ಕಾವ್ಯ ಸಂಗಾತಿ
ಜ್ಯೋತಿ ಮಾಳಿ
ಗಜಲ್


ಇಂದಿಗೆ ಬಾಳಲಿ ನಿನ್ನ ನನ್ನ ಹಿಸಾಬ್ ಚುಕ್ತಾ ಆಯ್ತು
ಮಂದಿಗೆ ಬಾಯಲಿ ನಮ್ಮಿಬ್ಬರ ಕಿತಾಬ್ ಮಕ್ತಾ ಆಯ್ತು
ಹೃದಯದಿಂದ ಲೆಕ್ಕದ ಪನ್ನಾಪನ್ನಾ ಕಿತ್ತು ಬಿಸಾಕಿದ್ದೇನೆ
ಧೋಕಾ ಎಲ್ಲ ಸರಿಸಿದಾಗ ಬಜಾರಿನಲೇ ನಕಾಬ್ ಬಯಲಾಯ್ತು
ರಂಗಿಗೆ ಬಂಗು ಹತ್ತಿದಾಗ ಎಲ್ಲಿದೆ ಹೇಳು ಖೂಬ್ಸೂರ್ತಿ
ಕಟ್ಟ ಕಡೆಗೆ ನಿನ್ನೆಲ್ಲ ಕರ್ತುತಗಳಿಗೆ ಜವಾಬ್ ಕೊಟ್ಟಾಯ್ತು
ನಂಬಿಕೆಗಳ ಮೇಲೆಯೆ ನಂಬಿಕೆ ಸತ್ತು ಹೋಗಿದೆ ನನ್ನಲ್ಲಿ
ನಟ್ಟನಡುರಾತ್ರಿಯಲೇ ರಾತ್ರಿಯಲೇ ನಕ್ಷತ್ರಗಳ ಶಬಾಬ್ ಹೊರಟೋಯ್ತು
ಸ್ವಪ್ನಗಳ ಸವಾರಿ ಮಾಡಿ ಆಸೆ ತೀರ ಮುಟ್ಟಲಿಲ್ಲ ಜ್ಯೋತಿ
ಬದುಕಿನ ನಶೆ ಏರುವ ಮುನ್ನವೇ ಜಾಮಿನಿಂದ ಶರಾಬ್ ಚೆಲ್ಲೋಯ್ತು
ಜ್ಯೋತಿ ಮಾಳಿ



