ಕಾವ್ಯ ಸಂಗಾತಿ
ಡಾ. ಹೆಚ್. ನಟರಾಜ್ ಆರ್ಯ
“ಮೌನ ಮಳೆ”


ಮನೆ ತುಳಸಿ ಬಾಡಿತು,
ಹೊಸ್ತಿಲ ದೀಪ ಆರಿತು;
ಒಂದೇ ಸೂರಿನ ನೆರಳಲಿ
ನಗುವು ಮೌನ ಸೇರಿತು.
ಮಾತು ಹಕ್ಕಿ ಹಾರಿತು,
ಮೌನ ಗೂಡು ಕಟ್ಟಿತು;
ಕೈಯ ಸ್ಪರ್ಶವಿದ್ದರೂ
ಮನಸು ದೂರ ಸರಿಯಿತು.
ನಂಬಿಕೆ ಮೊಗ್ಗು ಬಾಡಿತು,
ಸ್ವಾರ್ಥ ಗಾಳಿ ಬೀಸಿತು;
ಅರಳುವ ಮೊದಲೇ ಪ್ರೀತಿ
ಧೂಳಾಗಿ ಉದುರಿತು.
ಕಾದ ಕಣ್ಣ ಬೆಳಕಲಿ
ಹೊಸ್ತಿಲ ನೆರಳು ನಿಂತಿತು;
ಹೆಜ್ಜೆ ಸದ್ದು ಮೂಡದೆ
ಸಂಜೆ ಮೌನ ಹರಡಿತು
ಒಣ ಮಣ್ಣ ಮಡಿಲಲಿ
ಬೀಜ ಇನ್ನೂ ಮಲಗಿತು;
ಪ್ರೀತಿಯ ಮೊದಲ ಹನಿಯಲಿ
ಬಂಧ ಮತ್ತೆ ಚಿಗುರಿತು.
✍️ ಡಾ. ಹೆಚ್. ನಟರಾಜ್ ಆರ್ಯ




ಪ್ರಾಸ ಬದ್ದ ವಾದ ಬರವಣಿಗೆ
Beautiful Natarajji
ನಿಮ್ಮ ಲೇಖನಿಯಿಂದ ಮೂಡಿದ ಕಾವ್ಯ,
ಭಾವನೆಗಳ ಭಂಡಾರ, ಅದ್ಭುತ ನವ್ಯ!
ಪ್ರತಿ ಸಾಲಲ್ಲೂ ಅಡಗಿದೆ ಸುಂದರ ಅರ್ಥ,
ನಿಮ್ಮ ಪ್ರತಿಭೆಗೆ ಸಿಕ್ಕಿದೆ ಸಾಹಿತ್ಯದ ಜೈತ್ರಯಾತ್ರೆಗೆ ಪಥ.
The title itself is very catchy. Each word is literally meaning ful.Overall, it is an excellent write up