ಕಥಾಯಾನ

ಮನದ ಮುಗಿಲ ಹಾದಿ

Photo of Kid on Grass Field Flying Kite

ರೇಶ್ಮಾ ಗುಳೇದಗುಡ್ಡಾಕರ್

ಕುಸುಮಾ- ಸರಳ ರೂಪ ,ಯಾವ ಹಮ್ಮು ಬಿಮ್ಮುಗಳಿಗೆ ಅವಳಲ್ಲಿ ಜಾಗವಿರಲಿಲ್ಲ  . ಬ್ಯಾಂಕ್ ಒಂದರ ಉದ್ಯೋಗ. ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆ ಯ ಪತಿ ಅತ್ತೆ-ಮಾವನ ಒಬ್ಬನೇ ಮಗ. ಮುಂದಿನ ಬೀದಿಯಲ್ಲಿ ನಾದಿನ ಮನೆ ಸ್ಥಿತಿ ವಂತ ಕುಟುಂಬ . ಮದುವೆಯಾಗಿ ಹತ್ತು ವರ್ಷ ಕಳೆದರೂ ಅವಳಿಗೆ ಮಗುವಿನ ಭಾಗ್ಯ ಇರಲಿಲ್ಲ . ಇದಕ್ಕೆ ಅವಳಲ್ಲಿ ಯಾವ ದೋಷವು ಇರಲಿಲ್ಲ..!!! . ತನ್ನಲ್ಲಿ ಇಲ್ಲದ ತಪ್ಪಿಗೆ ಅವಳಲ್ಲಿ ಮಾಗಲಾರದ ಗಾಯವಾಗಿ  ಮನದಲ್ಲಿ ಜೀವಂತವಾಗಿತ್ತು ..‌‌   ಅವಳ ಈ ನೋವನ್ನು ಹಂಚಿಕೊಳ್ಳುವ , ಸಮಾಧಾನಿಸುವ ಯಾವ ಪ್ರಾಣಿಯು ಅವಳಿಗೆ ಮನೆಯಲ್ಲೂ ಆಫೀಸಿನಲ್ಲೂ ಇರಲಿಲ್ಲ …‌!!!??
     
  ಸದಾ ಅವಳ ಸಂಬಳ ದ ಲೆಕ್ಕ ಚಾರ ಮಾಡುವ ಅತ್ತೆಮಾವ , ಹಂಗಿಸುವ ನಾದಿನಿ , ಇದನ್ನು  ಕಂಡುಕಾಣದಂತೆ ಇರುವ ಪತಿ.ಇನ್ನು ಆಫೀಸಿನಲ್ಲಿ ಇವಳ ಉದ್ಯೋಗ , ಗಂಡನ ಸಿರಿತನದ ಬಗ್ಗೆಯೇ ಮಾತು ಮತ್ತು ಉಚಿತ ಸಲಹೆ ಕೊಡುವವರ ಸಂಖ್ಯೆಇತ್ತೆ ಹೊರತು ಮನಕ್ಕೆ ಹತ್ತಿವಾಗುವ ಯಾವ ಜೀವಿಯೊ ಇರಲಿಲ್ಲ .
> >    ಆದರೆ ಸರಳ ಮೃದು ಮನದ ಸ್ನೇಹಾಳ ಗೆಳತನಕ್ಕೆ ಯಾವುದೇ ಅಡ್ಡಿ ಇರಲಿಲ್ಲ .ಸಮಯ ಸಿಕ್ಕಾಗಲೇಲ್ಲ ಸ್ನೇಹಾಳ ಮನೆ ,ಪಾರ್ಕ್ , ವಾಕಿಂಗ್ ಎಂಬ ಹೆಸರಿನಿಂದ  ಸಮಯ ಕಳೆಯುತ್ತದ್ದಳು .ಇಲ್ಲವಾದರೆ ಅವಳು ಮೌನಿ …. ಒಂದು ಪ್ರೀತಿತುಂಬಿದ ಮಾತು ಸಾಕು ಬದುಕಿನಲ್ಲಿ ಭರವಸೆ ಬರಲು ಆದರೆ ಅಂತಹ ಮಾತು , ಮನಗಳು ಸಿಗುವದು ಈ ಜಗತ್ತಿನಲ್ಲಿ ಬಹಳ ದುಬಾರಿ … ಸದಾ ಹಣ ,ಅಧಿಕಾರ , ಕೆಲಸ, ಹೀಗೆ ಗೌರವಿಸುವ ಜಗತ್ತಿನಲ್ಲಿ ನಮಗಾಗಿ ಸ್ಪಂದಿಸುವ ನಿಷ್ಕಲ್ಮಷ ಸ್ನೇಹ ಸಂಬಂಧ ಬಹಳ ವಿರಳ .
    
  ಕುಸುಮಾ ಲಘುಬಗೆಯಿಂದ ಮನೆಯ ಕೆಲಸ ಮುಗಿಸಿ
ಬ್ಯಾಂಕ್ ಗೆ ಹೊರಡಲು ತಯಾರಾದಳು ಸಮಯ ಆಗಲೇ ಹತ್ತು ಆಗುತ್ತಾ ಬರುತ್ತಿತ್ತು . ಅತ್ತೆ  ಟಿ.ವಿ ನೋಡುವದರಲ್ಲಿ ಮಗ್ನರಾಗಿದ್ದರು .ಪತಿರಾಯ ಹೊರಡುವ ತಯಾರಿಯಲ್ಲಿದ್ದ ಇವಳು ಒಟ್ಟಿಗೆ ಹೊರಟರಾಯಿತು ಎಂದು ಹೊಬಂದಳು ಅಗಲೇ ಅವಳ ಅತ್ತೆ ಮಗನಿಗೆ ತನ್ನ ತಂಗಿಯ ಮನೆಗೆ ಹೊಗಿ ಆಫೀಸಿಗೆ ಹೋಗಲು ಆಜ್ಞೆ ಮಾಡಿದರು …!!
  ಪತಿರಾಯ ಸಮ್ಮತಿಸಿ .ಕುಸುಮಾಳಿಗೆ ಕಣ್ಣಲ್ಲೆ ಬಾಯ್ ಹೇಳಿ ಹೊರಟು ಹೋದ .
    ಕುಸುಮಾ ಇನ್ನು ಬಸ್ಸೇ ಗತಿ ಎಂದು  ಗೇಟಿನ ಬಳಿಬಂದಳು ಅಂಗಳದಲ್ಲಿ ತಾನು ಮುಂಜಾನೆ ಹಾಕಿದ ರಂಗೋಲಿ ಅರಳಿ ನಕ್ಕು ಮಾತಾಡಿಸಿದಂತೆ ಭಾಸವಾಯಿತು ಕುಸುಮಾ ಅದನ್ನು ನೋಡಿ ಸಂತೋಷದಿಂದ  ಬಸ್ ನಿಲ್ದಾಣ ಕ್ಕೆ ಬಂದಳು ..
     
     ಬಸ್ಸು ತಂಗುದಾಣದ ಎದುರಿಗೆ ಸರ್ಕಾರಿ ಆಸ್ಪತ್ರೆ ಇತ್ತು. ಅಲ್ಲಿ ಜನಸಂಣಿ ತುಂಬಿ ರಸ್ತೆ ತುಂಬಾ ಜನರು ತುಂಬಿ ಅಳು ನರಳಾಟ ಕಂಡುಬಂತು .ಕುಸುಮಾ ಅದನ್ನು ನೋಡಿ ಕೊಂಚ ಗಲಿಬಿಲಿಗೊಂಡಳು ಇಷ್ಟು ಪ್ರಮಾಣದ ಜನ ಎಂದೋ ಅವಳು ಈ ದಾರಿಯಲ್ಲಿ ಕಂಡಿರಲಿಲ್ಲ .
     ಜನರನ್ನು ಕೇಳಿದಳು …..ಸ್ಪಷ್ಟ ಮಾಹಿತಿ ಸಿಗಲಿಲ್ಲ ಅಷ್ಟರಲ್ಲಿ ಆಸ್ಪತ್ರೆಯ ನೌಕರರಾದ ಪರಿಚಿತ ಅಪ್ಪಣ್ಣ ಬರುತ್ತಿರುವದು ಕಂಡು ಕುಸುಮಾ ಅವರ ಬಳಿ  ತೆರಳಿ ಮಾತಾಡಿಸಿದಳು ಅವರು ರಾಜ್ಯದ ಹೆದ್ದಾರಿಯಲ್ಲಿ ನಸುಕಿಗೆ ಭೀಕರ ಅಪಘಾತವಾಗಿದ್ದು ಬೆಳಗಾವಿ ಸಮೀಪದ ತಾಂಡ ಜನರು ಕೂಲಿ ಕೆಲಸಕ್ಕಾಗಿ ಗುಳೆ ಹೋರಟಿದ್ದರುಅವರನ್ನು ತುಂಬಿಕೊಂಡು ಬಂದ ಟ್ಯಾಕ್ಟರ್ ಮತ್ತು ಎದುರಿಗೆ ಬರುತ್ತದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ತುಂಬಾ ಹೆಣಗಳು ಚೆಲ್ಲಾಪಿಲ್ಲಿಯಾಗಿದ್ದು ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆ ಗೆ ದಾಖಲಿಸಲಾಗಿದ್ದು ಅವರಿಗೆ ರಕ್ತ ದ ಮಾದರಿ ತರಲು ಸಾಯಿ ಮಲ್ಟಿಸ್ಪಷೇಲ್ ಆಸ್ಪತ್ರೆಗೆ ಹೊರಟಿರುವುದಾಗಿ ತಿಳಿಸಿದರು .
  ಕುಸುಮಾ ತನ್ನದು “ಓ ನೇಗೆಟಿವ್ ಇದೆ ಬೇಕಾದರೆ ಹೇಳಿ ಕೊಡುತ್ತೆನೆ ಎಂದಳು” .ಅವರು ತುಂಬಾ ಸಂತೋಷಗೊಂಡು “ಹಲವು ರಕ್ತ ನಿಧಿಗೆ ಹೇಳಿದ್ದವು ಮುಂಜಾನೆಯಿಂದ ಬನ್ನಿ ನೋಡೋಣ ”  ಎಂದು ಹೇಳಿ ಅವಳನ್ನು ಕೊಡಲೆ ಆಸ್ಪತ್ರೆ ಯ ಒಳಗೆ ಕರೆದುಕೊಂಡು ಹೋದರು .
    
      ಕುಸುಮಾ ಅಪಘಾತದ ತೀವ್ರ ತೆಯನ್ನು ಮೊದಲ ಬಾರಿಗೆ ಜೀವನದಲ್ಲಿ ಕಣ್ಣಲ್ಲಿ ಕಂಡಳು . ಮಕ್ಕಳು ವೃದ್ದರು ಎನ್ನದೆ ಎಲ್ಲರೋ ನರಳುತ್ತಿದ್ದರು . ಇಡೀ ಆಸ್ಪತ್ರೆ ರೋದನದಿದಂದ ತುಂಬಿತ್ತು ಕುಸುಮಾ ಭಾವಜೀವಿ ಅವಳ ಮನವು ದುಃಖಿಸಿತ್ತು ಮೂಕವಾಗಿ ……ಸಾವು ನೋವು ಸಕಲ ಚರಾಚರಗಳಿಗೊ ಒಂದೇ ಅಲ್ಲವೇ ತುತ್ತಿನ ಚೀಲತುಂಬಿಸಲು ಹೋಗಿದ್ದವರು ಜವರಾಯನ ಬಾಯಿಗೆ ತುತ್ತಾಗಿದ್ದರು!?
  
     ಮೆಲ್ಲನೆ ಅವರಗಳನ್ನು ನೋಡುತ್ತಾ ಭಾರವಾದ ಹೆಜ್ಜೆ ಹಾಕುತ್ತಾ ವಾರ್ಡಿನತ್ತ ನಡೆದಳು  ಅಪ್ಪಣನವರು ಇದನ್ನು ಗಮನಿಸಿ “ಆಸ್ಪತ್ರೆ ಗಳಲ್ಲಿ ಇದು ನಿತ್ಯವು ಇರುವ ಸಾಮನ್ಯ ಸಂಗತಿ ಆದರೆ ಇಂದು  ಜನರ ನರಳಾಟ ಅಫಘಾತದ ಪರಿಣಾಮ ಹೆಚ್ಚಾಗಿದೆ . ನಿಮಗೆ ಇದು ಹೊಸದು ಬನ್ನಿ ತಾಯಿ ಈ ಜೀವ ನೀರಿನ ಮೇಲಿನ ಗುಳ್ಳೆಯಂತೆ .ಅದರೂ ಜನಗಳು ಈ ಸತ್ಯವ ಮರೆತು ನಾನು ,ನನ್ನದು ಎಂಬ ಸ್ವಾರ್ಥ ದ ಕೋಟೆಯಲ್ಲಿ ಬದುಕುತ್ತಾನೆ ” ಎಂದು ಹೇಳುತ್ತಾ ಅವಳನ್ನು ಸಾಮಾಧಾನಿಸುತ್ತಾ ಕರೆದುಕೊಂಡು ಹೋದರು ಅವರು ಸಾತ್ವಿಕ ನಿಷ್ಠಾವಂತ ನೌಕರರಾಗಿದ್ದರು ಇಡೀ ಆಸ್ಪತ್ರೆ ಯಲ್ಲೆ ಉತ್ತಮ ಕೆಲಸಗಾರ ಎಂಬ ನಂಬಿಕೆ ಗಳಿಸಿದರು .ಹಣ ಪಕ್ಷಪಾತದ ಯಾವ ಆಮಿಷ ಕ್ಕೆ ಒಳಗಾಗದೆ ಸೇವೆಯನ್ನು ಸಲ್ಲುಸುತ್ತಾ ಜೀವನ ನಡೆಸುತ್ತದ್ದರು. ಕುಸುಮಾಳ ಮುಂದಿನ ಬೀದಿಯ ಲ್ಲೆ ಇವರ ಮನೆಯೊ ಇತ್ತು .
  
     ಕುಸುಮಾಳ ರಕ್ತ ದ ಮಾದರಿಯನ್ನು ಮತ್ತು
ಅವಳ ಆರೋಗ್ಯವನ್ನು ಪರೀಕ್ಷಿಸಿ. ಅವಳನ್ನು  ಒಂದು ಕೊಠಡಿ ಯಲ್ಲಿ ರಕ್ತ  ನೀಡಲು ಅವಕಾಶ ಮಾಡಕೊಟ್ಟರು
  ಕುಸುಮಾ ಅಷ್ಟರಲ್ಲಿ ತನ್ನ ಸಹೋದ್ಯೋಗಿ ಗೆ ಕರೆಮಾಡಿ
ಸಂಕ್ಷಪ್ತವಾಗಿ ವಿಷಯ ತಿಳಿಸಿ ರಜೆ ಪಡೆಯಲು ಹೇಳಿದಳು
ಪತಿಗೆ ಹೇಳುವ ಗೋಜಿಗೆ ಹೋಗಲಿಲ್ಲ .ಚಿಕ್ಕ ವಿಚಾರ ಇಗಲೇ ಹೇಳುವ ಅಗತ್ಯವಿಲ್ಲ ಅಗತ್ಯ ಬಂದರೆ ಹೇಳಿದರಾಯುತು ಎಂದು ಕೊಂಡು ಮೊಬೈಲ್ ಬ್ಯಾಗಿಗೆ ಹಾಕಿಕೊಂಡು ಕೊಠಡಿಗೆ ಬಂದಳು .       

    ಎಲ್ಲಾ ಮುಗಿದು  ಮಧ್ಯಾಹ್ನದ ಕಳೆಯುತ್ತಾ ಬಂದಿತು .ಅಪ್ಪಣ್ಣ ನವರು ಅವಳನ್ನು ಆಗಾಗ ಬಂದು ವಿಚಾರಿಸುತ್ತಾ  ಹೊಗುತ್ತಿದ್ದರು .
      ಅವಳಿಗೆ ದಾಳಿಂಬೆ ಪಾನಕ ತಂದರು ” ಸ್ವಲ್ಪ ವಿರಮಿಸಿ ನಿಮ್ಮ ಪತಿಗೆ ಮಾಹಿತಿ ತಿಳಿಸಿರುವೆ ಅವರು ಇನ್ನೇನು ಬರುತ್ತಾರೆ ” ಎಂದು ತಿಳಿಸಿದರು. ” ತಮ್ಮಿಂದ ತುಂಬಾ ಉಪಕಾರವಾಯ್ತು ಎಂದು ಹೇಳಿ ಕೆಲಸ ತುಂಬಾ ಇದೆ ಹೊರಡುವಾಗ ಕೌಂಟರ್ ಅಲ್ಲಿ ಇರುತ್ತೇನೆ ಏನಾದರೊ ಬೇಕಾದರೆ ಸಂಕೋಚ ಪಡದೆ ಕೇಳಿ” ಎಂದು ಕುಸುಮಾಳಿಗೆ  ಹೇಳಿ  ಹೋದರು .ಅವಳು ಅಲ್ಲೆ ಮಂಚದ ಮೇಲೆ ವಿರಮಿಸುತ್ತಾ ಕುಳಿತಳು .ಅಷ್ಟರಲ್ಲಿ ಪತಿ ಅಭಯ್ ನ ಆಗಮನವಾಯಿತು .
” ಅಪ್ಪಣ್ಣ ನನಗೆ ಕಾಲ್ ಮಾಡಿ ಹೇಳಿದರು ಇಗ ಹೇಗಿರುವೆ ? ಹೋಗೊಣವೇ ಮನೆಗೆ ? ” ಎಂದನು . 
     ಸರಿ ಎಂದು ಕುಸುಮ ಅಭಯ್ ಕೊಠಡಿ ಇಂದ ಹೊರನಡೆದರು ಆಸ್ಪತ್ರೆ ಯ ತುಂಬಾ ನರ್ಸ, ನೌರರು ,ಡಾಕ್ಟರ್ಗಳ ಗಡಿಬಿಡಿ ಓಡಾಟ , ಚಿತ್ಕಾರ, ನರಳಾಟ ಮುಗಿಲು ಮುಟ್ಟಿತ್ತು ಪೋಲಿಸರ ಉಪಸ್ಥಿತಿ, ಸಂಬಂಧಿಕರ ಹುಡುಕಾಟ , ಹೀಗೆ ಒಂದು ವಿಭಿನ್ನ ಲೋಕವೊಂದು ಅಲ್ಲಿ ಸೃಷ್ಟಿ ಯಾಗಿತ್ತು …..
       
     ಕುಸುಮಾಳ ಮನದಲ್ಲಿ ಹಲವು ಪ್ರಶ್ನೆ ಉತ್ತರಗಳು ಈ ಹೊಸ ಅನುಭವಕ್ಕೆ ಸಾಕ್ಷಿ ಎಂಬಂತೆ ಉದ್ಬವಿಸುತ್ತಿದ್ದವು ಅಭಯ್  ಅವಳ ಮನದ ಇಂಗಿತ ಅರಿತು ಅವಳ ಕೈ ಹೀಡಿದು  ಕರೆದುಕೊಂಡು ಹೊರಬಂದನು
ಹೊರ ಬರುವಾಗ ಕೆಳಗಿನ ವಾರ್ಡ ಅಲ್ಲಿ ಸತ್ತ ತಾಯಿಯ ಶವದ ಮೇಲೆ ಹಾಲುಕುಡಿಯಲು ಹವಣಿಸುತ್ತಾ ಅಳುತ್ತಿದ್ದ
ಒಂಭತ್ತುತಿಂಗಳ ಹೆಣ್ಣು ಮಗುವಿನ ದೃಶ್ಯ ಕುಸುಮಾಳ ಎದೆಯನ್ನು ಸೀಳಿಬಿಟ್ಟಿತ್ತು!     ಆ ಮನಕಲಕುವ ಸಂಗತಿಗೆ ಕುಸುಮಾಳ ಕಣ್ಣಾಲಿಗಳು ತುಂಬಿ ಬಂದವು .ಅಲ್ಲಿದ್ದ ಜನರಿಗೆ ಯಾರಿಗೊ ಇದರ ಪರಿವೆ ಇರಲಿಲ್ಲ .ಎಲ್ಲರಿಗೊ ಒಂದೊಂದು ನೋವು ಮನತುಂಬಿದ್ದವು .ತಮ್ಮಗಳ ನೋವಲ್ಲೆ ಜಗವ ಮರೆತಿದ್ದರು .
    ಕುಸುಮಾ ಒಂದುಕ್ಷಣ ತನ್ನನ್ನೇ ತಾನು  ಆ ಮಗುವಿನಲ್ಲಿ ಕಂಡಳು ಹತ್ತು ವರ್ಷಗಳಿಂದ ಸತತ ನೋವು ,ಅವಮಾನಕ್ಕೆ ಶರಣಾಗಿ ಎಲ್ಲರೂ ಇದ್ದು ಇಲ್ಲದಂತೆ  ಬದುಕಿನಲ್ಲಿ ದಾರಿ ಕಾಣದೆ ನಿತ್ಯವು ದಹಿಸುತ್ತಿದ್ದಳು ಅಂತರಂಗದ ಬೆಂಕಿಯಲ್ಲಿ…!  ಇಂದು ಆ ಮಗು ವು ಇಷ್ಟು ಜನಗಳ ಮಧ್ಯ ತನ್ನವರ ಕಳೆದುಕೊಂಡು ಆನಾಥವಾಗಿತ್ತು …!!! .
   ಕುಸುಮಾ   ಓಡಿ ಆ ಮಗುವನ್ನುಎತ್ತಿಕೊಂಡು ಸಂತೈಸುತ್ತಾ ಹೊರಬಂದಳು ಅವಳ ಈ ಅನೀರಿಕ್ಷತ  ನಡೆ ಪತಿ ಅಭಯ್ ಗೆ ಅಚ್ಚರಿಂದರು ಅವಳನ್ನು ಪ್ರಶ್ನಿಸುವ ದಿಟ್ಟತನ ಕ್ಕೆ ಅವನು ಕೈಹಾಕಲಿಲ್ಲ .ಸತ್ಯ ಅವನಿಗೋ ತಿಳಿದಿತ್ತು .
    ಕುಸುಮಾ ಮಗುವನ್ನು ಎತ್ತಕೊಂಡು ಮನೆಗೆ ಬಂದಳು ಪತಿಯ ಜೊತೆಗೆ .ಮನೆಯಲ್ಲಿ ಇದ್ದ ಅತ್ತೆ – ಮಾವ  ನಾದಿನಿ ಮದ್ಯಾಹ್ನದ ಊಟ ಮುಗಿಸಿ ರಾತ್ರಿ ಗಾಗಿ ಸಂಬಾರ್ ತೆಗೆದುಕೊಂಡು ಹೋಗಲು ಸಿದ್ದತೆ ನಡೆಸುತ್ತಿದ್ದ ನಾದಿನಿ (ಇದು ಅವಳ ನಿತ್ಯದ ಕಾಯಕ …!!) ಎಲ್ಲರ ಮುಖದಲ್ಲೂ ಅಚ್ಚರಿ ಮತ್ತು ಪ್ರಶ್ನಾರ್ಥಕ ಚಿಹ್ನೆ ಉದ್ಬವಿಸಿದ್ದವು …!??

  ತನ್ನ ಇಬ್ಬರು ಹೆಣ್ಣುಮಕ್ಕಳಲ್ಲಿ ಒಂದನ್ನು ಅಣ್ಣನಿಗೆ ದತ್ತು ಕೊಡುವ ಅದಮ್ಯ ಬಯಕೆ ಇತ್ತು  ನಾದಿನಿ ಗೆ .ಅಣ್ಣನ ಆಸ್ತಿ ತನಗೇ ಸೇರುತ್ತದೆ ಈ ಮೂಲಕ ಎಂಬ ಅದ್ಬುತ ಚಿಂತನೆಯಿಂದ !  ಅಭಯ್ ಗೆ ಒತ್ತಾಯ ಮಾಡುತ್ತಿದ್ದಳು ಇದಕ್ಕೆ ತನ್ನ ತಾಯಿಯ ಸಹಕಾರವು ಇತ್ತು . ಅದರೆ ಇದಕ್ಕೆ ಅಭಯ್ ಯಾವದೇ ಸೊಪ್ಪು ಹಾಕಿರಲಿಲ್ಲ  .ಆದರೆ ಈಗ ಎಲ್ಲ ಬುಡ ಮೇಲಾಗಿತ್ತು…..ಒಂದೇ ಹೊಡೆತಕ್ಕೆ .ಆ ಪುಟ್ಟ ಮಗುವನ್ನು ಕುಸುಮ ತಬ್ಬಿ ಹೀಡಿದು ಎತ್ತಿಕೊಂಡ ನೋಟವೇ ಅವರನ್ನು ಹೆಚ್ಚು ಕೆಣಕಿತ್ತು .ಕುಸುಮಳ ಮನದ ಇಂಗಿತ ಭಾವನಾತ್ಮಕವಾಗಿ ಅರಿವು ಮಾಡಿತ್ತು.

    ಅತ್ತೆ ,ಮಾವ , ನಾದಿನಿ ಎಲ್ಲರೂ ಒಮ್ಮಲೇ ಅರ್ಭಟ ನಡೆಸಿದರು .  ಅಭಯ್ ಕುಸುಮಾ ಳ ಮೇಲೆ ಮಾತಿನ ಯುದ್ಧ.  ನಡೆಯಿತು ಆದರೆ ಕುಸುಮಾ ಳ ನಿರ್ಧಾರ ಬದಲಿಸುವ ಪ್ರಯತ್ನ ವಿಫಲವಾಯಿತು .ಕೊನೆಗೆ ಕುಸುಮಾ   ಮಗುನಿನೊಂದಿಗೆ ಒಬ್ಬಳೆ ಬದುಕುವ ನಿರ್ಧಾರ ವನ್ನು ಪ್ರಕಟಿಸಿದಳು .ಅಭಯ್ ಕ್ಷಣಮಾತ್ರದಲ್ಲಿ ಅದುರಿಹೋದ .ಕುಸುಮಾಳನ್ನು ತಡೆದು ನಿಧಾನವಾಗಿ ಹತ್ತು ವರ್ಷ ಮುಚ್ಚಿಟ್ಟ ಸತ್ಯ ಹೇಳಿದನು .ತನ್ನಿಂದ ಕುಸುಮಾಳಿಗೆ ಮಗು ನೀಡಲು ಸಾದ್ಯವಿಲ್ಲ .ಇದನ್ನು ಜಗತ್ತಿಗೆ ತಿಳಿಸಿ ಅವಮಾನ ಪಡುವದನ್ನು ತಪ್ಪಿಸಿಕೊಂಡು ನಿರಾತಂಕವಾಗಿ ಕುಸುಮಾಳ ಮೇಲೆ ಈ ಮಿಥ್ಯವನ್ನು ಹೊರಿಸಿದ್ದಾಗಿ , ಕುಸುಮಾಳನ್ನು ಬಿಟ್ಟು ಬದಕುಲು ಅಸಾದ್ಯವೆಂದು ಮೊದಲಬಾರಿಗೆ ಅಭಯ್ ಕುಸುಮಾಳ ನ್ನು ಹೀಡಿದು ಕ್ಷಮೆ ಯಾಚಿಸಿದನು ..!
   ಅವನ ಮಾತುಗಳು ಮನದಾಳದಿಂದ ಹೊರಬಂದಿದ್ದವು ಕಂಗಳು ತುಂಬಿ ನಾಚಿಕೆಯಿಂದ ತಲೆತಗ್ಗಿಸಿದ್ದನು.
ನಾದಿನಿ ರಭಸವಾಗಿ ಕ್ಯಾರಿಯರ್ ತೆಗೆದುಕೊಂಡು ಹೊರನಡೆದಳು …!!!?

   ಅತ್ತೆಮಾವ ನಿಗೆ ಕುಸುಮಾಳ ಸಂಕಟಕ್ಕಿಂತ ಕುಸುಮಾಳ ಅವಮಾನ ನಿರಾಶೆಗಿಂತ . ಮಗಳಿಗಾದ ನಿರಾಶೆ ತೋಕವೇ ಹೆಚ್ಚಾಗಿ ಕಂಡಿತ್ತು …..!. ತಾವು ಇನ್ನು ಮುಂದೆ ಇಲ್ಲಿ ಇರುವದಿಲ್ಲ .  ಈ ಮಗು ನಮ್ಮ ರಕ್ತವಲ್ಲ ಇದು ನಮ್ಮದಲ್ಲ ನನ್ನ ಆಸ್ತಿಯಲ್ಲಿ ಒಂದು ಭಾಗವು ನಿನಗೆ ಇಲ್ಲ ಎಂದು ಘೋಷಿಸಿ ಹಳ್ಳಿಗೆ ಹೊರಡಲು ತಯಾರಾದರು.!!.
  ಅಭಯ್ ಯಾರನ್ನು ಸಮಾಧಾನಿಸುವ ಗೋಜಿಗೆ ಹೊಗಲಿಲ್ಲ .ಮಗುವನ್ನು ಎತ್ತಿಕೊಂಡು ಕುಸುಮಾಳನ್ನು ಕರೆದುಕೊಂಡು ರೂಮಿಗೆ ಬಂದನು . ನಾಳೆ ವಕೀಲರನ್ನು ಕಂಡು ಮಗುವಿನ ಬಗ್ಗೆ ಮಾತುಕತೆ ನಡಸಿ ಕಾನೂನಾತ್ಮಕ ಪ್ರಕ್ರಿಯೆ ಮುಗಿಸೋಣ .
  ಮುಂದಿನ ವಾರ ಇವಳಿಗೆ ನಾಮಕರಣ ಮಾಡೋಣ ಎಂದು ಹೇಳಿ ಅವಳ ಕೈಯನ್ನು ಹೀಡಿದು ಹೇಳಿದನು .
  ಕುಸುಮಾಳ ಸಂತಸಕ್ಕೆ ಪಾರವೇ ಇರಲಿಲ್ಲ ಕ್ಷಣ ಮಾತ್ರದಲ್ಲಿ
ತನ್ನ ಬದುಕಿನ ಕನಸು ನನಸಾಯಿತು  ಮನವು ಸಂಭ್ರಮದ ಬೀಡಾಯಿತು!  ಕುಸುಮಾ ಮಗುವಿನ ಕಾಲನ್ನು  ಕಣ್ಣಿಗೊತಿಕೊಂಡು ಹೇಳಿದಳು “ನೀನು ನನ್ನ ಬದುಕಿನ  ನಿಧಿ “ಎಂದು . ಅವಳ ಕಂಗಳು ತುಂಬಿ ಕಂಬನಿ ಮಿಡಿದವು.    
     ಅಭಯ್ ಅವಳ ಕಣ್ಣೀರು ಒರೆಸುತ್ತಾ ಅವಳನ್ನು ತಬ್ಬಿ ಸಂತೈಸುತ್ತಾ “ಮಗುವಿಗೆ ಹಾಲು ಬಿಸಿ ಮಾಡಿತಾ ನಾನು ಅಡಿಸುವೆ ಸಂಜೆ ಇವಳಗೆ ತೊಟ್ಟಿಲು ಬಟ್ಟೆ  ತರೋಣ ಅಮ್ಮ ಮಗಳು ಸಿದ್ದರಾಗಿ “ಎಂದು  ನಗುತ್ತಾ  ಹೇಳಿದನು. ಕುಸುಮಾ ಒಂದು ಕ್ಷಣ ಅಭಯ್ ನ ಮುಖ ನೋಡಿದಳು .” ನಿಮಗೆ ನನ್ನ ನಿರ್ಧಾರ ಸಂಪೂರ್ಣ ಒಪ್ಪಿಗೆ ಇದೆಯೇ ?” .ದಯವಿಟ್ಟು ಹೇಳಿ ಮಗುವಿಗೆ ನಮ್ಮಿರ       ಪ್ರೀತಿ,ಕಾಳಜಿ ,ಆರೈಕೆ ಅಗತ್ಯವಿದೆ .ಇವುಗಳನ್ನು ಬಲವಂತವಾಗಿ ನಾನು ನಿಮ್ಮಿಂದ ಮಗುವಿಗೆ ಕೊಡಿಸಲಾರೆ” .ಅಭಯ್ ” ಕುಸುಮಾ ನಿನ್ನ ಭಾವನೆಗಳನ್ನು ನಾನು ಆರ್ಥಮಾಡಿಕೊಳ್ಳ ಬಲ್ಲೆ .ನಿನ್ನಷ್ಟೇ ನನಗೊ ಅಪ್ಪನಾಗುವ ಬಯಕೆ ಇದೆ ಕೊರಗು ಇತ್ತು ನನ್ನ ಬದುಕು ಇಂದು ಪೂರ್ಣ ವಾಯಿತು ನನ್ನಲ್ಲೂ  ಮತೃಭಾವನೆ ಇದೆ ಕುಸುಮಾ .ಭಯ ಬೇಡ ನನ್ನಿಂದ ಹೇಳಲು ಸಾದ್ಯವಿಲ್ಲ ನಿರೂಪಿಸಲು ಸಮಯ ಕೊಡು” .ಎಂದು ನಸುನಕ್ಕು ಅವಳ ಕೈಹಿಡಿದನು .ಕುಸುಮಾ ಸಂತೋಷದಿಂದ ಮಗುವನ್ನು ಅಭಯ್ ಮಡಿಲಲ್ಲಿ ಮಲಗಿಸಿ ಅಡುಗೆಮನೆಯತ್ತ ನಡೆದಳು ……
       

Leave a Reply

Back To Top