ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲೇಖನ

ನಾವು ಕನ್ನಡಿಗರು’

ಜಾಗತಿಕ ಸರಪಳಿಯ ಒಂದು

ಕೊಂಡಿ

ಗಣೇಶ ಭಟ್ಟ

What do the colors of the Karnataka flag represent? - Quora

ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ಉದ್ದೇಶದಿಂದ ಭಾಷೆ , ಸಂಸ್ಕೃತಿ, ಪರಂಪರೆಯ ಭಾವಧಾರೆಯನ್ನು ಬಳಸಿಕೊಂಡು ಒಗ್ಗಟ್ಟು ಮೂಡಿಸುವ ಪ್ರಯತ್ನವನ್ನು ಪ್ರಾದೇಶಿಕತೆಯನ್ನು ಪ್ರೋತ್ಸಾಹಿಸಿ, ದೇಶವನ್ನು ದುರ್ಬಲಗೊಳಿಸುವ ಕಾರ್ಯವೆಂದು ಕೆಲವರು ಅಕ್ಷೇಪಿಸುತ್ತಾರೆ. ಹಲವು ವಿಧದ ಹೂವುಗಳನ್ನು ಬಳಸಿ ಹಾರ ತಯಾರಿಸಿದಾಗ ಅದರ ಸೌಂದರ್ಯ ಹಾಳಾಗುತ್ತದೆಂದು ಗೊಣಗುವುದು ಸಮಂಜಸವೆನಿಸಲಾರದು. ಪ್ರತಿಯೊಂದು ಹೂವಿಗೂ ಅದರದ್ದೇ ಆದ ಸ್ವರೂಪ, ವೈಶಿಷ್ಟತೆ, ಸೌಂದರ್ಯ ಇದ್ದರೂ ಎಲ್ಲಾ ವಿಧದ ಹೂಗಳನ್ನು ಸಮರ್ಪಕವಾಗಿ ಪೋಣಿಸಿ ಹಾರವನ್ನು ಸುಂದರವಾಗಿಸಲು ಸಾಧ್ಯ. ಅದೇ ರೀತಿಯಲ್ಲಿ ಪ್ರಾದೇಶಿಕ ವೈವಿಧ್ಯತೆಯನ್ನು ಕಾಪಾಡಿಕೊಂಡು ಸಧೃಡ ಮಾನವ ಸಮಾಜ ನಿರ್ಮಾಣ ಸಾಧ್ಯ. ಇತರ ದೇಶದ ಪ್ರಜೆಗಳನ್ನು ದ್ವೇಷಿಸುವುದರಿಂದಲೇ ತಮ್ಮ ದೇಶದ ಅಸ್ತಿತ್ವ ಉಳಿಯುತ್ತದೆಂಬಂತೆ ವರ್ತಿಸುವವರು ಮಾನವತೆಯ ವಿರೋಧಿಗಳು. ಪ್ರಾದೇಶಿಕತೆಗೆ ಪ್ರಾಶಸ್ತ್ಯ ನೀಡುವುದರಿಂದ ದೇಶದ ಐಕ್ಯತೆ ಹಾಳಾಗುತ್ತದೆಂದು ವಾದಿಸುವವರಿಗೆ ಮಾನವನ ಸ್ವಭಾವ ಮತ್ತು ದೇಶಾಭಿಮಾನದ ನೈಜತೆಯ ಅರಿವು ಇರುವುದಿಲ್ಲ ಅಥವಾ ಜಾತಿ, ಮತಗಳ ಭಾವೋದ್ವೇಗಕ್ಕೆ ಒಳಗಾಗಿರುತ್ತಾರೆ. ‘

ನಾವು ಕನ್ನಡಿಗರು’ ಎಂಬ ಮನೋಭಾವ ಕನ್ನಡ ನಾಡಿನಲ್ಲಿ ವಾಸಿಸುವ ಸಕಲರನ್ನೂ ಒಳಗೊಳ್ಳುವ, ಒಗ್ಗೂಡಿಸುವ ಸೈದ್ಧಾಂತಿಕ ನೆಲೆಗಟ್ಟಿನ ವ್ಯವಸ್ಥಿತ ಪ್ರಯತ್ನ. ಜಗತ್ತಿನ ಪ್ರತಿಯೊಂದು ಮೂಲೆಯಲ್ಲೂ ಆರ್ಥಿಕ ಸಾಮಾಜಿಕ ಅಭಿವೃದ್ಧಿಯಾಗಬೇಕು. ಪ್ರತಿಯೋರ್ವ ವ್ಯಕ್ತಿಗೂ ಉನ್ನತ ಬದುಕಿನ ಅವಕಾಶಗಳು ಲಭ್ಯವಾಗಬೇಕು ಎಂಬ ಆಶಯದ ಈಡೇರಿಕೆಗಾಗಿ ವಿಕೇಂದ್ರಿಕೃತ ಅರ್ಥನೀತಿಯ ಅನುಷ್ಠಾನ ಅನಿವಾರ್ಯ. ಇದಕ್ಕಾಗಿ ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಿ ರೂಪುಗೊಳ್ಳಬಲ್ಲ ಪ್ರದೇಶಗಳನ್ನು ಗುರ್ತಿಸಿ, ಅಲ್ಲಿನ ಭಾಷೆ ಸಂಸ್ಕೃತಿ ಬದುಕಿನ ರೀತಿ ನೀತಿಗಳ ಸಾಮ್ಯತೆಯ ಆಧಾರದ ಮೇಲೆ ಜನರಲ್ಲಿ ಒಗ್ಗಟ್ಟನ್ನು ಮೂಡಿಸುವುದು ಅವಶ್ಯಕ. ಈ ಹಿನ್ನಲೆಯಲ್ಲಿ ಜಗತ್ತಿನಾಧ್ಯಂತ ೨೪೩ ಸ್ವಯಂ ಸ್ವಾವಲಂಬಿ ಸಧೃಡ ಸಾಮಾಜಾರ್ಥಿಕ ಘಟಕಗಳನ್ನು ಗುರ್ತಿಸಲಾಗಿದೆ. ‘ನಾವು ಕನ್ನಡಿಗರು’ ಎಂಬುದು ಸರಪಳಿಯ ಒಂದು ಕೊಂಡಿ. ವಿಶ್ವೈಕ್ಯ ದೃಷ್ಟಿಕೋನದ ಪ್ರಾದೇಶಿಕ ಅಭಿವ್ಯಕ್ತಿಯಾಗಿರುವ ಭಾರತದ ೪೪ ಹೂವುಗಳ ಹಾರದಲ್ಲಿ ‘ನಾವು ಕನ್ನಡಿಗರು’   ಕೂಡ ಒಂದು.

****************************************

About The Author

Leave a Reply

You cannot copy content of this page

Scroll to Top