ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಯಶಸ್ವಿನಿ ದೊಡ್ಡ ಪರದೆಯ ಟೀವಿಯಲ್ಲಿ ಯಾವುದೋ ಸಿನಿಮಾವೊಂದನ್ನು ನೋಡತೊಡಗಿದ್ದಳು. `ಸಾಕು, ಟೀವಿ ಆಫ್‍ಮಾಡಿ ಮಲಗಿಬಿಟ್ಟರಾಯಿತು’ ಎಂದು ಅಂದುಕೊಂಡಳಾದರೂ, ಅದೊಂದು ಭಾರೀ ಶೃಂಗಾರಭರಿತ ಮೂವಿಯಾಗಿದ್ದರಿಂದ ಹಾಗೇ ವೈಭವೋಪೇತ ಸೋಫಾದ ಮೇಲೆ ಅಡ್ಡಾಗಿ ಚಿತ್ರ ನೋಡಲು ಮುಂದಾದಳು. ದಿನಾಲೂ ರಾತ್ರಿ ಬಹಳ ಎಂದರೆ ಹತ್ತೂವರೆ, ಹನ್ನೊಂದಕ್ಕೆ ಹಾಸಿಗೆ ಸೇರಿಕೊಳ್ಳುತ್ತಿದ್ದಳು. `ಹೇಗೂ ವೀಕೆಂಡ್ ಅಲ್ವಾ…? ಆಫೀಸ್ ಇಲ್ಲವಲ್ಲ? ತಡವಾಗಿ ಮಲಗಿ ನಾಳೆ ಬೆಳಗ್ಗೆ ತಡವಾಗಿ ಏಳಬಹುದು. ಅದಲ್ಲದೇ, `ಕರೆದು ಕಟ್ಟಿಹಾಕುವವರಿಲ್ಲ, ತುರಿಸಿ ಮೇವು ಹಾಕುವವರಿಲ್ಲ’ ಎಂಬ ದನದಂತೆ ನಾನು. ತಡವಾಗಿ ಮಲಗಿದರೆ ನನಗಿಲ್ಲಿ ಯಾರೂ ಹೇಳುವವರಿಲ್ಲ, ಯಾವಾಗ ಎದ್ದರೂ ಯಾರೂ ಕೇಳುವವರಿಲ್ಲ. ಸುದೀರ್ಘ ಒಂಟಿ ಜೀವನಕ್ಕೆ ಒಗ್ಗಿಹೋಗಿದ್ದೇನೆ. ನನ್ನದೇ ಪ್ರಮೀಳಾ ರಾಜ್ಯ ಅಲ್ಲವೇ…?’ ಅಂತ ಮನದೊಳಗೇ ಅಂದುಕೊಂಡು ಯಶಸ್ವಿನಿ ಸಿನಿಮಾ ನೋಡುವುದನ್ನು ಮುಂದುವರಿಸಿದಳು. ಅಬ್ಬಾ…! ಮೈನವಿರೇಳಿಸುವ ಶೃಂಗಾರಭರಿತ ದೃಶ್ಯಗಳು…! ಯುವ ಪ್ರೇಮಿಗಳ ಪ್ರೀತಿ, ಪ್ರೇಮದ ಕಾವ್ಯ ಅದಾಗಿತ್ತು. ರಸಪೂರಿ ಮಾವಿನ ಹಣ ್ಣನಂಥಹ ನಾಯಕಿ, ಸುರಸುಂದರಾಂಗ ಎನ್ನುವಂಥಹ ನಾಯಕ. ಗಜನಿಂಬೆ ಹಣ ್ಣನ ಮೈಬಣ್ಣದ ನಾಯಕಿಯ ಸೊಬಗಿನ ತುಂಬಿದೆದೆ ಚಿತ್ರದುದ್ದಕ್ಕೂ ಮುಕ್ಕಾಲು ಭಾಗ ತೆರೆದೇ ಕೊಂಡಿತ್ತು. ಕೃಶೋದರಿಯ ಬಡ ನಡು ತುಂಬಾನೇ ಆಕರ್ಷಕವೇ. ಸಿನಿಮಾದುದ್ದಕ್ಕೂ ಶೃಂಗಾರಭರಿತ ಕಾವ್ಯ ಸಾಹಿತ್ಯದಲ್ಲಿ ಹೊರಹೊಮ್ಮುತ್ತಿದ್ದ ಹಾಡುಗಳಲ್ಲಿ ನಾಯಕ, ನಾಯಕಿಯರಿಬ್ಬರೂ ತುಂಡುಡುಗಳಲ್ಲೇ ಮಿಂಚುತ್ತಿದ್ದುದು ಚಿತ್ರದ ಹೈಲೈಟ್ ಆಗಿತ್ತು. ನಾಯಕಿಯ ನಳಿದೋಳುಗಳು, ಹೊಕ್ಕಳ ಗುಳಿ, ಸಪೂರ ಬಲಿಷ್ಠ ತೊಡೆಗಳು, ತುಂಬು ಜಘನ ಪ್ರೇಕ್ಷಕರ ಮನಗಳಿಗೆ ಕಚಗುಳಿ ಇಡುವಂತಿದ್ದವು. ಕಾವ್ಯಕನ್ನಿಕೆ, ಸೌಂದರ್ಯದೇವತೆ ರತಿದೇವಿಯಂತೆ ವಿಜೃಂಭಿಸುತ್ತಿದ್ದಳು ನಾಯಕಿ. ವಯಸ್ಸಾದವರು ಜೊಲ್ಲು ಸುರಿಸುತ್ತಾ ನೋಡುವಂತಿತ್ತು ನಾಯಕಿಯ ಮೈಮಾಟ. ನಾಯಕ, ನಾಯಕಿಯ ಪ್ರೀತಿ-ಪ್ರೇಮದ ತುಂಟಾಟದ ದೃಶ್ಯಗಳನ್ನು ನೋಡುತ್ತಿದ್ದಂತೆ ಯಶಸ್ವಿನಿಯ ಮೈಯಲ್ಲಿ ಕಾವೇರತೊಡಗಿತು. `ಅಬ್ಬಾ…! ಮೈ ಎಲ್ಲಾ ನವಿರೇಳುತ್ತಿದೆಯಲ್ಲ…? ಮೈಯಲ್ಲಿ ರೋಮಾಂಚನದಲೆಗಳು ಅಬ್ಬರಿಸಿ ಪುಟಿದೇಳುತ್ತಿವೆಯಲ್ಲ…? ಎದೆಯ ಬಡಿತ ಮುಗಿಲೆತ್ತರಕ್ಕೆ ಜಿಗಿಯುತ್ತಿದೆಯಲ್ಲ…? ಉಸಿರಾಟ ಜೋರಾಗುತ್ತಿದೆಯಲ್ಲ? ಹೃದಯದ ಲುಬ್-ಡುಬ್ ಅತಿವೇಗದ ಲಯ ಕಂಡುಕೊಳ್ಳುತ್ತಿದೆ ಎಂದು ಅನಿಸುತ್ತಿದೆ. ತುಂಬಾನೇ ಥ್ರಿಲ್ ಕೊಡುತ್ತಿದೆಯಲ್ಲ…? ಇಂಥಹ ಥ್ರಿಲ್ ಇದೆಯಾ ಗಂಡು-ಹೆಣ ್ಣನ ಶೃಂಗಾರ ಲೀಲೆಯಲ್ಲಿ…? ಶೃಂಗಾರ ಲೀಲೆಯ ಇಂಥಹ ಥ್ರಿಲ್‍ಗಳಿಂದ ವಂಚಿತಳಾಗಿ ನಾನು ಕರುಬುತ್ತಿರುವೆನಲ್ಲ…? ನನ್ನ ಉತ್ಕøಷ್ಠ ಯೌವನ ಕರಗಿ ಹೋಗುತ್ತಿದೆ. ಇನ್ನೇನು ನಾಲ್ಕಾರು ವರ್ಷಗಳಲ್ಲಿ ಮೆನೋಫಾಸ್ ಘಟ್ಟವನ್ನೂ ತಲುಪುವೆನೇನೋ? ಅದೃಷ್ಟ ಹೀನ ನತದೃಷ್ಟ ಹೆಣ್ಣು ನಾನು. ಎಲ್ಲವೂ ಇದ್ದು, ಏನೂ ಇಲ್ಲದವಳಂತಾಗಿದ್ದೇನೆ. ಹೆಸರೋ, `ಯಶಸ್ವಿನಿ.’ ಬಹಳಷ್ಟು ರಂಗಗಳಲ್ಲಿ ಯಶಸ್ಸು ಪಡೆದಿರುವೆನಾದರೂ ನನ್ನ ಪರ್ಸನಲ್ ಲೈಫಿನಲ್ಲಿ ಹೀನಾಯ ಸೋಲನ್ನು ಅನುಭವಿಸಿ ಪೇಚಾಡುತ್ತಿರುವೆ. ಈ ಸೋಲಿಗೆ ಯಾರು ಕಾರಣ…? ಯಾರೇಕೆ ಕಾರಣರಾಗುತ್ತಾರೆ? ನನ್ನ ಸೋಲಿಗೆ ನಾನೇ ಕಾರಣ ಅಷ್ಟೇ. ನಾನೇ ಅಂದರೆ ನನ್ನ, `ಅಹಂ’ ವೈಯಕ್ತಿಕ ಜೀವನದ ಸೋಲಿಗೆ ಕಾರಣ ತಾನೇ…? ಹೌದು, ಹೌದು, ಹೌದು. ನನ್ನ ಅಪರಿಮಿತ ಅಹಂ ನನ್ನ ವೈಯಕ್ತಿಕ ಜೀವನದ ಹಳಸುವಿಕೆಗೆ ಕಾರಣ.’ ಯದ್ವಾ-ತದ್ವಾ ಯೋಚನೆಗಳು ಯಶಸ್ವಿನಿಯ ಮನಸ್ಸನ್ನು ಮುತ್ತಿಕ್ಕಿ ಕಾಡತೊಡಗಿದವು.
*****
ಹಿಮ್ಮುಖವಾಗಿ ಚಲಿಸಲಾರಂಭಿಸಿದ ಯಶಸ್ವಿನಿಯ ಮನದಲ್ಲಿ ನೆನಪಿನ ಅಲೆಗಳ ಮಹಾಪೂರ ಭೋರ್ಗರೆಯತೊಡಗಿತು.
“ನನ್ನ ಹೆಸರು, `ಯಶಸ್ವಿನಿ’ ಅಂತ ಆಗಲೇ ಹೇಳಿರುವೆನಲ್ಲ…? ಮೂವತ್ತೈದು ವಸಂತ ಋತುಗಳು ನನ್ನ ಜೀವನದಲ್ಲಿ ವಸಂತನಾಗಮನವಿಲ್ಲದೇ ಹಾಗೇ ಸಪ್ಪಗೇ ಕಳೆದು ಹೋದವು. ಈಗ ಮೂವತ್ತಾರರ ಹರೆಯದಲ್ಲಿ ನನ್ನ ಬಾಳಬಂಡಿಗೆ ಕಡೆಗೀಲೇ ಇಲ್ಲದಂತಾಗಿದೆ. ಸಾಮಾನ್ಯ ಕುಟುಂಬವೊಂದರಲ್ಲಿ ಮೂರನೇ ಮಗುವಾಗಿ ಜನಿಸಿದವಳು ನಾನು. ಅಪ್ಪ ಕೈಲಾಸ್, ಅಮ್ಮ ವಿಜಯಲಕ್ಷ್ಮಿ. ಅಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ. ಅಮ್ಮ ಗೃಹಿಣ . ಹೆತ್ತವರಿಗೆ ನಾನು ಮೂರನೆಯವಳೆಂದು ಹೇಳಿದೆನಲ್ಲ, ನನಗೆ ಧೀರಜ್ ಎಂಬ ಅಣ್ಣನಿದ್ದಾನೆ. ಅಕ್ಕ ಸಮತಾ ಇದ್ದಾಳೆ. ಅಣ್ಣ ಧೀರಜನಿಗೂ, ನನಗೂ ಎಂಟು ವರ್ಷಗಳ ಅಂತರವಿದ್ದರೆ, ಅಕ್ಕ ಸಮತಾಳಿಗೆ ನನಗೆ ಕೇವಲ ಎರಡು ವರ್ಷಗಳ ಅಂತರ ಅಷ್ಟೇ. ಮೂವರಲ್ಲಿ ನಾನೇ ರೂಪವತಿ. ಚಿಕ್ಕವಳಿದ್ದಾಗಿನಿಂದ ಅಣ್ಣ, ಅಕ್ಕನಿಗೆ ಇಲ್ಲದಿದ್ದರೂ ನನಗೆಲ್ಲವೂ ಬೇಕು ಎಂಬ ಹಟಮಾರಿತನದ ಸ್ವಭಾವದವಳು. ಮುದ್ದಾದ ಚೆಲುವಿನ ಹುಡುಗಿ ಎಂದು ಅಪ್ಪ, ಅಮ್ಮ ನನ್ನನ್ನು ಅತೀ ಮುದ್ದಿನಿಂದಲೇ ಬೆಳೆಸಿದರು. ಚಿಕ್ಕಳಿದ್ದಾಗಿನಿಂದಲೂ ನನ್ನ ಬಲಗೆನ್ನೆ ಗುಳಿಗೆನ್ನೆಯೇ. ಆ ಗುಳಿಗೆನ್ನೆ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಯೌವನ ಮೈ, ಮನಗಳಲ್ಲಿ ಅರಳತೊಡಗಿತ್ತು. ಎದೆಯ ಕುಸುಮಗಳು ಅರಳಲು ಮುಂದಾಗುತ್ತಿದ್ದಂತೆ ನನ್ನ ಅಪರಿಮಿತ ರೂಪರಾಶಿಗೆ ನಾನೇ ನನ್ನ ಬೆನ್ನನ್ನು ಚಪ್ಪರಿಸಿಕೊಳ್ಳುತ್ತಿದ್ದೆ. ಸಾಧಾರಣ ರೂಪಿನ ಅಕ್ಕನನ್ನು ನನ್ನೊಂದಿಗೆ ಹೋಲಿಸಲು ಸಾಧ್ಯವೇ ಇರಲಿಲ್ಲ. ನನಗರಿವಿಲ್ಲದಂತೆ ನಾನು ಆಗಿನಿಂದಲೇ ಜಂಬದ ಕೋಳಿಯಂತಾಗತೊಡಗಿದ್ದೆ. ಧೀರಜ್ ಎಂಎ ಬಿಎಡ್ ಮಾಡಿಕೊಂಡು ಕಾಲೇಜೊಂದರಲ್ಲಿ ಉಪನ್ಯಾಸಕನಾಗಿ ಸೇರಿಕೊಂಡ. ಅಕ್ಕ ಇಂಜನಿಯರಿಂಗ್ ಪದವಿಗೆ ಸೇರಿಕೊಂಡಳು. ನಾನೂ ಅಷ್ಟೇ. ಪಿಯುಸಿ ನಂತರ ಇಂಜನಿಯರಿಂಗ್ ಕೋರ್ಸಿಗೇ ಸೇರಿಕೊಂಡೆ. ಅಣ್ಣ ಉದ್ಯೋಗಕ್ಕೆ ಸೇರಿದ ಮೂರನೇ ವರ್ಷವೇ ಮದುವೆಯಾಗಿ ಜೀವನದಲ್ಲಿ ಸೆಟ್ಲಾದ. ಅತ್ತಿಗೆಯಾಗಿ ಬಂದವಳು ನಮ್ಮ ಮನೆಯ ಅಂತಸ್ತಿಗಿಂತ ಕೆಳಗಿನ ಮಟ್ಟದ ಅಂತಸ್ತಿನ ಮನೆತನದವಳು. ರೂಪದಲ್ಲೂ ಅಷ್ಟಕಷ್ಟೇ. `ಅಣ್ಣಾ, ಇದೇನಿದು ಇಂಥಹ ಆರ್ಡಿನರಿ ಹುಡುಗಿಯನ್ನು ಆಯ್ಕೆಮಾಡಿಕೊಂಡೆಯಲ್ಲ, ಇದು ನನಗ್ಯಾಕೋ ಸರಿಕಾಣುತ್ತಿಲ್ಲ…?’ ಅಂತ ಅಂದಿದ್ದಕ್ಕೆ, `ರೂಪವನ್ನು ಅರೆದುಕೊಂಡು ಕುಡಿಯಲು ಆಗುತ್ತದೆಯೇ…? ನಿನ್ನತ್ತಿಗೆಯಾಗುವವಳು ರೂಪವತಿಯೇ ಇರುವಳೆಂದು ನನ್ನ ಕಣ್ಣುಗಳ ಜೊತೆಗೆ ಹೃನ್ಮನಗಳೂ ಹೇಳುತ್ತಿವೆ. ಸೌಂದರ್ಯ ಎನ್ನುವುದು ನೋಡುಗರ ಕಣ್ಣಲ್ಲಿ ಇರುತ್ತದೆ. ರೂಪಕ್ಕಿಂತ ಗುಣ ಮುಖ್ಯ ಎಂಬುದು ನನ್ನ ಅನಿಸಿಕೆ. ಗಂಡ, ಹೆಂಡತಿ ಇಬ್ಬರೂ ಜೊತೆಗೂಡಿಕೊಂಡು ಅರ್ಥಪೂರ್ಣ ಜೀವನ ಸವೆಸಿದರೆ ಸಾಕಲ್ಲವೇ…?’ ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿದ್ದ. ಅದರಂತೆ ಅಣ್ಣ-ಅತ್ತಿಗೆಯರದು ಈಗ ಆದರ್ಶ ಸಂಸಾರವೇ. ಅತ್ತಿಗೆ ಸೌಭಾಗ್ಯಳಿಗೆ, `ನಮ್ಮ ಯಶೂ ತುಂಬಾನೇ ರೂಪವತಿ, ಶಾಣ್ಯಾಕಿ’ ಎಂದು ಸಂಬಂಧಿಕರ ಜೊತೆಗೆ ಬಡಾಯಿ ಕೊಚ್ಚಿಕೊಳ್ಳುತ್ತಿರುತ್ತಾಳೆ. ನಾನೆಂದರೆ ತುಂಬಾ ಪ್ರೀತಿ ಅವಳಿಗೆ.
ಇಂಜನಿಯರಿಂಗ್ ಕೋರ್ಸ ಮುಗಿಯುವಷ್ಟರಲ್ಲಿ ಚೆಲುವಿನ ನನ್ನ ಮೈಯಲ್ಲಿ ಯೌವನ ತುಂಬಿ ತುಳುಕಾಡಲು ಮುಂದಾಗಿತ್ತು. ಯೌವನಮದ, ರೂಪಮದಗಳು ನನ್ನ ಮನಸ್ಸಿನಲ್ಲಿ ನೆಲೆನಿಂತು ಠಳಾಯಿಸತೊಡಗಿದವು. ತುಂಬಿದ ಕಾಶ್ಮೀರಿ ಸೇಬಿನ ಗುಳಿಗೆನ್ನೆ ನನ್ನ ಆಕರ್ಷಕ ಮೈಮಾಟಕ್ಕೆ ಇಂಬು ಕೊಡುತ್ತಿತ್ತು. `ನನ್ನಂಥಹ ಚೆಲುವೆ ಯಾರಿಲ್ಲ’ ಎಂಬ ಅಹಂ ಅಂಕುರಿಸಿ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆಯತೊಡಗಿತು. ಪದವಿ ಮುಗಿಯುತ್ತಿದ್ದಂತೆ ಸಮತಾಳಿಗೆ ಒಳ್ಳೆಯ ಕಂಪನಿಯಲ್ಲಿ ದೊಡ್ಡ ಪ್ಯಾಕೇಜಿನ ಕೆಲಸವೂ ಸಿಕ್ಕಿತು. ನನಗೂ ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದಲ್ಲದೇ ಸಮತಾಳಿಗಿಂತ ನನ್ನ ಪ್ಯಾಕೇಜ್ ಹೆಚ್ಚೇ ಇದೆ.
ಅಕ್ಕನೂ ಕೆಲಸಕ್ಕೆ ಸೇರಿದ ಮೂರನೇ ವರ್ಷವೇ ಮದುವೆಗೆ ಅಣ ಯಾದಳು. ಅವಳ ಮತ್ತು ನನ್ನ ಮದುವೆಯನ್ನು ಒಂದೇ ಸಲಕ್ಕೆ ಮಾಡಬೇಕೆಂದಿದ್ದ ಅಪ್ಪ-ಅಮ್ಮನಿಗೆ, `ನನಗಷ್ಟು ಬೇಗ ಮದುವೆಯಾಗುವ ಮನಸ್ಸು, ಆಸಕ್ತಿ ಇಲ್ಲ. ಅಕ್ಕನ ಮದುವೆ ಮಾಡಿಬಿಡಿ. ನನಗೆ ಮದುವೆ ಬೇಕೆಂದಾಗ ತಿಳಿಸುವೆ’ ಎಂದು ಹೇಳಿದ್ದೆ. ನನ್ನ ಹಟಮಾರಿತನದ ಸ್ವಭಾವಕ್ಕೆ ಮಣ ದಿದ್ದರು. ಅಕ್ಕನೂ ಆರಿಸಿಕೊಂಡಿದ್ದು ತನಗಿಂತ ಕಡಿಮೆ ರೂಪಿನ ಚೆಲುವನನ್ನು. ನನಗೆ ಹೋಲಿಸಿದರೆ ಅಕ್ಕನ ರೂಪವೂ ಅಷ್ಟಕಷ್ಟೇ. ಅವನೂ ಐಟಿ ಕಂಪನಿಯೊಂದರಲ್ಲಿ ಇಂಜಿನಿಯರ್. `ಏನೇ ಅಕ್ಕ, ನೀನು ಮಧುಸಾಗರನೊಂದಿಗೆ ಮದುವೆಯಾಗಲು ಒಪ್ಪಿಕೊಂಡಿದ್ದು ನನಗೇಕೋ ಅಷ್ಟಾಗಿ ಸರಿಕಾಣುತ್ತಿಲ್ಲ. ತೀರಾ ಸಾಮಾನ್ಯ ರೂಪಿನ ಹುಡಗ ಅವನು. ಮೇಲಾಗಿ ಅವನ ಪ್ಯಾಕೇಜ್ ನಿನಗಿಂತಲೂ ಬಹಳಷ್ಟು ಕಡಿಮೆಯೇ. ಅವನಿಗೆ ಹೇಳಿಕೊಳ್ಳುವಂಥಹ ಆಸ್ತಿ-ಅಂತಸ್ತೂ ಸಹ ಇಲ್ಲ. ಮೇಲಾಗಿ ಅವನಿಗೆ ಒಬ್ಬ ತಂಗಿಯ ಮದುವೆಯ ಜವಾಬ್ದಾರಿಯೂ ಇದೆ. ಏನೋಪ್ಪ, ನಿನ್ನ ನಿರ್ಧಾರ ಸರಿ ಇಲ್ಲ ಎಂದು ನನಗನಿಸುತ್ತಿದೆ’ ಎಂದು ಉದ್ದುದ್ದ ಭಾಷಣ ಬಿಗಿದಿದ್ದೆ. `ನೋಡು ಯಶೂ, ಮದುವೆ ಯಶಸ್ವಿಯಾಗುವುದು ಜೀವನ ಸಂಗಾತಿಯನ್ನು ಹುಡುಕುವುದಿಂದಲ್ಲ. ಸರಿಯಾದ ಜೀವನ ಸಂಗಾತಿ ಆಗುವುದರಿಂದ. ನನ್ನ ಆಯ್ಕೆ ಸೂಪರ್ರಾಗೇ ಇದೆ. ಹುಡುಗ ನನ್ನ ಕಣ್ಣಲ್ಲಿ ಚೆಲುವನೇ. ಮನಸ್ಸು, ಮನಸ್ಸುಗಳು ಒಂದಾದರೆ ಸಂಸಾರ ಆನಂದ ಸಾಗರವೇ. ಅವನ ನಡೆ-ನುಡಿ ಎಲ್ಲವೂ ಸ್ಫಟಿಕದಷ್ಟೇ ಶುಭ್ರ. ಆಫ್ಟರ್ ಆಲ್ ಲೈಫ್ ಈಜ್ ಯಾನ್ ಅಡ್ಜೆಸ್ಟಮೆಂಟ್ ಅಲ್ಲವೇ? ಪರಸ್ಪರ ಹೊಂದಿಕೊಂಡು ಜೀವನ ರಥ ಎಳೆದರೆ ದಾಂಪತ್ಯವು ಮಧುರವಾಗೇ ಸಾಗುತ್ತದೆ. ನೀನೇನೂ ಚಿಂತಿಸಬೇಡ. ನಮ್ಮದೂ ಒಂದು ಆದರ್ಶ ದಾಂಪತ್ಯ ಎಂದು ಮುಂದಿನ ದಿನಗಳಲ್ಲಿ ಸಾಬೀತುಮಾಡಿ ತೋರಿಸುತ್ತೇನೆ.’ ಸಮತಾ ದಿಟ್ಟವಾಗಿ ಉತ್ತರಿಸಿದ್ದಳು ನನ್ನ ಅನುಮಾನದ ಪ್ರಶ್ನೆಗಳಿಗೆ. ಮುಂದಿನ ದಿನಗಳಲ್ಲಿ ಅವಳು ಹೇಳಿದಂತೆ ನಡೆದೂ ತೋರಿಸತೊಡಗಿದಳು. ಅವಳದು ಅನ್ಯೋನ್ಯ ದಾಂಪತ್ಯ ಜೀವನವೇ. ಅವಳೀಗ ಎರಡು ಮುದ್ದು ಮಕ್ಕಳ ತಾಯಿಯೂ ಹೌದು.
*****
ಕಾಲೇಜ್ ಜೀವನ ಅಂದರೇ ಒಂಥರ ಕಲರ್ಫುಲ್ ಜೀವನ ಅಲ್ಲವೇ? ಅರಳುತ್ತಿರುವ ಚೆಲುವಿನ ಮೈಮನಗಳಲ್ಲಿ ಬಣ್ಣಬಣ್ಣದ ಕನಸುಗಳು ಅಂಕುರಿಸಿ ಬೆಳೆಯುವ ಕಾಲ ತಾನೇ…? ಕಾಲೇಜಿನೆಲ್ಲೆಡೆ ಹೂವುಗಳಂತೆ ಅರಳಿದ ಯುವಕ-ಯುವತಿಯರ ಮುಖಗಳು; ಬಿಸಿಲಲ್ಲಿ ಬೆಂದ ಭೂಮಿ ಮೊದಲ ಮಳೆಗಾಗಿ ಹಾತೊರೆಯುವಂತೆ ಎಲ್ಲರ ಹೃದಯಗಳು ಪ್ರೀತಿಯ ಮಳೆಗಾಗಿ ಕಾಯುತ್ತಿದ್ದ ವಸಂತಕಾಲ. ಪ್ರೀತಿಯ ನಿರೀಕ್ಷೆ ಬಲು ಸುಂದರ. ನನ್ನ ಕಥೆಯೂ ಬೇರೆ ಏನಿರಲಿಲ್ಲ. ನಾನು ಎರಡನೆಯ ವರ್ಷದ ಪಿಯುಸಿಯಲ್ಲಿದ್ದಾಗ ರಸಾಯನ ಶಾಸ್ತ್ರದ ಉಪನ್ಯಾಸಕರಾಗಿ ರಾಜಶೇಖರ್ ಎನ್ನುವ ಹ್ಯಾಂಡ್ಸಮ್ ಗೈ ಬಂದಿದ್ದರು. ಹ್ಯಾಂಡ್ಸಮ್ ಎಂದರೆ ನಿಜವಾಗಿಯೂ ತುಂಬಾನೇ ಹ್ಯಾಂಡ್ಸಮ್. ಮನ್ಮಥನ ಅಪರಾವತಾರವೇ. ನಾವು ಗೆಳತಿಯರೆಲ್ಲ ಅವರಿಗೆ ಸ್ಮಾರ್ಟೀ ಎಂದೇ ಸಂಬೋಧಿಸುತ್ತಿದ್ದೆವು ನಮ್ಮೊಳಗೇ. ತುಂಬಾ ಚೆನ್ನಾಗಿ ಪಾಠಮಾಡುತ್ತಿದ್ದರು. ಎಲ್ಲಾ ವಿದ್ಯಾರ್ಥಿಗಳ ಜೊತೆಗೆ ಆತ್ಮೀಯವಾಗಿ ಮಾತಾಡುತ್ತಿದ್ದರು. ನನ್ನ ಜೊತೆಗೂ ತುಂಬಾನೇ ಆತ್ಮೀಯವಾಗಿ ಮಾತಾಡುತ್ತಿದ್ದರಲ್ಲದೇ, `ಯುವರ್ ಪರ್ಫಾರ್ಮೆನ್ಸ್ ಈಜ್ ಎಕ್ಷಲೆಂಟ್ ಎಂದು ಹೇಳುತ್ತಿದ್ದರಲ್ಲದೇ ಯುವ್ ಆರ್ ದಿ ಮೋಸ್ಟ್ ಬ್ಯೂಟಿಫುಲ್ ಗರ್ಲ ಆಫ್ ದಿ ಕಾಲೇಜ್’ ಅಂತಾನೂ ಒಮ್ಮೆ ಉದ್ಘರಿಸಿ ನನ್ನನ್ನು ಆಶ್ಚರ್ಯ ಚಕಿತಳನ್ನಾಗಿ ಮಾಡಿದ್ದೂ ಉಂಟು. ಆಗಷ್ಟೇ ನಾನು ಬಿಇ ಮುಗಿಸಿಕೊಂಡು ಕೆಲಸಕ್ಕೆ ಸೇರಿಕೊಂಡಿದ್ದೆ. ಅದೊಂದು ದಿನ ಏಕಾಯೇಕಿ ರಾಜಶೇಖರ್ ಸರ್ ನಮ್ಮ ಕಂಪನಿಯ ಕ್ಯಾಂಪಸ್ಸಿಗೆ ಬಂದಿದ್ದರು. ಅವರು ಮೊದಲಿಗಿಂತ ಇನ್ನೂ ಹ್ಯಾಂಡ್ಸಮ್ಮಾಗಿ ಕಂಡರು. ಕ್ಯಾಂಟೀನಿನಲ್ಲಿ ಚಹ ಹೀರುತ್ತಿದ್ದಾಗ ನನ್ನೊಂದಿಗೆ ಒಂದಿಷ್ಟು ಪರ್ಸನಲ್ಲಾಗಿ ಮಾತಾಡುವುದಿದೆ ಎಂದು ಮಾತಿಗೂ ಇಳಿದಿದ್ದರು.
“ಯಶಸ್ವಿನಿಯವರೇ, ನೇರವಾಗಿ ವಿಷಯವನ್ನು ಪ್ರಸ್ತಾಪಿಸಿಬಿಡುತ್ತೇನೆ. ನಾನು ನಿಮ್ಮ ಪಿಯು ಟೂದ ಮೊದಲ ತರಗತಿ ತೆಗೆದುಕೊಂಡ ದಿನದಿಂದಲೂ ನಿಮ್ಮನ್ನು ಮನಸಾರೆ ಪ್ರೀತಿಸುತ್ತಿದ್ದೇನೆ. ನಿಮ್ಮ ಪದವಿ ಮುಗಿಯಲಿ ಎಂದು ಸುಮ್ಮನಿದ್ದೆ. ನೀವೀಗ ಪದವಿ ಮುಗಿಸಿಕೊಂಡು ಕೆಲಸವನ್ನೂ ಮಾಡುತ್ತಿರುವಿರಿ. ಈ ನಡುವೆ ನನ್ನ ಮದುವೆಗಾಗಿ ಹಲವಾರು ಸಂಬಂಧಗಳ ಪ್ರಸ್ತಾವಗಳು ಬಂದವಾದರೂ ಮೊದಲು ನಿಮ್ಮ ಅಭಿಪ್ರಾಯ ತಿಳಿದುಕೊಂಡು ಮುಂದೆ ವಿಚಾರಮಾಡಿದರಾಯಿತು ಎಂದಂದುಕೊಂಡು ಬಂದ ಪ್ರಸ್ತಾವಗಳನ್ನು ತಿರಸ್ಕರಿಸಿದ್ದೂ ಆಯಿತು. ಹಾಗೇ ಇನ್ನೊಂದು ಮಾತು. ನಿಮ್ಮ ಉದ್ಯೋಗ ಹೆಚ್ಚುಕಡಿಮೆ ಬೆಂಗಳೂರಿನಲ್ಲೇ ಮುಂದುವರಿಯುತ್ತದೆ. ನೀವು ನನ್ನ ಪ್ರಸ್ತಾವಕ್ಕೆ ಒಪ್ಪಿಗೆ ಕೊಟ್ಟರೆ ನಾನು ಬೆಂಗಳೂರಿನಲ್ಲಿ ಕೆಲಸಕ್ಕೆ ಪ್ರಯತ್ನಿಸುವೆ. ಇಬ್ಬರೂ ಒಂದೇ ಕಡೆಗೆ ಇರಲು ಅನುಕೂಲವಾಗುತ್ತದೆ. ನನ್ನ ದಾಂಪತ್ಯ ಜೀವನದ ಕನಸು ನಿಮ್ಮ ನಿರ್ಧಾರದ ಮೇಲೆ ಅವಲಂಬಿಸಿದೆ” ಎಂದೆನ್ನುತ್ತಾ ನನ್ನ ಮೊಗವನ್ನೇ ದಿಟ್ಟಿಸತೊಡಗಿದ್ದರು ರಾಜಶೇಖರ್ ಸರ್. ನನಗೆ ಒಂಥರ ದಿಗ್ಭ್ರಮೆ. ನಾನೂ ಅವರನ್ನೇ ತೀಕ್ಷ್ಣವಾಗಿ ನೋಡತೊಡಗಿದೆ. `ಇದು ಜೀವಮಾನದ ಪ್ರಶ್ನೆ. ತತಕ್ಷಣ ನಿರ್ಧಾರ ತೆಗೆದುಕೊಳ್ಳುವುದಾದರೂ ಹೇಗೆ…?’ ಮನದಲ್ಲೇ ಯೋಚಿಸಿದೆ.
“ಸರ್, ಇದು ಯೋಚಿಸುವಂಥಹ ವಿಷಯವೇ. ಒಂದುವಾರದ ಸಮಯ ಕೊಡಿರಿ. ಯಾವುದಕ್ಕೂ ನನ್ನ ಅಭಿಪ್ರಾಯ ತಿಳಿಸುವೆ” ಎಂದಿದ್ದೆ ತುಸು ಹೊತ್ತಿನ ಮೌನದ ಬ್ರೇಕ್‍ನ ನಂತರ.
“ಸರಿ ಅಷ್ಟೇ ಮಾಡಿರಿ. ನಿಮ್ಮ ಸಕಾರಾತ್ಮಕ ನಿರ್ಣಾಯದ ಮಾತಿನ ದಾರಿ ಕಾಯುವೆ. ನಿರಾಶೆ ಮಾಡಬೇಡಿರಿ ಈ ಪ್ರೇಮಿಯನ್ನು…” ವಿನೀತಭಾವದಲ್ಲಿ ಹೇಳಿದ್ದರು ರಾಜಶೇಖರ್ ಸರ್. ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದೆವು.    
ಆ ರಾತ್ರಿ ನಾನು ಸರಿಯಾಗಿ ನಿದ್ದೆ ಮಾಡಲೇ ಇಲ್ಲ. ಚೆಲುವಾಂತ ಚೆನ್ನಿಗ ರಾಜಶೇಖರ್ ಸರ್ ಅವರ ಮುಖವೇ ಕಣ್ಮನಗಳ ಮುಂದೆ ಬರುತ್ತಿತ್ತು. ಅವರು ಹೇಳಿದ ಮಾತುಗಳೇ ಕಿವಿ, ಎದೆಯಂಗಳದಲ್ಲಿ ರಿಂಗಣ ಸತೊಡಗಿದ್ದವು. ಹೌದು, ನಾನೇನು ಮಾಡಲಿ ಈಗ…? ಅವರನ್ನು ಅಪ್ಪಿಕೊಳ್ಳಲೇ, ದೂರ ಸರಿಸಲೇ? ಯಾವುದನ್ನು ಆಯ್ಕೆಮಾಡಿಕೊಳ್ಳಲಿ…? ಇಲ್ಲಿ ಜಾತಿ ಪ್ರಶ್ನೆಯೂ ಇರಲಿಲ್ಲ. ಪ್ರಸ್ತಾವನೆಯನ್ನು ಒಪ್ಪಿಕೊಂಡರೆ ಹ್ಯಾಂಡ್ಸಮ್ ಗೈ ನನ್ನವನಾಗುತ್ತಾನೆ. ಹೈ ಪ್ಯಾಕೇಜಿನ ಕೆಲಸಕ್ಕೆ ಸೇರಿಕೊಂಡ ನಂತರ ರೂಪಮದ, ವಿದ್ಯಾಮದಗಳ ಜೊತೆಗೆ ಧನಮದವೂ ನನ್ನೆದೆಯಲ್ಲಿ ಪ್ರತಿಸ್ಠಾಪನೆಯಾಗಿತ್ತು. ನನಗಿಂತ ತೀರಾ ಕಡಿಮೆ ಸಂಬಳದ ಹುಡುಗನನ್ನು ಅಪ್ಪಿಕೊಳ್ಳುವುದಕ್ಕೆ ನನ್ನ ಮನಸ್ಸು ಅನುಮತಿಸಲಿಲ್ಲ. ಅದೇ ನನ್ನ ಅಂತಿಮ ನಿರ್ಧಾರವೂ ಆಯಿತು. ಐದನೇ ದಿನ ರಾಜಶೇಖರ್ ಸರ್‍ಗೆ ನನ್ನ ನಕಾರಾತ್ಮಕ ನಿರ್ಧಾರ ತಿಳಿಸಿ ಅವರು ನನ್ನ ಬಗ್ಗೆ ತಾಳಿದ್ದ ಪ್ರೀತಿಗೆ ಎಳ್ಳು-ನೀರು ಬಿಡುವಂತೆ ಮಾಡಿದೆ. ಹೀಗೆ ಮದುವೆಯ ಮೊದಲನೆಯ ಪ್ರಸ್ತಾವ ಫೇಲಾಗಿ ಹೋಯಿತು.
*****
ನನ್ನ ಮದುವೆಯ ಬಗ್ಗೆ ಹೆತ್ತವರ, ಒಡಹುಟ್ಟಿದವರ ಒತ್ತಡ ಇದ್ದೇ ಇತ್ತು. ಆದರೆ ಉದ್ಯೋಗ, ಉತ್ತಮ ಪೊಜಿಶನ್‍ಗಳಿಗಾಗಿ ತಡಕಾಡುವಷ್ಟರಲ್ಲಿ ಇಪ್ಪತ್ತಾರು ತುಂಬಿ ಹೋದವು. ಮದುವೆಗೆ ಗ್ರೀನ್ ಸಿಗ್ನಲ್ ತೋರಿಸಿದೆ. ಹಲವು ಹುಡುಗರು ಬಂದು ನೋಡಿ ಹೋದರು. ಬಹಳಷ್ಟು ಹುಡುಗರು ನನ್ನ ನಿರೀಕ್ಷೆಯ ಮಟ್ಟಕ್ಕೆ ಬರಲಿಲ್ಲ. ಉದ್ಯೋಗದಲ್ಲಿ ಪ್ಯಾಕೇಜ್, ಪೊಜಿಶನ್ ಚೆನ್ನಾಗಿದ್ದರೆ ಹುಡುಗರು ನನಗೆ ತಕ್ಕ ಜೋಡಿಯಾಗಲು ಯೋಗ್ಯರೆನಿಸಲಿಲ್ಲ. ಹುಡುಗರು ಸ್ಮಾರ್ಟಾಗಿದ್ದರೆ ಉದ್ಯೋಗದಲ್ಲಿ ಪೊಜಿಶನ್, ಪ್ಯಾಕೇಜ್ ಅಷ್ಟಾಗಿ ಆಕರ್ಷಕವಾಗಿರಲಿಲ್ಲ. ಹೀಗೇ ಬಹಳಷ್ಟು ಹುಡುಗರನ್ನು ತಿರಸ್ಕರಿಸುತ್ತಾ ಬಂದೆ. ಎಲ್ಲವೂ ಓಕೆ ಎಂದೆನ್ನುವಷ್ಟರಲ್ಲಿ ವಯಸ್ಸಿನ ಅಂತರ ಹೆಚ್ಚಿರುತ್ತಿತ್ತು. ಹೀಗಾಗಿ ಹಾಗೇ ದಿನಗಳು ಸರಿದು ಹೋಗುತ್ತಿದ್ದವು. ನನ್ನ ವಯಸ್ಸೂ ಹಾಗೇ ಮೇಲೇರತೊಡಗಿತ್ತು.
ನಾನು ಮೂವತ್ತರ ಅಂಚಿನಲ್ಲಿದ್ದಾಗ ಪ್ರತ್ಯಕ್ಷ ಎನ್ನುವ ಟೆಕ್ಕಿ ನನ್ನ ಮನಸ್ಸನ್ನು ತುಂಬಿದನಾದರೂ ಕೂಡು ಕುಟುಂಬದ ಕಾರಣ ಆ ಪ್ರಸ್ತಾವನೆ ಬಿದ್ದುಹೋಯಿತು. ಕೂಡು ಕುಟುಂಬದಲ್ಲಿದ್ದರೆ ನಮಗೆ ಪ್ರೈವಸಿ ಸಿಗುವುದಿಲ್ಲವೆಂದು ಪ್ರತ್ಯಕ್ಷನಲ್ಲಿ ನನ್ನ ಮನದಭೀಷ್ಟೆಯನ್ನು ವ್ಯಕ್ತಪಡಿಸಿದರೂ ಪ್ರಯೋಜನವಾಗಲಿಲ್ಲ. ಮುಂದೆ ಎರಡು ವರ್ಷಗಳವರೆಗೆ ಹೇಳಿಕೊಳ್ಳುವಂಥಹ ಪ್ರಸ್ತಾವನೆಗಳ್ಯಾವೂ ಬರಲಿಲ್ಲ.  ಹಣಮದ, ವಿದ್ಯಾಮದ, ಧನಮದಗಳ್ಯಾವೂ ನನ್ನ ಸಹಾಯಕ್ಕೆ ಬರಲಿಲ್ಲ. ಆಗ ನನಗೆ ನೆನಪಿಗೆ ಬರುತ್ತಿದ್ದವು ಹಿರಿಯರ ಅನುಭವದ ಮಾತುಗಳು. ನನ್ನ ಮುತ್ತಜ್ಜಿ, ಅಜ್ಜಿಯರ ಕಾಲಕ್ಕೆ ಹುಡುಗಿ ಮೈನೆರೆಯುವುದಕ್ಕಿಂತ ಮೊದಲೇ ಮದುವೆಯಾಗುತ್ತಿತ್ತು. ಮೈನೆರೆಯುತ್ತಿದ್ದಂತೆ ಶೋಭನವಾಗುತ್ತಿತ್ತು, ಗಂಡನ ಮನೆ ಸೇರಿಕೊಳ್ಳುತ್ತಿದ್ದಳು, ದಾಂಪತ್ಯ ಜೀವನ ಆರಂಭವಾಗುತ್ತಿತ್ತು. ಇತ್ತೀಚಿಗೆ ಹುಡುಗಿಗೆ ಇಪ್ಪತ್ತರಿಂದ ಇಪ್ಪತ್ನಾಲ್ಕು, ಹುಡುಗನಿಗೆ ಇಪ್ಪತ್ನಾಲ್ಕರಿಂದ ಇಪ್ಪತ್ತೆಂಟು ವರ್ಷಗಳ ಒಳಗೆ ಮದುವೆ ಮಾಡುವುದು ಸೂಕ್ತ ಎನ್ನುತ್ತಾರೆ. ಇಲ್ಲವಾದರೆ ಈಗಿನ ಜೀವನ ಶೈಲಿ, ಆಹಾರ ಪದ್ಧತಿಗಳಿಂದ ಮೂವತ್ತರ ನಂತರ ಮಕ್ಕಳನ್ನು ಹುಟ್ಟಿಸುವ ಸಾಮಥ್ರ್ಯ ಕ್ಷೀಣ ಸುತ್ತದೆ ಎಂದು ಹೇಳುತ್ತಾರೆ. ಈ ಮಾತುಗಳು ಆಗಾಗ ನನ್ನ ಮೆದುಳಲ್ಲಿ ಉದ್ಭವಿಸಿ ಎದೆಯನ್ನು ನಡುಗಿಸಲು ಮುಂದಾಗಿದ್ದವು.
ಮೂವತ್ತೆರಡರ ನಂತರ ಮದುವೆಯ ಆಫರ್‍ಗಳು ಕ್ಷೀಣ ಸತೊಡಗಿದವು. `ಮೂವತ್ತರ ಮುದುಕಿಯನ್ನು ಮದುವೆಯಾಗುವುದೇ…?’ ಎಂಬ ಮಾತುಗಳೂ ಕೇಳಿಬರತೊಡಗಿದವು. ಅಂತರ್ಜಾತಿಯ ಅಥವಾ ಅಂತರ್‍ಧರ್ಮೀಯ ಹುಡುಗನನ್ನಾದರೂ ವರಿಸಲು ಮನಸ್ಸು ನಿರ್ಧರಿಸತೊಡಗಿತು. ನಮ್ಮ ಕಂಪನಿಗೆ ಹೊಸದಾಗಿ ಸೇರಿಕೊಂಡಿದ್ದ, ನನಗಿಂತ ಎರಡು ವರ್ಷ ಚಿಕ್ಕವನಾಗಿದ್ದ ಸ್ಟ್ಯಾಲಿನ್ ಎಂಬ ಕ್ರಿಶ್ಚಿಯನ್ ಹುಡುಗ ಇಷ್ಟವಾದ ನನಗೆ. ಅವನಿಗೂ ನಾನು ಇಷ್ಟವಾದೆ. `ಇಬ್ಬರೂ ಫಾರಿನ್ ಅಸೈನ್‍ಮೆಂಟ್ ತೆಗೆದುಕೊಂಡು ಯುಎಸ್‍ಗೆ ಹೋಗೋಣ. ಅಲ್ಲೇ ಮದುವೆಯಾಗಿ ಹಾಯಾಗಿದ್ದುಬಿಡೋಣ’ ಎಂದೆ. `ಇಲ್ಲ ಇಲ್ಲ, ನನಗೆ ಹೆತ್ತವರ ಪೋಷಣೆಯ ಜೊತೆಗೆ ವಿಚ್ಛೇದಿತ ಅಕ್ಕನ ಜೀವನದ ಜವಾಬ್ದಾರಿಯೂ ನನಗಿದೆ. ಹೀಗಾಗಿ ನಾನು ಫಾರಿನ್‍ಗೆ ಬರಲಾರೆ. ಇಲ್ಲೇ ಇರುವುದಾದರೆ ನಾನು ನಿಮ್ಮನ್ನು ಮದುವೆಯಾಗುವೆ. ಇಷ್ಟು ವಯಸ್ಸಾದರೂ ನಿಮಗೆ ಮದುವೆಯಾಗದಿರುವುದಕ್ಕೆ ನನಗೆ ಅನುಕಂಪವಿದೆ’ ಎಂದೂ ತಿಳಿಸಿದ್ದ. ನನ್ನ ಪ್ರಸ್ತಾವನೆ ಹಾಗೇ ಡಿಲೀಟಾಗಿ ಹೋಯಿತು. ಹಾಗೇ ಇನ್ನೊಂದು ಪ್ರಸ್ತಾವನೆಯೂ ಬಂದಿತು. ಸತ್ಯಪ್ರಸಾದ್ ಹೇಳಿಕೊಳ್ಳುವಂತೆ ಸ್ಮಾರ್ಟಾಗಿ ಇರದಿದ್ದರೂ ಮದುವೆ ಮಾಡಿಕೊಂಡುಬಿಟ್ಟರಾಯಿತು ಎಂಬ ತೀರ್ಮಾನಕ್ಕೆ ಬಂದಿದ್ದ ನಾನು ಹೂಂ ಎಂದಿದ್ದೆ. ಅವನ ಪ್ಯಾಕೇಜ್ ನನಗಿಂತಲೂ ಕಡಿಮೆಯೇ ಇತ್ತು. ಆದರೆ ಅವನ ಮತ್ತು ಅವನ ಹೆತ್ತವರ ಬಹಳಷ್ಟು ಕರಾರುಗಳು ನನ್ನ ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡಿದವು. ಪ್ರತಿ ತಿಂಗಳು ನನ್ನ ಸಂಬಳದ ಹಣವನ್ನೆಲ್ಲ ಅವನ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು; ನನ್ನ ಪಾಲಿಗೆ ಬರುವ ಪಿತ್ರಾರ್ಜಿತ ಆಸ್ತಿಯನ್ನು ಅವರಿಗೆ ವರ್ಗಾಯಿಸಿಕೊಡಬೇಕು; ಆಫೀಸ್ ಮುಗಿದ ತಕ್ಷಣ ಮನೆ ಸೇರಿಕೊಳ್ಳಬೇಕು ಇತ್ಯಾದಿ, ಇತ್ಯಾದಿ ಕರಾರುಗಳಿಗೆ ಆ ಸಂಬಂಧವನ್ನು ಡ್ರಾಪ್‍ಮಾಡಿದೆ. ಕೆಲವು ಬೇರೆ ಜಾತಿಯ ಹುಡುಗರಿಂದಲೂ ಆಫರ್‍ಗಳು ಬಂದವಾದರೂ ಅವ್ಯಾವೂ ಸಾಕಾರಗೊಳ್ಳಲಿಲ್ಲ. ದಿನಗಳೆದಂತೆ ಮದುವೆಯ ನನ್ನ ಕನಸು ಛಿದ್ರಛಿದ್ರವಾಗತೊಡಗಿತು. ನಮ್ಮ ದೇಶದ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ, `ಮಾನವ ಚಂದ್ರನ ಮೇಲೆ ಹೋಗಿದ್ದಾನೆ. ಆದರೆ ಅವನು ಭೂಮಿ ಮೇಲೆ ಹೇಗೆ ಜೀವಿಸಬೇಕು ಅಂತ ಇನ್ನೂ ಕಲಿತಿಲ್ಲ. ಪಕ್ಷಿಗಳ ತರಹ ಆಕಾಶದಲ್ಲಿ ಹಾರಬಲ್ಲ, ಮೀನುಗಳ ತರಹ ನೀರಲ್ಲಿ ಈಜಬಲ್ಲ. ಆದರೆ ಮನುಷ್ಯರ ತರಹ ಭೂಮಿಯ ಮೇಲೆ ನಡೆಯೋಕೆ ಕಲಿತಿಲ್ಲ’ ಎಂಬ ಮಾತುಗಳು ನನ್ನಂಥಹವರಿಗೇ ಹೇಳಿದ್ದಾರೇನೋ ಎಂದೆನಿಸತೊಡಗಿದೆ. ನನ್ನನ್ನು ಪ್ರೀತಿಸುತ್ತಿದ್ದ ರಾಜಶೇಖರ್ ಸರ್‍ರನ್ನು ಅಪ್ಪಿಕೊಂಡಿದ್ದರೆ ನಾನೂ ಸುಖವಾಗಿರುತ್ತಿದ್ದೆನೇನೋ ಎಂದೆನಿಸುತ್ತಿದೆ. ಆಫ್‍ಕೋರ್ಸ್ ಅವರೂ ತುಂಬಾನೇ ಖುಷಿಯಾಗಿರುತ್ತಿದ್ದರಲ್ಲವೇ? ಈಗಲೂ ಅವರು ಬೇರೊಂದು ಹೃದಯವನ್ನು ಅಪ್ಪಿಕೊಂಡು ಸುಖವಾಗಿದ್ದಾರೆಂದು ಕೇಳಿರುವೆ. ಜೀವನ ತಿರುವುಗಳ ಮಾನಸ ಸರೋವರ ಎಂದು ಹೇಳುತ್ತಾರೆ. ಕೆಲವು ತಿರುವುಗಳು ನಮ್ಮನ್ನು ಸರಿಯಾದ ದಿಕ್ಕಿಗೇ ಕರೆದುಕೊಂಡು ಹೋಗುತ್ತವೆ. ನಾನು ರಾಜಶೇಖರ್ ಅವರ ಪ್ರಸ್ತಾವನೆಯನ್ನು ಒಪ್ಪಿಕೊಂಡಿದ್ದರೆ ನನ್ನ ಜೀವನ ಒಳ್ಳೆಯ ತಿರುವನ್ನು ಪಡೆದುಕೊಳ್ಳುತ್ತಿತ್ತೇನೋ ಎಂದು ಈಗೀಗ ಪಶ್ಚಾತ್ತಾಪ ಪಡುತ್ತಿದ್ದೇನೆ. ಈಗ ಚಿಂತಿಸಿ ಫಲವಿಲ್ಲವಲ್ಲ? `ಮನುಷ್ಯ ದುಃಖವನ್ನು ಮಾರಲಾರ, ಖುಷಿಯನ್ನು ಖರೀದಿಸಲಾರನಲ್ಲವೇ? ಬರುವ ನಾಳೆಗಳೆಲ್ಲ ನೋವು ತರಲಿಕ್ಕಿಲ್ಲ. ಭರವಸೆ ಕಳೆದುಕೊಳ್ಳುವುದೂ ಸಲ್ಲ’ ಎಂಬ ಮಾತುಗಳಲ್ಲಿ ನಂಬಿಕೆ ಇಟ್ಟುಕೊಂಡು ಜೀವಿಸುತ್ತಿದ್ದೇನೆ. ಕತ್ತಲೆಯನ್ನು ಮೀರಿ ಬೆಳಕು ನೀಡುವುದರಿಂದಲೇ ದೀಪಕ್ಕೆ ಬೆಲೆಯಿರುವಂತೆ ಕಷ್ಟಗಳನ್ನು ಮೀರಿ ಬೆಳೆದು ನಿಂತಾಗಲೇ ಬದುಕಿಗೊಂದು ಬೆಲೆ ಸಿಗಬಹುದೆಂದು ಭಾವಿಸುತ್ತಾ ಉಸಿರಾಡುತ್ತಿದ್ದೇನೆ. ನನ್ನ ಅಹಂ ನನ್ನನ್ನೇ ತಿನ್ನತೊಡಗಿದೆ ಎಂಬುದು ಅರಿವಾಗುವಷ್ಟರಲ್ಲಿ ನನ್ನ ಜೀವನ ನೌಕೆ ಬಹುದೂರ ಸಾಗಿಬಿಟ್ಟಿದೆ. ಮುಂದಿನದು ಹೇಗೋ ಏನೋ ಎಂಬುದೇ ತಿಳಿಯದಾಗಿದೆ. ಇದೇ ಏಕಾಂಗಿ ಜೀವನ ಹಾಗೇ ಮುಂದುವರಿಯುವುದೋ ಏನೋ? ನಾ ಮಾಡಿದ ಕರ್ಮ ಬಲವಂತವಾದರೆ ನೀ ಮಾಡುವುದೇನೋ ದೇವಾ ಅಲ್ಲವೇ? ಇರಲಿ, ಕಷ್ಟವೋ, ಸುಖವೋ ನನ್ನ ಪಾಲಿನದದ್ದನ್ನು ನಾನೇ ಅನುಭವಿಸಬೇಕಲ್ಲ…? ಈಗಿನ ಯುವ ಜನತೆಯಂತೆ ಅಡ್ಡದಾರಿಯಲ್ಲಿ ನಡೆಯದೇ ನನ್ನತನವನ್ನು ಉಳಿಸಿಕೊಂಡು ಜೀವಿಸುತ್ತಿದ್ದೇನೆ ಅನ್ನೋದೇ ನನ್ನ ಸಾಧನೆ ಅಂತ ಹೇಳಬಹುದು.” ಹೀಗೆ ಸಾಗಿದ್ದ ಯಶಸ್ವಿನಿಯ ಯೋಚನಾ ಲಹರಿಗೆ ಕೊನೆ ಎಂಬುದೇ ಇರಲಿಲ್ಲ. ಯಶಸ್ವಿನಿಯ ದುಃಖದ ಕಟ್ಟೆ ಒಡೆದಿತ್ತು. ಅಳು ಒತ್ತರಿಸಿಕೊಂಡು ಬರತೊಡಗಿತ್ತು. `ನಾನಿಲ್ಲಿ ಅತ್ತರೂ ಎದೆಗೊತ್ತಿಕೊಂಡು ರಮಿಸಿ ಸಮಾಧಾನಿಸುವುದಕ್ಕೆ ಇನ್ನೊಂದು ಜೀವವಿಲ್ಲ. ಗಂಧದ ಹೂವಿಗೂ, ಆ ಗಂಧವನ್ನು ಹೊತ್ತೊಯ್ಯುವ ಗಾಳಿಗೂ ಮಧುರ ಸ್ನೇಹವಿರುತ್ತದೆಯಂತೆ. ಆದರೆ ನನ್ನ ಹೃದಯದ ಭಾವನೆಗಳಿಗೆ ಮಧುರ ಸ್ನೇಹ ಸಂಬಂಧವೇ ಸಿಗಲಿಲ್ಲ ಎಂದಂದುಕೊಂಡಳಾದರೂ ಗಟ್ಟಿಸಿ ಗಟ್ಟಿಸಿ ಅಳಲು ಮುಂದಾದಳು. ಅವಳ ಅಳು ಅರಣ್ಯ ರೋದನವಾಗಿತ್ತು. ನೀರವ ರಾತ್ರಿಯಲ್ಲಿ ಯಶಸ್ವಿನಿಯ ಅಳು ಅವಳ ಕೋಣೆಯಲ್ಲಿ ಅನುರಣ ಸತೊಡಗಿತ್ತಷ್ಟೇ.


About The Author

Leave a Reply

You cannot copy content of this page

Scroll to Top