ಕವಿತೆ
“ಶಾವಾ”ತ್ಮ ಪದಗ
ಬಸಿರಿನುಸಿರು
ಶಾಂತಿ ವಾಸು
ಫಲವತ್ತಾದ ಮುಷ್ಟಿ ಮಣ್ಣು ಬೇಕೆಂದೆ….
ಧಾರಿಣಿ, ಹುಟ್ಟಿಸಿ ನೋಡೆಂದಳು….
ನಿರ್ಮಲಾತಿನಿರ್ಮಲ ಜಲ ನೀಡೆಂದೆ….
ಧರಿತ್ರಿ, ಹುಟ್ಟಿಸಿ ನೋಡೆಂದಳು….
ತಣಿಸುವ ಮಳೆ ಕಾಣದಾಗಿದೆಯೆಂದೆ…
ಇಳೆ, ಹುಟ್ಟಿಸಲಾರೆಯಾ?? ಕೇಳಿದಳು….
ಮಳೆಯ ಎಳೆತರುವ ಕಾನನ ಕೊಚ್ಚಿಹೋಗಿದೆಯೆಂದೆ…
ಭೂಮಿಜೆ, ಹುಟ್ಟಿಸಿ ಸಾಕಾಯಿತೇ ಪ್ರಶ್ನಿಸಿದಳು….
ಪ್ರಾಣಿ ಪಕ್ಷಿಗಳು, ಒಂದೊಂದೇ ಅಳಿಯುತ್ತಿವೆಯೆಂದೆ….
ಅವನಿ, ಹುಟ್ಟಿಸು ನೋಡೋಣ ಸವಾಲೆಸೆದಳು….
ಮುಂದಿನ ಪರಂಪರೆಗೇನು ಉತ್ತರಿಸಲಿ??? ಎಂದೆ…
ಭೂಮಿತಾಯಿ, ಸಕಲವ ಹುಟ್ಟಿಸುವ ಮೊದಲು, ಉಸಿರ “ಪ್ರಕೃತಿ”ಯಲ್ಲಡಗಿಸುವ ಬಸುರಾಗೆಂದಳು
*****************************************************************