ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಂದೇಕೊ ಈ ಅಕ್ಷರಗಳು
ಪದಗಳಾಗದೆ ಕಾಡುತಿವೆ
ಲೇಖನಿಗೂ ಸಿಗದಂತೆ ದೂರ
ಸಾಗುತಿವೆ
ಗೀಚಿದರೂ ಮತ್ತಷ್ಟು
ಗೀಚುಗಾಚು ಹಾಕಿಸಿಕೊಳ್ಳುತಿವೆ
ಹಾಳೆಯ ಹರಿಯಲು ಹೊರಟರೂ
ಅದಕ್ಕೂ ಹಠವ ಮಾಡುತಿವೆ
ಸಾಲೊಂದ ಮುಂದೆ ಹೋಗದಂತೆ
ರಚ್ಚೆ ಹಿಡಿದಿವೆ
ಪುಟ್ಟ ಕಂದನಂತೆ ಬಿಡದೆ ಆಗಾಗ
ಬಡಿಸಿಕೊಂಡವರಂತೆ ಮಿಡುಕಿ
ಅಳುತಿವೆ
ಸಾಕು ನಿಮ್ಮ ಸಹವಾಸ ಎಂದರೂ
ಬಿಡದೆ ಬೆನ್ನ ಹತ್ತಿವೆ
ಬೇಕೆಂದಾಗ ಬರೆಯಲು ಕುಳಿತರೆ
ಮರೆವಿನೂರಿಗೆ ಪ್ರಯಾಣ ಬೆಳೆಸಿವೆ
ಅಂದುಕೊಂಡಿದ್ದನೆಲ್ಲ ಅದಲು
ಬದಲಾಗಿಸಿವೆ
ತಿಪ್ಪರಲಾಗ ಹಾಕಿದರೂ ಅದೇಕೋ
ಮೊದಲು ನೆನಪಾದಂತೆ ನೆನಪಿಗೆ
ಬರದೆ ಪ್ರೇಮಿಯಂತೆ ಸತಾಯಿಸಿವೆ
ಇಂದೇಕೊ ಈ ಅಕ್ಷರಗಳು ಕಾಡಿವೆ
ಕಾಡಿಸುತಿವೆ,ಕಾಲೆಳೆಯುತಿವೆ
ಶಬ್ಧ ಭಂಡಾರ ಖಾಲಿಯಾದಂತ
ಭಾವವ ಭಾಸವಾಗುವಂತೆ ಮಾಡಿವೆ
ಹಠ ನಿಮಗಷ್ಟೇ ಇದೆಯೋ ನನ್ನಲ್ಲೂ
ಹಠ ಇದೆ ಏನೋ
ನೋಡಿಯೇ ಬಿಡುವಾ ನೀವಾ!? ನಾವಾ?
ನಾನು ಮತ್ತು ನನ್ನ ಲೇಖನಿ…!


About The Author

1 thought on “ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಇಂದೇಕೊ!””

Leave a Reply

You cannot copy content of this page

Scroll to Top