ಗಝಲ್

ಗಝಲ್

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಅದ್ಯಾವ ಗಳಿಗೆಯಲಿ ನನ್ನಿಂದ ದೂರವಾದೆ ಗೆಳತಿಮನದೊಳು ಭಾವನೆಗಳ ಬಿತ್ತಿ ಮರೆಯಾದೆ ಗೆಳತಿ ಹೃದಯದಿ ಪ್ರೀತಿ ಬಸಿದು ಮೌನ ನೀಡಿದೆಯಲ್ಲಸಾವಿನ ಮನೆ ಅಂಗಳದಿ ಹೆಜ್ಜೆ ಮೂಡಿದೆ ಗೆಳತಿ ಮೊಳ ಹೂವು ತಂದವರು ಶವಕೆ ಅರ್ಪಿಸಿದ್ದಾರೆನನ್ನ ಹೆಣದ ಮೆರವಣಿಗೆಯುದ್ದಕೂ ಧ್ಯಾನಿಸಿದೆ ಗೆಳತಿ ಹಾದಿ ಬೀದಿಯಲಿ ನಮ್ಮಿಬ್ಬರದೆ ಮಾತು ಜನರ ಬಾಯಲ್ಲಿಧರೆಯ ನಾಚಿಸುವ ಜೋಡಿ ಎಂದು ಹೊಗಳಿದೆ ಗೆಳತಿ ಲೋಕ ನಿಂದೆ ಹೊಗಳಿಕೆಯ ಕೇಳದೆ ಸುಮ್ಮನಿದ್ದೆವುಒಳಗಾದ ಗಾಯ ನೋವು ಯಾರಿಗೂ ತಿಳಿಯದೆ ಗೆಳತಿ ಮರುಳ ಸಾಕಿನ್ನೂ ಲೋಕದ […]

ಗಜಲ್

ಗಝಲ್ ರಜಿಯಾ ಬಳಬಟ್ಟಿ ಬಂದ ದಾರಿಗೆ ಸುಂಕವಿಲ್ಲದಂತೆ ಹೋಗಲೇಬೇಕೀಗ.ಬಂದ ಹಿಸಾಬು ಮುಗಿಯದಿದ್ದರೂ ಮರಳಲೇಬೇಕೀಗ. ಅರಿತವರಾರೋ ತಿರುಗಿಬಿದ್ದವರಾರೋ ಬಂಧ ದೂರಾದಾಗ,ಎಲ್ಲ ಕೊಂಡಿಗಳ ಕಳಚಿ ಹೊರಳಲೇ ಬೇಕೀಗ. ನನ್ನ ನಿನ್ನ ಮಾತು ಅದೆಷ್ಟು ಬಾಕಿ ಉಳಿದರೇನೀಗ,ಗಾಡಿಯ ಪೆಟ್ರೋಲು ತೀರಿದಾಗ ನಡೆದು ಹೋಗಲೇಬೇಕೀಗ. ಅದೆಷ್ಟು ಕಸ ಮುಸುರೆಯ ತಾಣವಾದರೇನೀಗ,ಮೂಗು ಮುಚ್ಚಿ ಕೈ ಬಿಡಿಸಿ ಹೆಜ್ಜೆ ಹಾಕಲೇಬೇಕೀಗ. ನಿನ್ನ ಪ್ರೀತಿಯ ಹಂಬಲಿಸಿ ಅದೆಷ್ಟು ಮಿಡಿದರೇನೀಗ,ಅಗಲಿಕೆಯನು ಬೆನ್ನಿಗಂಟಿಸಿ ರಾಜಿ ಚಡಪಡಿಸುವ ದಿನಗಳೇ ಎಲ್ಲ ಈಗ ******************************************

ಅರ್ಪಣೆ

ಕವಿತೆ ಅರ್ಪಣೆ ದುರಿತ ಕಾಲದ ಅಬ್ಬರದನಡುವೆ , ಸದ್ದು ಮಾಡಿದೆಸಮೂಹ ಮಾಧ್ಯಮ. ಸಾಹಿತ್ಯದ ಹೊಸ ಮಜಲಿನಹುಡುಕಾಟ, ಮನೆ ಮಾಡಿದೆವೆಬಿನಾರ್ ನ ಜಪ. ಯೂಟ್ಯೂಬ್ ಫೇಸ್ ಬುಕ್ಲೈವ್ ಮಂತ್ರದ ತಾಕಲಾಟಕೆಬುದ್ಧಿಗೆ ಕುಮ್ಮಕ್ಕು ಕೊಟ್ಟುಗಂಟೆ ಬಾರಿಸಲೇಬೇಕು . ಬುಟ್ಟಿಯೊಳಗಿನ ಹಾವಿನಂತೆಫೀಡ್ ಬ್ಯಾಕ್ ಕನವರಿಕೆ .ಇ-ಪ್ರಮಾಣ ಪತ್ರದ ಪ್ರಸಾದಪಡೆದಾಗಲೇ ಕೃತಾರ್ಥ . ಆನ್ ಲೈನ್ ಗೋಷ್ಠಿಗಳಲ್ಲಿನಟರಾಜನ ಪುಟ ನರ್ತನ .ಪ್ರಶಂಸೆ ,ಅಭಿನಂದನಾ ಪತ್ರಸಹಿ ಮಾಡುವ ತವಕ . ದಿನಕ್ಕೊಂದು ವಸ್ತುವಿನ ಆಮಿಷವಾಟ್ಸಪ್ ಟೆಲಿಗ್ರಾಂಗಳಲ್ಲಿ.!!ಕವಿ ಬದುಕಿನ ಪ್ರಶ್ನೆ ?ಉಸಿರಾಗಬೇಕು ಸತ್ಯ ಸತ್ಯ . […]

ದೈವನಿಹನು

ಕವಿತೆ ದೈವನಿಹನು ದಯಾನಂದ ಕೆ ಚಂದ್ರಶೇಖರಯ್ಯ ಗುಡಿ ಗುಂಡಾರಗಳ ಕಟ್ಟಿನಾಮಫಲಕದೊಳು ವೈಭವಿಸಿದಿರೇನು?ಮಡಿಯ ಮಾಡಿ ಹೂವು ಹಣ್ಣು ಕಾಯಿಡಿದು ಗುಡಿಯಹೊಕ್ಕಿರೇನು ? ಕಲ್ಲಾಗಿ ಕುಳಿತ ಅವನಿಗೆಕ್ಷೀರಾಭಿಷೇಕವ ಮಾಡಿರೇನು?ನಿರ್ವಿಕಾರ ಪರಮಶಿವನಿಗೆಮೃಷ್ಟಾನ್ನವ ಉಣ ಬಡಿಸಿದರೇನು? ಜಡನೀವನು, ಹಸಿವಿರದವನುಉಸಿರಿರದವನು ಹೆಸರರಿರದವನು,ನಿರ್ವೀಕಾರ ಅಗೋಚರನಿವನುಅವರವರ ಭಾವದಲಿ ನೆಲೆಸಿಹನು, ಎಮ್ಮ ಶಿವ ಹೃದಯಶಿವಆತ್ಮಸಾಕ್ಷಾತ್ಕರದೊಳು ನೆಲಸಿಹನು, ಕರುಣಿಯಲಿ ತ್ಯಾಗದಲಿ,ಮನುಷತ್ವದಲಿ ದೈವನಿಹನು *******************

ಅವಳೆಂದರೆ?

ಕವಿತೆ ಅವಳೆಂದರೆ? ಪವಿತ್ರ.ಎಂ. ಅವಳೆಂದರೆ ಹಾಗೆಯಮ್ಮಅವಳಿರುವೆಂದರೆ ನಲಿವುಅವಳಿರುವೆಂದರೆ ಮರುಳುಅವಳಿರುವೆಡೆ ನಗೆ ಹೊನಲುಅವಳಿಂದಲೆ ಜಗವುಅವಳಿರದಿರೆ ಅಳಿವು ಅವಳು ಅಬಲೆ ಎಂದೆ ನೀನುಮೇಲರಗಿ ಒಸಕಿ ಹಿಸುಕಿಸಾವಮನೆಗೆ ಆಹುತಿ ಆಗಿಸಿನೋವ ನೋಡುತಾ ಹೇಗೆನಿಂತೆ?ಅದೇಗೆ ನಿಂತೆಮರುಕವಿರದೆ ಮೃಗವಾದೆಯ ಅವಳೊಡಲ ಆಸರೆಯ ಮರೆತೆಯಾಮರುಗಟ್ಟಿತೆ ಹೃದಯಮನವಿಹುದು ಮನುಜನಿಗೆಅದಕಾಗೆ ಅವ ಮನುಜಎಲ್ಲ ಮರೆತೆಯಲ್ಲ ಇಂದುಪಿಶಾಚಿಗೂ ಮಿಗಿಲಾದ ರಕ್ಕಸ ಕರುಳುಹಿಂಡೊ ಕೃತ್ಯವೆಸಗಿಕಾರ್ಕೋಟ ವಿಷವ ಕಾರಿಪುರುಷ ಪೌರುಷವೆಂದು ತೋರಿಅವಳೆದೆಯ ಬಗೆದೆಯಲ್ಲಮೃಗಕು ಕೀಳು ಮರುಕವಿರದ ಮಾನವಕಾಮಾಂಧ ದಾನವ ರುದಿರ ಹರಿವಾಗ ಕರಗಲಿಲ್ಲಅವಳಾರ್ತ ಕೂಗು ಕೇಳಲಿಲ್ಲಅಂದೂ ಇತ್ತು ಯುದ್ಧದಮಲುಇಂದಿಗೂ ಅದರದೇ ಘಾಟುನಾಗರೀಕ ನಗೆಪಾಟಲುಬಗೆ […]

ಮುಗುಳು

ಕವಿತೆ ಮುಗುಳು ಎಸ್ ನಾಗಶ್ರೀ ಏನೂ ಹೇಳದೆಯೂತಿಳಿದು ಹೋಗುವುದುನಿನಗೆ ಮಾತ್ರವೇ ಹೇಳುಅರೆಬರೆ ಉಳಿದ ಭಾವಗಳಚಿಲ್ಲರೆ ಮೂಟೆಕಟ್ಟಿಸಂತೆಯೊಳಗೆ ಸೋರಿಹೋಗುವಮುಸ್ಸಂಜೆಯೊಂದರಲ್ಲಿಮೆಲ್ಲ ಮೂಡುವ ಮುಗುಳು ಆಗಸದಲಿ ಬಿದಿಗೆ ಚಂದ್ರಎಂದೋ ಮರೆತ ಹಾಡೊಂದುಪಲ್ಲವಿಸುವುದು ಮಂದ್ರದಲಿತೀರದ ಉಸುಕಲ್ಲಿಮರಳುಗೂಡಿನ ಹೊಸಕನಸುಕೊಚ್ಚಿಹೋಗುವ ಹಲವಲ್ಲಿಶೋಕವೂ ಸೇರಿದ್ದು ನೋಡು ಮತ್ತೆ ಮತ್ತೆ ನಗುವೊಂದುಎದೆಯೊಳಗೆ ಹುಟ್ಟುವುದುಬೇಲಿಹೂವಿನ ರಂಗುಬಂಧನವ ಮರೆಸುವುದುಸಣ್ಣಗಿನ ಮಿಡುಕು ಧೈರ್ಯದಲಿಅಡಗಿಹೊಸದೊಂದು ಆಸೆಪ್ರತಿದಿನದ ಕಡೆಗೆಬದುಕಿದ್ದರೆ ಹೀಗೆ ಸಾಕುಮೌನಕೂ ನಗೆಯ ಬೆಳಕು ***************

ಅಂಕಣ ಬರಹ ವೃದ್ಧಾಶ್ರಮ ಅಥಶ್ರೀ ಒಮ್ಮೆ ಕನ್ನಡದ ಸುದ್ದಿಮಾಧ್ಯಮಗಳು, ಹಿರಿಯ ರಂಗನಟರೊಬ್ಬರ ಹೆಂಡತಿ ವೃದ್ಧಾಶ್ರಮದಲ್ಲಿದ್ದಾರೆ ಎನ್ನುವುದನ್ನು ದೊಡ್ಡದಾಗಿ ವರದಿ ಮಾಡಿದವು. ಕೆಲವು ವರದಿಗಳಲ್ಲಿ `ಇದೊಂದು ಶೋಚನೀಯ ಸಂಗತಿ’ ಎಂಬ ದನಿಯಿರಲಿಲ್ಲ. ಇದಕ್ಕೆ ತಕ್ಕಂತೆ ಆ ಮಹಿಳೆ ಕೂಡ `ಕುಟುಂಬದವರು ಬೀದಿಪಾಲು ಮಾಡಿದರು’ ಎಂದೂ ಹೇಳಲಿಲ್ಲ. ವೃದ್ಧಾಶ್ರಮಕ್ಕೆ ಬರಲು ಕಾರಣವಾದ ಸನ್ನಿವೇಶವನ್ನು ಯಾರಮೇಲೂ ಆರೋಪ ಮಾಡದಂತೆ ಘನತೆಯಿಂದ ವಿವರಿಸಿದರು. ಆದರೂ ವ್ಯಕ್ತಿಗಳ ಖಾಸಗಿ ಬದುಕಿನ ವಿಷಯವನ್ನು ಮಾಧ್ಯಮಗಳು ನೈತಿಕ ರಕ್ಷಕರಂತೆ ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿ ಮಾಡುವ ಚಾಳಿ ಹೆಚ್ಚುತ್ತಿದೆ. […]

ಸಹನಾರವರ ನ್ಯಾನೊ ಕಥೆಗಳು

ಸಹನಾರವರ ನ್ಯಾನೊ ಕಥೆಗಳು ಸಹನಾ ಪ್ರಸಾದ್ ಆಡಲಾಗದ ಮಾತು “ಅಲ್ಲಕಣೆ, ಏನಾಗಿದೆ ನಿನಗೆ? ಮಾತಿಲ್ಲ, ಮೆಸೇಜು ಇಲ್ಲ. ಎಲ್ಲಿ ಅಡಗಿದ್ಯಾ?”ಅವಳಿಂದ ಬಂದ ೫ನೆ ಸಂದೇಶಕ್ಕೆ ಇಷ್ಟವಿಲ್ಲದೆ ಇದ್ರೂಪ್ರತಿಕ್ರಿಯಿಸಿದೆ. “ಏನಿಲ್ಲ, ಸ್ವಲ್ಪ ಹುಷಾರಿಲ್ಲ, ಸ್ವಲ್ಪ ದಿನ ಬಿಟ್ಟುಸಿಗ್ತೀನಿ” ಟೈಪಿಸಿದವಳಿಗೆ “ಹೋದ ತಿಂಗಳು ನೀ ಮಾಡಿದ ಮಿತ್ರದ್ರೋಹ ಮನಸ್ಸನ್ನು ಕೊರೆಯುತ್ತ ಇದೆ. ಅದರ ಹಿಂಸೆಯಿಂದ ಇನ್ನೂ ಹೊರಬಂದಿಲ್ಲ. ಯಾಕೆ ಹೀಗೆ ಮಾಡಿದೆ? ಮೊದಲು ಹೇಳು!” ಎನ್ನುವ ಮಾತುಗಳು ಮನದಲ್ಲೇ ಉಳಿದವು. ಸೊಪ್ಪಿನವಳು “ಅವಳು ಯಾವಾಗ್ಲೂ ಜಾಸ್ತಿನೇ ಹೇಳೋದು. ನಿನ್ನ ಬುದ್ದಿ […]

ಇರುಳ ಹೆರಳು

ಪುಸ್ತಕ ಪರಿಚಯ ಮನ ಸೆಳೆವ ಇರುಳ ಹೆರಳು [11:15 am, 11/10/2020] YAKOLLY: ತಮ್ಮ‌ಮೊದಲ ಹನಿಗವನ ಸಂಕಲನ ಪಿರುತಿ ಹನಿಗಳು ಸಂಕಲನಕ್ಕೆ  ಅತ್ಯತ್ತಮ ಸಂಕಲನ ಪ್ರಶಸ್ತಿ ಪಡೆದ ಪ್ರತಿಭಾವಂತ ಕವಿ ನೀ ಶ್ರೀಶೈಲ ಅವರು ಕವಿಯಾಗಿ ಮಾತ್ರವಲ್ಲ,ಒಳ್ಳೆಯ ಗೆಳೆಯನಾಗಿ ಹೃದಯ ಗೆದ್ದವರು.ಅವರ ಭಾವದ ಪಲಕುಗಳನ್ನು ದಿನವೂ ಮುಖ ಪುಸ್ತಕದಲ್ಲಿ ಓದಿ ಮರುಳಾಗುತ್ತಿರುವವನು ನಾನು.ಹನಿಗವನ ಲೋಕದಲ್ಲಿ ತುಂಬ ಸುಂದರವಾದ ರಚನೆಗಳನ್ನೇ ಕೊಟ್ಟಿರುವ ಶ್ರೀಶೈಲ ಅವರ ಕವಿತೆಯ ತುಂಬ ತುಂಬಿದ ಪ್ರೀತಿಯ ಬೆಳಕನ್ನು ಬೊಗಸೆ ತುಂಬಿ ಹಿಡಿಯಲೂ ಆಗದೆ ನನ್ನ […]

ನಿರಾಕರಣೆ

ಕವಿತೆ ನಿರಾಕರಣೆ ಕಾವ್ಯ ಎಸ್. ನನ್ನ ಮರೆತ ಹೊನ್ನ ಮೆತ್ತ ಹೊತ್ತುನನ್ನ ತೊರೆದು ಯೋಚಿಸಿದಆ ಘಳಿಗೆಗಳ ಚಲನಗಳುಕಳಚುತ್ತಿವೆ, ಇಂದು-ನಾಳೆಗಳ ಅಂಗಿಯಯಾರ ಕತ್ತಲು ಯಾರ ಒಡಲ್ಲಲ್ಲಿಜಿನುಗಿ ಹಾವಾಗುತ್ತಿರುವುದೋಕಡಲ ತುಂಬೆಲ್ಲ ಬರುವ ನಿನ್ನ ನೆನಪಿನಆರಿದ ಮಲ್ಲಿಗೆಯ ಕೆಂಡಗಳುಎಷ್ಟು ಹೊತ್ತು ಸುಡಬಲ್ಲವು ನನ್ನಕರಕಲಾಗಿಸಲು ಅಥವಾ ಕಪ್ಪು ಬಣ್ಣ ಹಚ್ಚಲುಬೇಕ ಸಮಯದ ಎಲ್ಲೆಗಳುಬೂದಿಯ ಮಣ್ಣಲ್ಲಿ ಒಲೆಯ ತೂತುಗಳಾಗಿಹರಿದು ಹೋಗಲಿಎಷ್ಟೆಂದು ಉರಿಯ ಕಾವಿಗೆ ತಲೆ, ಕಾಲು ಕೊಡಲಿಆತ್ಮಶಕ್ತಿಯ ಅಂತರಾಗದ ಹಾಹಾಕಾರ ಮುಗಿಲೆದ್ದಿದೆಒಡಲಿನ ಭಾರ ಹೆಚ್ಚಿ ನಜ್ಜಾಗುತ್ತಿದೆಆಳಗರ್ಭದಲ್ಲಿ ಅಡಗಿ ನೆರೆ ಉಕ್ಕದಿರಲಿಅಲ್ಲೇ ಬೆನ್ನು ಮೇಲಾಗಿಸಿ, ಸಮುದ್ರರಾಜನತೋಳಲ್ಲಿ […]

Back To Top