ಕಾವ್ಯಯಾನ

ಗಝಲ್

ಹೇಮಗಂಗಾ

ಲೌಕಿಕ ಸುಖಗಳು ತೃಣಸಮಾನವೆಂದು ಹೊರಟವಳು ನೀನು
ಎಲ್ಲ ತ್ಯಜಿಸಿ ವೈರಾಗ್ಯವನೇ ಆಭರಣದಂತೆ ಧರಿಸಿದವಳು ನೀನು

ಮೋಹಿಸಿದ ಕೌಶಿಕನೊಡನೆ ಬಾಳು ಮುಳ್ಳಿನ ಮಂಚವಾಯಿತು
ಅರಮನೆಯ ವೈಭೋಗದತ್ತ ಚಿತ್ತವಿಡದೇ ನಡೆದವಳು ನೀನು

ಹಸಿವೆ, ನಿದಿರೆ, ಅಂಜಿಕೆಗಳಾವುವೂ ಕಾಡಲಿಲ್ಲ ನಿನ್ನ ಹೇಗೆ ?
ಚೆನ್ನಮಲ್ಲಿಕಾರ್ಜುನನ ಅರಸುತ್ತಾ ಕಾನನದಿ ಅಲೆದವಳು ನೀನು

ಅಗಣಿತ ಅನುಭವದ ಮೂಸೆಯಲಿ ಪುಟಕ್ಕಿಟ್ಟ ಚಿನ್ನವಾದೆ
ಹೆಣ್ಣೂ ಗಂಡಿಗೆ ಸಮಾನವೆಂಬ ತತ್ವ ಜಗಕೆ ಸಾರಿದವಳು ನೀನು

ಆಧ್ಯಾತ್ಮವನಪ್ಪಿ ಮೊದಲಿಗಳಾದೆ ಶಿವಶರಣೆಯರ ಸಾಲಿನಲ್ಲಿ
ವಚನಕ್ಷೇತ್ರದ ಹೇಮ ಮುಕುಟಕೆ ರತ್ನವಾದವಳು ನೀನು

********

One thought on “ಕಾವ್ಯಯಾನ

Leave a Reply

Back To Top