ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜೀವಸಂಕುಲದ ತಾಯ್ತನದ
ವಿಶ್ವದ ತತ್ವವೇ ಅವ್ವ
ಮಾನವ ಜನ್ಮದ ಜೀವನದ
ಸಾರದ ಸತ್ವವೇ ಅವ್ವ||

ಸೃಷ್ಟಿಕರ್ತನ ಲೀಲೆ ಭುವಿಯ
ಅತ್ಯದ್ಭುತ ಸೃಷ್ಟಿ
ದೇವ ತಾ ಇಳೆಗಿಳಿದುಬಾರದ
ಮಮತೆಯ ವೃಷ್ಟಿ||

ಬಡವಳಿರಲಿ ಬಲ್ಲಿದಳೇ ಇರಲಿ
ಮಕ್ಕಳಿಗೆ ಮಾತೆ ಶ್ರೇಷ್ಠ
ಭಿಕ್ಷುಕಿ ಇರಲಿ ರಾಣಿ ಆಗಿರಲಿ
ಮಕ್ಕಳಿಗೆ ತಾಯಿ ನಿಷ್ಠ ||

ಇರುವೆಯಿಂದ ಆನೆಯವರೆಗೆ
ಅವುಗಳ ತಾಯಿ ಆಧಾರ
ದೇವಾನುದೇವತೆಗಳಿಗೂ ಸಹ
ಆದಿಶಕ್ತಿಯೇ ಆಶ್ರಯ||

ಮಾನವ ಜನ್ಮದ ಸಾರ್ಥಕತೆ
ಜನ್ಮ ಕೊಟ್ಟ ಹೆತ್ತತಾಯಿ
ಜೀವನದಲ್ಲಿ ಬದುಕಿ ಇರಲು
ಅನ್ನ ನೀಡಿದ ಭೂತಾಯಿ ||

ನೀರು ಕೊಟ್ಟ ಕಾವೇರಿ ತಾಯಿ
ನುಡಿ ಕಲಿಸಿದ ಕನ್ನಡ ತಾಯಿ
ನನ್ನ ಜೀವದಾತೆ ಭಾರತಮಾತೆ
ತಮಗೆಲ್ಲರಿಗೂ ಚಿರಋಣಿ ನಾ||


About The Author

Leave a Reply

You cannot copy content of this page

Scroll to Top