ನಿನ್ನ ಮೋಹಕೆ
ಕವಿತೆ ನಿನ್ನ ಮೋಹಕೆ ರೇಷ್ಮಾ ಕಂದಕೂರು ನಿನ್ನ ಮೋಹದ ಅರವಳಿಕೆಮೈಮನವ ಮರೆತ ಹಾಗಿದೆಭಾವೋನ್ಮಾದದ ಬೆಸುಗೆಗೆಬಾಚಿ ತಬ್ಬುವ ಇಳೆಯ ಪ್ರೀತಿಯಂತೆ ಸಾಚಾತನಕೆ ಪರಚಿದ ಗಾಯಮಾಸದ ಕಲೆಯ ಸ್ಥಿತಿಬೆಡಗು ಬಿನ್ನಾಣದ ರಿಂಗಣಲಗ್ಗೆ ಹಾಕುವ ನೆರೆಯ ಹಾವಳಿ ಕಣ್ಣ ಹೊಂಬೆಳಕಿನ ಕಿಡಿಹೊತ್ತಿಸಿದೆ ಅನುರಾಗದ ದೀಪ್ತಿಮೌನಕೂ ಕಸಿವಿಸಿಯಾದಂತೆಆಸರೆಯ ಒಡಲಲಿ ತವಕ ಅನುದಿನವು ಬೇಯುತಿದೆಸಹಚರಕೆ ಹಪಹಪಿಸಿದೆ ಕಂಗೆಟ್ಟುಇರುಳ ಬಾನ ತುಂಬಾ ನಗೆಯ ನಕ್ಷತ್ರಚೆಲುವಿನ ಚೈತ್ರಕೂ ಮರುಹುಟ್ಟು ವಿಸ್ಮಿತ ಪ್ರತಿಯ ಸ್ವರೂಪಸ್ವಪ್ನದಿ ಕಾಡಿದೆ ಬೆಂಬಿಡದೆಜ್ವಾಲಾಮುಖಿಯ ಆವೇಗದ ಸಂಚಾರಬೆರಗಿನ ಜಾಡು ಅನವರತ. ****************
ಗಝಲ್
ಗಝಲ್ ಅಮೃತ ಎಂ ಡಿ ನೋವಲ್ಲೂ ನಲಿವಿನ ಟಾನಿಕಿನ ಗುಟುಕುಂಟು ಗಾಲಿಬ್ಬದುಕೆಲ್ಲವು ಹಗದ ಮೇಲೆ ನಡೆದ ಕುರುಹುಂಟು ಗಾಲಿಬ್ ಹೇಳತಿರದ ಬೇಗೆಯೋದು ಸಜೀವ ದಹನ ಮಾಡಿದೆನಗುವಿನ ಮುಖವಾಡ ಧರಿಸಿ ಜೀವಿಸಿದ್ದುಂಟು ಗಾಲಿಬ್ ನನ್ನೊಳಗಿನ ಸಾಮರ್ಥ್ಯವನ್ನೆಲ್ಲಾ ಈ ಪ್ರೀತಿಯು ಕೊಂದಿದೆಗೈರುಹಾಜರಿಯಲ್ಲೂ ನಿರ್ಲಿಪ್ತ ಹಾಜರಿಯುಂಟು ಗಾಲಿಬ್ ನನ್ನರಸ ಮಧುಶಾಲೆಯಲ್ಲೇ ಜೀವನಪೂರ್ತಿ ಕಳೆದುಬಿಟ್ಟಬಾಳ ನೊಗಕ್ಕೆ ಹೆಗಲ್ಕೊಟ್ಟು ಹೈರಾಣಾಗಿದ್ದುಂಟು ಗಾಲಿಬ್ ಅಮ್ಮುವಿನ ನಸೀಬು ಬ್ರಹ್ಮಂಗು ಕಾರುಣ್ಯ ಪರಿಚಯಿಸಿದೆಅನುಗಾಲದ ಹೋರಾಟವು ಚಿರನಿದ್ರೆಯಲ್ಲುಂಟು ಗಾಲಿಬ್ *****************************************
“ಶಾವಾ”ತ್ಮ ಪದಗಳು
ಕವಿತೆ “ಶಾವಾ”ತ್ಮ ಪದಗ ಬಸಿರಿನುಸಿರು ಶಾಂತಿ ವಾಸು ಫಲವತ್ತಾದ ಮುಷ್ಟಿ ಮಣ್ಣು ಬೇಕೆಂದೆ….ಧಾರಿಣಿ, ಹುಟ್ಟಿಸಿ ನೋಡೆಂದಳು…. ನಿರ್ಮಲಾತಿನಿರ್ಮಲ ಜಲ ನೀಡೆಂದೆ….ಧರಿತ್ರಿ, ಹುಟ್ಟಿಸಿ ನೋಡೆಂದಳು…. ತಣಿಸುವ ಮಳೆ ಕಾಣದಾಗಿದೆಯೆಂದೆ…ಇಳೆ, ಹುಟ್ಟಿಸಲಾರೆಯಾ?? ಕೇಳಿದಳು…. ಮಳೆಯ ಎಳೆತರುವ ಕಾನನ ಕೊಚ್ಚಿಹೋಗಿದೆಯೆಂದೆ…ಭೂಮಿಜೆ, ಹುಟ್ಟಿಸಿ ಸಾಕಾಯಿತೇ ಪ್ರಶ್ನಿಸಿದಳು…. ಪ್ರಾಣಿ ಪಕ್ಷಿಗಳು, ಒಂದೊಂದೇ ಅಳಿಯುತ್ತಿವೆಯೆಂದೆ….ಅವನಿ, ಹುಟ್ಟಿಸು ನೋಡೋಣ ಸವಾಲೆಸೆದಳು…. ಮುಂದಿನ ಪರಂಪರೆಗೇನು ಉತ್ತರಿಸಲಿ??? ಎಂದೆ…ಭೂಮಿತಾಯಿ, ಸಕಲವ ಹುಟ್ಟಿಸುವ ಮೊದಲು, ಉಸಿರ “ಪ್ರಕೃತಿ”ಯಲ್ಲಡಗಿಸುವ ಬಸುರಾಗೆಂದಳು *****************************************************************
ಅಂಕಣ ಬರಹ ಸೀಗಲ್ ಸೀಗಲ್ಮೂಲ : ಆಂಟನ್ ಚೆಕಾಫ್ ಕನ್ನಡಕ್ಕೆ : ಹೇಮಾ ಪಟ್ಟಣಶೆಟ್ಟಿಪ್ರ : ಅನನ್ಯ ಪ್ರಕಾಶನಪ್ರ.ವರ್ಷ :೨೦೦೭ಬೆಲೆ :ರೂ.೭೦ಪುಟಗಳು : ೧೦೮ ಎರಡು ತಲೆಮಾರುಗಳ ನಡುವಣ ಸಂಘರ್ಷವೇ ಈ ನಾಟಕದ ಮುಖ್ಯ ಕಥಾ ವಸ್ತು. ಇಬ್ಬರು ನಟಿಯರು ಮತ್ತು ಇಬ್ಬರು ಲೇಖಕರುಗಳ ನಡುವಣ ಸಂಬಂಧದ ಸ್ವರೂಪದ ಶೋಧನೆಯೇ ಇಲ್ಲಿನ ಮುಖ್ಯ ಕಾಳಜಿಯಾಗಿದೆ. ಹಿರಿಯ ನಟಿ ಅರ್ಕಾದಿನಾ ಮತ್ತು ಹಿರಿಯ ಲೇಖಕ ತ್ರಿಗೊರಿನ್ ಆಗಲೇ ಸಮಾಜದಲ್ಲಿ ತಮ್ಮ ನೆಲೆಯನ್ನು ರೂಪಿಸಿಕೊಂಡವರು. ಯುವಕ ತ್ರೆಪ್ಲೆಫ್ ಮತ್ತು ಎಳೆಯ […]
ನಿನ್ನಿರುವು..
ಕವಿತೆ ನಿನ್ನಿರುವು.. ವೀಣಾ ಪಿ. ನೀನಂದುನನ್ನಮುಡಿಗಿಟ್ಟುಕೊಳಲೆಂದುನಿನ್ನೊಲವಿನಉದ್ಯಾನದಿಂದೆನ್ನಕೈಗಿತ್ತಗುಲಾಬಿಯನುನಾನುಎದೆಗೊತ್ತಿಹೊತ್ತಿಗೆಯಲಿಅವಿತಿಟ್ಟುದಶ ವಸಂತಗಳುರುಳಿನಮ್ಮಿಬ್ಬರ ನಡುವೆತಲುಪಲಾಗದಭುವಿ-ಬಾನಿನಂತರವುಹರವಿಯೂಮಾಸಿಲ್ಲಅದೇಸಮ್ಮೋಹನದೊಲವುಸವಿಪ್ರೇಮ ಪ್ರೇರಣೆಯಕಡುಕೆಂಪಿನಿರುವುಅರಳಲೆಳಸಿಯೂಅರಳದುಳಿದಮೊಗ್ಗಿನಲಿಅಂದಿನಂತೆಯೇ ಇಂದೂ..ನನ್ನ ನವಿರುಭಾವದಾಂತರ್ಯದಲಿನಿನ್ನಿರುವಿನಂತೆ..!! *******************************
ಝೆನ್ ಕವಿತೆಗಳು
ಕವಿತೆ ಝೆನ್ ಕವಿತೆಗಳು ಹುಳಿಯಾರ್ ಷಬ್ಬೀರ್ 01 ನನ್ನದು..ತಾತ್ಸಾರದ ಮೌನವಲ್ಲಏಕಾಕಿತನದ ಮೌನವಲ್ಲಉಡಾಫೆಯ ಮೌನವಲ್ಲನಿರರ್ಥಕ ಮೌನವಲ್ಲಸಂಚಿನ ಮೌನವಲ್ಲಶ್ರದ್ಧೆಯ ಮೌನವಲ್ಲಧಿಕ್ಕರಿಸುವ ಮೌನವಲ್ಲಬುದ್ಧನ ಮುಖದ ಮೇಲಿನಪ್ರಶಾಂತವಾದ ಮೌನದ ಮೌನ. 02 ಶುದ್ಧೋಧನತಂದೆಯಾದರೂಬುದ್ಧನ ಕಾಲಿಗೆರಗಿಶುದ್ಧನಾದ ಬದ್ಧನಾದ. 03 ತುಂಬಿದ ಕೊಳದಲ್ಲಿನಅವನ ಪ್ರತಿಬಿಂಬಅಣಕಿಸುತಿತ್ತುನಿನ್ನಾತ್ಮ…?ಸತ್ತಿದೆ ಎಂದುಕೆಣಕುತಿತ್ತು. 04 ಬುದ್ಧ ನಿನ್ನನಿದ್ದೆಯ ಕದ್ದಿದ್ದುವೈರಾಗ್ಯದಾಸೆಯಮೆಟ್ಟಿಲು. 05 ಬಿಕ್ಕುಗಳೇಚರಿಗೆಗೆ ಹೋಗುವುದುಹೊಟ್ಟೆ ತುಂಬಿಸಿಕೊಳ್ಳುವುದಕ್ಕಲ್ಲಬದುಕಿನ ಅನಾವರಣಕ್ಕೆ ಅರ್ಥಅರ್ಥೈಯಿಸಲು. **************************
ಕೇಳಬೇಕಿತ್ತು..!
ಕವಿತೆ ಕೇಳಬೇಕಿತ್ತು..! ಮುತ್ತು ಬಳ್ಳಾ ಕಮತಪುರ ಸಾವಿನ ಮುನ್ನ ನನ್ನಹೇಳಿಕೆ ದಾಖಲಿಸಿಬೇಕಿತ್ತು …..ತಿರುವು ಮುರು ಮಾಡಿನನ್ನ ಸಾವನ್ನೇ ದಾಖಲಿಸಿದರು ..!ಅವರ ಪೆನ್ನಿನ ನಿಬ್ಬು ಮುರಿದಿತ್ತು… ಕೇಳಬೇಕಿತ್ತುಆಗ ನನ್ನ ಮಾತುಗಳುತೊದಲು ನುಡಿಯಾಗಿ ಕಂಡಿತ್ತುಏನು ಹೇಳಬೇಕಿತ್ತು …?ಅಲ್ಲಿ ಮೊದಲೇ ಹೊಂದಾಣಿಕೆಮಾಡಿಕೊಂಡು ಸಾವಿನೊಂದಿಗೆಅಂತ್ಯಗೊಂಡಿತು….. ಸತ್ತವಳು ನಾನಲ್ಲ ,ಸತ್ತವರು ವ್ಯವಸ್ಥೆಯಲ್ಲಿಇದ್ದು ಮಾತನಾಡದ ನೀವುಗಳುಅಸಹಾಯಕಳ ಮೊರೆ ಆಲಿಸಲುಸರ್ವಸಂಗ ಪರಿತ್ಯಾಗಿಗೂ ಮನಸಿಲ್ಲ…ಇನ್ನೂ ಎಲ್ಲಿಯ ರಾಮರಾಜ್ಯ….. ಸತ್ತ ಮೇಲೆ ಆದರೂಅರಿಸಿಣವಾದರೂ ಹಚ್ಚಿದಫನ್ ಮಾಡಬೇಕಿತ್ತುಹಂಚಿ ತಿಂದ ನನ್ನ ದೇಹಸಾಕ್ಷಿ ನೆಪದಲಿ ಮುಟ್ಟಿದಕೈಗಳು ನಂಜಾಗಬಾರದುಅಲ್ಲವೇ….! ಮೊಂಬತ್ತಿ ಹಚ್ಚಬೇಡಿಕರಗಿದಂತೆ ..!ನಾಳೆ ದಿನ […]
ಖುಷಿ ನಮ್ಮಲ್ಲೇ!!!
ಲೇಖನ ಖುಷಿ ನಮ್ಮಲ್ಲೇ!!! ಮಾಲಾ ಅಕ್ಕಿಶೆಟ್ಟಿ ಕೈಯಲ್ಲಿ10 ರ ನೋಟು ಹಿಡಿದುಕೊಂಡು ಬಡ ಹುಡುಗ ರೋಡ್ ಮೇಲೆ ಇರುವ ಭಜಿ ಅಂಗಡಿಗೆ ಬಂದಿದ್ದ. ಆಸೆ ಕಂಗಳಿಂದ ಮೂರು ತರಹದ ಭಜಿ, ಅಂದರೆ ಕಾಂದಾ, ಮಿರ್ಚಿ ಮತ್ತು ಮೈಸೂರ ಭಜಿಯನ್ನು ಒಂದೇ ಸಮನೇ ನೋಡಿದ. ಆ ಅಂಗಡಿಯಲ್ಲಿ 4 ಭಜಿಗಳ ಪ್ಲೇಟ್ಗೆ 20 ರೂಪಾಯಿ.ಒಂದು ಭಜಿಯನ್ನು ಕೊಡುವ ಸೌಲಭ್ಯವಿರುವದರಿಂದ 5ರೂಪಾಯಿಗೆ ಯಾವುದಾದರು ಭಜಿ ತಿನ್ನಬಹುದು.ಆತ ಡಿಸೈಡ್ ಮಾಡಿ 5 ರೂ ಕೊಟ್ಟು ಮಿರ್ಚಿ ಭಜಿಯನ್ನು ಸವಿದ.ಬಸಿಯಾಕಾರದಲ್ಲಿ ಕಣ್ಣು ತೆರೆದು, […]
ನನ್ನಪ್ಪ
ಕವಿತೆ ನನ್ನಪ್ಪ ಕಾವ್ಯ ಎಸ್. ಹಂಗಿಲ್ಲದ ಅಪ್ಪನ ಗುಡಿಸಲಿನ ಅರಮನೆಯಲ್ಲಿನನ್ನಪ್ಪ ಮಲಗಿ ಏದುಸಿರು ಬಿಡುತ್ತಿದ್ದಮಂಚವಿಂದು ಒಂಟಿಕಾಲ ಕೊಕ್ಕರೆಯಾಗಿದೆಅಪ್ಪನ ಉಸಿರಂತೆ ಇಂದು ಸೊಳ್ಳೆಗಳು ಸುಯ್ಗುಡುತ್ತಿವೆಮೂಗಿಗೆ ಆಗಾಗ್ಗೆ ಬಡಿಯುತ್ತಿದ್ದ ಮೋಟು ಬೀಡಿಯಘಾಟು ಹೊಗೆಯ ರೂಪ ಕಳಚಿ, ಹೊಸಬಟ್ಟೆ ಧರಿಸಿಊರು ಸುತ್ತಲು ಹೋಗಿದೆ.ಚರ್ಮ ಸವೆದು ಸವಕಳಿಯಾಗಿ, ಜಗತ್ತಿಗೆ ಅನ್ನನೀಡುವನಾಡ ಬೆನ್ನೆಲುಬಿನ, ಅಸ್ಥಿಪಂಜರದ ಸಾಹುಕಾರ ನನ್ನಪ್ಪ.ಕೆನ್ನೀರ ಹನಿಗಳನ್ನು ಬೆವರಾಗಿಸಿ ಬಸಿದುಜಳಕ ಮಾಡಿ ನುಣುಪಾಗಿ ನರಳುತ್ತಿದ್ದ ನನ್ನಪ್ಪ.ಹೊಟ್ಟೆಯಲ್ಲಿ ಗಾಳಿಚೀಲ ಹೊಕ್ಕಿಸಿ ವಿಚಾರ -ಪ್ರಚಾರಗಳಬಾಗಿಲು ಕಿಟಕಿಗಳ ಕದ ಮುಚ್ಚಿ ಬಿಟ್ಟಿದ್ದ ನನ್ನಪ್ಪ.ತನ್ನ ಜಿಡ್ಡಿಲ್ಲದ ರಕ್ತದಿಂದ ಗುಳ್ಳೆನರಿಗಳನ್ನು […]
ನಾವು ಕನ್ನಡಿಗರು’ – ಜಾಗತಿಕ ಸರಪಳಿಯ ಒಂದು ಕೊಂಡಿ
ಲೇಖನ ನಾವು ಕನ್ನಡಿಗರು’ ಜಾಗತಿಕ ಸರಪಳಿಯ ಒಂದು ಕೊಂಡಿ ಗಣೇಶ ಭಟ್ಟ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ಉದ್ದೇಶದಿಂದ ಭಾಷೆ , ಸಂಸ್ಕೃತಿ, ಪರಂಪರೆಯ ಭಾವಧಾರೆಯನ್ನು ಬಳಸಿಕೊಂಡು ಒಗ್ಗಟ್ಟು ಮೂಡಿಸುವ ಪ್ರಯತ್ನವನ್ನು ಪ್ರಾದೇಶಿಕತೆಯನ್ನು ಪ್ರೋತ್ಸಾಹಿಸಿ, ದೇಶವನ್ನು ದುರ್ಬಲಗೊಳಿಸುವ ಕಾರ್ಯವೆಂದು ಕೆಲವರು ಅಕ್ಷೇಪಿಸುತ್ತಾರೆ. ಹಲವು ವಿಧದ ಹೂವುಗಳನ್ನು ಬಳಸಿ ಹಾರ ತಯಾರಿಸಿದಾಗ ಅದರ ಸೌಂದರ್ಯ ಹಾಳಾಗುತ್ತದೆಂದು ಗೊಣಗುವುದು ಸಮಂಜಸವೆನಿಸಲಾರದು. ಪ್ರತಿಯೊಂದು ಹೂವಿಗೂ ಅದರದ್ದೇ ಆದ ಸ್ವರೂಪ, ವೈಶಿಷ್ಟತೆ, ಸೌಂದರ್ಯ ಇದ್ದರೂ ಎಲ್ಲಾ ವಿಧದ ಹೂಗಳನ್ನು ಸಮರ್ಪಕವಾಗಿ ಪೋಣಿಸಿ ಹಾರವನ್ನು ಸುಂದರವಾಗಿಸಲು […]