ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಬೆಂದ ಜೀವದ ಬೇಗೆ
ನಂದಿಸುವವರು ಯಾರು
ಹಸಿವಿನ ನರಳಾಟದಲ್ಲಿ
ಸಾಯುತ್ತಿರುವವರು ನಾವು

ಸಂಕಟದಲ್ಲಿ ಕೂಗಾಡಿದರೆ
ಮೂರಡಿಯಲ್ಲಿ ಹೂಳುವರು
ತೋಪು ಬಂದೂಕುಗಳಿಲ್ಲದೆ
ಹತವಾಗುತ್ತಿರುವ ಜೀವಗಳು

ಹಸಿವಿನ ಚೀಲ ಬೆನ್ನು ಏರಿದೆ
ಶಾಂತಿ ನೆಮ್ಮದಿಯ ವೇದಾಂತ
ಗುನುಗುಟ್ಟುತ್ತಾ ಕಿವಿ ತಟ್ಟಿದೆ
ಮೋಸ ವಂಚನೆ ಕೊರಳ ಉರುಳಾಗಿ ಬಿದ್ದಿವೆ

ಬಾಳೊಂದು ಮಾಯೆ ಎಂದರು ಅನುಭಾವಿಗಳು
ಆಸೆಯೇ ದುಃಖಕ್ಕೆ ಮೂಲವೆಂದ ಬುದ್ಧ
ಈ ಎಲ್ಲಕೂ ಕಡಿವಾಣ ಇಲ್ಲದ ಹಸಿವೆಂಬ ಮಾಯೆ
ಮೆರೆಯುತ್ತಿದೆ ಏಕೆ?

ಎಲುಬಿಲ್ಲದ ನಾಲಿಗೆ
ಬಯಸುತ್ತಿದೆ ರುಚಿ
ಹಸಿವು ತಣಿಸುವ ಮಂತ್ರ
ವೇದಾಂತ ಯಾವುದಾದರೂ ಇದೆಯೇ ತಿಳಿಸು ಮನವೇ…
ಒಮ್ಮೆ ತಿಳಿಸು ಮನವವೇ…


About The Author

1 thought on “ಮಾಜಾನ್ ಮಸ್ಕಿ “ಬೆನ್ನಿಗೆ ಬಿದ್ದ ಹಸಿವು””

Leave a Reply

You cannot copy content of this page

Scroll to Top