ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜೀವ ತಂತು ದಾಟಿ ಬಂತು
ಹತ್ತು ಮೈಲಿಗಲ್ಲನು
ಗಟ್ಟಿಯಾಗಿ‌ ಸಾಗಿಸುತ್ತ
ಬಾಳ ಸುಖದ ತೇರನು

ಎರಡು ಮುತ್ತು ಮುದದಿ ಹೆತ್ತು
ಮಧುರ ಪ್ರೇಮ ಕಾಣ್ಕೆಗೆ
ನೀಡಿ ನೀನೆ ಸಾಕ್ಷಿಯಾದೆ
ಸಹಯೋಗದ ಬಾಳ್ವೆಗೆ

ಕ್ಷುದ್ರ ಮೂಲದಿಂದಗಾಧ
ಸೃಷ್ಟಿಗರ್ಭ ವಿಸ್ಮಯ
ಎನಿತು ಬಾಳೊ ಏಸು ಒಡಲೊ
ತನಗೆ ತಾನೆ ತನ್ಮಯ

ಉದಧಿ ತಲದಿ ನಭದ ತುದಿಗೆ
ಸಚೇತನದ ಸರಿಗಮ
ಫಲ ಹೇತುಕ ಪರಿಣಾಮದ
ಗೌಣ ಭಾವ ಸಂಭ್ರಮ

ನಿತ್ಯ ನಲಿವ ಅಪ್ರಮೇಯ
ಜೀವಕೋಟಿಯಂತೆಯೇ
ನಮ್ಮದೊಂದು ಪಾಲು ಇರಲಿ
ಜಗದ ಸಂತೆಯಂತೆಯೇ


About The Author

6 thoughts on “ಸಂತೋಷಕುಮಾರ ಅತ್ತಿವೇರಿ “ದಾಂಪತ್ಯ ದಶಕ””

Leave a Reply

You cannot copy content of this page

Scroll to Top