ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಿಂಗಳೆಚ್ಚರವಿದ್ದು
ಬೆಳದಿಂಗಳ ಸ್ನಾನ
ಮಾಡುವ ಅಮ್ಮ
 ನಕ್ಷತ್ರಗಳೊಂದಿಗೆ
ಆಡುವ ಅಮ್ಮ ಒಮ್ಮೊಮ್ಮೆ
 ಹುಚ್ಚಿ ಎನಿಸಿಬಿಡುತ್ತಾಳೆ

 ಒಬ್ಬಳೇ ನಗುತ
ಯಾವುದೋ ಮಂತ್ರ
ಗುನುಗುಣಿಸುತ ಓಡಾಡುವ
 ಎಲ್ಲಾ ಕಾಯಿಲೆಗೂ
ಮದ್ದು ಹೇಳುವ ಅಮ್ಮ
ಒಮ್ಮೊಮ್ಮೆ ಹುಚ್ಚಿ ಎನಿಸಿಬಿಡುತ್ತಾಳೆ

ಎಲ್ಲ ಮಕ್ಕಳನ್ನು
ಮುಟ್ಟಿ ನಗಿಸುವ
ಪಕ್ಕದ ಮನೆ ಗಿಡಕು
ನೀರು ಹನಿಸುವ ಅಮ್ಮ
ವ್ಯಕ್ತಿ ವಸ್ತುಗಳ ಭೇದವರಿಯದೆ
 ಧನ್ಯವಾದ ಹೇಳುವ
ಅಮ್ಮ ಒಮ್ಮೊಮ್ಮೆ
ಹುಚ್ಚಿ ಎನಿಸಿ ಬಿಡುತ್ತಾಳೆ

 ಹಸಿವೆಯ ಹಾಸಿಹೊದ್ದು
 ಎದ್ದು ಬಂದ ಆಕೆಗೆಲ್ಲರ
 ಹಸಿವೆಯ ಸದ್ದು ಗೊತ್ತು
 ಮುತ್ತಿನೊಂದಿಗೆ ಪ್ರೀತಿ
ಬಡಿಸುವ  ವಿಚಿತ್ರ ಅಮ್ಮ

ಅಲ್ಲ ಆಕೆ ಹುಚ್ಚಿ ಅಲ್ಲ
ಮಕ್ಕಳು ನೆರೆಯವರಿಗೆಲ್ಲ
 ಪ್ರೀತಿ ಸಹಾಯ ಕರುಣೆಗಳ
ಹುಚ್ಚು ಹಿಡಿಸಿದವಳು

ಹೊಳೆಯುವ ಮೊದಲೇ ಹೋಗಿ ಹೊಳೆಯತೊಡಗಿದಳು



ನಿಂಗಮ್ಮ ಭಾವಿಕಟ್ಟಿ

About The Author

1 thought on “ನಿಂಗಮ್ಮ ಭಾವಿಕಟ್ಟಿ ಅವರಕವಿತೆ “ವಿಚಿತ್ರ ಅಮ್ಮ””

Leave a Reply

You cannot copy content of this page

Scroll to Top