ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನವಮಾಸ ಕತ್ತಲೊಳಗೆ
ರಕ್ತ ದೀಪ ಹೊತ್ತಿತು,
ಕರುಳು ಬಳ್ಳಿಯ ಸೇತುವೆಯಲಿ
ಜೀವ ಹನಿ ತೇಲಿತು.

ಪ್ರಸವ ನೋವಿನ ಅಲೆಗಳಲಿ
ಸಾವಿನ ಬಾಗಿಲ ತಟ್ಟಿತು,
ಮೊದಲ ಅಳುವ ನಾದದೊಡನೆ
ಮಮತೆ ಹೊಳೆ ಹರಿಯಿತು.

ಎದೆ ಹಾಲಿನ ಬಿಳಿಹರಿವು
ಕರಗಿದ ರಕ್ತ ಜ್ಯೋತಿ,
ಮಗುವ ತುಟಿ ನಗುವಿನಲಿ
ಮತ್ತೆ ಮೊಳೆದ ಜೀವಶಕ್ತಿ.

ಕನ್ನಡಿ ಮಿಂಚಿನ ಮೋಹದಲಿ
ಮಡಿಲ ಜೋಗುಳ ಮಂಕಾಯಿತು,
ಮೊಬೈಲಿನ ನೀಲಿ ಕಣ್ಣಲಿ
ಬಾಲ್ಯ ಮೌನವಾಗಿ ಕರಗಿತು.

ಕರುಳು ಬಳ್ಳಿಯ ನoಟ್ಟಿoದು
ಕಸಬುಟ್ಟಿ ದಾರಿ ಹಿಡಿಯಿತು,
ಕಣ್ಣೀರ ಹನಿಯ ಆಳದಲಿ
ಮಮತೆ ದೀಪ ಉಳಿಯಿತು.

ತಾಯಿಯೆಂದರೆ  ಚಂದ್ರನಲ್ಲ,
ಸುಟ್ಟು ಕರಕಾದ ದೀಪ,
ಕರಗಿದ ಉಸಿರ ಬೂದಿಯಲಿ
ಬಾಲ್ಯ ದಾರಿಯ ರೂಪ.


About The Author

2 thoughts on “ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಎದೆ ಹಾಲು””

  1. “ಡಾ. ಎಚ್. ನಟರಾಜ್ ಅವರು ಬರೆದ ಆರ್ಯ ಅವರ ‘ಎದೆ ಹಾಲು’ ಕವಿತೆ ತುಂಬಾ ಅತೀಂದ್ರಿಯವಾಗಿದೆ. ಕವಿ ಹೆರಿಗೆಯ ನೋವು, ಅವಳ ತ್ಯಾಗ ಮತ್ತು ಇಂದಿನ ಆಧುನಿಕ ಜಗತ್ತಿನಲ್ಲಿ (ಮೊಬೈಲ್ ಮತ್ತು ತಂತ್ರಜ್ಞಾನದ ಗೀಳಿನಿಂದಾಗಿ) ಕರಗುತ್ತಿರುವ ಬಾಲ್ಯ ಮತ್ತು ಕಸದ ಬುಟ್ಟಿಯಲ್ಲಿ ಕೊನೆಗೊಳ್ಳುತ್ತಿರುವ ಹೊಕ್ಕುಳಬಳ್ಳಿಯ ನಡುವಿನ ಸಂಬಂಧವನ್ನು ಸ್ಪಷ್ಟವಾಗಿ ಚಿತ್ರಿಸಿದ್ದಾರೆ. ‘ತಾಯಿ ಚಂದ್ರನಲ್ಲ, ಆದರೆ ಸುಟ್ಟುಹೋದ ದೀಪ’ ಎಂಬ ಸಾಲುಗಳು ಮನಸ್ಸಿಗೆ ಮುದ ನೀಡುತ್ತವೆ. ಈ ಕವಿತೆ ಇಂದಿನ ಸಮಾಜದ ಕಹಿ ಸತ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಅದ್ಭುತ ಕಾವ್ಯ ಸೃಷ್ಟಿ!”

  2. “ತಾಯಿ ಚಂದ್ರನಲ್ಲ, ಸುಟ್ಟು ಹೋದ ದೀಪ ” !!!
    ಮಡಿಲ ಮರೆತವರ ಕಪಾಳಕ್ಕೆ ಬಾರಿಸಿ ಎಚ್ಚರಿಸೋ ಮೊನಚಿದೆ ಸರ್ ಈ ಸಾಲಿನಲ್ಲಿ…ಈ ಪದಗಳ ಧ್ವನಿ ತುಂಬಾ ಕಾಡಿಸ್ತಿದೇ…ಮತ್ತೆ ಮತ್ತೆ ಮಾರ್ದನಿಸುತ್ತಿದೆ.

Leave a Reply

You cannot copy content of this page

Scroll to Top