ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್


ಅದಾರು ಬಂದದು ಲಲನೆ ಥಟ್ಟoತ ಹೊಳೆಯುತ
ಕರಿ ಮೋಡ ಸರಿದಾಗ ನಕ್ಷತ್ರ ಫಳ್ಳoತ ಮಿನುಗುತ
ನೀಲಿ ಕಣ್ಣ, ತಲೆ ಕೂದಲಲಿ ಹೂ ವನು ಮುಡಿದವಳು
ಅವಳ ಆಗಮನದಿಂ ಕತ್ತಲೆ ಕೋಣೆ ಪಟ್ಟoತ ಬೆಳಗುತ
ನೇರ ನಾಜೂಕು ಹೆದ್ದಾರಿಯಂತೆ ಬೈತಲೆ ಹೊಂದಿದವಳು
ಆದರ ರೂಬಿ ಕಲ್ಲ ಬಲಾಕು ಚಟ್ಟoತ ಫಳಗುಟ್ಟುತ
ಕತ್ತಲ ಕೋಣೆ ಕತ್ತಲನು ಸುರೆಯಂತೆ ಸವಿಯುತ್ತಿರೆ
ಅನಿರೀಕ್ಷಿತ ಮಿಂಚೊoದು ಫಳಾರoತ ಪ್ರಕಾಶಿಸುತ
ಕೃಷ್ಣಾ! ನಿನ್ನ ಚಕ್ರ ಸೂರ್ಯನ ಮುಚ್ಚಿದ್ದು ತಿಳಿಯಲಿಲ್ಲ
ಪಾರ್ಥ ಶಪಥ ತೀರಿದಂತೆ ಪ್ರಿಯೆ ಗೊಳ್ಳoತ ನಗುತ
(ಬೇಸರದಿ ಕತ್ತಲ ಕೋಣೆಯಲಿ ಏಕಾಂಗಿ ಕುಳಿತಿರುವಾಗ ಅಚಾನಕ್ ಬೆಳಕಿನ ಕಿರಣ ಬಂದಾಗಿನ ಭಾವ ಗಝಲಾಗಿಸಿದೆ. ಇದು ಜುಲ್ ಕಾಫಿಯಾ ಆಗುವುದೇ.? ಬಲ್ಲವರು ತಿಳಿಸಿ )
ಬಾಗೇಪಲ್ಲಿ



