ಕಾವ್ಯ ಸಂಗಾತಿ
ಕಾರ್ತಿಕ್ ಭಟ್ ಬಳಗುಳಿ
“ನನ್ನೆದೆಯ ಗೂಡಿನಲ್ಲಿ”


ನನ್ನೆದೆಯ ಗೂಡಲ್ಲಿ ಧಗಧಗಿಸುತಿದೆ
ಬೆಂಕಿಯ ಜ್ವಾಲೆ
ಹೊತ್ತಿ ಉರಿಯುತ್ತಿದೆ
ಕೆನ್ನಾಲಿಗೆ
ಆರಿಸಬೇಕಿದೆ
ಜ್ವಾಲಾಮುಖಿಯಾಗುವ ಮುನ್ನ….
ದಡಕ್ಕೆ ಬಂದು ಅಪ್ಪಳಿಸಿ ಬರುವ ಅಲೆ
ದಡವನ್ನು ಸ್ವಚ್ಚಗೊಳಿಸುವಂತೆ…….
ನನ್ನೆದೆಯ ಗೂಡನ್ನ ಆರಿಸಬೇಕಿದೆ
ಆಹುತಿಯಾಗುವ ಮುನ್ನ
ಹೊಗೆಯಾಡುತ್ತಿದೆ
ಸುಟ್ಟುಹೋಗಿರಬಹುದೇ
ಸುಡುತ್ತಿರುವ ಬೆಂಕಿಗೆ
ಮಳೆ ಹನಿಯ ಸಿಂಚನ
ಹರಿಸಬೇಕಿದೆ….
ಆರಿಸಬೇಕಿದೆ
ನನ್ನೊಡಲ ಕಾವನ್ನ….
ದೂರದಲ್ಲೆಲ್ಲೋ ಬರುತಲಿದೆ
ಸುಟ್ಟ ವಾಸನೆ
ತಂಪಾಗಿಸಬೇಕಿದೆ
ಬಿಸಿಯಾದ ಒಡಲ ಕಾವನ್ನ
ಆರಿಸಬೇಕಿದೆ
ದೀಪ ಆರುವ ಮುನ್ನ…….
ಹದಗೊಳಿಸಿ ಬಿತ್ತಬೇಕಿದೆ
ಪ್ರೀತಿಯೆಂಬ ಬೀಜವನ್ನ …..
ಮತ್ತೇ ನಳನಳಿಸಿ ಕುಣಿಯುವಂತೆ
ಮಾಡಬೇಕಿದೆ ನನ್ನೆದೆಯ ಗೂಡನ್ನ…..
ಕಾರ್ತಿಕ್ ಭಟ್ ಬಳಗುಳಿ




Nice ಚನ್ನಾಗಿದೆ ಸರ್