ಕಾವ್ಯ ಸಂಗಾತಿ
ಸುಕನಸು
ಗಜಲ್


ನಾನಿರದ ಬದುಕಲಿ ನೀ ಸಂತಸದಿಂದಿದ್ದರೆ ಬೇರೇನು ಬೇಕೆನಗೆ
ನಿನ್ನದೆ ಲೋಕದಲಿ ನೀ ಬಯಸಿದಂತಿದ್ದರೆ ಬೇರೇನು ಬೇಕೆನಗೆ
ಒಲವ ಮಳೆಯಲಿ ಜೊತೆ ನೆನೆದ ನೆನಪು ನನ್ನ ಪಾಲಿಗಿದೆಯಲ್ಲ
ಲಾಲಸೆ ಮತ್ತಿನಲಿ ನೀ ಓಲಾಡುತಲಿದ್ದರೆ ಬೇರೇನು ಬೇಕೆನಗೆ
ಹಾರೈಸುವೆ ನಿನ್ನ ಸಂಕಷ್ಟದ ದೆಸೆಗಳು ನನ್ನೊಂದಿಗೆ ತೆರಳಲಿ
ಸುಯೋಗದೊಂದಿಗೆ ನಿನ್ನ ಗೆಳೆತನವಿದ್ದರೆ ಬೇರೇನು ಬೇಕೆನಗೆ
ಕಂಡೆನಂದೇ ನಾ ಜೊತೆಯಲಿರೆ ಅನ್ಯರೆಡೆಗೆ ವಾಲಿದ ನಿನ್ನ ಒಲವ
ಅವರೊಲವೊಂದಿಗೆ ಹೊಂದಾಣಿಕೆಯಿದ್ದರೆ ಬೇರೇನು ಬೇಕೆನಗೆ
ನೀ ಬಯಸಿದ ಬಯಕೆಗಳ ನಾ ಪೂರೈಸಲು ಸೋತೆನೇನೊ ನಲ್ಲ
ನಿನ್ನಿಚ್ಚೆಗೆ ರೂಪಕೊಡುವ ಗೆಣಿಕಾರರಿದ್ದರೆ ಬೇರೇನು ಬೇಕೆನಗೆ
ಮಲ್ಲಿಗೆ ಸುಮ ಪರಿಮಳಕಷ್ಟೆ, ಮುಡಿದವರ ನಸೀಬು ತಿದ್ದಲಾಗದು
ಅದೃಷ್ಟದೊಂದಿಗೆ ನಿನ್ನ ಒಪ್ಪಂದವಾಗಿದ್ದರೆ ಬೇರೇನು ಬೇಕೆನಗೆ
ಸುಕನಸು




ನಿಮ್ಮ ಗಜಲ್ ಇದೆ ಮೊದಲ ಬರೀ ಓದುತ್ತಿರುವುದು, ತಖಲ್ಲೂಸ್ ಇದ್ದರೆ ಚನ್ನ. ೪ನೆ ಶೇರ್ ಚಂದವಿದೆ.
ಸಖತ್ ಡಿಯರ್ ✍️
Thanks mam
ಧನ್ಯವಾದಗಳು sir? ಸುಮ takhallus sir.
Thanks alot sir