ಕಾವ್ಯ ಸಂಗಾತಿ
ಡಾ. ಲತಾ ಎ ಆರ್ ಬಾಳೆಹೊನ್ನೂರು
“ಪ್ರಿಯತಮ”


ದೈವದ ಅನುಗ್ರಹ ನಮ್ಮಿಬ್ಬರ ಪರಿಚಯ
ಬರೆಯಲು ಸಾಲದು ಕಳೆದಿರುವ ಸಮಯ
ಪದಗಳಿಲ್ಲ ಹೇಳಲು ಹೃದಯದ ವಿಷಯ
ನೆನೆಯಲು ನಿನ್ನಾ ನೋವೆಲ್ಲಾ ಮಾಯಾ.
ಆಲಿಸಲಾರೆಯ ನನ್ನ ಪ್ರೀತಿಯ ಕರೆಯ
ನೋಡಲು ಬಯಸಿದೆ ಮನ ಮೋರೆಯ
ತವಕಿಸುತ್ತಿದೆ ಕಾಣಲು ಹೃದಯದ ದೊರೆಯ
ನೋಡಲೆಂದು ನನ್ನೆಡೆ ನೀ ಬರುವೆಯಾ
ಹೇಗೆ ತಿಳಿಸಲಿ ಹೃದಯದ ಪರಿಯ
ಜೀವನದ ಹಸಿರು ಮರೆಯದಿರು ಗೆಳೆಯ
ಬಯಸಿರುವೆ ಬಾಳಲಿ ನೀನೆ ಇನಿಯ
ಬಯಸಿದೆ ನಿನ್ನನೇ ಪುಟ್ಟ ಹೃದಯ
ಬರುವಿಕೆಯ ಹಾದಿ ಕಾದು ಬಳಲಿರುವೆ
ಸವಿ ನುಡಿಯ ಪ್ರೇಮಕೆ ಸೋತಿರುವೆ
ನೀನೇಕೆ ಸವಿ ನೆನಪಿನ ಪ್ರೀತಿ ಮರೆತಿರುವೆ
ನನ್ನೊಳಗೆ ನೀನೆಂದೋ ಮನೆ ಮಾಡಿರುವೆ
ಜೀವನದ ಕೊನೆ ಅಂಚಿನಲಿ ನಿಂತಿರುವೆ
ಕಣ್ ತುಂಬಾ ಕಾಣಲು ಕಾದಿರುವೆ
ನೀನೇಕೆ ನಿನ್ನ ಶಬರಿಯ ಮರೆತಿರುವೆ
ಬಂದೆ ಬರುವ ದಾರಿಯ ನೋಡುತ್ತಿರುವೆ.
ಡಾ. ಲತಾ ಎ ಆರ್ ಬಾಳೆಹೊನ್ನೂರು



