ಕಾವ್ಯ ಸಂಗಾತಿ
ಶಿವಕುಮಾರ ಕೋಡಿಹಾಳ
“ಮೃಗಶಿರಾ ಮಳೆ”


ಬಿಸಿಲ ಬೇಗೆಗೆ ಬಸವಳಿದ
ಭೂರಮೆಯ ತಂಪುಗೊಳಿಸಲು
ಇಳೆಗೆ ಸುರಿಯಿತಿಂದು
ಮೃಗಶಿರಾ ಮಳೆ
ಧರಣಿದೇವಿಯ
ತಾಪ ನೀಗಿಸಲು
ಕಣ್ಣೋಟ ಹರಿಸಿದೆಡೆ
ಹಸಿರಿನ ವೈಭವ
ಮುನ್ನೋಟ ವಿಹರಿಸಿದೊಡೆ
ಆಹ್ಲಾದದ ಸೂರಭ
ನಿಸರ್ಗ ಚೆಲುವಿನ
ಅಮೃತಪಾವನ
ಈ ಮೃಗಶಿರಾ ಮಳೆ
ಕಾದ ನೆಲವ ತಂಪಾಗಿಸಿದ
ಆ ವರುಣದೇವ
ಹಸಿದೊಡಲ ಬರ ನೀಗಿಸಿದ
ಈ ಅನ್ನದೇವ
ಭಾವ ಸಮಾಧಿಯ
ಸಿಂಧೂರ
ಈ ಮೃಗಶಿರಾ ಮಳೆ
ಕಪ್ಪೆಗಳ ವಟವಟ ನಿನಾದ
ಚಿಟ್ಟೆಗಳ ಚಿಲಿಪಿಲಿ ನಾದ
ಗುಂಯ್ ಗುಡುವ ಸೊಳ್ಳೆಗಳ
ಮಧುರಾಯನ ಮೈಳೈಸಿತೇಳ್
ಈ ಮಳೆಯ ಆರ್ಭಟದಿಂ
ಮಳೆಯಿಂದ ಇಳೆ
ಕಾಣುತಿದೆ ಬೆಳೆ
ಮನದಿಂದ ಕಲ್ಮಶವ ಕಳೆ
ಇದೇ ಬಾಳಿಗೆ ಚಿತ್ಕಳೆ
ಬೆಳಗುತಿದೆ ಬಾಳು
ಸುಖದ ಕುರುಹು ಕೇಳು
ಶಿವಕುಮಾರ ಕೋಡಿಹಾಳ



