ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜೀವನ ನಾವು ಅಂದುಕೊಂಡತಲ್ಲ
ಅಂದುಕೊಂಡಿದ್ದೆಲ್ಲ ಜೀವನವಲ್ಲ
ಮೇಲೊಬ್ಬನ ಹಣೆಬರಹ ತಿಳಿಯಲ್ಲ
ಬದುಕಿನ ಏರಿಳಿತ ಎಂದೂ ಅರಿವಿಲ್ಲ

ಜಗವೇ ಒಂದು ನಾಟಕ ರಂಗ
ಬಾಳಲ್ಲಿ ಇರಲಿ ಒಳ್ಳೆಯವರ ಸಂಗ
ಅರಿಯದೆ ಬಾಳಿದರೆ ಬದುಕು ಭಂಗ
ತಿಳಿಯದಿದ್ದರೆ ಇಂಗು ತಿಂದ ಮಂಗ

ಬದುಕಿನ ಸಂತೆಯಲಿ ಬಿಕರಿಗಿದೆ ಕನಸು ಮತ್ತು ಚಿಂತೆ
ಕೊಳ್ಳುವವರಿಲ್ಲ ನೋವುಗಳ ಸಾಲಿನ ಕಂತೆ
ತುಂಬಿಹುದು ಬಾಳಲಿ ಸುಖ ದುಃಖದ ಬೊಂತೆ
ಎಲ್ಲರು ನನ್ನವರೆಂಬ ಸುಳ್ಳು ಭ್ರಮೆಯಂತೆ

ಜಗದಿ  ಅರಿಯಬೇಕು ಬಂದ ಕಾರಣ
ಮಾಡಬೇಕು ಏಳಿಗೆಗೆ ಶ್ರಮಿಸಿದವರ ಸ್ಮರಣ
ಸವಿಯುತ್ತಿರು ಸುಂದರ ನೆನಪುಗಳ ತೋರಣ
ಬರೆದಿಹನು ಎಲ್ಲರಿಗೂ ಒಂದು ದಿನ ಮರಣ. 


About The Author

Leave a Reply

You cannot copy content of this page

Scroll to Top