ಕವಿತೆ
ಝೆನ್ ಕವಿತೆಗಳು
ಹುಳಿಯಾರ್ ಷಬ್ಬೀರ್
01
ನನ್ನದು..
ತಾತ್ಸಾರದ ಮೌನವಲ್ಲ
ಏಕಾಕಿತನದ ಮೌನವಲ್ಲ
ಉಡಾಫೆಯ ಮೌನವಲ್ಲ
ನಿರರ್ಥಕ ಮೌನವಲ್ಲ
ಸಂಚಿನ ಮೌನವಲ್ಲ
ಶ್ರದ್ಧೆಯ ಮೌನವಲ್ಲ
ಧಿಕ್ಕರಿಸುವ ಮೌನವಲ್ಲ
ಬುದ್ಧನ ಮುಖದ ಮೇಲಿನ
ಪ್ರಶಾಂತವಾದ ಮೌನದ ಮೌನ.
02
ಶುದ್ಧೋಧನ
ತಂದೆಯಾದರೂ
ಬುದ್ಧನ ಕಾಲಿಗೆರಗಿ
ಶುದ್ಧನಾದ ಬದ್ಧನಾದ.
03
ತುಂಬಿದ ಕೊಳದಲ್ಲಿನ
ಅವನ ಪ್ರತಿಬಿಂಬ
ಅಣಕಿಸುತಿತ್ತು
ನಿನ್ನಾತ್ಮ…?
ಸತ್ತಿದೆ ಎಂದು
ಕೆಣಕುತಿತ್ತು.
04
ಬುದ್ಧ ನಿನ್ನ
ನಿದ್ದೆಯ ಕದ್ದಿದ್ದು
ವೈರಾಗ್ಯದಾಸೆಯ
ಮೆಟ್ಟಿಲು.
05
ಬಿಕ್ಕುಗಳೇ
ಚರಿಗೆಗೆ ಹೋಗುವುದು
ಹೊಟ್ಟೆ ತುಂಬಿಸಿಕೊಳ್ಳುವುದಕ್ಕಲ್ಲ
ಬದುಕಿನ ಅನಾವರಣಕ್ಕೆ ಅರ್ಥ
ಅರ್ಥೈಯಿಸಲು.
**************************
ಬ್ಯುಟಿಫುಲ್ . ೧ ನೇ ಯದು ತುಂಬಾ ಅರ್ಥಪೂರ್ಣ