ್ನು ಸೃಷ್ಟಿಸುವುದು ಬೇರೆ. ಸರಿಯಾದ ಕ್ಷಣವನ್ನು ಗುರುತಿಸುವ ದೃಷ್ಟಿ, ಬೆಳಕಿನ ಅರಿವು, ಸಂಯೋಜನೆಯ ಪ್ರಜ್ಞೆ ಮತ್ತು ವಿಷಯದ ಮೇಲಿನ ಸೂಕ್ಷ್ಮ ಸಂವೇದನೆ ಒಬ್ಬ ಉತ್ತಮ ಛಾಯಾಗ್ರಾಹಕನನ್ನು ರೂಪಿಸುತ್ತವೆ.

ರೂಪ ದರ್ಶಿ ಫೋಟೋ ಗ್ರಫಿ, ನಿಸರ್ಗ, ವ್ಯಾಪಾರಿ, ಪತ್ರಿಕೋದ್ಯಮ,  ಫಿಲಂ ಫೋಟೋ ಗ್ರಫಿ ಹೀಗೆ ಅನೇಕ ಬಗೆಯ ಫೋಟೋ ಗ್ರಾಫರ್ಗಳ ಜೊತೆಗೆ ಹವ್ಯಾಸಿ ಫೋಟೋ ಗ್ರಾಫರ್ ನಮ್ಮ ನಡುವೆ ಇದ್ದಾರೆ.
ಸುದ್ದಿ ಛಾಯಾಗ್ರಾಹಕರು ಸಮಾಜದ ಘಟನೆಗಳನ್ನು ದಾಖಲಿಸುತ್ತಾರೆ. ಪ್ರಕೃತಿ ಛಾಯಾಗ್ರಾಹಕರು ಪರಿಸರದ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುತ್ತಾರೆ. ವನ್ಯಜೀವಿ ಛಾಯಾಗ್ರಾಹಕರು ಅಪರೂಪದ ಜೀವಿಗಳ ಬದುಕನ್ನು ನಮ್ಮ ಕಣ್ಣಮುಂದೆ ತರುತ್ತಾರೆ. ಕಲಾತ್ಮಕ ಛಾಯಾಗ್ರಾಹಕರು ಕಲ್ಪನೆ ಮತ್ತು ಸೌಂದರ್ಯದ ಹೊಸ ಲೋಕವನ್ನು ನಿರ್ಮಿಸುತ್ತಾರೆ. ಹೀಗೆ ಛಾಯಾಗ್ರಹಣದ ಪ್ರತಿಯೊಂದು ಕ್ಷೇತ್ರವೂ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.

ಒಂದು ಹಳೆಯ ಛಾಯಾಚಿತ್ರವನ್ನು ನೋಡಿದಾಗ ನಾವು ಕೇವಲ ಮುಖಗಳನ್ನು ನೋಡುವುದಿಲ್ಲ; ಅದರೊಂದಿಗೆ ಒಂದು ಕಾಲಘಟ್ಟವನ್ನೇ ಮರುಕಾಣುತ್ತೇವೆ. ಕುಟುಂಬದ ನೆನಪುಗಳಿಂದ ಹಿಡಿದು ಐತಿಹಾಸಿಕ ಘಟನೆಗಳವರೆಗೆ, ಛಾಯಾಚಿತ್ರಗಳು ನಮ್ಮ ಸ್ಮೃತಿಯ ಅಮೂಲ್ಯ ದಾಖಲೆಗಳಾಗಿವೆ.

ಆದ್ದರಿಂದ ವಿಶ್ವ ಛಾಯಾಗ್ರಾಹಕರ ದಿನವು ಕೇವಲ ಛಾಯಾಗ್ರಾಹಕರಿಗೆ ಶುಭಾಶಯ ಕೋರುವ ದಿನವಲ್ಲ. ಕಾಲವನ್ನು ಸೆರೆಹಿಡಿದು ನೆನಪುಗಳಿಗೆ ಜೀವ ನೀಡುವ ಪ್ರತಿಯೊಬ್ಬ ಛಾಯಾಗ್ರಾಹಕನ ಕಲೆಯನ್ನು ಗೌರವಿಸುವ ದಿನ. ಅವರ ಕ್ಯಾಮೆರಾದ ಕಣ್ಣು ಸಮಾಜವನ್ನು ನೋಡುವ ಮತ್ತೊಂದು ಸೂಕ್ಷ್ಮ ಕಣ್ಣಾಗಿದೆ.

ಕ್ಷಣ ಕಳೆದುಹೋಗಬಹುದು; ಕಾಲ ಮುಂದೆ ಸಾಗಬಹುದು; ಆದರೆ ಅದನ್ನು ಪ್ರೀತಿಯಿಂದ ಸೆರೆಹಿಡಿದ ಒಂದು ಛಾಯಾಚಿತ್ರ ಮಾತ್ರ ನೆನಪಾಗಿ ನಮ್ಮೊಂದಿಗೆ ಉಳಿಯುತ್ತದೆ.ಗದಗ ಜಿಲ್ಲೆಯ ಪತ್ರಿಕಾ ಫೋಟೋ ಗ್ರಾಫರ್ ಗಳಿಗೆ ಒಂದು ವಿಶೇಷ ಸ್ಥಾನ ಮಾನ ವಿದೆ ಜೊತೆಗೆ ಇತಿಹಾಸ ಕೂಡ.   ನಾಗಪ್ಪ ಮಹೇಂದ್ರ ಕರ್ ಅವರು 1922ರಲ್ಲಿ ಸ್ಟುಡಿಯೋ ಆರಂಭಸಿದರು. ಮಹಾತ್ಮಾ ಗಾಂಧೀಜಿ ಯವರು ಜಕ್ಕಲಿ ಗೆ ಆಗಮಿಸಿದ ಸಂದರ್ಭವನ್ನು ಸೆರೆ ಹಿಡಿದಿದ್ದು ಈ ನಾಗಪ್ಪ ಅವರೇ. ಅವರ 5ಜನ ಮಕ್ಕಳು ಕೂಡ ಫೋಟೋಗ್ರಫಿಯಲ್ಲಿ ತೊಡಗಿ ಕೊಂಡಿದ್ದಾರೆ. ಅವರಲ್ಲಿ ಭೀಮರಾವ, ದತ್ತಾತ್ರೇಯ, ಶ್ರೀಧರ್, ವಸಂತ, ಮಧುಕರ್ ಅವರು ತಮ್ಮ ಉಸಿರನ್ನು ಫೋಟೋ ಗ್ರಫಿ ಗಾಗಿ ಮೀಲಿಟ್ಟಿದ್ದಾರೆ.73 ವಸಂತ ದಲ್ಲಿರುವ ವಸಂತ ಮಹೇಂದ್ರಕರ ಅವರು ಗದಗ ಕಾಟನ್ ಸೇಲ್ಸ್ ಸೊಸೈಟಿ ಗೆ ಆಗಮಿಸಿದ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಯವರ ಫೋಟೋ ನಾನೇ ತೆಗಿದಿದ್ದು ಅಂತಾ ಹೆಮ್ಮೆ ಮತ್ತು ಅಭಿಮಾನದಿಂದ ಹೇಳುತ್ತಾರೆ ಅವರ ಕಂಗಳಲ್ಲಿ ಮೂರನೇ ಕಣ್ಣು ಕೂಡ ಗತ ಕಾಲದ ಘಟನೆಯ ರೀಲು ಚಕ್ ಚಕ್ ಹೊರಳುತ್ತದೆ. ಇವರ ಮಕ್ಕಳು ಗುತ್ತಿಗೆ ಆಧಾರದ ಮೇಲೆ ವಿಶ್ವ ವಿದ್ಯಾಲಯದ ಫೋಟೋ ಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ನವೋದಯ. ವಾರ್ತಾ ಇಲಾಖೆಯ ಫೋಟೋ ಗ್ರಾಫರ್ ಕೂಡ ಹೌದು ಇವರ ಸಹೋದರ ಪೊಲೀಸ್ ಇಲಾಖೆಯ ಫೋಟೋಗ್ರಾಫರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಹೋದರರ ಮಗ ಚೋಟು  ಕಿತ್ತೂರು ಕರ್ನಾಟಕ ಪತ್ರಿಕೆಯ ಫೋಟೋ ಗ್ರಾಫರ್. ಪ್ರಜಾವಾಣಿ ಪತ್ರಿಕೆ ಫೋಟೋ ಗ್ರಾಫರ್ ಬನೇಶ್ ಕುಲಕರ್ಣಿ ಕೆಳೆದ 37 ವರುಷಗಳಿಂದ ಕ್ಯಾಮರಾ ಕೊರಳಿಗೆ ಹಾಕಿ ಕೊಂಡಿದ್ದಾರೆ. ಈ ಟಿವಿ, ಉದಯ ಟಿವಿ ಕ್ಯಾಮರಾ ಮ್ಯಾನ್. ಫೋಟೋ ಗ್ರಾಫರ್ ಆಗಿ ಸಧ್ಯ ಪ್ರಜಾವಾಣಿ ಪತ್ರಿಕೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜಯ ಕರ್ನಾಟಕ ಜಿಲ್ಲಾ ವರದಿ ಗಾರ ಸಲೀಂ ಬಳಬಟ್ಟಿ ಯವರದು ವಿಶೇಷ ಫೋಟೋ ಗ್ರಫಿ ಅವರ ತಂದೆಯವರಾದ ಬಂಡಾಯ ಸಾಹಿತಿ, ಕವಿ, ರಂಗಭೂಮಿ ಕಲಾವಿದ, ಫೋಟೋ ಗ್ರಾಫರ್ ಬಿ. ಬಾಬು ಅವರಿಂದ ಬಂದ ಬಳುವಳಿಯಾಗಿದೆ.  ಸಮೋಹ ಸಂವಹನ ಮತ್ತು ಪತ್ರಿಕೋದ್ಯಮ ದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸನ್ 2008ರಲ್ಲಿ ಕರ್ನಾಟಕ ಫೋಟೋ ನ್ಯೂಸ್ ಸಂಸ್ಥೆ ಯ ಫೋಟೋ ಜರ್ನಲಿಸ್ಟ ಆಗಿ ಸೇವೆ ಆರಂಭ ಮಾಡಿದರು. ಉದಯ ವಾಣಿ. ಕನ್ನಡ ಪ್ರಭಾ ಪತ್ರಿಕೆ ವರದಿ ಗಾರರಾಗಿ ವಿಶ್ವ ವಾಣಿ ಉಪ ಸಂಪಾದಕರಾಗಿ ಸೇವೆ ಕೂಡ ಸಲ್ಲಿಸಿದ್ದಾರೆ. ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಛಾಯಾ ಚಿತ್ರ ಪ್ರದರ್ಶನ ದಲ್ಲಿ ಭಾಗ ವಹಿಸಿ ಪ್ರಶಸ್ತಿ ಕೂಡ ಪಡೆದಿದ್ದಾರೆ.    ಕಳೆದ 34ವರ್ಷ ಗಳಿಂದ ಕೊರಳಿಗೆ ಕ್ಯಾಮರಾ ಹಾಕಿಕೊಂಡ  ಜಂಗಮ ಮುತ್ತು ಹಾಳಕೇರಿ. ಫೋಟೋ ಗ್ರಾಫರ್ ಚಿತ್ರ ಮಾತ್ರ ತೆಗೆಯುವದಲ್ಲ  ತನ್ನನ್ನು ತಾನೇ ಪ್ರಶ್ನಿಸಿ ಕೊಳ್ಳಬೇಕು, ಕ್ಯಾಮರಾ ಕಟ್ಟಿದ ಕೊರಳು ನೂರು ಕೊರಳುಗಳ ಬಗ್ಗೆ ಚಿಂತಿಸಬೇಕು . ಪ್ರಚಲಿತ ಸಮಸ್ಯೆ ಗಳ ಬಗ್ಗೆ, ಗ್ರಾಮೀಣ ಬದುಕಿನ ಜೀವನ ಬಗ್ಗೆ ಚಿಂತಿಸಬೇಕೆಂಬುದು ಅವರ ಆಶಯ. ಅಲೆಮಾರಿ ಕುರಿಗಾಯಿ ಗಳು ನೀರಿಗಾಗಿ ಅಲೆಯುವ ಮುತ್ತು ಅವರು ತೆಗೆದ ಫೋಟೋ 25 ಸಾವಿರ ರೂ ಬಹುಮಾನ ಪಡೆಯಿತು ಆ ಬಹುಮಾನ ದ ಮೊತ್ತ ಕುರಿಗಾಯಿಗಳಿಗೆ ಕಾಣಿಕೆ ಯಾಗಿ ಕೊಟ್ಟ ಸಹೃದಯಿ ಯಾಗಿದ್ದಾರೆ. ನಾಡಿನ ತುಂಬೆಲ್ಲ ಇವರ ಛಾಯಾಚಿತ್ರ ಪ್ರದರ್ಶನ ಗೊಂಡಿವೆ. ಮದುವೆ ಕ್ಷಣ ಗಳು ಎನ್ನುವ ಶೀರ್ಷಿಕೆ ಅಡಿಯಲ್ಲಿ ಸುವರ್ಣ ನ್ಯೂಸ್ ರಾಜ್ಯ ಮಟ್ಟದ ಸ್ಪರ್ಧೆ ಯಲ್ಲಿ ದ್ವಿತೀಯ ಬಹುಮಾನ ಪಡೆದ ಹೆಗ್ಗಳಿಕೆ ಮುತ್ತು ಅವರದು. ಪ್ರತಿ ಪ್ರಗತಿಪರ ಸಂಘಟನೆಗಳ ಕಾರ್ಯಕ್ರಮ ದಲ್ಲಿ ಮುತ್ತು ಅವರ ಹಾಜರಾತಿ ಇದ್ದೆ ಇರುತ್ತದೆ. ಸಾರ್ವಜನಿಕ ಸಭೆ ಸಮಾರಂಭ, ಸರ್ಕಾರಿ ಕಾರ್ಯಕ್ರಮ ಗಳಲ್ಲಿ ರಾಮು ವಗ್ಗಿ ವಿಜಯ ಕರ್ನಾಟಕ ಪತ್ರಿಕೆ, ಲಕ್ಷ್ಮಣ ವಗ್ಗಿ ಉದಯ ವಾಣಿ ಪತ್ರಿಕೆ ಫೋಟೋ ಗಳಾಗಿ ಎಲ್ಲರ ಗಮನ ಸೆಳೆದಿದ್ದಾರೆ.ಗದಗ ಉತ್ಸವ, ಕರ್ನಾಟಕ ಮಾಧ್ಯಮ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನೇಕ ಪ್ರಶಸ್ತಿ ಪುರಸ್ಕಾರ ಗಳನ್ನು ಸಹೋದರರು ತಮ್ಮ ಮೂಡಿಗೇರಿಸಿ ಕೊಂಡಿದ್ದಾರೆ.ಸಂಜೆವಾಣಿ ಪತ್ರಿಕೆಯ ಬಸವ ರಾಜ ದಂಡಿನ ಹಿರಿಯ ಪತ್ರ ಕರ್ತ್ ರು ಫೋಟೋ ಗ್ರಾಫರ್ ಕೂಡ.ಸಮಾಜ ಮುಖಿ ಚಿಂತನೆಗಳ ಬರವಣಿಗೆ ಯಲ್ಲಿ ತೊಡಗಿ ಕೊಂಡವರು ನಾಡಿನ ಅನೇಕ ಪತ್ರಿಕೆಗಳಲ್ಲಿ ಸಂಘಟನೆಗಳಲ್ಲಿ ಗುರುತಿಸಿ ಕೊಂಡವರು. ಶಂಕರ್ ಗುರಿಕಾರ. ಉಮೇಶ್ ಸಜ್ಜನ ಮಾತ್ರವಲ್ಲ ಜಿಲ್ಲೆಯ ತುಂಬಾ ಅನೇಕ ಪತ್ರಿಕೆ ಛಾಯಾಚಿತ್ರ ಕಲಾವಿದರು ಇದ್ದಾರೆ.ai ಮೊಬೈಲ್ ಹಾವಳಿಗಳ ನಡುವೆ ತಮ್ಮ ತನ ಉಳಿಸಿಕೊಂಡು ಪತ್ರಿಕಾ ಛಾಯಾ ಚಿತ್ರಕಾರರಾಗಿ ಪರೋಕ್ಷ ಅಪರೋಕ್ಷ ವಾಗಿ ಪತ್ರಿಕೋದ್ಯಮದ ಘನತೆ ಗೌರವ ಎತ್ತಿ ಹಿಡಿಯುತ್ತಿದ್ದಾರೆ ಇದೊಂದು ಅಭಿಮಾನ ದ ಸಂಗತಿ

ವಿಶ್ವ ಛಾಯಾಗ್ರಾಹಕರ ದಿನದಂದು ಕ್ಷಣಗಳಿಗೆ ಚಿರಂತನತೆ ನೀಡುವ ಎಲ್ಲ ಛಾಯಾಗ್ರಾಹಕರಿಗೆ ಹೃತ್ಪೂರ್ವಕ ಶುಭಾಶಯಗಳು..


About The Author

1 thought on ““ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು” ಎ.ಎಸ್.ಮಕಾನದಾರ”

  1. Good artical, I had worked Banesh kulakarni as prajavani reporter in Gadag, and Salim Bellatti is my student and excellent photographer ,Vasant Mahedrakar Nayodaya paper very dedicated photo journalist his son is also my student (photographer ) I also worked as photographer for prajavani and Deccan Herald Gadag

Leave a Reply

You cannot copy content of this page

Scroll to Top