ಕವಿತೆ
ಕೇಳಬೇಕಿತ್ತು..!
ಮುತ್ತು ಬಳ್ಳಾ ಕಮತಪುರ
ಸಾವಿನ ಮುನ್ನ ನನ್ನ
ಹೇಳಿಕೆ ದಾಖಲಿಸಿಬೇಕಿತ್ತು …..
ತಿರುವು ಮುರು ಮಾಡಿ
ನನ್ನ ಸಾವನ್ನೇ ದಾಖಲಿಸಿದರು ..!
ಅವರ ಪೆನ್ನಿನ ನಿಬ್ಬು ಮುರಿದಿತ್ತು…
ಕೇಳಬೇಕಿತ್ತು
ಆಗ ನನ್ನ ಮಾತುಗಳು
ತೊದಲು ನುಡಿಯಾಗಿ ಕಂಡಿತ್ತು
ಏನು ಹೇಳಬೇಕಿತ್ತು …?
ಅಲ್ಲಿ ಮೊದಲೇ ಹೊಂದಾಣಿಕೆ
ಮಾಡಿಕೊಂಡು ಸಾವಿನೊಂದಿಗೆ
ಅಂತ್ಯಗೊಂಡಿತು…..
ಸತ್ತವಳು ನಾನಲ್ಲ ,
ಸತ್ತವರು ವ್ಯವಸ್ಥೆಯಲ್ಲಿ
ಇದ್ದು ಮಾತನಾಡದ ನೀವುಗಳು
ಅಸಹಾಯಕಳ ಮೊರೆ ಆಲಿಸಲು
ಸರ್ವಸಂಗ ಪರಿತ್ಯಾಗಿಗೂ ಮನಸಿಲ್ಲ…
ಇನ್ನೂ ಎಲ್ಲಿಯ ರಾಮರಾಜ್ಯ…..
ಸತ್ತ ಮೇಲೆ ಆದರೂ
ಅರಿಸಿಣವಾದರೂ ಹಚ್ಚಿ
ದಫನ್ ಮಾಡಬೇಕಿತ್ತು
ಹಂಚಿ ತಿಂದ ನನ್ನ ದೇಹ
ಸಾಕ್ಷಿ ನೆಪದಲಿ ಮುಟ್ಟಿದ
ಕೈಗಳು ನಂಜಾಗಬಾರದು
ಅಲ್ಲವೇ….!
ಮೊಂಬತ್ತಿ ಹಚ್ಚಬೇಡಿ
ಕರಗಿದಂತೆ ..!
ನಾಳೆ ದಿನ ದೀಪ ಹಚ್ಚುವ
ಕೈ ಬಳೆಗಳ
ಸದ್ದು ಕೇಳದಾಗುತ್ತದೆ…
************************************
ತುಂಬಾ ಧನ್ಯವಾದಗಳು ಸರ್…
ಉತ್ತಮ ಕವಿತೆ…. ಅಭಿನಂದನೆಗಳು ಸರ್