ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

 “ಈ ಘಟನೆ ನಡೆದು ಸುಮಾರು ಆರು ವರ್ಷಗಳೇ ಕಳೆದಿವೆ,’’ ಎಂದು ಕುಲಕರ್ಣಿ ಉಪೋದ್ಘಾತದಂತೆ ಹೇಳಿದರು.
 “ಈ ಪರಿಸ್ಥಿತಿಯಲ್ಲಿ, ಈ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಸೂಕ್ತವೆಂದು ತೋರುತ್ತದೆ. ಈ ಘಟನೆಗೆ ನೇರವಾಗಿ ಸಂಬAಧಿಸಿದ ಮೂರ್ತಿ ಅವರು ಕೂಡ ಇಲ್ಲಿಯೇ ಇದ್ದಾರೆ. ಅವರು ಸಹ ನಮಗೆ ಕೆಲವು ವಿಷಯಗಳನ್ನು ಹೇಳುತ್ತಾರೆ.
 ಎಲ್ಲರೂ ಆಸಕ್ತಿಯಿಂದ ನೋಡುತ್ತಿದ್ದಾರೆ. ಹೈದರಾಬಾದ್‌ನಲ್ಲಿರುವ ಕೇಂದ್ರ ಸರ್ಕಾರದ ಸಂಶೋಧನಾ ಸಂಸ್ಥೆಯಿAದ ನಡೆಸಲಾದ ಅಲ್ಪಾವಧಿ ತರಬೇತಿ ಸಮಾರೋಪ ಸಭೆಗೆ ಕುಲಕರ್ಣಿ ಅವರನ್ನು ಮುಖ್ಯ ಅತಿಥಿಗಳಾಗಿ ಸಂಘಟಕರು ಕರೆದಿದ್ದರು. ಕುಲಕರ್ಣಿ ಅವರು ಇಂಟೆಲಿಜೆನ್ಸ್ ಕಛೇರಿಯಲ್ಲಿ ಐಟಿ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡಿ ಇತ್ತೀಚೆಗೆ ನಿವೃತ್ತರಾಗಿದ್ದರು. ಅವರ ಸರ್ವೀಸ್‌ನಲ್ಲಿ ಪರಿಹರಿಸಲಾಗದ ಮುಖ್ಯವಾದ ಕೇಸುಗಳನ್ನು, ಛೇದಿಸಿದ ಕೆಲವು ಆಸಕ್ತಿಕರವಾದ ಸವಾಲುಗಳನ್ನು ಕುರಿತು ಒಂದು ಪುಸ್ತಕವಾಗಿ ಹೊರ ತರಲಿದ್ದಾರೆ. ವಿಷಯ ಯಾವುದಾದರೂ ಒಳ್ಳೆಯ ಕಥೆಯಂತೆ, ಜನರಂಜಕವಾಗಿ ಅವರು ಹೇಳುತ್ತಾರೆಂದು ಅವರನ್ನು ಅನೇಕ ಸಭೆಗಳಿಗೆ ಕರೆಯುತ್ತಾರೆ. ಅವರು ವೃತ್ತಿಪರವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರೂ ಹೈದರಾಬಾದ್‌ನೊಂದಿಗೂ ಅವರ ಅನುಬಂಧವನ್ನು ಮರೆಯಲು ಸಾಧ್ಯವಿಲ್ಲವೆಂದು ಅವರೇ ಹೇಳಿಕೊಳ್ಳುತ್ತಾರೆ.
 “ಈ ಒಂದು ವಾರದ ತರಬೇತಿಯು ನಿಮಗೆ ಹೊಸ ವಿಷಯಗಳನ್ನು ಪರಿಚಯಿಸಿದೆ ಎಂದು, ನೀವು ಇಲ್ಲಿ ಕಲಿತ ವಿಷಯಗಳನ್ನು ನಿಮ್ಮ ವೃತ್ತಿ ಜೀವನದಲ್ಲಿ ಅನುಸರಿಸಿ, ಅದರಿಂದ ಪ್ರಯೋಜನ ಪಡೆಯುತ್ತಿರುವಿರೆಂದು ಆಶಿಸುತ್ತೇನೆ” ಎಂದು ಒಂದು ನಿಮಿಷ ತಡೆದು ಸಭಾಂಗಣದಲ್ಲಿರುವ ಎಲ್ಲಾ ಅತಿಥಿಗಳನ್ನು ಗಮನಿಸಿ ನೋಡಿದರು. ಐವತ್ತು ಜನ ಇಂಟಲಿಜೆನ್ಸ್ ಇನ್ಸ್ಪೆಕ್ಟರ್‌ಗಳು ತಮ್ಮ ರಿಫ್ರೆಷರ್ ತರಬೇತಿಯನ್ನು ಮುಗಿಸಿಕೊಂಡು ಮತ್ತೆ ತಮ್ಮ ತಮ್ಮ ಕರ್ತವ್ಯಗಳಿಗೆ ಹೋಗುವ ಮೊದಲು ಆಯೋಜಿಸಿದ್ದ ವಿದಾಯ ಸಮಾವೇಶವಿದು. ಬಹಳಷ್ಟು ಜನ ಅವರವರ ಮನೆಗಳನ್ನು, ಕುಟುಂಬಗಳನ್ನು ಬಿಟ್ಟು ಬಂದು ಒಂದು ವಾರವಾಗಿರುವುದರಿಂದ, ತರಬೇತಿ ಮುಗಿಯುವುದನ್ನೇ ಕಾಯುತ್ತ, ಯಾವಾಗ ರೈಲು ಹತ್ತುತ್ತೇವೆ ಎಂಬAತೆ ಇದ್ದರು.
 ಕುಲಕರ್ಣಿ ಅವರು ಸಣ್ಣಗೆ ನಕ್ಕರು –
 ನಿಮ್ಮ ತರಬೇತಿ ಕಾರ್ಯಕ್ರಮಕ್ಕೆ ಮೂರ್ತಿ ಅವರು ಕೋ ಆರ್ಡಿನೇಟರ್ ಆಗಿ ಇದ್ದರೆಂದರೆ – ಅವರು ಈ ವಾರದ ದಿನಗಳಲ್ಲಿ ನಿಮಗೆ ನಿಮ್ಮ ಅತ್ತೆಯವರ ಮನೆಯನ್ನು ಖಂಡಿತವಾಗಿ ನೆನಪಿಸಿರುತ್ತಾರೆ. ಅವರ ಆತಿಥ್ಯವನ್ನು ಅನುಭವಿಸಿದ್ದರಿಂದ ಆ ವಿಷಯವನ್ನು ನಾನು ಖಚಿತವಾಗಿ ಹೇಳಬಲ್ಲೆ. ಮೂರ್ತಿ ಅವರು ತುಂಬಾ ತಮಾಷೆ ಮನುಷ್ಯ. ಬಹುಶಃ ನೀವು ಈ ವಾರದಲ್ಲಿ ಅದನ್ನು ಗಮನಿಸಿಯೇ ಇರಬಹುದು. ಅದು ಮನೆಯಾದರೂ, ಕಛೇರಿಯಾದರೂ ಸುತ್ತಲಿನ ಪರಿಸರವನ್ನು ಹಿತಕರವಾಗಿ ಪರಿವರ್ತಿಸಬಲ್ಲ ಜಾಣ್ಮೆ, ಕೌಶಲ ಕೆಲವೇ ಜನರಿಗೆ ಇರುತ್ತದೆ. ಅದರಲ್ಲಿ ಮೂರ್ತಿಯವರು ಮೊದಲ ಸಾಲಿನಲ್ಲಿ ಇರುತ್ತಾರೆ.” ಎಂದು ಸ್ವಲ್ಪ ನಿಲ್ಲಿಸಿ, ಎಲ್ಲರೂ ಹೌದೆನ್ನುವಂತೆ ತಲೆದೂಗುತ್ತಿದ್ದರೆ, ತಾವೂ ಅದಕ್ಕೆ ಒಪ್ಪುವವರಂತೆ ತಲೆಯಾಡಿಸಿ,
 “ಅಂತಹ ಮೂರ್ತಿಯವರಿಗೆ ಒಂದು ರಾತ್ರಿ ನಿದ್ರೆಯನ್ನು ದೂರ ಮಾಡಿದ ಕಥೆ ಇದು” ಅಂದರು. ಎಲ್ಲರ ಮುಖದಲ್ಲೂ ನಗುಗಳು ಚಿಗುರಿವೆ. ಕುಲಕರ್ಣಿ ತನ್ನ ಲ್ಯಾಪ್‌ಟಾಪ್‌ನ ಬಟನ್ ಒತ್ತಿ ತನ್ನ ಎದುರಿಗಿದ್ದ ಸ್ಕಿçÃನ್ ಮೇಲೆ ಆ ಗೊಂಬೆ ಕಾಣಿಸುತ್ತಿದೆ ಎಂದು ನಿರ್ಧರಿಸಿಕೊಂಡು –
 “ಇದೇ ನಮ್ಮ ಕಥೆಯ ಸ್ಥಳ” ಎಂದು ಪ್ರೊಜೆಕ್ಟರ್ ಸ್ಕಿçÃನ್ ಮೇಲೆ ಗೊಂಬೆ ತೋರಿಸುತ್ತಾ ಹೇಳಿದರು, ಆ ನಂತರ ಸ್ಲೆöÊಡ್‌ನಲ್ಲಿ ಆ ಗೊಂಬೆಗೆ ಸಂಬAಧಿಸಿದ ವಿವರಗಳು ಹೀಗೆ ಇದ್ದವು.
 “2010 ವರ್ಷದಲ್ಲಿ ಪ್ರಾರಂಭಿಸಿ 2012ನಲ್ಲಿ ಮುಗಿಸಿದ ಕೇಂದ್ರ ಡೇಟಾ ಸೆಂಟರ್ ಆವರಣ. ಅದರ ವಿಸ್ತೀರ್ಣ 50 ಎಕರೆ. ನಗರಕ್ಕೆ 30 ಕಿಲೋಮೀಟರ್ ದೂರ. ಹೆದ್ದಾರಿಯಿಂದ 3 ಕಿಲೋಮೀಟರ್ ಒಳಗೆ, ರಂಗನಪಲ್ಲಿ ಗ್ರಾಮ ಪಂಚಾಯತಿ ಹತ್ರ. ಡೇಟಾ ಸೆಂಟರ್ ಸಾಮರ್ಥ್ಯ 500 ರಾಕ್ ಸ್ಪೇಸ್. ಹತ್ತು ಸಾವಿರ ಸರ್ವರ್‌ಗಳು, 10 ಜೇಟಾ ಬೈಟ್‌ಗಳ ಸ್ಟೋರೇಜ್. ಒಟ್ಟು ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಎಲ್ಲಾ ಇಲಾಖೆಗಳು, ಸಂಸ್ಥೆಗಳು ತಮ್ಮ ತಮ್ಮ ವಿಭಾಗಗಳ ಒಟ್ಟು ಮಾಹಿತಿಯನ್ನು ಇಲ್ಲೆ ಭದ್ರವಾಗಿ ಸಂಗ್ರಹಿಸುತ್ತಾರೆ. ವಿದ್ಯುತ್ ಸರಬರಾಜಿಗೆ ಅಡಚಣೆಯಾದರೆ 24 ಗಂಟೆಗಳವರೆಗೆ ಪರ್ಯಾಯ ವಿದ್ಯುತನ್ನು ಒದಗಿಸುವ ಜನರೇಟರ್‌ಗಳು, ಸಿಸಿಟಿವಿಗಳು, ಹಗಲು ರಾತ್ರಿ ಸುಶಿಕ್ಷಿತರಾದ ಕಾವಲುಗಾರರು… ದೇಶಕ್ಕೆ ಮಿದುಳಿನಂತಿದೆ ಈ ಸೆಂಟರ್.”
 ಪ್ರೊಜೆಕ್ಟರ್ ಆಫ್ ಮಾಡಿ ಮತ್ತು ಮೈಕ್‌ಅನ್ನು ಕೈಯಲ್ಲಿ ತೆಗೆದುಕೊಂಡು –
 “ಅಂತಹ ಸೆಂಟರ್‌ಗೆ ಮೂರ್ತಿ ಅವರು ಆಡಳಿತ ಮತ್ತು ನಿರ್ವಹಣಾಧಿಕಾರಿಯಾಗಿದ್ದರು. ಒಳ್ಳೆಯ ಕಲಾಭಿರುಚಿಯ ಮೂರ್ತಿ ಅವರು ಆ ಆವರಣವನ್ನು ಸುಂದರವಾಗಿ ರೂಪಿಸಿದರು. ಐವತ್ತು ಜನ ಟೆಕ್ನಿಕಲ್ ಸ್ಟಾಫ್, ಇನ್ನೂ ಐವತ್ತು ಜನ ಸಪೋರ್ಟ್ ಸ್ಟಾಫ್ ಇರಬಹುದೆಂದು ಭಾವಿಸುತ್ತೇನೆ. ಅಲ್ಲಿ ಎಲ್ಲರಿಗೂ ಕ್ವಾರ್ಟರ್ಸ್ ಇತ್ತು. ಆದರೆ ಕೆಲವರು ಸಿಟಿಯಿಂದ ಅಪ್ ಅಂಡ್ ಡೌನ್ ಮಾಡುತ್ತಿದ್ದರು. ಸೆಕ್ಯೂರಿಟಿ ಸ್ಟಾಫ್‌ಗೂ ಉತ್ತಮ ವಸತಿ ವ್ಯವಸ್ಥೆ ಇತ್ತು. ಸಿಟಿಯಿಂದ ದೂರ ಎಂಬ ಭಾವನೆ ಹೊರತು ಎಲ್ಲವೂ ಇತ್ತು. ಹೌದಲ್ಲವೇ ಮೂರ್ತಿ?” ಎಂದು ಮೂರ್ತಿಯವರ ಒಪ್ಪಿಗೆಗೆ ಒಂದು ಕ್ಷಣ ಬಿಟ್ಟು, ಮತ್ತೆ –
 “ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುತ್ತಿರುವ ದಿನಗಳಲ್ಲಿ, ಡೇಟಾ ಮಾತ್ರವೇ ಇರಬೇಕಾದ ಆ ಸೆಂಟರ್‌ನಲ್ಲಿ ಒಂದು ದೆವ್ವ ಬಂದಿದೆ.”
 ಎಲ್ಲರೂ ಮುಗುಳ್ನಗೆ ನಗುತ್ತಿದ್ದದ್ದು ನೋಡಿ,
 “ಅರೆ, ನೀವು ಸರಿಯಾಗಿ ಕೇಳಿದ್ದೀರಿ. ಆದರೆ, ಆ ದೆವ್ವ ಹೇಗೆ ಬಂತು ಎಂದು ಅದರ ಸಂಪೂರ್ಣ ವಿಷಯವೇನು ಅಂತ ಆಗಿನ ಆ ಸೆಂಟರ್ ನಿರ್ವಹಣಾಧಿಕಾರಿಯಾಗಿದ್ದ ಮೂರ್ತಿ ಅವರಿಂದಲೇ ಕೇಳೋಣ. ನಂತರ ನಾನು ಮುಂದುವರಿಯುತ್ತೇನೆ”ಎAದು ಹೆಳಿ ಮೈಕನ್ನು ಮೂರ್ತಿ ಕೈಗೆ ಕೊಟ್ಟ,
 ಮೂರ್ತಿ – ಈ ಅನಿರೀಕ್ಷಿತ ವಿನಂತಿಯನ್ನು ನಿರಾಕರಿಸಲು ಸಾಧ್ಯವಾಗದೆ ನಗುತ್ತಾ – “ಖಂಡಿತ” ಎಂದು ಹತ್ತು ಸೆಕೆಂಡುಗಳ ನಂತರ” ಎಲ್ಲಿಂದ ಪ್ರಾರಂಭಿಸ ಬೇಕೋ ನನಗೆ ತಿಳಿಯುತ್ತಿಲ್ಲ” ಎಂದ. ಮತ್ತೆ –
 “ಡೇಟಾ ಸೆಂಟರ್ ಕಾರ್ಯಕ್ರಮಗಳು ಪ್ರಾರಂಭವಾಗಿ ಎರಡು ವರ್ಷಗಳವರೆಗೂ ನಮಗೆ ವಿಪರೀತವಾದ ಕೆಲಸ ಇರುತ್ತಿತ್ತು. ಹೊಸಬರಿಗೆ ವಸತಿ ವ್ಯವಸ್ಥೆ, ಮಾರಾಟಗಾರರ ರಶ್, ಸರ್ಕಾರದ ಆದೇಶಗಳ ಪ್ರಕಾರ ನಮ್ಮೊಂದಿಗೆ ಡೇಟಾವನ್ನು ಭದ್ರಪಡಿಸಲು ಅಗತ್ಯವಾದ ವ್ಯವಸ್ಥೆಗಳು, ಅದಕ್ಕೆ ಸೂಕ್ತವಾದ ತರಬೇತಿಗಳು, ಹೀಗೆ ಎರಡು ವರ್ಷಗಳು ಬಿಡುವಿಲ್ಲದೇ ಕಳೆದು ಹೋದೆವು. ಅದರ ನಂತರ ಎಲ್ಲವೂ ಶಾಂತವಾದಾಗ ಒಂದು ಬೇಸಿಗೆಯ ಮಧ್ಯಾಹ್ನ ಸಾಹು ಎಂಬ ಇಂಜನಿಯರ್ ನನ್ನ ಕೋಣೆಯೊಳಗೆ ಬಂದ.
 ಸಾಮಾನ್ಯವಾಗಿ ಎಂಜಿನಿಯರ್‌ಗಳಿಗೆ ನನ್ನೊಂದಿಗೆ ಹೆಚ್ಚು ಕೆಲಸಗಳೇನು ಇರುವುದಿಲ್ಲ. ಅವರ ನಿವಾಸಗಳಲ್ಲಿ ಏನಾದರೂ ರಿಪೇರಿಗಳು ಇದ್ದರೆ, ಅಥವಾ ನಗರಕ್ಕೆ ಹೋಗಿ ಬರಲು ವಾಹನದ ವ್ಯವಸ್ಥೆಕ್ಕಾಗಿ ಈ ರೀತಿಯ ಸಣ್ಣಪುಟ್ಟ ಅಗತ್ಯಗಳಿರುತ್ತವೆ. ಆದರೇ ನಾನೇ ಅವರೊಂದಿಗೆ ಬೇಕೆಂದೇ ಮಾತನಾಡುತ್ತಾ ಸಂಜೆಗಳನ್ನು ಉತ್ಸಾಹ ಭರಿತವಾಗಿ ಕಳೆಯಲು ಟೆನ್ನಿಸ್ ಕೋರ್ಟ್ ಹಾಕಿಸಿ, ಇಂಡೋರ್ ಗೇಮ್ಸ್ ಆಟಗಳನ್ನು ಏರ್ಪಡಿಸಿ, ದೇಶದೆಲ್ಲೆಡೆಯಿಂದ ಬಂದವರಿಗೆ ಬೇಸರವಾಗದಂತೆ ನೋಡಿಕೊಳ್ಳುತ್ತಿದ್ದೆ. ಹೀಗಾಗಿಯೇ ಎಲ್ಲರೂ ಅದನ್ನು ನೆನಪಿಸಿಕೊಳ್ಳುವ ಸಲುಗೆ ಇರುತ್ತಿತ್ತು.
 ಬಂದವನು ಏನೂ ಮಾತಿಲ್ಲದೆ ಹಾಗೆ ನಿಂತಿದ್ದಾನೆ. ಯಾವುದಾದರೂ ದೊಡ್ಡ ವಿಷಯವೇನೋ ಎಂದು ಕುಳಿತುಕೊಳ್ಳಲು ಕುರ್ಚಿ ತೋರಿಸಿದೆ.
 ಆ ಹುಡುಗ ಸ್ವಲ್ಪ ಮುಜುಗರ, ಸಂಕೋಚದಿAದ … ಯಾವುದೋ ವಿಷಯವನ್ನು ಹೇಳಬೇಕೋ, ಇಲ್ಲವೋ ಎಂಬ ಅನುಮಾನದಿಂದ ಇದ್ದಂತೆ ನೆಲವನ್ನು ನೋಡುತ್ತಾ, ಮಾತಾಡಲು ತೊದಲುತ್ತಿದ್ದ. ನಾನೇ ಸಲುಗೆಯಿಂದ “ಹೇಳಿ, ಡೊಂಟ್ ವರಿ… ನನ್ನೊಂದಿಗೆ ನೀವು ಯಾವ ವಿಷಯವಾದರೂ ನಿರಭ್ಯಂತರವಾಗಿ, ನಿಸ್ಸಂದೇಹವಾಗಿ ಮಾತಾಡಬಹುದು” ಎಂದು ಭರವಸೆ ನೀಡಿದ ನಂತರ,
 “ಸರ್, ನೀವು ಬೇರೆ ರೀತಿಯಲ್ಲಿ ಅಂದುಕೊಳ್ಳುವುದಿಲ್ಲ ಎಂದರೆ ನಾನೊಂದು ವಿಷಯ ಹೇಳ್ತೇನೆ” ಎಂದು ಗುಟ್ಟನ್ನು ಹೇಳುವ ಹಾಗೆ ಮೇಜಿನ ಮೇಲೆ ಬಾಗಿ ಒರಗುತ್ತಾ, ನನ್ನ ಮುಖ ನೋಡುತ್ತಾ –
 “ಸರ್, ನಮ್ಮ ಡೇಟಾ ಸೆಂಟರ್ ಸುತ್ತಾ ರಾತ್ರಿಯಲ್ಲಿ ದೆವ್ವ ಸುತ್ತಾಡುತ್ತಿದೆ ಸಾರ್!”
 ನಾನು ಲಘುವಾಗಿ ಮುಗುಳ್ನಕ್ಕೆ.
 ತಕ್ಷಣ ಮುಖವೆಲ್ಲಾ ಗಂಭೀರವಾಗಿ ಇಟ್ಟುಕೊಂಡು –
 “ಅದನ್ನು ನೋಡಿದ್ದೀರಾ?” ಎಂದು ನಾನು ಮುಗಿಸುವುದರೊಳಗೆ, “ನೀವು ಖಂಡಿಸಲು ಸಿದ್ಧವಾಗುತ್ತಿದ್ದೀರಿ… ದಯವಿಟ್ಟು ನನ್ನ ಮಾತು ಕೇಳಿ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಗಳಿಗೆ ಒಂದು ಐದು ದಿನಗಳಿಂದ, ಒಂದು ದೆವ್ವ ನಮ್ಮ ಸರ್ವರ್ ರೂಮ್ ಬಳಿ ಸುತ್ತಾಡುತ್ತಿದೆ. ನಮ್ಮ ನೆಟ್‌ವರ್ಕ್ ಇಂಜನೀಯರ್ ಕೂಡಾ ರಾತ್ರಿ ಯಲ್ಲಿ ಒಬ್ಬನೇ ಡ್ಯೂಟಿಯಲ್ಲಿ ಇದ್ದಾಗ ಆ ಚಪ್ಪಾಳೆಗಳನ್ನು ಕೇಳಿದ್ದಾನೆ. ಒಂದು ನೆರಳು ಚಲಿಸುತ್ತಾ ಹೋಗುವುದು, ನಡುನಡುವೆ ವಿಚಿತ್ರ ಶಬ್ದಗಳು ಮಾಡುವುದು, ಇವನ್ನೆಲ್ಲಾ ನೋಡಿದರೆ ನಮ್ಮ ಹಳೆಯ ಸೆಕ್ಯುರಿಟಿ ನರ್ಸಿಂಗ್ ಹೇಳಿದ ವಿಷಯ ನಿಜವೆನಿಸುತ್ತಿದೆ’’ ಎಂದು ವಿರಾಮವಿಲ್ಲದೆ ಮಾತಾಡಿದ. ಸಿದ್ಧವಾಗುತ್ತಿದ್ದೀರಿ ಅರ್ಥವಾಗಲಿಲ್ಲ.
 “ಅವನಿಗೆ ಹಲವು ರೀತಿಯಲ್ಲಿ ತಿಳಿಸಿ ಹೇಳಲು ಪ್ರಯತ್ನಿಸಿದೆ. ಆದರೆ ಅವರ ಅಭಿಪ್ರಾಯ ಬದಲಾಗಲಿಲ್ಲ.”
 ಮೂರ್ತಿಯವರ ಮಾತಿಗೆ ಅಡಚಣೆ ಮಾಡುತ್ತಾ ಕೇಳುಗರಲ್ಲಿ ಒಬ್ಬನು-
 “ಅದಕ್ಕೂ ಮುಂಚೆ ಸೆಕ್ಯುರಿಟಿ ಗಾರ್ಡ್ ಏನು ಹೇಳಿದನೋ ನೀವು ಹೇಳ್ಳಿಲ್ಲ.”
 ಮೂರ್ತಿ ಮುಗುಳ್ನಕ್ಕೂ, “ಸಿ.ಐ.ಎಸ್.ಎಫ್. ಅವರ ಆಗಮನದ ಮೊದಲು, ನರ್ಸಿಂಗ್ ಎಂಬ ಸ್ಥಳೀಯ ಏಜೆನ್ಸಿಯ ಸೆಕ್ಯುರಿಟಿ ಗಾರ್ಡ್ ಇದ್ದನು.. ಅವನೊಬ್ಬ ವಾಚಾಳಿ. ಅಲ್ಲಿನ ಕೆಲಸಗಾರರಿಗೆ, ಈ ಸ್ಥಳವು ಒಂದು ಕಾಲದಲ್ಲಿ ಸ್ಮಶಾನವೆಂದು, ಅಲ್ಲಿ ದೆವ್ವಗಳು ಓಡಾಡುತ್ತಿರುತ್ತವೆ ಎಂದು ಕಥೆಗಳನ್ನು ಹೇಳುತ್ತಿದ್ದನು. ಸೆಂಟರ್ ಚಟುವಟಿಕೆಗಳು ಸಿ.ಐ.ಎಸ್.ಎಫ್. ಅವರು ಪೂರ್ತಿ ಜಾಗವನ್ನು ತಮ್ಮ ಹತೋಟಿ ಒಳಗೆ ತೆಗೆದುಕೊಂಡಾಗ, ಅಲ್ಲೇ ತೋಟಗಾರನಾಗಿ ಮುಂದುವರೆದರು. ಆ ಸಮಯದಲ್ಲಿ, ತನ್ನ ಭಯವನ್ನು ಹೋಗಲಾಡಿಸಲು, ಒಂದು ಹನುಮಂತನ ಚಿತ್ರವನ್ನು ಇಟ್ಟು ಅದರ ಸುತ್ತಲೂ ನಾಲ್ಕು ಕಲ್ಲುಗಳನ್ನು ಹೂತಿಟ್ಟಿದನು., ಈ ಆಂಜನೇಯಸ್ವಾಮಿ ಇರುವವರೆಗೂ ಆ ದೆವ್ವಗಳು ಅಲ್ಲಿಗೆ ಬರುವುದಿಲ್ಲವೆಂದು ಎಲ್ಲರಿಗೂ ಹೇಳುವವವನು. ಕೆಲವು ದಿನಗಳ ನಂತರ, ಡ್ಯೂಟಿಯಲ್ಲಿ ಕುಡಿದು ಬಂದಿದ್ದಕ್ಕೆ ಕೆಲಸಕ್ಕೆ ಬರಬೇಡವೆಂದು ಹೇಳಿದರೆ ಸಿಟಿಯಲ್ಲಿರುವ ಅವರ ಮಗನ ಕಡೆ ಹೋಗಿಬಿಟ್ಟಿದ್ದಾನೆ. ಆದರೆ ಅಲ್ಲಿರುವ ದಿನಗಳು ದೆವ್ವದ ಬಗ್ಗೆ ಸುಮ್ಮನೆ ಗಡಿಬಿಡಿ ಮಾಡುವವನು. ಆ ವಿಷಯವನ್ನೇ ಸಾಹು ನೆನಪಿಸಿದ.
 ಮತ್ತೆ ನಮ್ಮ ಸಾಹು ಕಡೆಗೆ ಬಂದರೆ, ಆ ಹುಡುಗ ನನ್ನ ಮಾತುಗಳಿಂದ ಕನ್ವಿನ್ಸ್ ಆಗಲಿಲ್ಲ ಎಂದು ನಂತರದ ಅನೇಕ ಘಟನೆಗಳಿಂದ ನನಗೆ ಅರ್ಥವಾದವು. ಪ್ರತಿಯೊಂದು ಸಣ್ಣ ವಿಷಯವನ್ನು ಭೂತಗನ್ನಡಿಯಿಂದ ನೋಡುವುದು, ಪ್ರತಿ ವೈಫಲ್ಯವನ್ನು ದೆವ್ವಕ್ಕೆ ಆರೋಪಿಸುವುದು, ಅವನ ಮಾತಿನ ನಡುವೆ, ದೇವರಿದ್ದಾನೆಂದು ನಂಬಿದರೆ ದೆವ್ವಗಳೂ ಇವೆ ಎಂದು ನಂಬಬೇಕು ಅಲ್ಲವೇ, ಅವರ ಹಳ್ಳಿಯಲ್ಲಿ ಅವರ ಸಂಬAಧಿಕರಿಗೆ ಸಂಭವಿಸಿದ ಕೆಲವು ಅನುಭವಗಳು, ಹಾರರ್ಚಲನ ಚಿತ್ರಗಳ ಚರ್ಚೆ, ಈ ರೀತಿಯ ಇನ್ನೂ ಕೆಲವು. ಆದರೆ ಅವನ ಸ್ನೇಹಿತರು ಕೂಡಾ ಅವನನ್ನು ಚುಡಾಯಿಸುತ್ತಿದ್ದರು. ಯಾವುದಾದರೂ ವಸ್ತುವನ್ನು ಬಚ್ಚಿಟ್ಟುವುದು, ಅದನ್ನು ದೆವ್ವಕ್ಕೆ ಆರೋಪಿಸಿ ಸತಾಯಿಸುವುದು, ಹುಡುಗರು, ಒಬ್ಬಂಟಿಗರು, ಆ ವಯಸ್ಸಿನಲ್ಲಿ ಏನೇನು ಮಾಡಬೇಕೋ ಅವೆಲ್ಲಾ ಮಾಡಿ ತಮಾಷೆ ನೋಡುತ್ತಿದ್ದರು. ಒಮ್ಮೆ ಒಂದು ಅಪ್ಲಿಕೇಷನ್ ಸರ್ವರ್ ಕೆಲಸ ಮಾಡಲಿಲ್ಲ. ಸಾಹೂ ಸರ್ವರ್ ಅಡ್ಮಿನಿಸ್ಟೆçÃಟರ್. ಎಲ್ಲಾ ಸರ್ವರ್‌ಗಳು ಉತ್ತಮವಾಗಿವೆ, ಆದರೆ ಇದು ಮಾತ್ರ ಪ್ರತಿಕ್ರಿಯಿಸುತ್ತಿಲ್ಲ. ಆಗ ಅವನು ಎಷ್ಟು ಅವಸರ ಮಾಡಿದ್ದನೆಂದರೆ, ಯಾರೋ ತನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು, ತನ್ನ ಮೇಲೆ ಮಾಟ-ಮಂತ್ರ ಪ್ರಯೋಗಗಳು ಜರುಗುತ್ತಿದ್ದವೆಂದು, ಅದರ ಫಲವಾಗಿ ಆ ಸರ್ವರ್ ಕೆಲಸ ಮಾಡುತ್ತಿಲ್ಲವೆಂದು ಗೋಳಿಡುತ್ತಿದ್ದ. ಅವನನ್ನು ಹೊರಗೆ ಕಳಿಸಿ, ಕುಲಕರ್ಣಿ ಅವರಿಗೆ ಫೋನ್ ಮಾಡಿದೆವು. ಒಂದು -ಎರಡು ಗಂಟೆಗಳ ತನಿಖೆಯ ನಂತರ ನಮಗೆ ಗೊತ್ತಾದ ವಿಷಯವೇನೆಂದರೆ, ಅದೇನೋ ಡಿಡಾಸ್ ಎಟಾಕ್ ಎಂದು ಕರೆಯಲಾಗುತ್ತದೆ, ಅದರಿಂದ ಈ ಅನರ್ಥ ನಡೆದಿದೆ ಎಂದು ಕುಲಕರ್ಣಿ ತಂಡ ತೀರ್ಮಾನಿಸಿತು. ಯಾವುದೇ ಸಂದರ್ಭದಲ್ಲಿ ಡೇಟಾ ಸೆಂಟರ್‌ಗೆ ಇಂಟರ್ನೆಟ್ ಅನ್ನು ಕನೆಕ್ಟ್ ಮಾಡಬಾರದೆಂದು ಸೂಚಿಸಿದರು. ಅಲ್ಲಿಗೆ ವಿವಾದ ಇತ್ಯರ್ಥವಾಯಿತು.
 ಮೂರ್ತಿಯವರು ನಿರ್ವಾಹಕರನ್ನು ನೀರಿಗಾಗಿ ಕೇಳಿ ಎರಡು ಗುಟುಕುಗಳು ಕುಡಿದರು.
 “ನಿಮ್ಮ ಸಮಯವನ್ನು ಹೆಚ್ಚು ತೆಗೆದುಕೊಳ್ಳದೆಯೇ ವಿಷಯಕ್ಕೆ ಬರುತ್ತೀನಿ! ಈ ಡಿಡಾಸ್ ಘಟನೆ ನಂತರ ಸುಮಾರು ಒಂದುತಿAಗಳು ಆಗಿರಬಹುದು. ವಿನೋದಕ್ಕಾಗಿ ಎಲ್ಲರೊಂದಿಗೆ ಒಂದು ಪಿಕ್ನಿಕ್ ಅನ್ನು ಪ್ಲಾನ್ ಮಾಡಿದರೆ ಚೆನ್ನಾಗಿರುತ್ತದೆ ಅನ್ನಿಸಿತು. ಆ ವ್ಯವಸ್ಥೆಗಳಲ್ಲಿ ಭಾಗವಾಗಿ ನಾನು ನಗರಕ್ಕೆ ಹೋಗಿದ್ದೆ. ಮರಳಿ ಆಫೀಸಿಗೆ ಹೊರಡುವಾಗ ಫೋನ್ ರಿಂಗಾಯಿತು.
 ಮನೆಯಿಂದ ನನ್ನಹೆಂಡತಿ ಕರೆ ಮಾಡುತ್ತಿದ್ದಾಳೆ.
 “ಏನ್ರೀ ಎಲ್ಲಿದ್ದೀರಿ? ನಿಮಗೆ ಈ ವಿಷಯ ಗೊತ್ತಾ? ಟೀವಿಯಲ್ಲಿ ನಿಮ್ಮ ಡೇಟಾ ಸೆಂಟರ್ ಬಗ್ಗೆ ಬ್ರೇಕಿಂಗ್ ನ್ಯೂಸ್ ಬರುತ್ತಿದೆ. ನಿಮ್ಮಿಂದ ಒಂದಷ್ಟು ಮಾಹಿತಿ ಲೀಕ್ ಆಗುತ್ತಿದೆ ಎಂದು ರಕ್ಷಣಾ ಇಲಾಖೆ ಅವರು ಹೇಳಿತ್ತಿದ್ದಾರೆ. ಟೀವಿಯವರು ಕೂಡ ಕೆಲವುಜನರನ್ನು ಇಂಟರ್ವ್ಯೂ ಮಾಡುತ್ತಿದ್ದಾರೆ. ಈಗ ನೀವು ಎಲ್ಲಿದ್ದೀರಿ? ಯಾವಾಗ ಬರುತ್ತೀರಿ?” ಅವಸರದಲ್ಲಿ ಮಾತಾಡಿದಳು.
 ಒಂದು ಕ್ಷಣ ನನ್ನ ಮೈ ಎಲ್ಲಾ ಕಂಪಿಸಿತು. ಮುಖವೆಲ್ಲ ರಕ್ತದಿಂದ ಹೆಪ್ಪು ಕಟ್ಟಿತು. ಕೈಕಾಲುಗಳು ನಡುಗುತ್ತಿವೆ. ಇದೇನಾದರೂ ಅಲ್ಪ ವಿಷಯವೇ? ಕಾರೂ ನಿಲ್ಲಿಸಲು ಡ್ರೆöÊವರ್‌ಗೆ ಹೇಳಿ ಮತ್ತಷ್ಟು ಹೆಚ್ಚಿನ ವಿವರಗಳನ್ನು ತಿಳಿದುಕೊಂಡು ಕಚೇರಿಗೆ ಕರೆಮಾಡಿದೆ. ಡೈರೆಕ್ಟರ್ ಅವರು ಬೆಂಕಿಯAತೆ ಆದರು. ಆಗುವುದಿಲ್ಲವೇ? ‘ನೀನು ಸೀನಿಯರ್ ಎಂದು ನಿನ್ನ ಮೇಲೆ ಬಿಟ್ಟುಬಿಟ್ಟರೆ, ಏನು ಮಾಡುತ್ತಿದ್ದೀಯಾ?’ ಎಂದು ಪ್ರಶ್ನಿಸಿದರು. ‘ಇಲ್ಲಿ ನಾಶವಾಗುತ್ತಿದ್ದರೆ ನೀನು ಪಿಕ್ನಿಕ್ ಕೆಲಸದ ಮೇಲೆ ತಿರುಗುತ್ತಿದ್ದೀಯಾ?’ ಎಂದು ತುಂಬಾ ಕಠಿಣವಾಗಿ ಮಾತನಾಡಿದರು. ಹತ್ತು ನಿಮಿಷದೊಳಗೆ ಕಛೇರಿಯಲ್ಲಿ ಇರಬೇಕೆಂದು ಆದೇಶಿಸಿದರು.
 ಎಲ್ಲಿಯಾದರೂ ಯಾರಾದರೂ ಅಷ್ಟೇ ಅಲ್ಲವೇ, ಸರಿಯಾಗಿ ನಡೆಯುತ್ತಿರುವ ತನಕ ಯಾರೂ ಏನೂ ಕಾಳಜಿ ವಹಿಸುವುದಿಲ್ಲ. ಸ್ವಲ್ಪ ವ್ಯತ್ಯಾಸ ಬಂದರೆ ಮಾತ್ರ ಯಾರು, ಎಂತಹ ಅವನು ಎಂಬ ವಿವೇಚನೆ ಇಲ್ಲದಂತೆ ಕಿರುಚಾಡುತ್ತಾರೆ. ಸರಿ, ಏನು ಮಾಡುವುದು ಎಂದುಕೊಳ್ಳುತ್ತಾ ನಾನು ಡ್ರೆöÊವರ್ ಜೊತೆ ಸ್ವಲ್ಪ ಬೇಗ ತಲುಪಬೇಕು ಎಂದು ಹೇಳಿ ಕಣ್ಣು ಮುಚ್ಚಿಕೊಂಡೆ.
 ಅರ್ಧ ಗಂಟೆಯಲ್ಲಿ ಆಫೀಸ್ ತಲುಪಿದೆವು.
 ಕಚೇರಿಯಲ್ಲಿ ಎಲ್ಲರೂ – ಮನೆಯಲ್ಲಿ ಯಾರೋ ಸತ್ತಂತೆ ದಿಗಿಲಿನಿಂದ, ಅಲ್ಲಿ ಇಲ್ಲಿ, ಗುಂಪು ಗುಂಪಾಗಿ ಕುಳಿತುಕೊಂಡು ಮಾತನಾಡುತ್ತಾ, ಶೋಕ ಸೂಚಕವಾಗಿ ಮುಖಗಳನ್ನು ಸಪ್ಪಗೆ ಮಾಡಿಕೊಂಡು… ಇಡೀ ವಾತಾವರಣವೇ ನಿಸ್ತೇಜವಾಗಿ ಕಾಣಿಸಿತು..
 ನಾನು ತಕ್ಷಣ ಕಾರಿನಿಂದ ಇಳಿದು ಡೈರೆಕ್ಟರ್ ಕೋಣೆಗೆ ಹೋದೆ. ಅಷ್ಟೊತ್ತಿಗಾಗಲೇ ಅವರ ಸಿಟ್ಟು ಕಡಿಮೆಯಾದಂತಿದೆ.
 “ಬನ್ನಿ ಮೂರ್ತಿ ಅವರೇ ಬನ್ನಿ. ನಿಮ್ಮ ಅನುಪಸ್ಥಿತಿಯಲ್ಲಿ, ನಮ್ಮ ಕೈ ಕಾಲುಗಳು ಕೆಲಸ ಮಾಡಲಿಲ್ಲ. ಒಂದು ಕಡೆ ಹೆಡ್ ಆಫೀಸ್‌ನಿಂದ ಫೋನ್‌ಗಳು, ಇನ್ನೊಂದು ಕಡೆ ಸ್ನೇಹಿತರು, ಮತ್ತೊಂದೆಡೆ, ಪತ್ರಕರ್ತರು ಉಸಿರು ಆಡದಂತೆ ಮಾಡಿದರು. ಸದ್ಯಕ್ಕೆ ನಮ್ಮ ಡೇಟಾ ಸೆಂಟರ್ ಆಪರೇಷನ್‌ಗಳನ್ನು ಸ್ಟಾಲ್ ಮಾಡುತ್ತಿದ್ದೇವೆ. ಅಂದ ಹಾಗೆ ಸಂಜೆಯ ಫ್ಲೆöÊಯಿಟ್‌ಗೆ, ಕುಲಕರ್ಣಿ ಅವರು ಬರುತ್ತಿದ್ದಾರೆ. ಅವರು ಬಂದಾಗ, ಪತ್ರಿಕಾ ಮಾಧ್ಯಮದವರನ್ನು ಕರೆದು ಎಲ್ಲರಿಗೂ ಒಂದೇ ಸಲ ಬ್ರೀಫಿಂಗ್ ಕೊಡಬೇಕೆಂದು ಹೆಡ್ ಕ್ವಾಟ್ರರ್ಸ್ನಿಂದ ಮೆಸೇಜ್ ಬಂತು. ಸ್ವಲ್ಪ ಆ ವ್ಯವಸ್ಥೆಯನ್ನು ಮಾಡಿರಿ” ಎಂದು ಅವರು ನಿಧಾನವಾಗಿ ಹೇಳಿದರು.
 ನಾನು ಹೊರಗೆ ಬಂದ ಮೇಲೆ ಎಲ್ಲರನ್ನು ಮಾತಾಡಿ ಸುತ್ತಾ ತಿಳಿದುಕೊಂಡ ವಿಷಯದ ಸಾರಾಂಶವೇನೆAದರೆ –
 ಹಿಂದಿನ ರಾತ್ರಿ, ರಕ್ಷಣಾ ಇಲಾಖೆ ಕೋರ್ ಕೊಮಿಟಿ ಸದಸ್ಯರು ತಮ್ಮ ಬಡ್ಜೆಟ್ ವಿವರಗಳನ್ನು ಸಿದ್ಧಪಡಿಸಿಕೊಂಡು ಆ ರಹಸ್ಯ ಪತ್ರಗಳನ್ನು ರಕ್ಷಣಾ ಸಚಿವಾಲಯ ಶಾಖೆಯಿಂದ ನಿಯಮಗಳ ಪ್ರಕಾರ ನೇರವಾಗಿ ಡೇಟಾಸೆಂಟರ್‌ಗೆ ಅಪ್ಲೋಡ್ ಮಾಡಿದ್ದಾರೆ. ಆ ಸಮಾವೇಶದಲ್ಲಿ ಹಾಜರಾದ ಹೈ –ಪವರ್ ಕಮಿಟಿಗೆ ಹೊರತು, ಯಾರಿಗೂ ಆ ಬಡ್ಜೆಟ್ ವಿವರಗಳನ್ನು ತಿಳಿಯುವ ಅವಕಾಶವಿಲ್ಲವಂತೆ. ಆದರೆ, ಅಂದು ಬೆಳಗ್ಗೆ ಹನ್ನೊಂದು ಗಂಟೆಗೆ ಯುದ್ಧ ಉಪಕರಣಗಳನ್ನು ಮಾರಾಟ ಮಾಡುವ ಒಂದು ಕಂಪನಿಯಿAದ ರಕ್ಷಣಾ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಒಂದು ಫೋನ್ ಬಂದಿದೆಯAತೆ. ಆ ಕಂಪನಿ ತಮ್ಮ ಕಡೆ ಅತ್ಯಂತ ಆಧುನಿಕ ಟೆಕ್ನಾಲಜಿ ಇದೆಯೆಂದು. ನಮ್ಮ ದೇಶ ಯಾವ ಯಾವ ಶಸ್ತಾçಸ್ತ್ರಗಳನ್ನು ಖರೀದಿಸಲು ಬಯಸುತ್ತದೊ ಅವುಗಳನ್ನು ತಾವು ತುಂಬಾ ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ಹೇಳಿದರಂತೆ. ಅವರು ಮುಂದಿನ ವಾರ ಬಂದು ಭೇಟಿಯಾಗಲು ಬಯಸುತ್ತಿದ್ದೇವೆ, ಎಂದು ಅಪಾಯಿಂಟ್ಮೆAಟ್ ಕೇಳಿದರಂತೆ.. ಈ ವಿವರಗಳು ನಿಮಗೆ ಹೇಗೆ ಗೊತ್ತಾಯಿತು ಎಂದು ಕೇಳಿದಾಗ, ಅವೆಲ್ಲವೂ ರಹಸ್ಯವೆಂದು, ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದ್ದಾರಂತೆ.
 ತಕ್ಷಣವೇ ರಕ್ಷಣಾ ಇಲಾಖೆ ವಿಚಾರಣೆ ಪ್ರಾರಂಭಿಸಿ, ಈ ವಿಷಯಗಳು ಹೇಗೆ ಹೊರಬಂದವು ಎಂದು ವಿಚಾರಿಸುತ್ತಿದ್ದಾಗ ಮಾಧ್ಯಮ ಪ್ರತಿನಿಧಿಯೊಬ್ಬರು ಕರೆ ಮಾಡಿ, ನಿಮ್ಮ ಇಲಾಖೆಗೆ ಸಂಬAಧಿಸಿದAತೆ ಕೆಲವು ವಿಷಯಗಳು ಲೀಕ್ ಆಗಿವೆ ಎಂದು, ಅದರ ಬಗ್ಗೆ ತಮ್ಮ ಬಳಿ ಪುರಾವೆಗಳು ಇವೆ ಎಂದು ಬೆದಿರಿಸಿದರಂತೆ. ಸರಿ, ನಿಮಗೆ ಯಾರು ಹೇಳಿದರು? ಎಂದು ಮಾಧ್ಯಮದವರುರನ್ನು ಕೇಳಿದರೆ ‘ಮೊದಲು ಉತ್ತರಿಸಿರಿ’ ಅಂತ ದಬಾಯಿಸಿದರಂತೆ.. ಅಂದಿನಿAದ ಈ ಚಾನೆಲ್ ತಮ್ಮ ಪ್ರಸಾರಗಳಲ್ಲಿ ಈ ವಿಷಯ ಬ್ರೇಕಿಂಗ್ ನ್ಯೂಸ್ ತರಾ ಪ್ರಸಾರ ಮಾಡುವುದು, ಅದು ನೋಡಿ ಉಳಿದ ಎಲ್ಲಾ ಚಾನೆಲ್ಗಳು ಕ್ಯೂ ನಲ್ಲಿ ನಿಂತಿವೆ.
 ತಮ್ಮಿಂದ ವಿಷಯ ಹೊರಬರಲು ಅವಕಾಶವಿಲ್ಲವೆಂದು, ಡೇಟಾ ಸೆಂಟರ್‌ದಿAದಲೇ ಹೊರಗೆ ಹೋಗುತ್ತಿದೆ ಎಂದು ತಮಗೆ ಅನುಮಾನವು ಇದೆ ಎಂದು, ಇದಕ್ಕೂ ಮೊದಲು ಕೂಡಾ ಒಂದು ಸಲ ಸರ್ವರ್ ಹಠ ಹಿಡಿದಂತೆ ಕೆಲಸ ಮಾಡದಿರುವ ವಿಷಯವನ್ನು ನೆನಪಿಸುತ್ತಾ, ರಕ್ಷಣಾ ಇಲಾಖೆ ವಿಚಾರಣಾ ಅಧಿಕಾರಿಯಾಗಿ ಕುಲಕರ್ಣಿ ಅವರನ್ನು ನೇಮಿಸುತ್ತಾ ಆದೇಶ ಹೊರಡಿಸಿದೆಯಂತೆ.
 “ಸ್ನೇಹಿತರೇ, ಇದು ನನ್ನ ಕಡೆಯಿಂದ ಜರುಗಿದ ಕಥೆ ಮತ್ತು ಇಲ್ಲಿಂದ ಕುಲಕರ್ಣಿ ಅವರನ್ನು ನಿಮ್ಮೊಂದಿಗೆ ಆ ಸಂಶೋಧನಾ ವಿವರಗಳನ್ನು ಹಂಚಿಕೊಳ್ಳಲು ವಿನಂತಿಸುತ್ತೇನೆ” ಎಂದು ಮೈಕನ್ನು ಕುಲಕರ್ಣಿ ಕೈಗೆ ಬದಲಾಯಿಸಿದರು.
 “ವೆಲ್ ಡನ್, ಮೂರ್ತಿ ಅವರೇ, ಇದು ನಡೆದು ಆರು ವರ್ಷಗಳು ಕಳೆದಿದ್ದರೂ, ಕಣ್ಣಿಗೆ ಕಟ್ಟಿದಂತೆ ಎಲ್ಲಾ ವಿವರಗಳನ್ನು ಹೇಳಿದ್ದಕ್ಕಾಗಿ ಧನ್ಯವಾದಗಳು” ಎಂದು ಕೈಗಳು ಸೇರಿಸಿ ಚಪ್ಪಾಳೆ ಹೊಡೆಯ ಹೋದರೆ ಪ್ರೇಕ್ಷಕರು ಅದು ಅರಿತುಕೊಂಡು ಚಪ್ಪಾಳೆ ಮಳೆಯನ್ನು ಬಹುಕರಿಸಿದರು.
 ಕುಲಕರ್ಣಿ ಎಲ್ಲರ ಮುಖವನ್ನು ಒಮ್ಮೆ ನೋಡಿ ಎಲ್ಲರಿಗೂ ಆಸಕ್ತಿ ಇದೆ ಎಂದು ಗ್ರಹಿಸಿ ಪ್ರಾರಂಭಿಸಿದರು. “ಆ ದಿನ, ನಾನು ಎಂದಿನAತೆ ಆಫೀಸಿಗೆ ಹೋದೆ. ಎಲ್ಲವೂ ಶಾಂತವಾಗಿ ಇರುತ್ತದೆ ಎಂದುಕೊAಡರೆ ಹನ್ನೆರಡು ಗಂಟೆಗೆ ನಮ್ಮ ಡೈರೆಕ್ಟರ್ ಅವರು ಅರ್ಜೆಂಟಾಗಿ ಬರಲು ಹೇಳಿ ಕಲಿಸಿದರು. ಹೋಗಿ ಭೇಟಿ ಆದರೆ ಸಂಜೆ ಐದು ಗಂಟೆಯೊಳಗೆ ಹೈದರಾಬಾದಿನ ಡೇಟಾ ಸೆಂಟರ್‌ಗೆ ಬರಬೇಕೆಂದು ವಿನಂತಿಸಿಕೊAಡರು.
 ವೆರೀ ಗುಡ್ ಅಂಡ್ ಕಮಿಟೆಡ್ ಆಫೀಸರ್. ನೌ ಹಿ ಈಸ್ ರಿಟೈರ್ಡ್… ಅವರು ಹೇಳಿದ ಕೆಲವು ವಿಷಯಗಳನ್ನು ಕೇಳಿದ ಮೇಲೆ ನನಗೆ ಹುಚ್ಚು ಹಿಡಿದಂತೆ ಆಯಿತು. ಡೇಟಾಸೆಂಟರ್‌ದಲ್ಲಿ ದೆವ್ವವಿದೆ ಎಂದು, ಆ ದೆವ್ವ ಈ ಎಲ್ಲ ಅವ್ಯವಹಾರಗಳಿಗೆ ಕಾರಣವೆಂದು ಇಲ್ಲಿನ ಜನ, ಎಂಪ್ಲಾಯೀಸ್ ನಂಬುತ್ತಾರೆ ಎಂದು ಒಬ್ಬ ಪತ್ರಕರ್ತ ಸಚಿವರನ್ನು ಕೇಳಿದನಂತೆ… ನಿಮಗೆ ನೆನಪಿದೆಯೇ? ಆಗಿನ ನಮ್ಮ ಐಟಿ ಮಂತ್ರಿಗಳು – ಆಧ್ಯಾತ್ಮಿಕ ಭಾವನೆಗಳು ಇರುವವರಲ್ಲದೆ ಭಕ್ತ ಜನರಿಂದ ತಾನೇ ಒಬ್ಬ ಸ್ವಾಮೀಜಿ ಎಂದು ಪೂಜಿಸಲ್ಪಡುತ್ತಿದ್ದಾರೆ. ಅವರು ಐಟಿ ಕಾರ್ಯದರ್ಶಿಗೆ ಕರೆ ಮಾಡಿದರು, ಕೂಡಲೇ ಇಲಾಖಾ ಸಂಬAಧಿತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು, ಸಾಧ್ಯವಾದರೆ ಹೋಮ್, ಇಂಟೆಲಿಜೆನ್ಸ್ ಡಿವಿಜನ್‌ಗಳಿಗೂ ಸಮನ್ವಯ ಸಾಧಿಸಲು ಸೂಚಿಸಿದರಂತೆ. ಇಲ್ಲಿಯವರೆಗೆ ಸರಿಯಾಗಿದೆ. – ಆದರೆ ಅವರು ಅಲ್ಲಿಗೆ ನಿಲ್ಲದೇ ಹರಿದ್ವಾರದಿಂದ, ವಾರಣಾಸಿಯಿಂದ ಕೆಲಸಾಧುಗಳನ್ನು ಆಹ್ವಾನಿಸಿ, “ಡೇಟಾ ಸೆಂಟರ್‌ನಲ್ಲಿ ಗ್ರಹಶಾಂತಿ” ಮಾಡಿಸಬೇಕೆಂದು ಹೇಳಿದರಂತೆ… ಈ ವಿಷಯ ಐಟಿ ಕಾರ್ಯದರ್ಶಿ ಅವರು, ನಮ್ಮ ಡೈರೆಕ್ಟರ್‌ಗೆ ಹೇಳುತ್ತಾ – “ದಯವಿಟ್ಟು ಒಳ್ಳೆಯ ವಿಚಾರಣಾಧಿಕಾರಿಯನ್ನು ನೇಮಿಸಿ, ಪ್ರಕರಣವನ್ನು ತ್ವರಿತವಾಗಿ ಮುಕ್ತಾಯಗೊಳಿಸಿ. ಇಲ್ಲದಿದ್ದರೆ ಮುಂದಿನವಾರ ಸಂತರುಬAದು ಅಲ್ಲಿ ಹೋಮಗಳನ್ನು ಮಾಡಿ ದೆವ್ವವನ್ನು ಓಡಿಸುತ್ತಾರಂತೆ. ಇಂಥ ಬದುಕು ಬದಿಕಿ …”ಎಂದು ಅವರು ಕೊರಗಿದರಂತೆ. ನಮ್ಮ ಡೈರೆಕ್ಟರ್ ಕೂಡ ನನಗೆ ಹೇಳಿದರು – “ಕುಲಕರ್ಣಿ ಸರ್, ನೀವು ಈ ವಿಷಯವನ್ನು ಆದಷ್ಟು ಬೇಗ ಪರಿಹರಿಸಿ, ಆ ಭೂತೋಚ್ಚಾಟಕರನ್ನು ತಡೆಯಲು ಸಾಧ್ಯವಾಗದಿದ್ದರೆ ನಾನು ಸ್ವಯಂ ನಿವೃತ್ತಿ ತೆಗೆದುಕೊಂಡು ಹೊರಡುತ್ತೇನೆ.’’ ಎಂದರು.
 “ಯಾ ಮೈ ಮೇಕಿಂಗ್ಸೆನ್ಸ್ ಮೈ ಡಿಯರ್ ಪಾರ್ಟಿಸಿಪೆಂಟ್ಸ್–ನಾನು ನಿಮಗೆ ಬೇಸರಗೊಳಿಸುತ್ತಿದ್ದೇನೆಯೇ” ಎಂದು ಅವರು ನಿಲ್ಲಿಸಿದರು.
 “ಆಬ್ಸಲ್ಯೂಟ್ಲೀ ನೋ ‘ಇಟ್ಸ್ ಇಂಟರೆಸ್ಟಿAಗ್’, ಹೇಳಿರಿ, ನಿಲ್ಲಿಸಬೇಡಿ” ಮುಂದೆ ಏನಾಯಿತು?’ ಎಂದು ಜನಸಮೂಹದಿಂದ ಬಂದ ಉತ್ತರಗಳನ್ನು ಕೇಳಿ –
 “ಮನೆಗೆ ವಾಹನವನ್ನು ಕಳುಹಿಸಿ ಸೂಟ್ಕೇಸನ್ನು ನೇರವಾಗಿ ವಿಮಾ£ Àನಿಲ್ದಾಣಕ್ಕೆ ಕಳುಹಿಸಲು ಹೇಳಿ, ನಮ್ಮ ಕೋಟಾದಲ್ಲಿ ಟಿಕೆಟ್ಬು ಬುಕ್ ಮಾಡಿಸಿಕೊಂಡು, ಸಾಯಂಕಾಲ ಐದು ಗಂಟೆ ಮೂರ್ತಿ ಅವರ ಮುಂದೆ ವಾಲಿದೆ. ಡೇಟಾ ಸೆಂಟರ್ ಡೈರೆಕ್ಟರ್ ಅವರನ್ನು ಭೇಟಿ ಅದೆವು. ತಮಾಷೆಯ ವಿಷಯವೇನೆಂದರೆ, ಮಿನಿಸ್ಟರ್ ಅವರ ಪ್ರಸ್ತಾವನೆ ಅವರಿಗೂ ಇಷ್ಟವಾಯಿತು., ದೇವರಿದ್ದಾನೆ ಎಂದು ನಾವು ಡೇಟಾ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ತೆಂಗಿನ ಕಾಯಯನ್ನ ಒಡೆದು, ಮಂತ್ರೋಚ್ಚಾರಣೆಗಳ ನಡುವೆ ಒಳಗೆ ಹೆಜ್ಜೆ ಇಟ್ಟಾಗ, ಈಗ ದೆವ್ವ ಇರುವುದೆಂದು ಅನುಮಾನ ಬಂದರೆ ಗ್ರಹಶಾಂತಿ ಮಾಡಿಸಿದರೆ ತಪ್ಪೇನು ಎಂದು ಪ್ರಶ್ನಿಸಿದರು. ಸಾಧ್ಯವಾದರೆ ಸಾಧುವುಗಳೊಂದಿಗೆ, ಈ ಕಾರ್ಯಕ್ರಮಕ್ಕೆ ಸಚಿವರನ್ನೂ ಕರೆಸುವಂತೆ ಕೋರಿದರು. ಒಳ್ಳೆ ಕವರೇಜ್ ಕೊಟ್ಟು ದೊಡ್ಡ ಈವೆಂಟ್ ಹಾಗೆ ಮಾಡಬೇಕೆಂದು ಆತುರಪಟ್ಟರು. ನನಗೆ ಶಾಕ್ ಹೊಡೆದಂತಾಯಿತು. ಹೌದು. ಎಲ್ಲಾ ಕಡೆ ಎಲ್ಲಾ ರೀತಿಯ ಮನುಷ್ಯರಿರುತ್ತಾರೆಂದು ಮೂವತ್ತು ವರ್ಷಗಳ ಅನುಭವ ಕಲಿಸಿತು.
 ನಾವು ಆರುಗಂಟೆಗೆ ಪ್ರೆಸ್‌ಗೆ ಕರೆ ಮಾಡಿದೆವು. ಬಹಳ ಸಂಯಮನ ದಿಂದ ಉತ್ತರಗಳನ್ನು ಹೇಳಬೇಕಾದ ಸಮಯವದು.
 “ಈಗ ನಡೆದಿರುವ ಘಟನೆ ತೀರಾ ಸಣ್ಣ ವಿಷಯವೆಂದು, ಸೆಕ್ಯೂರಿಟೀ ಎಂಬುದು ಎಂದಿಗೂ ಸ್ಥಿರವಾಗಿ ಇರುವುದಿಲ್ಲವೆಂದು, ನಾವು ಎಷ್ಟೇ ಕಟ್ಟುನಿಟ್ಟಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ, ಅವುಗಳನ್ನು ಮುರಿಯಲು ಬಹುಳ ಶಕ್ತಿಗಳು ಹೊಂಚುಹಾಕಿರುತ್ತವೆ ಎಂದು ನಾವು ಕಾಲಕಾಲಕ್ಕೆ ಅವುಗಳನ್ನು ಪರಿಣಾಮಕಾರಿಯಾಗಿ ತಡೆಯುತ್ತಿದ್ದೇವೆ ಎಂದು, ಸದ್ಯಕ್ಕೆ ಅದೇ ಕೆಲಸ ಮಾಡುತ್ತಿದ್ದೇವೆಂದು, ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಈ ವಿಷಯದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುತ್ತೇವೆ ಎಂದು ಹೇಳಿದೆವು.
 ಪ್ರೆಸ್‌ಮೀಟ್ ಮುಗಿಯಿತು.
 ವರದಿಗಾರರೆಲ್ಲರೂ ಹೋದ ಮೇಲೆ ನಾವೆಲ್ಲರೂ ಡೈರೆಕ್ಟರ್ ಅವರ ರೂಮುಗೆ ಹೋದೆವು. ಆಫೀಸು ಸ್ಟಾಫ್ ಎಲ್ಲರನ್ನು ಉದ್ದೇಶಿಸಿ ಎರಡು ದಿನಗಳ ಕಾಲ ಎಲ್ಲಾ ಕಚೇರಿ ಸಿಬ್ಬಂದಿಗಳು ಸಿದ್ಧವಾಗಿ ಇರಬೇಕೆಂದು ಹೇಳಿದ್ದೆವು. ನಾನು ಎಲ್ಲರನ್ನು ಉದ್ದೇಶಿಸಿ-
 “ಕೊಲೀಗ್ಸ್, ಈಗ ನಾವು ಇದನ್ನ ಒಂದು ಎಮರ್ಜೆನ್ಸೀ ಪ್ರಾಜೆಕ್ಟ್ ಹಾಗೇ ನೋಡಬೇಕು… ನನಗೆ ಒಂದು ತಿಂಗಳಿನಿAದ ಈ ಸೆಂಟರ್‌ದಲ್ಲಿ ಕನೆಕ್ಟ್ ಮಾಡಿದ ಕಂಪ್ಯೂಟರ್‌ನಲ್ಲಿ ನಡೆದ ಟ್ರಾನ್ಸಾಕ್ಷನ್, ಡೇಟಾ ಸೆಂಟರ್ ಒಳಗೆ ಹೋಗಿ ಬಂದಿರುವ ಅವರ ವಿವರಗಳು, ಪ್ರತಿ ಡಿವೈಜ್‌ನಲ್ಲಿ ನೀವು ಮಾಡಿದ ಕಾನ್ಫಿಗರೇಶನ್, ಹೇಗೆ ಬಳಸಲಾಗುತ್ತಿದೆ ಎಂಬುದರ ಎಲ್ಲಾ ವಿವರಗಳು ಅಗತ್ಯವಾಗುತ್ತದೆ. ಒಂದು ಗಂಟೆ ಅಂದರೆ ಒಂದು ಗಂಟೆ. ನಾವು ಆ ವಿವರಗಳನ್ನು ವಿಶ್ಲೇಷಿಸಿದರೆ ನಮಗೆ ಇನ್ನೂ ಕೆಲವು ವಿವರಗಳಿಗೆ ಕ್ಲೂ ಸಿಗುತ್ತದೆ. ಈ ವಿಚಾರಣೆಯಲ್ಲಿ ಯಾರನ್ನೂ ಯಾವ ಪ್ರಶ್ನೆ ಹಾಕಿದರೂ ಇತರತ್ರಾ ಭಾವಿಸಬಾರದು. ಇದೆಲ್ಲವೂ ನಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಭಾಗವೇ!” ಎಂದು ನಾನು ಹೇಳಿದೆ.
 ಆನಂತ ಮೂರ್ತಿಯವರೊಂದಿಗೆ ಡೇಟಾಸೆಂಟರ್ ಒಳಗೆ ಹೋದೆವು.
 ಅದು ತುಂಬಾ ದೊಡ್ಡ ಡೇಟಾಸೆಂಟರ್. ಅದರಲ್ಲಿ ಸಾವಿರ ಸರ್ವರ್‌ಗಳನ್ನು ಇಡಲಿಕ್ಕೆ ಅವಕಾಶವಿರುತ್ತದೆ. ಎಲ್ಲವನ್ನೂ ಸೇರಿಸುತ್ತಾ ನೆಟ್‌ವರ್ಕ್ ಇದೆ. ಒಂದೊAದು ರಾಕ್ ನಲ್ಲಿ ಇಪ್ಪತ್ತರಿಂದ ನೂರು ಸರ್ವರ್‌ಗಳು ಇರುತ್ತವೆ. ಅವುಗಳನ್ನು ಒಂದು ಸ್ವಿಚ್ಗೆ ಕನೆಕ್ಟ್ ಮಾಡುತ್ತಾರೆ. ಅಂತಹ ಎಲ್ಲಾ ಸ್ವಿಚ್‌ಗಳನ್ನು ಸೇರಿಸುತ್ತಾ ಮತ್ತೊಂದು ದೊಡ್ಡಸ್ವಿಚ್ ಇರುತ್ತದೆ. ಅದನ್ನು ಸೆಂಟ್ರಲ್ ಸ್ವಿಚ್ ಎನ್ನುತ್ತಾರೆ. ಅದು ಬಹಳ ಮುಖ್ಯವಾದದ್ದು. ಅದು ಕೆಲಸ ಮಾಡದಿದ್ದರೆ, ಇಡೀ ಸೆಂಟರ್ ಕಾರ್ಯ ನಿರ್ವಹಿಸುವುದಿಲ್ಲ. ಆದ್ದರಿಂದ ಅಂತಹವು ಎರಡು ಇರುತ್ತವೆ. ಒಂದು ವಿಫಲವಾದಾಗ, ಇನ್ನೊಂದು ಸ್ವಯಂಚಾಲಿತವಾಗಿ ಕೆಲಸಮಾಡಲು ಪ್ರಾರಂಭಿಸುತ್ತದೆ.
 ಒಂದು ಗಂಟೆ ಕಾಲ ಯಾವುದಾದರೂ ಭೌತಿಕ ಸಾಕ್ಷö್ಯಗಳು ಸಿಗಬಹುದೇ ಎಂದು ನೋಡಲು ನಾವು ಇಡೀ ಸೆಂಟರ್ ಅನ್ನು ಹುಡುಕಿದೆವು. ತಿರುಗಿ ನಾವು ಕೋಣೆಗೆ ತಿರಿಗಿಡ ಹೊತ್ತಿಗೆ, ಕೇಳಿದ ವರದಿಗಲೆಲ್ಲಾ ಸಿದ್ಧವಾಗಿದ್ದವು. ಮುಂದಿನ ಎರಡು ಗಂಟೆಗಳಲ್ಲಿ, ನಾನು ಎಲ್ಲರಿಂದ ಬಂದ ವರದಿಗಳನ್ನು ನೋಡಿದೆ. ನನಗೇನೂ ತೋಚಲಿಲ್ಲ… ಇಲ್ಲಿಂದ ಇನ್ಫರ್ಮೇಷನ್ ಲೀಕ್ ಆಗುತ್ತಿದೆ ಎಂದು ತಿಳಿಯುತ್ತದೆ, ಆದರೆ ಅದು ಹೇಗೆ ಹೊರಗೆ ಹೋಗುತ್ತದೆ ಎಂದು ಅರ್ಥವಾಗುತ್ತಿಲ್ಲ.
 ಇಂಟರ್ನೆಟ್‌ಗೆ ನಿಜಕ್ಕೂ ಕನೆಕ್ಷನ್ ಇಲ್ಲ. USಃ ಪೋರ್ಟರ್‌ಗಳನ್ನು ಸಕ್ರಿಯಗೊಳಿಸಲಿಲ್ಲ. ಪೆನ್‌ಡ್ರೆöÊವ್‌ಗಳನ್ನು ಉಪಯೋಗಿಸಲಿಲ್ಲ. ಮೋಡೆಮ್, ರೌಟರ್‌ಗಳಲ್ಲಿ, ಫೈರ್‌ವಾಲ್‌ಗಳಲ್ಲಿ ಯಾವುದೇ ಸಂಬAಧಿತ ಎಂಟ್ರಿಗಳಿಲ್ಲ. ಒಂದು ವೇಳೆ ಇವರಲ್ಲಿಯೇ ಯಾರಾದರೂ ಬ್ಲಾಕ್‌ಶೀಪ್‌ಗಳು ಇದ್ದಾರೆ? ಉಹೂಂ, ಯಾರನ್ನೂ ಅನುಮಾನಿಸುವ ಹಾಗೆ ಇಲ್ಲ. ಅಷ್ಟೇ ಅಲ್ಲದೆ ಅವರ ಬುದ್ಧಿಮತ್ತೆಯನ್ನು ನೋಡಿದರೆ ಯಾರಿಗೂ ಅಷ್ಟು ಪರಿಜ್ಞಾನ ಇದ್ದಂತೆ ಕಾಣಿಸುವುದಿಲ್ಲ.
 ಡೇಟಾ ಸೆಂಟರನ್ನು ಎಷ್ಟು ದಿನಗಳವರೆಗೂ ಮುಚ್ಚಲಾಗುತ್ತದೆ? ಅದನ್ನು ಪರಿಹರಿಸಲು ಸಾಧ್ಯವಾಗದಿದ್ದರೆ, ಇನ್ನು ಕೆಲವು ಸೆಂಟರ್‌ಗಳಲ್ಲೂ ಇದೇ ಪರಿಸ್ಥಿತಿ ಉಂಟಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಭೂತವೈದ್ಯರು, ಮಣ್ಣುಮಶಾನ ಅಂತ ಮಂತ್ರಿ ಅವರು, ಸೆಂಟರ್ ಹೆಡ್ ಅವಸರ ಮಾಡಿದರು. ನಮ್ಮ ಡೈರೆಕ್ಟರ್ ಮಾಡಿದ ಶಪಥ ನೆನೆಪಾಯಿತು. ಸ್ವಲ್ಪ ಹೊತ್ತಿನ ಹೊರಗೆ ಹೋಗಿ ನನ್ನ ಟೆಕ್ನಾಲಜಿ ಗೆಳೆಯರ ಜೊತೆ ಮಾತಾಡಿದೆ.
 ಅವರು ತಮ್ಮ ಆಲೋಚನೆಗಳನ್ನು ಹಂಚಿಕೊAಡರು. ನಾವು ಆ ದಿಕ್ಕಿನಲ್ಲಿ ಸ್ವಲ್ಪ ಪ್ರಯತ್ನಿಸಿದೆವು. ಪ್ರಯೋಜನ ಕಾಣಿಸಲಿಲ್ಲ.
 ಮೂರ್ತಿ ಅವರ ಮನೆಯಲ್ಲಿ ಒಳ್ಳೆ ಊಟದ ವ್ಯವಸ್ಥೆ ಮಾಡಿದರು, ಪಾಪ. ಆದರೆ ಆಹಾರದ ಬಗ್ಗೆ ಯೋಚಿಸುವ ಸಮಯವೇ ಅದು? ನಾಲ್ಕು ತುತ್ತುಗಳು ತಿಂದು ಮತ್ತೆ ಡೇಟಾಸೆಂಟರ್‌ಗೆ ಬಂದೆವು. ನನ್ನೊಂದಿಗೆ ನಾಲ್ಕೆöÊದು ಇಂಜಿನಿಯರ್ಗಳೂ ಇದ್ದಾರೆ – ಸಾಹೂ ಸೇರಿದಂತೆ!
 ನನ್ನ ಆಲೋಚನೆಗಳಿಗೆ ಅಂತ್ಯವಿಲ್ಲ. ಮೂರು ತಿಂಗಳ ಹಿಂದೆಡಿ ಡಾಸ್ ಎಟಾಕ್ ನಡೆದಾಗಲೇ ಈ ಸೆಂಟರ್ ಭದ್ರತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿತ್ತು. ಆ ಸಮಸ್ಯೆ ಬಗೆಹರಿದಿತ್ತು. ಅದರಿಂದ ನಾವು ಅದನ್ನು ಯಾರೋ ಪೋಲಿಗಳು ಮಾಡಿದ ಕೆಲಸ ಎಂದು ಬಿಟ್ಟು ಬಿಟ್ಟಿದ್ದೇವೆ, ಆದರೆ ಎಟಾಕ್ ಮಾಡಿದವರು ಯಾರೋ? ಅವರಿಗೆ ಆ ಸೆಂಟರನ್ನ ಟಾರ್ಗೆಟ್ ಮಾಡಬೇಕಾದ ಅಗತ್ಯವು ಏನೆಂದು ಹೊಳೆಯಲಿಲ್ಲ. ಇದು ಅರ್ಥವಾಗದ ವಿಷಯ– ಈ ನೆಟ್‌ವರ್ಕ್ ಹೊರಗಿನ ಪ್ರಪಂಚದೊAದಿಗೆ ಸಂಪರ್ಕ ಹೊಂದಿಲ್ಲದಿದ್ದಾಗ, ಅದರಲ್ಲಿನ ವಿಷಯಗಳು ಹೇಗೆ ಹೊರಗೆ ಬಂತು?
 ಕೆಲವು ಕಾರಣಗಳಿಂದ ಈ ವಿಷಯವು Wi-ಈi ನಿಂದ ಸಪ್ಲಯ್ ಆಗುತ್ತಿದೆ ಎಂದು ಅನಿಸಿತು. ಆದರೆ ಅದಕ್ಕೆ ರಿಸೀವರ್ ಎಲ್ಲಿದೆ? ಟ್ರಾನ್ಸ್ಮೀಟರ್ ಎಲ್ಲಿದೆ? ರಾತ್ರಿ ಹನ್ನೊಂದರಿAದ ನಾನಾ ಪರಿಶೀಲನೆಗಳು ಪ್ರಾರಂಭವಾಗಿ ಕಟ್ಟಡವನ್ನು ಸುತ್ತುವರೆದು, ಒಳಗಿರುವ ಎಲ್ಲ ವಸ್ತುಗಳನ್ನು ಪರಿಶೀಲಿಸುತ್ತಾ ಮಧ್ಯರಾತ್ರಿ ಕಳೆದುಹೋಯಿತು. ಸಾಹೂವನ್ನ ಇತರ ಮಕ್ಕಳು ತಮಾಷೆ ಮಾಡುತ್ತಿದ್ದಾರೆ. ಒಬ್ಬ ಹುಡುಗ ಸರ್ವರ್ ರೂಮ್ ಕಡೆ ತೋರಿಸುತ್ತಾ, ಇಗೋ ಇಲ್ಲಿಯೇ ಸರ್, ದೆವ್ವದ ಸದ್ದುಗಳು ಕೇಳಿಸುತ್ತಿತ್ತು ಎಂದು ಹೇಳಿದ. ಆ ಸ್ಥಳಗಳನ್ನು ಪರಿಶೀಲಿಸಿ ನೋಡಿದರೂ ನಮಗೆ ಯಾವ ಪುರಾವೆಗಳು ಸಿಗುತ್ತಿರಲಿಲ್ಲ. ಹಾಗೆತಿರುಗಿ, ತಿರುಗಿ, ಮತ್ತೆ ಡೇಟಾಸೆಂಟರ್ ಒಳಗೆ ಬಂದೆವು. ಒಟ್ಟು ಸಾವಿರಕ್ಕೂ ಹೆಚ್ಚು ಸರ್ವರ್‌ಗಳೊಂದಿಗೆ ಅದರ ಫ್ಯಾನ್‌ಗಳು, ಏಸಿಗಳ ಶಬ್ದಗಳೊಂದಿಗೆ – ಮೊಳಗುವ ಆ ಸ್ಥಳವು ಈಗ ಎರಡನೇ ಆಟಮುಗಿದ ಚಿತ್ರಮಂದಿರದAತೆ, ಸ್ಕೂಲ್ ಬಿಟ್ಟ ಮೇಲೆ ಕ್ಲಾಸ್ ರೂಂದAತೆ ನಿಶ್ಶಬ್ದವಾಗಿ ಇದೆ. ಎಲ್ಲ ರಾಕ್‌ಗಳಿಂದ ಬರುತ್ತಿದ್ದರೆ (ಅರ್ಥವಾಗಲಿಲ್ಲ. ವಾಕ್ಯ ಅಸಂಪೂರ್ಣ ಎನಿಸಿತು) ಒಂದು ಕಡೆ ಅತ್ಯಮೂಲ್ಯವಾದ ಕ್ಲೂ ಕಾಣಿಸಿದೆ,’’ ಎಂದು ಕುಲಕರ್ಣಿ ಮಾತು ನಿಲ್ಲಿಸಿದರು.
 ಎಲ್ಲರೂ ಉಸಿರು ಬಿಗಿಹಿಡಿದು ಕೇಳುತ್ತಿದ್ದಾರೆ. ಟೇಬಲ್ ಮೇಲಿದ್ದ ಲೋಟ ತೆಗೆದುಕೊಂಡು ಸ್ವಲ್ಪ ನೀರು ಕುಡಿದು ಮತ್ತೆ ಶುರು ಮಾಡಿದ.
 “ಎಲ್ಲಾ ಸರ್ವರ್‌ಗಳನ್ನು ಡೌನ್ಮಾಡಿದಾಗ, ಪವರ್ ಸಪ್ಲಯ್‌ಯನ್ನು ನಿಲ್ಲಿಸಿದಾಗ, ಒಂದು ಶೋ ರೂಮನ್ನು ನೆನಪಿಸುತ್ತಿದ್ದ ಹಾಲ್‌ನಲ್ಲಿದ್ದ ಒಂದು ರಾಕ್‌ನಿಂದ ಮಿಣುಕು ಮಿಣುಕು ಎಂದು ಎರಡು ಲೈಟ್ಸ್ ಬೆಳುಗಿತ್ತಿರುವುದು ನಾನು ನೋಡಿದೆ. ನಾನು ಎಂಜಿನಿಯರ್ಗಳನ್ನು ಕೇಳಿದೆ– ಅದು ಯಾವ ರಾಕ್ ಎಂದು? ಅದಕ್ಕೆ ಅವರು, “ಅದು ನೆಟ್ವರ್ಕ್ ರಾಕ್ಸರ್, ಆ ಮಿನುಗುವ ಲೈಟ್ಸ್ ಇದ್ದಾವಲ್ಲ, ಅದು ಸೆಂಟ್ರಲ್ ಸ್ವಿಚ್ “ಎಂದು ಹೇಳಿದರು. ನಾನು ಹತ್ತಿರಕ್ಕೆ ಹೋಗಿ ನೋಡಿದೆ. ಪವರ್ ಇಲ್ಲದಿದ್ದರೂ ಈ ಸ್ವಿಚ್ಗಳು ಏಕೆ ಬೆಳಗುತ್ತಿವೆ? ನಿಜಕ್ಕೂ ಹೇಗೆ ಪ್ರಕಾಶಮಾನವಾಗಿವೆ? ಇದರರ್ಥ ಇವುಗಳನ್ನು ಉದ್ದೇಶಪೂರ್ವಕವಾಗಿ ಬ್ಯಾಟರಿ ಬ್ಯಾಕಪ್ನೊಂದಿಗೆ ತಯಾರಿಸಲಾಗುತ್ತಿದೆ ಎಂದು ಅರ್ಥ. ರಾಕ್ ತೆಗೆದು, ಆ ಸ್ವಿಚ್ ಹತ್ತಿರಕ್ಕೆ ಹೋಗಿ ಹತ್ತಿರದಿಂದ ಕೇಳಿದರೆ ಅದರಿಂದ ತೆಳುವಾದ ಯಾವುದೋ ಸದ್ದು ಕೇಳಿಸುತ್ತದೆ. ಅದೇನೆಂದರೆ… ಅಷ್ಟು ದೊಡ್ಡ ಡಾಟಾ ಸೆಂಟರ್ ಪವರ್ ಆಫ್ ಆಗಗಿದ್ದರೂ, ಈ ವಸ್ತುವು ಮಾತ್ರ ಕೆಲಸ ಮಾಡುವ ಹಾಗೆ ಡಿಸೈನ್ ಮಾಡಲಾಗಿದೆ. ಅಂದರೆ… ಅಂದರೆ… ಸುಳಿವು ಸಿಗುತ್ತಿದೆ ಅನಿಸಿತು. ಸಾರ್ವತ್ರಿಕ Wi-ಈi ರಿಸೀವರ್ ಅನ್ನು ತರಿಸಿ ರಾಕ್ ಹತ್ತಿರದಿಂದ ಫ್ರೀಕ್ವೆಂಸೀಗಳನ್ನು ಬದಲಿಸುತ್ತಾ ಹೋದರೆ – ನಿಖರವಾಗಿ ಒಂದು ಫ್ರೀಕ್ವೆಂಸಿ ಹತ್ತಿರ ಬೀಪ್ ಬೀಪ್ ಎಂದು ರಿಸೀವರ್ ಚೀರಿಚೀತು. ಅರ್ಥವಾಯಿತು – ಈ ಸೆಂಟ್ರಲ್ ಸ್ವಿಚ್‌ನಲ್ಲೇ ಇದರ ಟ್ರಾನ್ಸ್ ಮೀಟರ್ ಇದೆ ಎಂದು ಅರ್ಥ. ಮತ್ತು, ಈ ಎಲ್ಲಾ ಡೇಟಾ ಅನ್ನು ಎಲ್ಲಿಗೆ ಸೇರಿಸುತ್ತದೆ? ಅಂದರೆ ಇದರ ಹತ್ತಿರದಲ್ಲೇ ರಿಸೀವರ್ ಕೂಡಾ ಇರಬೇಕು. ಎಲ್ಲಾ ಸರ್ವರ್ಗಳಿಂದ ಡೇಟಾವನ್ನು ಸಂಗ್ರಹಿಸಿ, ಸೆಂಟ್ರಲ್ ಸ್ವಿಚ್ ಯಾವುದೋ ಡಿವೈಜ್‌ಗೆ ಕಳುಹಿಸುತ್ತಿರಬೇಕು. ಆ ಡಿವೈಜ್ ಯಾವುದು? ಎಲ್ಲಿದೆ? ಅದನ್ನೇ ನಾವು ಕಂಡುಹಿಡಿಯಬೇಕು. ಈಗ ಆದರ ಯುನಿವರ್ಸಲ್ ಟ್ರಾನ್ಸ್ ಮೀಟರ್ ಇವರ ಹತ್ತಿರ ಇಲ್ಲ ಅಂದಿದ್ದಾರೆ, ಆದರೆ ಬೆಳಿಗ್ಗೆ ಸಿಟೀಗೆ ಕಳುಹಿಸಿ ತರಿಸಿದರೆ ಕೆಲಸ ಆಗುತ್ತದೆ.
 ಯಾರಿಗೂ ಮನೆಗೆ ಹೋಗಿ ಮಲಗಬೇಕೆಂದು ಅನ್ನಿಸಲಿಲ್ಲ. ಅಲ್ಲೇ ಒಂದು ಚಿಕ್ಕ ಮೀಟಿಂಗ್ ರೂಂನಲ್ಲಿ ಸಮಯ ಕಳೆಯುತ್ತಿದ್ದೇವೆ. ಆದರೆ ಇದು ಖಂಡಿತವಾಗಿಯೂ ವಿದೇಶಿ ಷಡ್ಯಂತ್ರದ ಭಾಗವೇ ಎಂಬ ಅನುಮಾನ ಗಟ್ಟಿಯಾಗಿದೆ. ಇಂಪೋರ್ಟ ಮಾಡಿಕೊಂಡ ಸರಕುಗಳಲ್ಲಿ ಇರುವ ಸಮಸ್ಯೆ ಏನೆಂದರೆ ಅವುಗಳಲ್ಲಿಏನೇನು ಇದೆಯೋ ಎಂದುನಮಗೆತಿಳಿದುಕೊಳ್ಳುವ, ನೋಡಿಕೊಳ್ಳುವ ಅವಕಾಶವಿರುವುದಿಲ್ಲ. ಹಾಗೆ ಕವರ್ ತೆಗೆದ ತಕ್ಷಣ ಅವುಗಳ ಗ್ಯಾರೆಂಟಿ ಹೋಗುತ್ತದೆ ಎಂದು ಅವರು ಹೇಳುತ್ತಾರೆ. ನಮಗೆ ಯಾಕೆ ಇದರ ಗೊಡವೆ ಎಂದು ಹೇಗೆ ಬಂದರೆ ಹಾಗೇ ಉಪಯೋಗಿಸ್ತಿವಿ. ಅದು ನಮ ್ಮವೈಯಕ್ತಿಕ ಮೊಬೈಲ್ ಫೋನ್ ಆದರೂ, ರಾಷ್ಟಿçÃಯ ಭದ್ರತೆಗೆ ಸಂಬAಧಿಸಿದ ಸೆಂಟ್ರಲ್ ಸ್ವಿಚ್ ಆದರೂ ನಮಗೆ ಒಂದೇ…! ಈ ವಸ್ತುವಿನ ಮಾಲೀಕ ಒಂದು ದೇಶದವನು, ತಯಾರಿಸುವುದು ಬೇರೆದೇಶದಲ್ಲಿ, ಸಪ್ಲಯ್ ಮಾಡುವುದು ಮತ್ತೊಂದು ದೇಶಕ್ಕೆ, ಕೊನೆಗೆ ಮಾರುವುದು ನಮ್ಮ ದೇಶದವನೇ! ಈಗ ಇಲ್ಲಿ ಯಾರನ್ನು ಅನುಮಾನಿಸಬೇಕು?? ಈ ಸಂಚಿನಲ್ಲಿ ಯಾರಭಾಗಸ್ವಾಮ್ಯ ಎಷ್ಟೆಂದು ಹೇಗೆನಿರ್ಣಯಿಸಬೇಕು?
 ಆ ರಾತ್ರಿ ಏನೇನೋ ಆಲೋಚನೆಗಳು? ಅವನ್ನು ದಾಟಿ ಸಾಹು ರಾಜೇಶ್ ಎಂಬ ಮತ್ತೊಬ್ಬ ಇಂಜನೀರನ್ನು ಕರೆದುಕೊಂಡು, ಸುಮಾರು ಬೆಳಗಿನ ಜಾವ ನಾಲ್ಕು ಗಂಟೆಯಾದಾಗ – ಹೊರಗಿನ ತಣ್ಣನೆಯ ಗಾಳಿಯಲ್ಲಿ ಡೇಟಾ ಸೆಂಟರ್ಸು ತ್ತೂ ಮಾತನಾಡುತ್ತಾ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಎಲ್ಲರಿಗೆ ಕೇಳಿಸುವಂತೆ ಸದ್ದು ಮಾಡುತ್ತಾ ಟೆರೇಸ್ ಮೇಲೆ ಏನೋ ವಿಸ್ಫೋಟಗೊಂಡAತೆ ಸದ್ದು ಬಂದಿತ್ತು. ತಕ್ಷಣವೇ, ಹತ್ತಿರದಲ್ಲಿದ್ದ ಸೆಕ್ಯುರಿಟಿ ಗಾರ್ಡನ್ನ ಕರೆದುಕೊಂಡು ಟೆರಸ್‌ಗೆ ಹೋದೆವು. ಆಗ ನೋಡಿದೆವು. ನಾಲ್ಕು ಕಡೆಗಳಲ್ಲಿ ಆಂಟೆನಾಗಳನ್ನು ಇಟ್ಟುಕೊಂಡು, ಹಕ್ಕಿಯಂತೆ ಹಾರುತ್ತ ತಿರುಗುವ “ಡ್ರೋನ್” ತುಂಡುಗಳಾಗಿ ಬಿದ್ದಿದೆ. ಅದು ಡ್ರೋನ್ ಎಂದು ಗುರ್ತಿಸಲು ನಮಗೆ ಸ್ವಲ ್ಪಸಮಯ ಹಿಡಿಯಿತು. ತಕ್ಷಣ ಸ್ಪಷ್ಟವಾದ ಸಂಗತಿಯೆAದರೆ, ಯಾರೋ ನಮ್ಮ ಚಲನವಲನಗಳನ್ನು ಗಮನಿಸುತ್ತಿದ್ದಾರೆ, ನಾವು ಗುರ್ತಿಸುವ ಮೊದಲೆ ಅದನ್ನು ನಾಶ ಮಾಡಿ, ಯಾವುದೇ ಪುರಾವೆಗಳನ್ನು ಇಲ್ಲದ ಹಾಗೆ ಮಾಡಲು ಅದನ್ನು ಮೊದಲೇ ರಿಮೋಟ್ ಕಂಟ್ರೋಲ್ನಿAದ ಸ್ಫೋಟಿಸಿದರು.
 ಯಾರೋ ನಮ್ಮನ್ನು ಗಮನಿಸುತ್ತಿದ್ದಾರೆ ಎಂದು ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಅಂದರೆ, ನಾವು ಚರ್ಚಿಸಿದ್ದೆಲ್ಲಾ ಕೇಳಿಯೋ, ನೋಡಿಯೊ, ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಂದರೆ ಇಲ್ಲಿನ ಸಮಾಚಾರ ಅಲ್ಲಿಗೆ ವರ್ಗಾಯಿಸುವುದು ಸೆಂಟ್ರಲ್ ಸ್ವಿಚ್ ಮಾತ್ರವಲ್ಲದೆ ಇನ್ನೊಂದು ಡಿವೈಜ್ ಇರ್ಬೇಕೆಂದು ತಿಳಿಯುತ್ತದೆ. ಅದು ಕೆಮೆರಾ, ಅಥವಾ ಸಣ್ಣ ಆಡಿಯೋ ರೆಕಾರ್ಡರ್ ಆಗಬಹುದು. ಅದರ ಆಧಾರದ ಮೇಲೆ, ನಮ್ಮ ಎಲಾ ್ಲಪ್ರಯತ್ನಗಳನ್ನು ತಿಳಿದುಕೊಂಡು ಅದನ್ನು ವಿಸ್ಫೋಟಿಸಿದರು.
 ಕೂಡಲೇ ಸೆಕ್ಯುರಿಟಿಗೆ ಅಲ್ಲೇ ಇರುವಂತೆ ಹೇಳಿ ನಾವು ಕೆಳಗಿಳಿದೆವು. ನನ್ನ ಊಹ ನಿಜವಾಯಿತು. ಹೆಚ್ಚು ಹೊತ್ತು ಹುಡುಕದೆ, ಸರ್ವರ್ ಕೋಣೆಯ ಎದುರುಗಿದ್ದ ಒಂದು ಷೋಕೇಸ್ ಗೊಂಬೆಯಲ್ಲಿ ಪಿನ್ ಹೋಲ್ ಕೆಮೆರಾ ಸಿಕ್ಕಿತು. ಅದರಲ್ಲೇ ಒಂದು ಸಣ್ಣ ಚಿಪ್‌ಅನ್ನು ಅಳವಡಿಸಿ, ವೀಡಿಯೊ ಡೇಟಾವನ್ನು ಟೆರೇಸ್ಮೇಲಿವ ಡ್ರೋನ್‌ಗೆ ಕಳುಹಿಸುವ ಏರ್ಪಾಟು ಮಾಡಿದರೆಂದು ಸುಲಭವಾಗಿ ಅರ್ಥವಾಯಿತು. ಬೆಳಿಗ್ಗೆ – ನಮ್ಮ ಆಪರೇಷನ್ ಮುಗಿಯಿತು. ವೈರ್‌ಲೆಸ್ ಜಾಮರ್‌ಗಳು ಡೇಟಾ ಸೆಂಟರ್‌ನಲ್ಲಿ ಅಳವಡಿಸಬೇಕೆಂದು, ಯಾರೋ ಕೊಟ್ಟಿರುವ ಉಡುಗೊರೆಗಳನ್ನು ಒಳಗಡೆ ತರಬಾರದೆಂದು, ಯಾಕೆಂದರೆ ಇದುವರೆಗೆ ನಾನು ಹೇಳಿದ ಆ ಕೆಮೆರಾ ಶೋ ಪೀಸ್ ಅವುಗಳನ್ನ ತಯಾರಿಸುವಾತ ನಿರ್ದೇಶಕರನ್ನು ಭೇಟಿಯಾದಾಗ ನೆನಪಿಗಾಗಿ ಕೊಟ್ಟರಂತೆ. ನಮ್ಮ ಪರಿಶೀಲನಗಳಲ್ಲಿ, ಕೆಲವು ಸೂಚನೆಗಳೊಂದಿಗೆ ವರದಿಯನ್ನು ಸಲ್ಲಿಸುವ ಮೂಲಕ ನಮ್ಮ ಕೆಲಸ ಪೂರ್ಣಗೊಂಡಿದೆ.
 ಇದು ಗೆಳೆಯರೇ, ಡೇಟಾಸೆಂಟರ್‌ನಲ್ಲಿಯ ದೆವ್ವದ ಕಥೆ. ನಾವು ದೆವ್ವವನ್ನು ಬಾಟಲಿಯಲ್ಲಿ ಬಂಧಿಸಿ ಸಚಿವರಿಗೆ ಕೊಟ್ಟಿದ್ದರೆ ಚೆನ್ನಾಗಿತ್ತು, ಆದರೆ ಶತ್ರುವು ನಮಗೆ ಆ ಅವಕಾಶವನ್ನು ನೀಡಲಿಲ್ಲ.
ಕುಲಕರ್ಣಿ ಒಂದು ದೀರ್ಘ ನಿಟ್ಟುಸಿರು ಬಿಟ್ಟು ಪಕ್ಕದಲ್ಲಿದ್ದ ಗ್ಲಾಸಿನಿಂದ ಸ್ವಲ್ಪ ನೀರು ಕುಡಿದು, “ನಿಮಗೆ ಏನಾದರೂ ಸಂದೇಹಗಳಿದ್ದರೆ ಕೇಳಬಹುದು.” ಎಂದರು.
 ಯಾರೋ ಒಬ್ಬರು ಸಣ್ಣಕ್ಕೆ ಚಪ್ಪಾಳೆ ತಟ್ಟಿದರೆ, ಎಲ್ಲರೂ ಅದನ್ನು ಅನುಸರಿಸುತ್ತಾ ಆ ಹಾಲೆಲ್ಲಾ ಮೊಳಗುವಂತೆ ಅಭಿನಂದನಗಳೊAದಿಗೆ ಚಪ್ಪಾಳೆಯೆ ಮಳೆಯನ್ನು ಸುರಿಸುತ್ತಿದ್ದರು.
ಒಬ್ಬ ಅಧಿಕಾರಿ ಎದ್ದು ನಿಂತು, “ಮೊದಲಿಗೆ ನಿಮಗೆ, ನಿಮ್ಮ ತಂಡಕ್ಕೆ ಅಭಿನಂದನೆಗಳು, ಕುಲಕರ್ಣಿ ಸರ್, ಎಂತಹ ಅದ್ಭುತವಾದ ಅಸೈನ್ಮೆಂಟ್! ಸಂಸ್ಕೃತಿಯ ಹೆಸರಿನಲ್ಲಿ ನಾವು ಅನುಸರಿಸುವ ನಂಬಿಕೆಗಳನ್ನು ಶತ್ರುಗಳು ಎಷ್ಟು ಜಾಣ್ಮೆಯಿಂದ ಬಳಸುತ್ತಾರೆ ಎಂಬುದನ್ನು ಈ ಅನುಭವ ತೋರಿಸುತ್ತದೆ. ಬಹಳ ಎಚ್ಚರದಿಂದ ಇರಬೇಕಾದ ಪರಿಸ್ಥಿತಿಯಲ್ಲಿ ದೆವ್ವದ ಹೆಸರಿನಲಿ ್ಲಕಾಲ ಕಳೆದರೆ ನಾವು ಮೂರ್ಖರಾಗುತ್ತೇವೆ. ಉತ್ತಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊAಡಿದ್ದಕ್ಕಾಗಿ ಧನ್ಯವಾದಗಳು.” ಎಂದು ಕುಳಿತುಕೊಂಡರು.
 ಮತ್ತೊಬ್ಬ ಅಧಿಕಾರಿ ಎದ್ದ, “ನನ್ನ ಹೆಸರು ಅವಿನಾಶ್. ಕುಲಕರ್ಣಿ ಅವರಿಗೆ ಧನ್ಯವಾದಗಳು. ಇವೆಲ್ಲಾ ಜಾಗತೀಕರಣದ ಕರಾಳ ಮುಖಗಳು ಎಂದು ನಾನು ಭಾವಿಸುತ್ತೇನೆ. ಇಂದು ಜಾಗತೀಕರಣದಿಂದ ನಮ್ಮಲ್ಲಿ ಅನೇಕರು ಸಾಕಷ್ಟು ಲಾಭವಾಗಿದೆ, ಜಾಗತೀಕರಣದಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಹಲವರು ಭಾವಿಸುತ್ತಾರೆ. ಸ್ಥಳೀಯ ವಸ್ತುಗಳನ್ನು ಪ್ರೋತ್ಸಾಹಿಸದಿದ್ದರೆ ಈಗ ಭಾರತದಲ್ಲಿ ಹೂಡಿಕೆ ಮಾಡಿರುವ ಬಹುರಾಷ್ಟಿçÃಯ ಸಂಸ್ಥೆಗಳು, ಸದ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮತ್ತಷ್ಟು ಬಡದೇಶಗಳಿಗೆ ಹೋಗಿ ಇದೇ ಇತಿಹಾಸವನ್ನು ಪುನರಾವರ್ತಿಸುತ್ತವೆ. ಹಾಗಾದರೆ ನಮ್ಮ ದೇಶದಲ್ಲಿ ಮಾಡಲು ಯಾವ ಕೆಲಸಗಳು ಇರುತ್ತವೋ ನಾವು ಯೋಚಿಸಬೇಕು. ನೀವು ಹೇಳಿದ ಸೆಂಟ್ರಲ್ ಸ್ವಿಚ್‌ವಂತವು ನಾವು ತಯಾರು ಮಾಡುವ ಸ್ಥಿತಿಯಲ್ಲಿ ಇಲ್ಲದಿರುವುದು ನಾಚಿಕೆಗೇಡು ಅಲ್ಲವೇ! ನಾವು ಬಹುಶಃ ವಿದೇಶಿ ಸಲಕರಣಗಳ ಮತ್ತು ಸ್ಥಳೀಯಉದ್ಯಮವನ್ನುನಿರ್ಲಕ್ಷಿಸುತ್ತಿದ್ದೇವೆ.” ಎಂದು ಹೇಳಿದ ಕೂಡಲೇ ಎಲ್ಲರೂ ಅಭಿನಂದನೆ ಪೂರ್ವಕವಾಗಿ ನೋಡಿದರೂ. ಮೊದಲಿನ ಸಾಲಿನಲ್ಲಿ ಕುಳಿತಿದ್ದ ಒಬ್ಬ ಆಫೀಸರ್ ಕೈ ಮೇಲೆಕೆತ್ತಿ ಮುಖದಲ್ಲಿ ಮುಗುಳ್ನಗೆಯೊಂದಿಗೆ-
 ” ಸರ್, ನೀವು ಹೇಳಿದ ಕಥೆಯಲ್ಲಿ ಒಂದು ಸಣ್ಣ ಅನುಮಾನ. ನಮ್ಮ ಸ್ನೇಹಿತರಿಗೆ ಅಮಾವಾಸ್ಯೆಗೆ, ಹುಣ್ಣಿಮಿಗೆ ಕೇಳಿಸುವ ಶಬ್ದಗಳ ಮಾತೇನು? ಚಲಿಸುವಂತೆ ತೋರುವ ನೆರಳುಗಳು ಎಲ್ಲಿವವು?” ಎಂದು ಕೇಳಿದ.
 ಕುಲಕರ್ಣಿ ನಗುತ್ತಾ, “ನಿಮ್ಮ ಸೂಕ್ಷö್ಮ ಪರಿಶೀಲನಗೆ ನನ್ನ ಅಭಿನಂದನೆಗಳು ಗೆಳೆಯಾ! ನಿವೇಷ್ಟೂ ಶ್ರದ್ಧಾಶಕ್ತಿಗಳಿಂದ ಇಡೀ ಕಥೆಯನ್ನು ಫಾಲೋ ಆಗಿದ್ದಿರಿ ಎಂಬುದು ಅರ್ಥವಾಗಿದೆ, ಓಕೆ, ಲೆಟ್ ಮೀ ಆನ್ಸರ್. ಆನಂತರ ಎಂದೂ ಅಂತಹ ಶಬ್ದಗಳು ಕೇಳಿಸಲಿಲ್ಲ ಎಂದು ಸಾಹೂ ಒಪ್ಪಿಕೊಂಡ. ಅದಕ್ಕೂ ಮೊದಲು ಅವು ಹೇಗೆ ಬಂದವೋ ಎಂದು ಹೇಳಲಾಗದು. ಆದರೆ ನಮ್ಮ ಅಭಿಪ್ರಾಯದಲ್ಲಿ, ಪ್ರತಿ ಹದಿನೈದು ದಿನಗಳಿಗೊಮ್ಮೆ ಡೇಟಾವನ್ನು ತರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡು ಇರುತ್ತಾರೆ. ಆ ದ್ರೋನ್ ಟೆರಸ್ ಮೇಲೆ ಇದ್ದರೆ, ಸೆಂಟ್ರಲ್ ಸ್ವಿಚ್‌ನೊಂದಿಗೆ ಸಂಪರ್ಕ ಸಮಸ್ಯೆ ಇರುತ್ತದೆ. ಆದ್ದರಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ, ಅವರ ಯೋಜನೆಯ ಪ್ರಕಾರ, ಆ ಡ್ರೋನ್‌ಅನ್ನು ರಿಮೋಟ್ ಸಹಾಯದಿಂದ ಕೆಳಗೆ ತಂದು ಹಿಂಭಾಗದಲ್ಲಿ ಇರುವ ಸನ್ ಶೆಡ್ ಮೇಲೆ ಕೂರಿಸಲಾಗುತ್ತದೆ. ಕೆಲಸ ಮುಗಿದ ನಂತರ ಅದನ್ನು ಮತ್ತೆ ತೆಗೆದುಕೊಂಡು ಹೋಗಿ ಟೆರಸ್ ಮೇಲೆ ಅನುಪಯುಕ್ತ ವಸ್ತುಗಳ ನಡುವೆ ನಿಲ್ಲಿಸುತ್ತಾರೆ. ಆಡ್ರೋನ್ ಕೆಳಕ್ಕೆ, ಮೇಲಕ್ಕೆ ಆಪರೇಟ್ ಮಾಡುತ್ತಿದ್ದಾಗ ಆ ಫ್ಯಾನ್‌ಗಳ ಶಬ್ದಗಳು ಸನ್ ಶೆಡ್‌ಗೂ ಸೀಲಿಂಗ್‌ಗೂ ನಡುವಿನ ಗ್ಯಾಪ್ ಚಿಕ್ಕದಾದಕಾರಣದಿಂದ, ಅದು ವಿಚಿತ್ರ ವಿಚಿತ್ರವಾದ ಶಬ್ದಗಳಾಗಿ ಕೇಳಲು ಕಾರಣವಾಗುತ್ತಿತ್ತು – ಇದು ನಾನು ನನ್ನ ತರ್ಕದಿಂದ ಮಾಡಿದ ಅನ್ವಯ”
 ಅದಾದನಂತರ, ಯಾರೂ ಮಾತನಾಡದ ಕಾರಣದಿಂದ ಅಧ್ಯಕ್ಷರು –
 “ವಾವ್! ಚೆನ್ನಾಗಿ ಹೇಳಿದ್ದಾರೆ ಕುಲಕರ್ಣಿ ಮತ್ತು ಮೂರ್ತಿ ಅವರು. ಗೆಳಯರೆಲ್ಲರಿಗೆ ಕೃತಜ್ಞತೆಗಳು. ಎಲ್ಲಾ ಸ್ನೇಹಿತರಿಗೆ ಧನ್ಯವಾದಗಳು. ನಿಮ್ಮ ವೃತ್ತಿ ಜೀವನದಲ್ಲಿ ನೀವು ಇಂತಹ ಸ್ಪೂರ್ತಿದಾಯಕ ಅನುಭವಗಳನ್ನು ನಿಮ್ಮ ವೃತ್ತಿಜೀವನದಲ್ಲಿ ನಿಮಗೂ ನೀವು ಸಿಗಬೇಕೆಂದು ಆಶಿಸುತ್ತಾ, ಈ ಸಮಾರಂಭವನ್ನು ಮುಕ್ತಾಯಗೊಳಿಸುತ್ತೇವೆ, ಊಟಸಿದ್ಧವಾಗಿದೆ. ಊಟಕ್ಕೆ ಹೋಗೋಣ’ ‘ಲೆಟ್ಸ್ ಗೋ ಫಾರ್ ಡಿನ್ನರ್’ ಮಾತು ಮುಗಿಸಿದರು.


About The Author

Leave a Reply

You cannot copy content of this page

Scroll to Top