ಕಾವ್ಯಯಾನ

ಕಾವ್ಯಯಾನ

ಗಝಲ್ ಹೇಮಗಂಗಾ ಕೊರೋನಾ ಕನಸುಗಳ ಕಮರಿಸಿದೆ ಮರಳಿ ಊರ ಸೇರುವುದು ಹೇಗೆ ? ಹಾಳು ಸುರಿವ ಬೀದಿ ಮಸಣವಾಗಿದೆ ಮರಳಿ ಊರ ಸೇರುವುದು ಹೇಗೆ ? ಶಾಂತವಾಗಿ ಹರಿಯುತ್ತಿದ್ದ ಬಾಳಕಡಲಿನಲಿ ಎಣಿಸದ ಉಬ್ಬರವಿಳಿತ ಇರುವ ನೆಲೆ ಜೀವಗಳ ನಲುಗಿಸಿದೆ ಮರಳಿ ಊರ ಸೇರುವುದು ಹೇಗೆ ? ದುಡಿಮೆ ಆದಾಯವಿಲ್ಲದ ಬದುಕು ನರಕಸದೃಶವಲ್ಲದೇ ಮತ್ತೇನು ? ತಿನ್ನುವ ಅನ್ನಕೂ ತತ್ವಾರವಾಗಿದೆ ಮರಳಿ ಊರ ಸೇರುವುದು ಹೇಗೆ ? ಅನುಕಂಪವಿಲ್ಲದ ಸಾವು ಹಗಲಲ್ಲೂ ಭೀತಿಯ ಕಾರಿರುಳ ಹರಡಿದೆ ಬೆದರಿದ ಮನ […]

ಕಾವ್ಯಯಾನ

ಗಝಲ್ ಸಹದೇವ ಯರಗೊಪ್ಪ ಬದುಕಿಗೆ ಅರ್ಥ ಕಲ್ಪಿಸಲು ಉಲಿದೆ ನೀ ಬರಲೇ ಇಲ್ಲ ಒಲವಿಗೆ ಬಲವ ತುಂಬಲು ಕೂಗಿದೆ ನೀ ಬರಲೇ ಇಲ್ಲ ಬೆವರಿನ ಅಂಬಲಿ ಉಂಡು ಒಡಲ ಹಂಬಲ ತಣಿಸುವೆ ಬಾ ಪ್ರೇಮದ ಎಲ್ಲೆ ಮೀರಲು ಗೋಗರೆದೆ ನೀ ಬರಲೇ ಇಲ್ಲ ಇರುಳ ಕಾಲುದಾರಿ ಕತ್ತಲು ಮೆತ್ತಿ ಮೈ ಮುರಿಯುತಿದೆ ಭಾವನೆಗಳ ಬೆಳಕಲಿ ಒಂದಾಗಲು ಕರೆದೆ ನೀ ಬರಲೇ ಇಲ್ಲ ಮದಿರೆಯಲಿ ಅಧರ ಕಳಚಿ ನೂರು ನವಿಲು ಕುಣಿದಂತಾಗಿದೆ ಭಾರವಾದ ತನು ಹಗುರುಗೊಳಿಸಲು ಕೈ ಚಾಚಿದೆ […]

ಕಾವ್ಯಯಾನ

ಗಝಲ್ ಈರಪ್ಪ ಬಿಜಲಿ ಕಗ್ಗೊಲೆಯಾದ ಕನಸುಗಳನು ಗಂಟುಕಟ್ಟಿ ಹೊತ್ತುಕೊಂಡು ನಡೆದಿದ್ದೇವೆ ಹತ್ಯೆಯಾದ ಮನಸುಗಳನು ವಸ್ತ್ರದಲಿ ಸುತ್ತಿಕೊಂಡು ನಡೆದಿದ್ದೇವೆ ।। ವಿಧಿಯಾಟಕೆ ಬದುಕು ಬಲಿಯಾಗಿ ಕೊನೆಯಾದಂತೆ ಕಾಣುತಿದೆ ಬೂಟಾಟಿಕೆ ಮಾತಿಗೆ ಮರುಳಾಗಿ ಬಾಳಬಂಡಿ ಹತ್ತಿಕೊಂಡು ನಡೆದಿದ್ದೇವೆ ।। ಶ್ರಮಿಕರು ಸತ್ತರು ನೆತ್ತರು ಬೀದಿಬೀದಿಗೆಲ್ಲ ನದಿಯಾಗಿ ಹರಿದಿದೆ ಧನಿಕರು ಮೂಗಿಗೆ ಸವರಿದ ತುಪ್ಪವನು ಮೆತ್ತಿಕೊಂಡು ನಡೆದಿದ್ದೇವೆ ।। ಹೊತ್ತೊತ್ತಿಗೂ ಅನ್ನಆಹಾರ ನೀರಿಲ್ಲದೇ ಕ್ಷಣಕ್ಷಣವು ಬಳಲಿದೇವು ಉಸಿರಳಿವ ಮುನ್ನ ಗೂಡುನೆನೆದು ಮನೆ ಸೇರುವಾಸೆ ಕಟ್ಟಿಕೊಂಡು ನಡೆದಿದ್ದೇವೆ।। ಬೆಂದುಬೆಂಡಾದ ಜೀವಿಗಳ ಮೊಗದಲಿ ಬಿಜಲಿ […]

ಕಥಾಯಾನ

ಮನದ ಮುಗಿಲ ಹಾದಿ ರೇಶ್ಮಾ ಗುಳೇದಗುಡ್ಡಾಕರ್ ಕುಸುಮಾ- ಸರಳ ರೂಪ ,ಯಾವ ಹಮ್ಮು ಬಿಮ್ಮುಗಳಿಗೆ ಅವಳಲ್ಲಿ ಜಾಗವಿರಲಿಲ್ಲ  . ಬ್ಯಾಂಕ್ ಒಂದರ ಉದ್ಯೋಗ. ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆ ಯ ಪತಿ ಅತ್ತೆ-ಮಾವನ ಒಬ್ಬನೇ ಮಗ. ಮುಂದಿನ ಬೀದಿಯಲ್ಲಿ ನಾದಿನ ಮನೆ ಸ್ಥಿತಿ ವಂತ ಕುಟುಂಬ . ಮದುವೆಯಾಗಿ ಹತ್ತು ವರ್ಷ ಕಳೆದರೂ ಅವಳಿಗೆ ಮಗುವಿನ ಭಾಗ್ಯ ಇರಲಿಲ್ಲ . ಇದಕ್ಕೆ ಅವಳಲ್ಲಿ ಯಾವ ದೋಷವು ಇರಲಿಲ್ಲ..!!! . ತನ್ನಲ್ಲಿ ಇಲ್ಲದ ತಪ್ಪಿಗೆ ಅವಳಲ್ಲಿ ಮಾಗಲಾರದ ಗಾಯವಾಗಿ  […]

ಕಥಾಯಾನ

ಸಂಬಂಧಗಳ ನವೀಕರಣ ಸುಧಾ ಹೆಚ್.ಎನ್ ನನ್ನಿಂದ ಆಗಲ್ಲ ಮೇಡಂ, ನನಗೆ ಅವನ ಜೊತೆ ಹೆಂಡತಿತರ ಸಂಸಾರ  ಮಾಡಕ್ಕೆ ಸಾಧ್ಯನೇ ಇಲ್ಲ,ನನಗೆ ಡೈವರ್ಸ್ ಬೇಕು” ಅಂದಳು ಹುಡುಗಿ. ಇಪ್ಪತ್ತೊಂದರ ಹರೆಯದ ಲಕ್ಷಣವಾದ ವಿದ್ಯಾವಂತೆ.       ತಾಯಿಯನ್ನು ಕಳೆದುಕೊಂಡು ತಂದೆಯ ಆನಾದಾರಕ್ಕೊಳಗಾಗಿ ಅನಾಥವಾಗಿದ್ದ ಎರಡು ವರ್ಷದ, ಈ ಹುಡುಗಿಯನ್ನು ಮೊಮ್ಮಗಳ ನಾಥೆಯಿಂದ ಮಡಿಲಿಗೆ ಹಾಕಿಕೊಂಡಿದ್ದಳು,ತಾಯಿಯ ತಾಯಿ ಅಂದರೆ ಅಜ್ಜಿ. ಅಜ್ಜಿ…ಮತ್ತವಳ ಹುಟ್ಟು ಕುರುಡ ಮಗನೇ ಇವಳ ಬಂದು-ಬಳಗ ಎಲ್ಲಾ,ಅಜ್ಜಿ ಹೊಲ, ಮನಿ ಚಾಕರಿ ಎಂದು ಬಿಡುವಿಲ್ಲದೆ ದುಡಿಯುತ್ತಿದ್ದರೆ,ಹುಡುಗಿಗಿಂತ […]

ಸಿನಿಮಾ ಸಾಹಿತ್ಯ

ಯೋಗರಾಜ್ ಭಟ್ಟರ ಗೀತೆಗಳ ಗಮ್ಮತ್ತು ರಾಘವೇಂದ್ರ ಈ ಹೊರಬೈಲು “ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ ಯಾರ ಸ್ಪರ್ಷದಿಂದ ಯಾರ ಮನವು ಹಸಿಯಾಗುವುದೋ ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ” ಹತ್ತು ವರ್ಷಗಳ ಹಿಂದೆ, ಹಿರಿಯರು ಕಿರಿಯರೆನ್ನದೆ ಕರುನಾಡಿನ, ಅಷ್ಟೇ ಏಕೆ ಅದರಾಚೆಯ ಎಲ್ಲರೆದೆಯೊಳಗೂ ತಣ್ಣನೆ ಹನಿಹನಿಯಾಗಿ ಸುರಿದು, ಆರ್ದ್ರಗೊಳಿಸಿ, ಮನಸಿನೊಳಗೆ ಚಿರಂತನವಾಗಿ ನಿಂತ “ಮುಂಗಾರು ಮಳೆ” ಎಂಬ ಚಿತ್ರದ ಅಮರ ಗೀತೆಯ ಸಾಲುಗಳಿವು. ‘ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ’ ಎಂದು ಪ್ರಾರಂಭವಾಗುವ ಈ […]

ಕಾವ್ಯಯಾನ

‘ಒಲವ ವಿಜ್ಞಾಪನೆ ವಸುಂಧರಾ ಕದಲೂರು ಹೀಗೆ…ಮಾತು ಮಾತಿಗೂ ಮಾರುತ್ತರ ಬೇಡಎನ್ನವೆಯಲ್ಲಾ ನನ್ನ ಸೋಗೆಮಾತೇ ಆಡದಲೆ ನಾ ನಿನಗೆಅರ್ಥ ಮಾಡಿಸುವುದು ಹೇಗೆ ಚೆಂದದಲಿ  ಮಾತನಾಡದೆಬಿಮ್ಮನೆ ಬಿಗುಮಾನದಲಿನೀ ನಿನ್ನ ಪಾಡಿಗೆ, ನಾ ನನ್ನಷ್ಟಕೆಇರಲೇನು ಸೊಗಸು ಹೇಳು ಮುನಿಸು ಮೋಡ ಕರಗಿಸೋನೆ ಸುರಿದು ಕುದಿ ಮನಸುತಂಪಾಗಿ, ಹಸಿರು ಚಿಗುರಿತೆನೆ ತುಂಬಿ ಬಾಗುದಿರಲೇನು ಚೆಂದ ಮೌನಕ್ಕೂ ಬೇಸರ ಬಂತೀಗಮನಸು ಸೋಲುತಿದೆ ಬಾ ಬೇಗಈ ಬಾಳಿನಾಚೆ ಇನ್ನೇನಿದೆನಾನಿನಗೆ ನೀನನಗೆಂದು ಒಲವಾಗಿದೆ *****

ಕಾವ್ಯಯಾನ

ಗಝಲ್ ಹೇಮಗಂಗಾ ಲೌಕಿಕ ಸುಖಗಳು ತೃಣಸಮಾನವೆಂದು ಹೊರಟವಳು ನೀನು ಎಲ್ಲ ತ್ಯಜಿಸಿ ವೈರಾಗ್ಯವನೇ ಆಭರಣದಂತೆ ಧರಿಸಿದವಳು ನೀನು ಮೋಹಿಸಿದ ಕೌಶಿಕನೊಡನೆ ಬಾಳು ಮುಳ್ಳಿನ ಮಂಚವಾಯಿತು ಅರಮನೆಯ ವೈಭೋಗದತ್ತ ಚಿತ್ತವಿಡದೇ ನಡೆದವಳು ನೀನು ಹಸಿವೆ, ನಿದಿರೆ, ಅಂಜಿಕೆಗಳಾವುವೂ ಕಾಡಲಿಲ್ಲ ನಿನ್ನ ಹೇಗೆ ? ಚೆನ್ನಮಲ್ಲಿಕಾರ್ಜುನನ ಅರಸುತ್ತಾ ಕಾನನದಿ ಅಲೆದವಳು ನೀನು ಅಗಣಿತ ಅನುಭವದ ಮೂಸೆಯಲಿ ಪುಟಕ್ಕಿಟ್ಟ ಚಿನ್ನವಾದೆ ಹೆಣ್ಣೂ ಗಂಡಿಗೆ ಸಮಾನವೆಂಬ ತತ್ವ ಜಗಕೆ ಸಾರಿದವಳು ನೀನು ಆಧ್ಯಾತ್ಮವನಪ್ಪಿ ಮೊದಲಿಗಳಾದೆ ಶಿವಶರಣೆಯರ ಸಾಲಿನಲ್ಲಿ ವಚನಕ್ಷೇತ್ರದ ಹೇಮ ಮುಕುಟಕೆ ರತ್ನವಾದವಳು […]

ಅನುವಾದ ಸಂಗಾತಿ

ಕನ್ನಡ ಮೂಲ: ಸುಬ್ರಾಯಚೊಕ್ಕಾಡಿ. ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಎಲೆ ಇದರ ಹಂಗೇ ಬೇಡ ಎಂದು ಮರದಿಂದ ಕಳಚಿಕೊಂಡ ಎಲೆ ಈಗ ಸ್ವತಂತ್ರ- ಮೇಲಕ್ಕೆ ಎತ್ತುವ ,ಕೆಳಕ್ಕೆ ತಳ್ಳುವ ಗಾಳಿಯ ನಡುವೆ ಎಲೆಗೆ ಆಕಾಶದಲ್ಲಿ ಜೀಕುತ್ತ ಸ್ವಚ್ಛಂದ ವಿಹರಿಸುವ ಹಕ್ಕಿ ಕನಸು ಗುರಿಯಿರದ ಚಲನೆಯಲಿ ಕನಸೊಡೆದು ನಗು ಮಾಯವಾಗಿ ಆಕಾಶ ದಕ್ಕದೆ ನೆಲ ಕೈಗೆಟುಕದೆ ಎಲೆ ಎಲೆಲೆ ಹೊಯ್ದಾಡಿ, ಈಗ ತ್ರಿಶಂಕು. ಹಕ್ಕಿ ಮಾತ್ರ ಮೇಲೆ ನಸು ನಗುತ್ತಿದೆ ಮರದ ಜೊತೆ ಎಲೆಯ ಸ್ಥಿತಿ ನೋಡಿ. ಆಕಾಶ ಸುಮ್ಮನಿದೆ. […]

ಲಹರಿ

ಹೆತ್ತಮ್ಮನಲ್ಲದ ಅಮ್ಮ ಸಂಧ್ಯಾ ಶೆಣೈ [5:25 pm, 10/05/2020] SANDHYA. SHENOY: ನಮ್ಮ ಮಟ್ಟಿಗೆ ಪ್ರತಿಯೊಂದು ದಿನವೂ ತಾಯಂದಿರ ದಿನವೇ. ಆದರೂ ಕೆಲವೊಂದು ದಿನಗಳ ಹೆಸರನ್ನು ಕೇಳುವಾಗ ಮೈ ಪುಳಕಗೊಂಡು ನಮಗೆ ತಾಯಿಯಂತಹ ಪ್ರೀತಿಯನ್ನು ಕೊಟ್ಟವರ ನೆನಪೆಲ್ಲವೂ ಆಗುತ್ತದೆ .ಹಾಗಾಗಿ ಈ ದಿನವನ್ನು ನಾನು ಹೆತ್ತಮ್ಮ ನಲ್ಲದಿದ್ದರೂ ಅಮ್ಮನಂತೆ ಪ್ರೀತಿಸುವ ನಮ್ಮೆಲ್ಲ ಅಮ್ಮಂದಿರ ದಿನ ಎಂದೇ ಕರೆಯಲು ಬಯಸುತ್ತೇನೆ. ಹಾಗೂ ಇವತ್ತಿನ ಈ ನನ್ನ ಲೇಖನವನ್ನು ನಮ್ಮ ಪ್ರೀತಿಯ ಸೋದರತ್ತೆಯ ತಾರಮಕ್ಕಳಿಗೆ ಅರ್ಪಿಸುತ್ತೇನೆ. ಈಗ ಅವಳು ಹೇಳಬಹುದು […]

Back To Top