ಮಗಳೆ ನಿನಗಾಗಿ

ಮಗಳೆ ನಿನಗಾಗಿ

ಕವಿತೆ ಮಗಳೆ ನಿನಗಾಗಿ ಶಾಲಿನಿ ಆರ್. ಎದೆಗೆ ಹಾಲ ಬಿತ್ತಿಒಡಲ ಗುಡಿಯಕದವ  ತಟ್ಟಿಬಳಿಗೆ ಕರೆದುಅಂತರಂಗದಾಧುನಿಗೆ ಬೆಸೆದ  ನೀ’ಬಾಳಗೀತೆ ಮುನ್ನುಡಿ, ಪಡೆದ ಸುಖಕೆಪ್ರೀತಿ ಬೆರೆಸಿಹಡೆದ ಋಣಕೆತಾಯ್ತನದಾನಂದಬಡಿಸಿ ಬೆಸೆದ,ಸೊಬಗಿನೈಸಿರಿ ನೀ’ಬಾಳಗೀತೆ ಮುನ್ನುಡಿ, ನಿತ್ಯ ಹಸಿರಿದುಬಾಳ ನಂದನತೊದಲ ಮಾತು,ತಪ್ಪು ಹೆಜ್ಜೆಗೊಂದುಹೂಬನ ಚುಂಬನ,ನಲಿವ ಗೊಂಚಲಿನಕಿರುಗೆಜ್ಜೆ ನೀ’ಬಾಳಗೀತೆ ಮುನ್ನುಡಿ, ಬಿಡದೆ ಹನಿಸುಹೊಕ್ಕಿಹ ಮಮತೆಯನಾನಲ್ಲ ತಾಯಿಯು,ಮರುಜನ್ಮವಿತ್ತೆನೀ ಎನಗೆ ತಾಯೆಒಡಲತುಂಬಿದಹೊನಲ ಜೇನು ನೀ’ಬಾಳಗೀತೆ ಮುನ್ನುಡಿ, ಕಣ್ಣಂಚಿನ ಹನಿಯುನಿಂತಲ್ಲೆ ಕಡಲಾಯಿತುಆನಂದದಂಗಳದಿಅಮ್ಮ’ ಎನುವ ಕರೆಗೆಜಗದ ಸುಖಸೊನ್ನೆಯಾಯ್ತುತಾಯ್ತನದ ಭಾಷ್ಯ ನೀ’ಬಾಳಗೀತೆ ಮುನ್ನುಡಿ, ಕರುಳಬಳ್ಳಿ ಬೆಸೆದುಒಲವ ಕಡಲ ಸುತ್ತಿಅವನ ಪ್ರೀತಿಮೋಹ ಮಂತ್ರಕೆಓ! ಗುಟ್ಟು, […]

ತೆರೆದಿಟ್ಟ ದೀಪ

ಕಥೆ ತೆರೆದಿಟ್ಟ ದೀಪ ಯಮುನಾ.ಕಂಬಾರ ಅದು ಮಧ್ಯಾಹ್ನದ ಸಮಯ. ಸೂರ್ಯ ತನ್ನ ಕಿರಣಗಳನ್ನು ಭಗವತಿಯ ಮುಂದಿನ ಗಿಡದ ಮೇಲೆ ಚೆ ಲ್ಲಿದ್ದ. ಗಿಡದ ಮೇಲೊಂದು ಪಕ್ಷಿ ಅತ್ತ ಇತ್ತ ನೋಡುತ್ತಾ ಕುಳಿತುಕೊಂಡಿತ್ತು. ಪಕ್ಢಿಯನ್ನು ಗಿಡವನ್ನು ವೀಕ್ಷಿಸುತ್ತಾ ಇದ್ದ ಭಗವತಿಯ ಕಣ್ಣುಗಳು ಪಲ್ಲಟಗೊಂಡು   ದಾರಿಯತ್ತ ಹರಿದವು.ಅವಳು ದಾರಿಯಲ್ಲಿ ಬರುವ ಹೆಣ್ಣು ಮಗಳನ್ನು ನೋಡಿದೊಡನೆ ತನ್ನ ನೆನಪುಗಳನ್ನು ಒತ್ತಿ ನೋಡ ತೊಡಗಿದಳು. ಹೌದು ಅವಳು ಅವಳೇ……ಈಗ್ಯ ಹದಿನಾಲ್ಕು ವರ್ಷಗಳ ಹಿಂದೆ ತನ್ನ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದ ಮಾಬೂಬಿ.ಭಗವತಿಗೆ ಅವಳನ್ನು ನೋಡಿ […]

ಕ್ಷಮಿಸು ಪ್ಲೀಸ್..

ಕವಿತೆ ಕ್ಷಮಿಸು ಪ್ಲೀಸ್.. ಮಧುಸೂದನ ಮದ್ದೂರು. ನೋವಿನಾಳದ ಕಿಸರು ಗಾಯಕೆ ನಿನ್ನನೆನಪುಗಳನೊಣಗಳ ದಾಳಿಝೇಂಕಾರಒಳಗೊಳಗೇಯಾತನೆ ವೇದನೆ ಒಬ್ಬನೇ ಇದ್ದೇನೆಹಾಯಿಯಲಿಸುತ್ತಲೂ ಅಳುವಿನಉಪ್ಪುಪ್ಪು ಕಡಲುನನ್ನುಳುವಿನ ಉಪ್ಪು ಜಾರಿಕಡಲು ಹೆಪ್ಪುಗಟ್ಟುತ್ತಿದೆ..ಮುಳುಗಬೇಕೆನ್ನುವ ಹಡಗು ಮುಳುಗುತ್ತಿಲ್ಲದೂರದೆಲ್ಲೆಲ್ಲೋಮಿಣುಕುಹುಳುದಂತಹ ಬೆಳಕುಕಣ್ಣಿಗಾನಿಸುತ್ತಿದ್ದಂತೆನೀನೆನಾದರೂಅದೇ ಹಸಿರು ನೆರಿಗೆ ಲಂಗ ತೊಟ್ಟು ಬಂದೆಯಾಎಂಬ ಹುಂಬತನದ ನಿರೀಕ್ಷೆಸಾಯಲು ಬಿಡುತ್ತಿಲ್ಲಬದುಕಲು ಬಿಡುತ್ತಿಲ್ಲಪ್ರೀತಿ ಅಂದರೆ ಹೀಗೇನಾ..ಗೊತ್ತಾಗುತ್ತಿಲ್ಲಕ್ಷಮಿಸು ಪ್ಲೀಸ್.. ****************************

ಗುಂಗು

ಕವಿತೆ ಗುಂಗು ಮಾಲತಿ ಶಶಿಧರ್ ನಿನ್ನ ತೋಳಿನ ಚೌಕಟ್ಟುಬಿಟ್ಟು ಬಂದ ಮೇಲೂ ನನ್ನಕೊರಳು ಕೆನ್ನೆಗಳ ಮೂಲೆಯಲ್ಲಿನಿನ್ನ ಪರಿಮಳದ ಭಾಸ. ಬೆಚ್ಚಗಿನ ಉಣ್ಣೆ ಬಟ್ಟೆ ತೊಟ್ಟಿದ್ದರುಒಳಗೆ ಮಾಗಿ ಚಳಿಯ ಕೊರೆತನೀ ಗಿಲ್ಲಿ ಗುರುತು ಮಾಡಿದತೊಡೆಯ ಎದೆಗವುಚಿಕೊಂಡುಕಣ್ಮುಚ್ಚಿ ನಗುತ್ತೇನೆ. ಮುತ್ತನಿಟ್ಟು ಹೊತ್ತೇ ಕಳೆದುಹೋದರು ಮತ್ತು ಮಾತ್ರಹಳಸದೆ ತುಟಿಯಂಚಿನತೊಟ್ಟು ರಕ್ತದಲ್ಲಿ ಹೆಪ್ಪುಗಟ್ಟಿಕುಳಿತಿದೆ. ಅಮಾಸೆ ಹೆರಳ ಇಪ್ಪತ್ತುಬಾರಿ ಒಪ್ಪ ಮಾಡಿದರುಗಾಳಿಗೋಲಾಡೊ ಮುಂಗುರುಳಲಿನಿನ್ನದ್ದೇ ತುಂಟತನ ಕಂಡುಕನ್ನಡಿಯತ್ತ ಕೈಚಾಚುವೆಹುಚ್ಚಿಯಂತೆ.. ***************************************

ಧನ್ಯ ಮಿಲನ

ಕಥೆ ಧನ್ಯ ಮಿಲನ ಸರೋಜಾ ಶ್ರೀಕಾಂತ್ ಅಮಾತಿ ರಾಧೆ,ರಾಧೆ….ಅದೇ ಧ್ವನಿ!…..ಹೌದು ಇದು ಅದೇ ಧ್ವನಿ,ಕೃಷ್ಣ ….ಕೃಷ್ಣ ! ಎಲ್ಲವಿತಿರುವೆ!? ಎದುರಿಗೊಮ್ಮೆ ಬರಬಾರದೆ? ಅದೆಷ್ಟೋ ವರುಷಗಳ ನಂತರ ಮತ್ತೆ ಕೃಷ್ಣ ಬಂದಿದ್ದ.ಅದೇ ತೇಜಸ್ಸು,ನಗುದುಂಬಿದ ಮುಖ ಕೃಷ್ಣನ ದರ್ಶನವಾಗುತ್ತಲೇ ನದಿ ದಂಡೆಯ ಆ ಉರಿಬಿಸಿಲೂ ಹಿತವೆನಿಸಿಸುತ್ತಿತ್ತು ರಾಧೆಗೆ.ಅಬ್ಬಾ! ,ಅಂತೂ ಬಂದೆಯಲ್ಲ ಸ್ವಾಮಿ ಇಷ್ಟು ವರ್ಷಗಳು ಬೇಕಾದವೆ ಈ ರಾಧೆಯನ್ನು ಕಾಣಲು? ಅಂದಾಗ ನೀನೆಂದೂ ನನ್ನ ಜೊತೆಯೇ ಇರುವೆ ರಾಧೆ ಏಕೆ ನಿನಗೆ ಹಾಗೇಣಿಸುವುದಿಲ್ಲವೇ?ಭೇಟಿ ವಿಳಂಬವಾಯಿತೆಂದು ನನ್ನನ್ನೇ ಮರೆತು ಬಿಟ್ಟೆಯಾ ಹೇಗೆ? […]

ಕಲ್ಲಳ್ಳಿ ಗಜಲ್

ಪುಸ್ತಕ ಸಂಗಾತಿ ಕಲ್ಲಳ್ಳಿ ಗಜಲ್ ಸಂಕಲನದ ಹೆಸರು : ಕಲ್ಲಳ್ಳಿ ಗಜಲ್ ಲೇಖಕರು : ದೊಡ್ಡ ಕಲ್ಲಳ್ಳಿ ನಾರಾಯಣಪ್ಪ ಬೆಲೆ : ೧೨೦/- ದೊಡ್ಡ ಕಲ್ಲಳ್ಳಿ ನಾರಾಯಣಪ್ಪನವರು ವೃತ್ತಿಯಲ್ಲಿ ಪದವೀಧರ ಶಿಕ್ಷಕರಾಗಿದ್ದು, ಪ್ರವೃತ್ತಿಯಾಗಿ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಪ್ರತಿಭೆ. ಇವರು ಈಗಾಗಲೇ ಉತ್ತತೀಯ ಹಾಡು, ಎದೆಯೊಳಗಿನ ಇಬ್ಬನಿ, ಬೆಂಗಾಡು ಎಂಬ ಮೂರು ಸಂಕಲನಗಳನ್ನು ಹೊರ ತಂದಿದ್ದು ಈ ಕಲ್ಲಳ್ಳಿ ಗಜಲ್ ನಾಲ್ಕನೇ ಸಂಕಲನವಾಗಿದೆ.  ಇವರ ಪ್ರತಿಭೆಯನ್ನು ಗುರುತಿಸಿ ಇವರಿಗೆ ಗೋವಿಂದ ದಾಸ್ ಪ್ರಶಸ್ತಿ, ಬೆಳಕು ಸಾಹಿತ್ಯ […]

ಮುನ್ನುಡಿ ಬರೆಯುವೆ

ಕವಿತೆ ಮುನ್ನುಡಿ ಬರೆಯುವೆ ನಾಗರಾಜ್ ಹರಪನಹಳ್ಳಿ ಸೂರ್ಯ ದಿಕ್ಕು ಬದಲಿಸುತ್ತಾನೆಂತೆನಾನು ? ಪ್ರಕೃತಿ ಮೈಮುರಿದು ಮಗ್ಗಲು ಬದಲಿಸುತ್ತಿದೆನಾನು?ನಾನೇನು ಮಾಡಲಿ ?? ಆಧುನಿಕ ಕೌಶಿಕ, ಮುಖವಾಡದ ರಾಮ,ಹೊಸ ನಮೂನಿ ಪಂಜರದೊಳಗೆ ನನ್ನ ಬಂಧಿಸಿರುವಾಗನಾನೇಗೆ ಪಥ ಬದಲಿಸಲಿ ? ಸೂರ್ಯನೇ ನಿನ್ನ ಬೆಳಕುನನಗೆ ಬೆಳಕಾಗಲಿಲ್ಲನದಿಯೇ ನಿನ್ನ ಸ್ವಾತಂತ್ರ್ಯ ನನ್ನದಾಗಲಿಲ್ಲ ಸುಳಿದು ಬೀಸುವ ಗಾಳಿಯೇನಿನ್ನ ಮೈ ನನ್ನ ದಾಗಲಿಲ್ಲನದಿಯೇ ನಿನ್ನ ಕಾಲುಗಳುನನ್ನವಾಗಲಿಲ್ಲ ಆಗ್ನಿಯೇ ನಿನ್ನ ನಾಲಿಗೆಯುನನ್ನದಾಗಲಿಲ್ಲಪ್ರಕೃತಿಯೇ ನಿನ್ನಂತೆ ನಾನುಬದುಕಿ ಬಾಳಲಾಗಲಿಲ್ಲ ಕೊನೆಯ ಪಕ್ಷ ಮರದಂತೆಮೌನಿಯಾಗಲು ಬಿಡಲಿಲ್ಲಚಲಿಸುವ ಚಲನೆಗೂಬಂದ ಬಂಧನ ಬದುಕೇ ಬಂಧನವಾಗಿರಲುನದಿ, […]

ಕಾಫಿಯಾನ ಗಜಲ್

ಕಾಫಿಯಾನ ಗಜಲ್ ಅಮೃತ ಎಂ ಡಿ ಅಪ್ಯಾಯಮಾನ ಒಲವ ಹಂಚುವ ಸರದಿ ನನ್ನದುಅಭೂತಪೂರ್ವ ಸಾನಿಧ್ಯ ನೀಡುವ ಗುಣ ನಿನ್ನದು ತುಸು ತುಂಟಾಟವ ಮರೆಮಾಚು ಲಜ್ಜೆ ಆವರಿಸುತ್ತದೆನಡುವಿನ ಒನಪಿನಲ್ಲಿ ಕಾಡಿಸುವುದ ಯಾರು ಕಲಿಸಿದ್ದು.? ಅಧರದಲ್ಲಿ ಏನು ಮಧು ಬಟ್ಟಲು ಅಡಗಿ ಕುಳಿತಿದ್ಯ..?ಚುಂಬಿಸುವ ಪರಿಗೆ ಮೊಗವೆಲ್ಲ ಕೆಂಪೇರಿ ನಲಿಯುವುದು ಶರಾಬಿನ ರಸವ ಹೀರಿದಂತೆ ಒಷ್ಠದಲ್ಲಿಯೂ ಇರುವುದ..?ಪಾಪ ಮೊಗ್ಗಿನಂತೆ ಮೃದು ಆಕೆ, ಸೊರಗಿ ಬಿಟ್ಟಾದು. ಅಮ್ಮು ಈ ಹೈದನ್ಯಾಕೋ ಬಿಡುಗಡೆ ನೀಡುವಂತಿಲ್ಲಮನವು ಅವನ ಆಲಿಂಗನದಲ್ಲಿ ನಕ್ಕು ಕುಣಿಯುವುದು.. ****************************************************

ಅಂಕಣ ಬರಹ ಅಗ್ಘವಣಿಯ ಹಂಪಯ್ಯನ ವಚನವೊಂದರ ಐತಿಹಾಸಿಕ ವಿವೇಚನೆ ಅಗ್ಘವಣಿಯ ಹಂಪಯ್ಯನ ವಚನವೊಂದರ ಐತಿಹಾಸಿಕ ವಿವೇಚನೆ ಹಂಸಪತಿ ಗರುಡಪತಿ ವೃಷಭಪತಿ ರ‍್ವಜೀವಾಧಿಪತಿ ದೇವರಾಯ ಮಹಾರಾಯನ ಅರಸುತನ ಹೊಸತು ಓಲಗಕ್ಕೆ ಬಾರ; ಸಿಂಹಾಸನದಲ್ಲಿ ಕುಳ್ಳಿರ; ಸ್ತ್ರೀಲಂಪಟನಾಗಿ ಅಂತಃಪುರ ಬಿಟ್ಟು ಹೊರವಡ; ಕಪ್ಪಕಾಣಿಕೆಯನೊಪ್ಪಿಸಿಕೊಂಬವರಿಲ್ಲ. ಗುರುವೆಂಬ ತಳವಾರನಾಜ್ಞೆ ಕೆಟ್ಟಿತ್ತು. ತರೆದ ಬಾಗಿಲ ಮುಚ್ಚುವರಿಲ್ಲ; ಮುಚ್ಚಿದ ಬಾಗಿಲ ತೆರೆವರಿಲ್ಲ; ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು ಭಕ್ತರೆಂಬುವವರಿನ್ನು ಬದುಕಲೆಬಾರದು ೧ ಅಗ್ಘವಣಿಯ ಹಂಪಯ್ಯ ವಚನ ಚಳುವಳಿಯ ಕೊನೆಯ ಹಂತದಲ್ಲಿ ಬಂದವನು. ವಿಜಯನಗರದ ದೇವರಾಯ (ಕ್ರಿ.ಶ. […]

ಆಡುಭಾಷೆಯ ಸವಿ ಗೋದಾನ.

ಪುಸ್ತಕ ಸಂಗಾತಿ ಆಡುಭಾಷೆಯ ಸವಿ     ಗೋದಾನ. ಕನ್ನಡ ನುಡಿ’  ಯನ್ನು   ಮೂರು ರೀತಿಯಿಂದ ಅಭಿವ್ಯಕ್ತ    ಗೊಳಿಸಬಹುದೆಂದು ಗೊತ್ತಿರುವ ಸಂಗತಿ. ಅದು ಶಿಷ್ಟ, ಜಾನಪದ ಮತ್ತು ಆಡು ಭಾಷೆ.ನಾನು,ನೀವೂ ಸೇರಿದಂತೆ ಬರಹಗಾರ,ಬರಹಗಾರ್ತಿಯರು, ಅರಿತೋ ಅರಿಯದೆಯೋ,ಗ್ರಾಂಥಿಕ ಭಾಷೆಗೆ ಮರುಳಾಗಿಬಿಟ್ಟಿದ್ದೇವೆ.ಜನಪದ ಭಾಷೆಗೆ ಹತ್ತಿರ ವಾಗಿದ್ದ,ಅಡುಕನ್ನಡವನ್ನು ಜೀವಂತವಾಗಿಟ್ಟವರು ನಮ್ಮ ಗ್ರಾಮೀಣ ಜನಾಂಗ.ಅವರಿಗೆ ಶಿಷ್ಟ ಜನಗಳು ಮಾಡುತ್ತಿರುವ ಅನ್ಯಾಯ ಇದು ಎಂದೇ ಹೇಳಬಹುದು ಎಂದು ನಾನು ಇದೇ ಅಂಕಣದಲ್ಲಿ ಈ ‌ಮೊದಲೇ ಹೇಳಿದಂತೆ ನೆನಪು. ನಮ್ಮ ಓದು ,ಕತೆ,ವಸ್ತು,ಪಾತ್ರ,ವಾಕ್ಯ ರಚನೆ ಗಳ ಜೊತೆಗೆ ಭಾಷಾ […]

Back To Top