ಕಾವ್ಯಯಾನ

ಒಲವ ವಿಜ್ಞಾಪನೆ

Water, Drops, Blue, Liquid, Clear, Macro

ವಸುಂಧರಾ ಕದಲೂರು

ಹೀಗೆ…
ಮಾತು ಮಾತಿಗೂ ಮಾರುತ್ತರ ಬೇಡ
ಎನ್ನವೆಯಲ್ಲಾ ನನ್ನ ಸೋಗೆ
ಮಾತೇ ಆಡದಲೆ ನಾ ನಿನಗೆ
ಅರ್ಥ ಮಾಡಿಸುವುದು ಹೇಗೆ

ಚೆಂದದಲಿ  ಮಾತನಾಡದೆ
ಬಿಮ್ಮನೆ ಬಿಗುಮಾನದಲಿ
ನೀ ನಿನ್ನ ಪಾಡಿಗೆ, ನಾ ನನ್ನಷ್ಟಕೆ
ಇರಲೇನು ಸೊಗಸು ಹೇಳು

ಮುನಿಸು ಮೋಡ ಕರಗಿ
ಸೋನೆ ಸುರಿದು ಕುದಿ ಮನಸು
ತಂಪಾಗಿ, ಹಸಿರು ಚಿಗುರಿ
ತೆನೆ ತುಂಬಿ ಬಾಗುದಿರಲೇನು ಚೆಂದ

ಮೌನಕ್ಕೂ ಬೇಸರ ಬಂತೀಗ
ಮನಸು ಸೋಲುತಿದೆ ಬಾ ಬೇಗ
ಈ ಬಾಳಿನಾಚೆ ಇನ್ನೇನಿದೆ
ನಾನಿನಗೆ ನೀನನಗೆಂದು ಒಲವಾಗಿದೆ

*****


One thought on “ಕಾವ್ಯಯಾನ

Leave a Reply

Back To Top