ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆ ದಿನಗಳ ಸುತ್ತ
ಓಡಾಡಿ ಕಳೆದು
ಹೋದ ಹಗಲಿಂದು
ಮುಕ್ತಾಯದ ಸಂಜೆಗೆ
ಬಂದು ನಿಂತಂತಿದೆ
ಬೆಳಕಿನ ಅರಿವಿಗೆ
ಬಿಸಿಲಿನ ಕಿರಣ
ಹರಡಿ ನಿಂತ
ರವಿಗೊಂದು ಸತ್ಯ
ಗೊತ್ತಿರುವಂತಿದೆ
ಮೇಲಿಂದ ಕಾಣುವ
ಸತ್ಯದ ನೆರಿಗೆಯಲ್ಲಿ
ಕಾಣದ ನೋಟಗಳ
ಸುಳ್ಳುಗಳು ಅಡಗಿದಂತಿದೆ
ಹೊಸ ಹಾವ ಭಾವ
ಮುಕ್ತಾಯದ ಸಂಜೆಗೆ
ಇಂದು ಕಳೆಯಿತು ಹೀಗೆ
ಉಳಿಯಬೇಕು
ನಾಳೆಯೆಂಬ ದುಂದುಭಿ
ಸಂಜೆಗೆ ಬರುವ
ಕನಸುಗಳಲ್ಲಿ
ಭಾವ ಭವಿತದ
ಚಿತ್ರ ಭಿತ್ತಿಯಲ್ಲಿ
ಸುಪ್ತವಾದರೂ. 


About The Author

Leave a Reply

You cannot copy content of this page

Scroll to Top