ಕಾವ್ಯ ಸಂಗಾತಿ
ಡಾ. ಹೆಚ್. ನಟರಾಜ್ ಆರ್ಯ
“ನನ್ನೊಳಗೆ“


ನನ್ನೊಳಗೆ ಬೆಳಕೊಂದು
ಮೌನವಾಗಿ ಹೊಳೆಯಿತು,
ಮೋಡದಾಚೆ ಹುಡುಕಿದ ಕಣ್ಣು
ಮನದೊಳಗೆ ಮರಳಿತು.
ನದಿಯಂತೆ ದಿನ ಹರಿದು,
ಗಾಳಿಯಂತೆ ಸುಖ ಸರಿದು;
ಜಿಂಕೆಯ ಭಯ, ಸಿಂಹದ ಉರಿ
ಒಂದೇ ಎದೆಯಲಿ ಬೆರೆತು.
ಹುಟ್ಟಿನ ಕಂಬನಿ ಹನಿಯಲಿ,
ತಾಯಿ ನಗುವಿನ ಹೊನಲಲಿ;
ದುಃಖದ ಕಾವು, ಸುಖದ ತಂಪು
ಒಂದೇ ಮನದ ನೆರಳಲಿ.
ಕಲ್ಲಿನ ಗುಡಿ ದಾಟಿದರೂ
ಕಾಣದ ಸತ್ಯ ಉಳಿಯಿತು,
ಕಣ್ಣು ಮುಚ್ಚಿದ ಮೌನದಲಿ
ಆತ್ಮದೀಪ ಹೊತ್ತಿತು.
ಬಂಧದ ಬೇರು ಮನದಲಿ,
ಮುಕ್ತಿಯ ಹೂವು ಮನದಲಿ;
ಮನ ಹಸಿರಾದ ಕ್ಷಣದಲಿ
ಬದುಕು ಹೂವಾಯಿತು.
ಡಾ. ಹೆಚ್. ನಟರಾಜ್ ಆರ್ಯ.




sir
ಒಳಗಿನ ಬೆಳಕು ಸದಾ ಹೆಚ್ಚು ಹೆಚ್ಚಿನ ಕವಿತೆಯ ರೂಪದಲ್ಲಿ ಸದಾ ಮಿನಿಗುತಿರಲಿ
Bro.
ಚೆನ್ನಾಗಿದೆ…
ಮನದೊಳಗಿನ ಭಾವನೆ ಗಳು ಕೊಚ್ಚಿ ಕೊಂಡು ಹೊರಬಂದಾಗ ಆಗುವ ನಿರಾಳತೆ ನಿಮ್ಮ ಈ ಕವಿತೆ ಓದಿದಾಗ ಉಂಟಾಗುತ್ತದೆ ಸರ್. ಬದುಕಿನ ವಾಸ್ತವತೆ ಯ ಕಟು ಸತ್ಯದ ನೆರಳು ಈ ಕವಿತೆ ತೋರಿಸಿಕೊಡುತ್ತದೆ. ಧನ್ಯವಾದಗಳು ನಿಮ್ಮ ಈ ಕ್ರಿಯಾಶೀಲ ಬರವಣಿಗೆಗೆ ಸರ್