ಧಾರಾವಾಹಿ ಸಂಗಾತಿ-21
ಸವಿತಾ ದೇಶಮುಖ

ಜಯದೇವಿತಾಯಿ ಲಿಗಾಡೆ
ಜೀವನಗಾಥೆ
ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ

ಜಯದೇವಿ ತಾಯಿಯವರು ಕೋರ್ಟ್ ಕೇಸ್ನ್ನ ಗೆದ್ದು…..“ನ್ಯಾಯಕ್ಕೆ ಜೀವ ತುಂಬಿದರು.*
ಆಗಿನ ಕಾಲದಲ್ಲಿ ಜಯದೇವಿ ತಾಯಿಯವರ ಪತಿಯು ಬಾಲಕರೆಂದು ಬ್ರಿಟಿಷರ ಮೇಲ್ವಿಚಾರಣೆಯಲ್ಲಿದ್ದ ದೊಡ್ಡ ಆಸ್ತಿ, ಜಮೀನು, ಮನೆ, ವ್ಯವಹಾರ—ಎಲ್ಲವು ಒಂದೇ ಕ್ಷಣದಲ್ಲಿ ತಾಯಿ ಯ ಹೆಗಲ ಮೇಲೆ ಬಿದ್ದವು.
ಪುರುಷರೇ ಹೆದರಿಬಿಡುವಂತಹ ಜವಾಬ್ದಾರಿಯನ್ನು ಒಬ್ಬ ಹೆಣ್ಣು ಮಗಳು ಒಬ್ಬಳೇ ಹೊತ್ತು ನಿಲ್ಲುವುದು ಅಂದಿನ ಸಮಾಜದಲ್ಲಿ ಅಸಾಧ್ಯವೆಂದು ಎಲ್ಲರೂ ಭಾವಿಸಿದ್ದರು.
ಆದರೆ ಜಯದೇವಿ ತಾಯಿ ಒಬ್ಬ ಸಬಲ ತಾಯಿತನದ ಶಕ್ತಿಯಾಗಿ ನಿಂದರು.
ಒಂದೆಡೆ ಗಂಡನ ಅಗಲಿಕೆಯ ನೋವು ಹೃದಯದಿ ಮುಚ್ಚಿಟ್ಟು ಮತ್ತೊಂದೆಡೆ ಐದು ಮಕ್ಕಳ ಭವಿಷ್ಯ ಅವರ ಕಣ್ಣೆದುರಿಗೆ ನಿಂತಿತ್ತು
ಬೆಳಗ್ಗೆ ಉದಯಿಸುವ ಸೂರ್ಯನಿಗಿಂತ ಮುಂಚೆಯೇ ಎದ್ದು ಮನೆಯ ಕೆಲಸ, ಮಕ್ಕಳ ಆರೈಕೆ, ಕಾರ್ಮಿಕರ ನೋಡಿಕೊಳ್ಳುವುದು, ಆಸ್ತಿಯ ಲೆಕ್ಕಪತ್ರ, ನ್ಯಾಯದ ವಿಚಾರ …..ಎಲ್ಲವನ್ನೂ ನಿರ್ವಹಿಸುತ್ತಿದ್ದರು.
ಅವರಲ್ಲಿ ಆವರಿಸಿದ ಖಾಲಿತನವನು ಸಿದ್ದರಾಮನ ನೆನಹುನಲಿ ನಮ್ಮೆದೆಯ ತುಂಬಲಾರಂಭಿಸಿದರು.
ಇಚ್ಛೆಯಿಂದಲೇ ಸರ್ವ|ತುಚ್ಚಿೀಕರಿಸಿ ಬೇಗ ಎಚ್ಚರದಿಂದ ಇರಬೇಕು- ನಮ್ಮಲಿಯ
ಸಚ್ಚಿದಾನಂದನ ಸ್ಮರಿಸೂತ||*B
ಸಚ್ಚಿದಾನಂದ ಶಿವಮಯನಾದ ಸಿದ್ದರಾಮನು ನೆನೆಯುತ ಐದು ಮಕ್ಕಳ ಬದುಕನ್ನು ಕಟ್ಟುವ ಉಕ್ಕಿನ ಮನೋಬಲವಿತ್ತು. ಮಕ್ಕಳ ಬದುಕು ಅರಳಬೇಕೆಂಬು ಕನಸು ಹೊತಿದ್ದರು…
ಮಕ್ಕಳಿಗೆ ಪರ್ವತದಂತೆ ಬಲವಾಗಿ ನಿಂತರು.
ಅದರಲ್ಲೇ ಅವರ ತಾಯಿತನದ ದಿವ್ಯತೆ ಇತ್ತು.
ಇಲ್ಲಿ ಒಂದೆರಡು ಘಟನೆಗಳನ್ನು ನೆನಪಿಸಿಕೊಳ್ಳಲೇ ಬೇಕು ತಾಯಿಯವರು ಆಗಿಂದ್ದಾಂಗ ಹೇಳುತ್ತಿದ್ದರು. ಮೊದಲ ಮಗಳು ಶಶಿಕಲಾ ಅವರಿಗೆ ರಾಜಶೇಖರ ಮಡಕಿ ಸ್ವಂತ ತಮ್ಮನಿಗೆ ಕೊಟ್ಟು ಮದುವೆ ಮಾಡಲಾಗಿತ್ತು . ಅವರು ಸುಖ ಸಂಸಾರದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಸಾಹಿತ್ಯವನ್ನು ರಚಿಸುತ್ತಾ ಸುಖವಾಗಿ ಇದ್ದರು.

ತಾಯಿಯವರ ಹಿರಿಯ ಮಗಳು ಶಶಿಕಲಾ ಮಡಕಿ ಅಳಿಯ ರಾಜಶೇಖರ್ ಮಡಿಕೆ
ಎರಡನೇ ಮಗ ಶ್ರೀಕಂಠ ಮೂರನೇ ಮಗ ಪ್ರಭುರಾಜ ಇವರಿಬ್ಬರನ್ನು ಪಂಚಗಣಿಯ ಶಾಲೆಯಲ್ಲಿ ಓದಲು ಕಳಿಸಿಕೊಟ್ಟಿದ್ದರು .
ಸುಖದ ಸುಪತ್ತಿನಲ್ಲಿ ಬೆಳೆದು ಬಂದ್ದಿದ್ದ ಮಕ್ಕಳಿಗೆ ಅಲ್ಲಿಯ ಕಠಿಣವಾದ ಶಿಸ್ತು ಬದ್ಧತೆ ,ಕಟ್ಟುನಿಟ್ಟಾದ ನಿಯಮಗಳು, ಶಾಲೆಯ ಅಭ್ಯಾಸದ ಭಾರವು ಅವರಿಗೆ ಸರಿ ಹೊಂದಲಿಲ್ಲ, ಊಟದಲಿ ವ್ಯತ್ಯಾಸ ಸಹಿಸಲಾಗಲಿಲ್ಲ. ಹೀಗಾಗಿ ಅವರು ಅಲ್ಲಿ ಇರಲು ಒಪ್ಪಿಕೊಳ್ಳಲಿಲ್ಲ…

ಹಿರಿಯ ಮಗ ಶ್ರೀಕಂಠ
ಆದರೂ ತಾಯಿಗೆ ಹೆದರಿ ಮೊದಲು ಮಗ ಶ್ರೀಕಂಠ ಶಾಲೆಯ ರಜೆ ಪ್ರಾರಂಭವಾಗುವವರೆಗೂ ಇದ್ದು ರಜೆಗೆಂದು ಮನೆಗೆ ಬಂದಾಗ ಹಿಂತಿರುಗಿ ಹೋಗಲು ಸಾಧ್ಯವೇ ಇಲ್ಲವೆಂದು ತನ್ನ ಅಭಿರುಚಿಯು ಕೃಷಿಯಲ್ಲಿ ಹಾಗೂ ಅಂಗಡಿ ಮನೆ ನೋಡಿಕೊಂಡು ಹೋಗುವದರಲ್ಲಿ ಇದೆ ಎಂದು ತಿಳಿಸಿದಾಗ ತಾಯಿಯವರು ಅವರ ವಿಚಾರದ ವಿರುದ್ಧ ಹೋಗಲು ಒಪ್ಪಲಿಲ್ಲ ಏಕೆಂದರೆ ಶ್ರೀಕಂಠವರಿಗೆ ಕೃಷಿಯಲ್ಲಿ ಅಭಿರುಚಿ ಹೆಚ್ಚಿಗೆ ಇರುವುದನ್ನು ಗಮನಿಸಿದ್ದ ತಾಯಿಯವರು ಅವರಂತೆ ಒಪ್ಪಿಕೊಂಡರು.
ಇಲ್ಲಿ ತಾಯಿಯವರು ಮಕ್ಕಳಿಗೆ ಯಾವುದೇ ರೀತಿಯಾದ ಒತ್ತಾಯದಿಂದ ಯಾವ ಶಿಕ್ಷಣವನ್ನು ಕೊಡಬಾರದು ಅನ್ನುವುದನ್ನು ಮನಗಂಡಿದ್ದರು ಅವರವರ ಅಭಿರುಚಿಯಂತೆ ಅವರವರ ಜೀವನದ ದಾರಿಯನ್ನು ತೊರಿ ಕೊಡಬೇಕು ಅನ್ನುವ ಅಭಿಪ್ರಾಯ ಹೊಂದಿದ್ದರು.
ಇನ್ನು ಎರಡನೇ ಮಗ ಪ್ರಭುರಾಜ ಅತ್ಯಂತ ಮೃದು ಹೃದಯ, ಜಾಣ ಬುದ್ಧಿವಂತನು ಇವರಿಗೆ ದೊಡ್ಡ ಶಿಕ್ಷಣವನ್ನು ಕೊಡಿಸಬೇಕೆನ್ನುವ ಆಸೆ ತಾಯಿಯವರು ಹೊತ್ತಿದ್ದರು .ಅವರು ಕೂಡ ತಿರುಗಿ ಹೋಗಲು ಒಪ್ಪದಿದ್ದಾಗ ತಾಯಿಯವರು ನನಗಾಗಿ ನೀನು ಹೋಗಲೇ ಬೇಕು ಅನ್ನುವ ಪ್ರಮಾಣ ತೆಗೆದುಕೊಂಡರು… ಏಕೆಂದರೆ ಅವರಲ್ಲಿ ಮುಂದೆ ಕಲಿಯುವ ಯೋಗ್ಯತೆ ಇದೆ ಅನ್ನುವುದನ್ನು ಅರೆತಿದ್ದರು …..ಅನಿವಾರ್ಯವಾಗಿ ಪ್ರಭುರಾಜರಿಗೆ ಹೋಗ ಬೇಕಾಗಿ ಬಂತು.

ಎರಡನೆ ಮಗ ಪ್ರಭುರಾಜ

ಪ್ರಭುರಾಜ್ ಅವರ ಪ್ರತ್ನಿ ಪ್ರಮೀಳಾ (ಗದಗಿನ ಎಳೆಮಲಿ ಶಾಂತಪ್ಪನವರ ಮಗಳು)
ತಾಯಿಯವರನ್ನು ಒಂದು ಕ್ಷಣವು ಬಿಟ್ಟಿರದಿದ್ದ ಪ್ರಭು ರಾಜರು ತಾಯಿಯ ನೆರಳಲ್ಲಿದವರು ಹಾಗೂ ಕರುಳಿನ ಸಂಬಂಧ ಗಾಡವಾಗಿತ್ತು. ತಾಯಿಯ ಮೇಲೆ ಅಪಾರ ಪ್ರೀತಿ ಹೊಂದಿದ ಅವರಿಗೆ ತಾಯಿಯಿಂದ ದೂರಿರುವುದು ಬಹಳ ಅಸಹನಿಯವಾಗಿತ್ತು ಹಿಂಸೆ ಕೊಡಲಾರಂಭಿಸಿತ್ತು …. ತಾಯಿಗೆ ಪತ್ರ ಬರೆದು ಹಿಂತಿರುಗಿ ಬರುವುದಾಗಿ ಒತ್ತಾಯಿಸುತ್ತಿದ್ದರು.
ಮನೆಯಲ್ಲಿ ಇದ್ದಾಗ ಕೂಡ ಪ್ರಭುರಾಜರಿಗೆ ತಾಯಿಯವರು ಅವನ ಸಮೀಪದಲ್ಲಿ ಇದ್ದರೆ ಮಾತ್ರ ಮನಸ್ಸಿಗೆ ಶಾಂತಿ….ತಾಯಿ ಕಣ್ಣೆದುರಿನಿಂದ ಸ್ವಲ್ಪ ದೂರವಾದರೂ ಅವನ ಹೃದಯ ಖಾಲಿಯಾಗಿಬಿಡುತ್ತಿತ್ತು. ಇನ್ನು ದೂರದ ಊರಲ್ಲಿ ಇದ್ದರೆ ಕೇಳಬೇಕೆ ಅವರ ಸ್ಥಿತಿ ಹೇಳಲಾಗಿತ್ತು
ಶಾಲೆಯಲ್ಲಿ ಕುಳಿತಿದ್ದರು ಪ್ರಭುರಾಜ್ ಮನಸ್ಸು ಅಲ್ಲಿ ನೆಲಸಲೇ ಇಲ್ಲ. ಸುತ್ತಲೂ ವಿದ್ಯಾರ್ಥಿಗಳು ಕುಳಿತು ಶಿಕ್ಷಕರು ಪಾಠ ಮಾಡುತ್ತಿದ್ದರೆ ಅವನ ಕಿವಿಯಲ್ಲಿ ಕೇಳಿಸುತ್ತಿದ್ದದ್ದು ತಾಯಿಯ ಧ್ವನಿಯೇ. ಊಟಕ್ಕೆ ಕೂತರೂ ತಾಯಿಯ ಕೈತುತ್ತಿನ ನೆನಪು, ರಾತ್ರಿ ಮಲಗಿದರೂ ತಾಯಿಯ ಮುಖವೇ ಕಣ್ಣಮುಂದೆ ತೇಲುತ್ತಿತ್ತು. ದಿನದಿಂದ ದಿನಕ್ಕೆ ತಾಯಿಯ ನೆನಪು ಅವನ ಮನಸ್ಸನ್ನು ಕಾಡಲಾರಂಭಿಸಿತು …..!!
ಪ್ರಿಯ ಓದುಗರೆ
ಇದೆಲ್ಲಾ ಏನೋ ನಾನು ಅತಿಶೋಯುಕ್ತಿಯಾಗಿ ಬರೆಯುತ್ತಿದ್ದೇನೆ ಅಂತ ಏನು ತಿಳಿಯಬೇಡಿ…. ಪ್ರಭು ರಾಜರ ತಾಯಿಯ ಮೇಲಿದ್ದ ಅಗಾಧವಾದ ಪ್ರೀತಿ ಯಾವದಕ್ಕೂ ಸಾಟಿಯಾಗದು….!!!!
ಏನು ಹೇಳಿದರೂ ತಾಯಿಯು ಯಾವುದಕ್ಕೂ ಒಪ್ಪದಾದಾಗ ಕೊನೆಗೆ ತಾಳಲಾರದೆ ತಾಯಿಗೆ ಪತ್ರ ಬರೆದನು.
“ಅವ್ವಾ… ನನಗೆ ಇಲ್ಲಿ ಇರಲು ಆಗುತ್ತಿಲ್ಲ. ನಿಮ್ಮನ್ನು ಬಿಟ್ಟು ಒಂದು ಕ್ಷಣವೂ ಇರಲಾಗುತ್ತಿಲ್ಲ. ನಾನು ಹಿಂದಿರುಗಿ ಬರುತ್ತೇನೆ. ಇಲ್ಲವಾದರೆ ಇಲ್ಲಿಯೇ ಗುಡ್ಡು ಪರ್ವತಗಳನ್ನು ಏರಿ, ಬಿದ್ದು ಸಾಯ್ತೀನಿ…” ಎಂದು ಕಣ್ಣೀರಿನಿಂದ ಬರೆದ ಆ ಮಾತುಗಳಲ್ಲಿ ಮಗನ ಅತಿಯಾದ ಮಮತೆ ಮತ್ತು ಅಧೈರ್ಯ ಎರಡೂ ತುಂಬಿಕೊಂಡಿದ್ದವು.
ಆ ಪತ್ರ ಓದಿದ ತಾಯಿಯವರು ಕ್ಷಣಕಾಲ ಮೌನವಾಗಿದ್ದರು. ಮಗನ ಪ್ರೀತಿಯ ತೀವ್ರತೆ ಅವರಿಗೆ ಗೊತ್ತಿತ್ತು. ಆದರೆ ಜೀವನವೆಂದರೆ *ಕೇವಲ ಭಾವನೆಗಳಿಗೆ ತಲೆಬಾಗುವುದಲ್ಲ, ಧೈರ್ಯದಿಂದ ಎದುರಿಸುವ ಪಥ ಎನ್ನುವರು……
*ಕಣ್ಣೊಳಗಿನ ಕಸ |ಸಣ್ಣಾಗಿದ್ದರೆ ಏನು
ಕಣ್ಣು ಚುಚ್ಚಿ ನೀರು ಸುರಿವುದು- ಮಾಯೆಯು
ಸಣ್ಣಲ್ಲ ಕಣ್ಣಿನ ವಿಸ್ತಾರ ||*
ಈ ರೀತಿಯ ಮನಸ್ಸಿನ ಪ್ರವೃತ್ತಿಯು ಚಿಕ್ಕದಲ್ಲ ಅನ್ನುವುದು ಅರ್ಥವಾಯಿತು ಹೀಗಾಗಿ ತಾಯಿಗೆ ಕಠಿಣವಾದರೂ ಜೀವನದ ಪಾಠವಾಗುವ ಉತ್ತರ ಬರೆದರು…
*ಬಾಳಿನಲ್ಲಿ ಕೆಟ್ಟ |ಕೀಳತನಕ್ಕೆ ಜಾಗ
ಎಳ್ಳಿನ ಮನೆಯಷ್ಟು ಕೊಡದಿರು- ನಿನ್ನಲ್ಲಿ
ಒಳ್ಳೆತನದಿ ಗಟ್ಟಿತನವು ಬೆಳೆಯಲಿ||*
ಎನ್ನುತ….. ಹೀಗೆ ಬರೆದರು
“ನನ್ನ ಹೊಟ್ಟೆಯಲ್ಲಿ ಹುಟ್ಟಿದವನು ಇಂಥ ಹೇಡಿಯೇ.. ಇಂಥ ಅಧೈರ್ಯ ಹೇಗೆ ಬಂತು? ಜೀವನದಲ್ಲಿ ಸಾಧನೆ ಮಾಡಲು ದೂರದ ಊರಿಗೆ ಹೋದರೆ ಕಷ್ಟಗಳು ಬರುತ್ತವೆ, ಏಕಾಂತ ಕಾಡುತ್ತದೆ. ಅದಕ್ಕೆ ಓಡಿ ಮನೆಗೆ ಬರಬೇಕೆಂದರೆ ಬದುಕಿನಲ್ಲಿ ಏನನ್ನೂ ಸಾಧಿಸಲಾಗದು. ಧೈರ್ಯವಾಗಿ ನಿಂತು ಹೋರಾಡಬೇಕು.
‘ನಾನು ಅಲ್ಲೇ ಬಿದ್ದು ಸಾಯ್ತೀನಿ’ ಅಂತ ಹೇಳುವಷ್ಟು ದುರ್ಬಲನಾಗಿ ನನ್ನ ಮಗ ಹುಟ್ಟಿಲ್ಲ.ಸಾಯಬೇಕೆಂದರೆ ಅಲ್ಲೇ ಸಾಯಿ… ಆದರೆ ಓಡಿ ಬರುವ ಹೇಡಿತನದ ಮಾತು ಬೇಡ!” ಎಂದು ಕಡಾ ಖಂಡಿತವಾಗಿ ಪತ್ರವನ್ನು ಬರೆದರು.
*ಹಿರಿಯರಲ್ಲಿ ಶ್ರದ್ಧೆ |ಸ್ಥಿರವಾಗಿ ಇರಲಿ
ಹರಕೆ ಕೊಡುವವರು ನಿನಗೆ -ಈ ಮಾತು
ಪರಕಿಸಿ ನೋಡು ಬಾಳಲಿ ||*ಎನ್ನುವಂತೆ
ತಾಯಿಯವರ ಆ ಮಾತುಗಳು ಪ್ರಭುರಾಜ್ ಹೃದಯಕ್ಕೆ ಮಿಂಚಿನಂತೆ ತಾಕಿದವು. ಮೊದಲಿಗೆ ಅವರ ಕಣ್ಣು ತುಂಬಿ ಬಂದರೂ, ತಾಯಿಯವರ ಮಾತಿನೊಳಗಿನ ಕಠೋರ ಪ್ರೀತಿಯನ್ನು ಅವರು ಅರ್ಥ ಮಾಡಿಕೊಂಡರು.
ಆ ದಿನದಿಂದ ತನ್ನ ಕಲಿಕೆಯಲ್ಲಿ ಶ್ರದ್ಧೆಯಿಂದ ಓದಲಾರಂಭಿಸಿದರು ಮುಂದೆ ಎಲ್ ಎಲ್ ಬಿ…. ಕಲಿತು ವಕೀಲರಾದರು.. ಮುಂದೆ ದೊಡ್ಡ ರಾಜಕಾರಣಿ ಕೂಡ ಆದರು…
ಮಮಕಾರದ ತಾಯಿಯಾಗಿ ಜೀವನದ ಬಿರುಗಾಳಿಯನ್ನು ಎದುರಿಸಲು ಮಕ್ಕಳ ಮನಸ್ಸನ್ನು ಉಕ್ಕಿನಂತೆ ಗಟ್ಟಿಗೊಳಿಸುವ ಗುರು ಕೂಡಾ ಆಗಿದ್ದರು.
ಹೀಗೆ ಅತ್ಯಂತ ಧೈರ್ಯದಿಂದ ಆಸ್ತಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ. ಸಿದ್ದರಾಮನ ಅಪ್ಪಟ ಭಕ್ತಿಯಾಗಿ, ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಹೊಂದಿದ ತಾಯಿಯವರು ಬಹಳ ಸುಭದ್ದವಾಗಿ ಭಧ್ಧತೆಯಿಂದ ತಾಯಿತನದ ಜವಾಬ್ದಾರಿಯನ್ನು, ಆಸ್ತಿಯ ಮಾಲೀಕತ್ವತೆಯನು ಹಾಗೂ ಜನ ಸೇವಕಿಯಾಗಿ ಕೆಲಸ ನಿರ್ವಹಿಸಲಾರಂಭಿಸಿದರು….
ಬಹಳ ಜನರು “ಹೆಂಗಸು ಒಬ್ಬಳೇ ಇಷ್ಟು ದೊಡ್ಡ ಜವಾಬ್ದಾರಿ ನಿಭಾಯಿಸಲಾರಳು” ಎಂದು ಮಾತಾಡಿದವರಿಗೆ ಉತ್ತರವಾಗಿ ತಮ್ಮ ಬದುಕನ್ನು ಬದುಕಿ ತೋರಿಸಿದರು.
ಅವರ ಜೀವನ ಒಂದು ಅಳಲಿನ ಕಥೆಯನು ಒರಸಿ ಅದು ತಾಯಿತನದ ಮಹಾಕಾವ್ಯವನು ಬರೆದರು.
*ದುಃಖ ದುಮ್ಮಾನಗಳು |ಸಿಕ್ಕಿ ಒದ್ದಾಡದಿರು
ಸುಖ ಬಂದಿತ್ತೆಂದು ಹಿಗ್ಗದಿರು -ಮನವೇ
ಸುಖ ದುಃಖ ಅರ್ಪಿಸು ಶಿವನಡಿಗೆ ||*
ಎಂದು ಬಾಳನು ಆರಂಭಿಸಿದರು.
ಸವಿತಾ ದೇಶಮುಖ್




