ಮೌಢ್ಯ
ಕವಿತೆ ವೀಣಾ ರಮೇಶ್ ಮಾನದಂಡವಿಲ್ಲದ ಮೂಢ ಸಂತೆಯೊಳಗೆಬದುಕು ವ್ಯಾಪಾರ ವಾಗುತ್ತಿದೆ .ನಂಬಿಕೆಯ ನಡುವೆ ಮೂಢತ್ವ ಬಿತ್ತಿಮೊಳಕೆಯೊಡೆದುಬೇರು ಚಾಚಿಮೌಢ್ಯ ಹೆಮ್ಮರವಾಗಿದೆ ಬೆತ್ತಲಾಗಬೇಡ ಬತ್ತಿದಕನಸುಗಳಿಗೆಪೊಳ್ಳು ಕಟ್ಟು ಪಾಡುಗಳಹೆಗಲೇರಿ ಶವವಾಗಬೇಡ. ನಿನ್ನ ಕನಸುಗಳ ಚಲುವಿಗೆಸುಜ್ಞಾನ ತೊಡಿಸಿಜ್ಞಾನ ದಾರದಿಂದ ಬಿಗಿದುಅಭಿಜ್ಞಾನದೆಡೆಗೆ ಹರಿಸಿ ಅಹಂಕಾರದ ಕತ್ತಲೆಯಮರೆಸಿ ಆತ್ಮದ ಹಣತೆಯಲಿಅಂತರಾತ್ಮದ ನವಿರು ಸ್ಪರ್ಶ ಬೆಳಕು ನೀಡಲಿ **********************************
ಕಣ್ಣುಗಳು ನನ್ನದಲ್ಲ
ಕವಿತೆ ಜಹಾನ್ ಆರಾ ಎಚ್. ಕೋಳೂರು ನಾನು ನಿನ್ನನ್ನು ನೋಡಿದ್ದೇನೆಆದ್ರೆ ಕಣ್ಣುಗಳು ನನ್ನದಲ್ಲ ದಶರಥನ ಮಹೋನ್ನತ ಯೋಚನೆಯಲ್ಲಿಮಂಥರೆಯ ಮೋಸದಲಿಊರ್ಮಿಳೆಯ ಉದಾಸೀನತೆ ಯಲ್ಲಿಲಕ್ಷ್ಮಣನ ನೆರಳಿನಲ್ಲಿಹನುಮಾನನ ಸೇವೆಯಲಿರಾವಣನ ಶೌರ್ಯದಲ್ಲಿಹೌದು ಅದೇ ಸೀತೆಯ ಕಂಬನಿಯಲ್ಲಿ ನಿನ್ನನ್ನು ಮತ್ತೆ ನೋಡುತಿದ್ದೇನೆಮತ್ತೆ ಮತ್ತೆ ಕಣ್ಣುಗಳು ನನ್ನದಲ್ಲ ಧರ್ಮದ ಚದರಿನಲ್ಲಿಜನ್ಮ ಭೂಮಿಯ ಹಂಗಿನಲಿರಾಜಕೀಯದ ದಾಳದಲಿಕೋರ್ಟುಗಳ ವಿವಾದಗಳಲಿದಾನಿಗಳ ದಾನದಲಿಮೌಢ್ಯದ ಹಾದಿಯಲ್ಲಿಮಾಧ್ಯಮದ ಗದ್ದಲದಲ್ಲಿ ನಿನ್ನ ಸೃಷ್ಟಿದ ವಾಲ್ಮೀಕಿಕಡತಗಳ ಹಿಡಿದುಇನ್ನೂ ಹೊರಗೆ ನಿಂತಿದ್ದಾನೆಅವನ್ನು ವಿಚಾರಿಸುನೀ ಮತ್ತೆ ಬರುವ ಅಗತ್ಯ ಇತ್ತೆ ಎಂದು? ಸಾವು ನೋವುಗಳ ಮೇಲೆ ಹಿಡಿತತಪ್ಪಿರುವಾಗ ದೇವರಾಗುವಬದಲು ವೈದ್ಯನಾಗುಮಂದಿರ […]
ಕಾಡುವ ನೆನಪು
ನೆನಪು ವೀಣಾ ನಿರಂಜನ್ ಭೂತದ ಹುತ್ತದಲ್ಲಿ ಅಡಗಿ ಕುಳಿತಿರುವ ನೆನಪುಗಳನ್ನು ಮೆಲುಕು ಹಾಕುತ್ತಾ ಮೊದಲ ಕವಿತೆಯ ರೋಮಾಂಚನವನ್ನು ಅನುಭವಿಸುತ್ತಿದ್ದೇನೆ. ನಾನು ಯಾವ ಗಳಿಗೆಯಲ್ಲಿ, ಯಾಕೆ ಕವಿತೆಯನ್ನು ಹಚ್ಚಿಕೊಂಡೆ ಎನ್ನುವುದೇ ಮೊದಲ ಕವಿತೆಯ ಹುಟ್ಟಿಗೂ ಕಾರಣವಾಯಿತೇನೊ. ನನ್ನಪ್ಪ ನನಗೊಂದು ಅಚ್ಚರಿಯಾಗಿದ್ದ. ಮೇಷ್ಟ್ರಾಗಿದ್ದ ಅಪ್ಪ ಯಾವುದೇ ವಿಷಯದ ಕುರಿತು ತುಂಬ ಸೊಗಸಾಗಿ, ವಿಸ್ತಾರವಾಗಿ, ಪ್ರಭುತ್ವದಿಂದ ಪಾಠ ಮಾಡುತ್ತಿದ್ದ. ಭಾಷಣ ಮಾಡುತ್ತಿದ್ದ. ಮನೆ ತುಂಬ ಪುಸ್ತಕಗಳು. ಅಪ್ಪನ ಭೇಟಿಗೆಂದು ಮನೆಗೆ ಬರುತ್ತಿದ್ದವರು ಕೂಡ ಅಂಥವರೇ. ಸದಾ ಸಾಹಿತ್ಯ, ಕಲೆಯ ಕುರಿತು ಚರ್ಚೆ, […]
ಪಯಣ
ಕವಿತೆ ಪಾರ್ವತಿ ಸಪ್ನ ಹೊಗಳಿದರೆ ಹಿಗ್ಗದೆತೆಗಳಿದರೆ ಕುಗ್ಗದೆಅಪ್ಪಳಿಸುವ ಮಾತಿನಅಲೆಗಳಿಗೆ ಜಗ್ಗದೆನಿನ್ನ ಹಾದಿಯಲ್ಲೇನಿಲ್ಲದೆ..ನೀ ಸಾಗಿಬಿಡು..!! ಕಾಲಿಗೊಂದು ಮುಳ್ಳುಕೈಯಿಗೊಂದು ಕಲ್ಲುನಾಲಿಗೆಯಲ್ಲಿ ಸುಳ್ಳುಅಚ್ಚರಿಯೇನಿಲ್ಲ..ಲೋಕವೇ ಡೊಂಕುಮಾತೆಲ್ಲಾ ಕೊಂಕುಇರಲಿಬಿಡು.. ನಿನ್ನಷ್ಟಕ್ಕೇನೀ….ಸಾಗಿಬಿಡು…!! ತಪ್ಪು ಹುಡುಕುವಬೆಪ್ಪನಿಗೆ..ತುಪ್ಪ ಸವರಿದರೂಮೊಸರಲ್ಲೂ ಕಲ್ಲಂತೆ,,ಕಾಣದ ಗಾಳಿಯದುಬೊಗಸೆಯಲ್ಲಿ ಹಿಡಿದಂತೆ,,ಸುಮ್ಮನೆ ನಡೆದುಬಿಡುನಿನ್ನ ಹಾದಿಯಲ್ಲಿ ಸಾಗಿಬಿಡು…!! ಎಲ್ಲವೂ ಜಂಜಾಟಪ್ರತಿಕ್ಷಣ ಒಂದು ಪಾಠಸಮಯ ಗುರುವುಕಲಿಸುವುದು ನೋಡುಅವನ ಆಟಕ್ಕೆ ನೀ ಕುಣಿದುಬಿಡುತಿರುಗಿ ಮತ್ತೆ ನೋಡದಿರುವ್ಯಥೆಯನ್ನೆಲ್ಲಾ ತೂರಿಬಿಡುನಿನ್ನ ಗುರಿಯ ಸೇರಿಬಿಡು…!! ********************
ಇಲ್ಲದೆಯೂ ಎಲ್ಲವನ್ನೂ ಬಯಸುತ್ತೇನೆ
ಕವಿತೆ ಸ್ಮಿತಾ ಭಟ್ ಅಬ್ಬರಿಸಿ ಬರುವ ನಿನ್ನ ಮಾತಿನಹೊಡೆತಕ್ಕೆ ಸಿಲುಕಿದ ಒಂಟಿ ದೋಣಿಮತ್ತೊಂದು ಪ್ರಶಾಂತ ನಿಲುವಿಗಾಗಿಯಾಕೋ ಕಾಯಬೇಕೆನಿಸುತ್ತಿಲ್ಲಕೊಚ್ಚಿ ಕಾಣದಾಗಲೆಂದು ಬಯಸುತ್ತೇನೆ ಬುಡಮೇಲಾದ ನಂಬಿಕೆಯಮತ್ತೆ ಊರಿ ಅದಕ್ಕೇ ಚಿಗುರೊಡೆವಸಮಯಕ್ಕಾಗಿಯಾಕೋ ಕಾಯಬೇಕೆನಿಸುತ್ತಿಲ್ಲಕುರುಹೂ ಇಲ್ಲದಂತೆ ನಶಿಸಿ ಹೋಗಲು ಬಯಸುತ್ತೇನೆ. ಹೊಸದೇನೋ ಘಟಿಸುತ್ತದೆ ಎಂಬ ಬಯಕೆಯಲಿಹಳೆಯ ಪೋಷಾಕುಗಳನೇ ಮತ್ತೆ ಮತ್ತೆ ಹೊದ್ದುಅಸತ್ಯದ ನಗುವಿನಲಿ ಯಾಕೋ ಕಾಯಬೇಕೆನಿಸುತ್ತಿಲ್ಲಸಕಲವನೂ ತೊರೆದು ನಿರಾಳವಾಗಲು ಬಯಸುತ್ತೇನೆ. ಯಾವ ಕಿಂಡಿಯೂ ಉಳಿದಿಲ್ಲಕಿರಣದ ಸ್ಪರ್ಶವ ಅನುಭವಿಸಲುಹೊರದಾರಿಗೆ ಯಾರೋ ಬಾಗಿಲು ತರೆಯುವುದಕ್ಕಾಗಿ ಯಾಕೋ ಕಾಯಬೇಕೆನಿಸುತ್ತಿಲ್ಲಗೂಡಿನ ಮಾಡು ಸರಿಸಿ ದಿಗಂತದಲಿಹಂಗು ತೊರೆದು ಹಾರಲು ಬಯಸುತ್ತೇನೆ […]
ಅಂಕ(ಣ)ದ ಪರದೆ ಸರಿಯುವ ಮುನ್ನ.
ಸಂಗಾತಿ ಸಾಹಿತ್ಯ ಪತ್ರಿಕೆಯನ್ನು ಅದರ ನಿಲುವನ್ನೂ ಹಲವು ಗೆಳೆಯರು ಗಮನಿಸಿರಬಹುದು. ಸದಾ ಹೊಸ ಆಲೋಚನೆಗಳಿಗೆ ಮತ್ತು ಆಧುನಿಕ ಕಾಲದ ಸಂವೇದನೆಗೆ ವೇದಿಕೆಯಾಗಿರ ಬಯಸುವ ಸಂಗಾತಿ ಸ್ಥಾಪಿತ ಹಿತಾಸಕ್ತಿಗಳನ್ನು ಮತ್ತು ಬರಿಯ ತೋರಿಕೆಯನ್ನು ಎಂದಿಗೂ ಎತ್ತಿಹಿಡಿದಿಲ್ಲ. ಅವರು ಇವರು ಎಂದಲ್ಲ. ಫೇಸ್ಬುಕ್ ಈ ನಡುವೆ ಬಹುತೇಕರ ನಿರಂತರ ನಿಲುದಾಣ, ತಂಗುದಾಣ, ಹಾಗೂ ಅಭ್ಯಾಸದ ಮೈದಾನವೂ ಆಗಿದೆ. ಹಲವರನ್ನು ಫಾಲೋ ಮಾಡುತ್ತ ಅವರ ರಚನೆಗಳನ್ನು ಗಮನಿಸಿದರೆ ದಿನದಿಂದ ದಿನಕ್ಕೆ ಪ್ರಭೃದ್ಧರಾಗುತ್ತಿರುವ ಹಲವರಿದ್ದಾರೆ. ಇನ್ನು ಒಂದೋ ಎರಡೋ ಸಂಕಲನ ತಂದೂ ಫೇಸ್ಬುಕ್ಕಲ್ಲಿ […]
ಊರುಗೋಲು ಕಾಫಿ ಮತ್ತು ಅಪ್ಪ
ಕವಿತೆ ವಿಭಾ ಪುರೋಹಿತ್ ಚತುರ್ಮುಖ ಬ್ರಹ್ಮಅವನೊಳಗೊಂದು ಕಾಣ್ದಅಗೋಚರ ಮೈವೆತ್ತ ಹಾಗೆಅವನಿಯೊಳಗಿನ ಜ್ಞಾನಕಣ್ತೆರೆದಂತೆಸುಡುವ ನೋವಿದ್ದರೂ ಎದೆಯೊಳಗೆಉತ್ಸಾಹ ಉತ್ತುವದು ನಗೆಯ ಬಿತ್ತುವುದುಮಹಾತ್ಮ ನ ಲೀಲೆನಾರಾಯಣನಿಲ್ಲದೇ ಅವನಿಯುಂಟೇ?ಅದೃಶ್ಯದಲ್ಲಿ ಸದೃಶನಾಗಿಸೋಫಾಮೇಲೆ ಕುಳಿತಿದ್ದಾನೆರೇಡಿಯೋ ಕೇಳುತ್ತಿದ್ದಾನೆಎರಡುತಾಸಿಗೊಮ್ಮೆ ಕಪ್ಪು ಕಾಫಿಸೋಮರಸ ಸದಾ ಥರ್ಮಾಸಿನೊಳಗೆಕಾಲುಮೇಲೆಕಾಲಿಟ್ಟುಅನುಭವದ ರೇಖೆಗಳನ್ನೆಲ್ಲ ಒತ್ತಿಹಿಡಿದ ಹಸ್ತ ಊರುಗೋಲಿನ ಮೇಲೆಊರಿನ ತಗಾದೆಗೆಲ್ಲ ಕಿವಿಗೊಟ್ಟುಎದೆಗವುಚಿ ಎಲ್ಲರಿಗೂಬೀರಬಲ್ಲನ ಪರಿಹಾರ ಮಂತ್ರರೆಡಿಯಾಗುತಿತ್ತು.ಊರುಗೋಲಿನ ಸುತ್ತ ಫಿರ್ಯಾದಿಗಳುವಿನಂತಿಗಳು ಅಹವಾಲುಗಳಿಗೆಹೊಸದಾಗಿ ತಂದ ಕಂಪ್ಯೂಟರ್ಕೀಲಿಮಣೆ ಕಿಲಕಿಲನೆ ಬಡಿದುಬರೆದುಕೊಂಡೇ ಮತ್ತೆ ಕಾಫಿಗೆಕೈಚಾಚುತ್ತಿತ್ತುಯಾರೇ ಬಂದರೂ ಯಾವಾಗ ಬಂದರೂಬಿಸಿಕಾಫಿ ಜೊತೆ ಆತ್ಮೀಯತೆ ಬಿಸ್ಕತ್ತು ಗಳುಮನದಾಳದಿಂದ ಸಮಸ್ಯೆಗಳನುಹೊತ್ತು ತಂದವರ ಪಾತಾಳಗರಡಿಯಾಗುತ್ತಿತ್ತುನೆನಪಿನಲ್ಲಿ ಮುಳುಗಿದರೆಏನೋ ಗೊತ್ತಿರದ […]
ನೂತನ ನೋಡಿದ ಸಿನೆಮಾ
ವಿದ್ಯಾ ಕಸಂ ಶಕುಂತಲಾ ದೇವಿ ನೂತನ ದೋಶೆಟ್ಟಿ ವಿದ್ಯಾ ಕಸಂ ಈ ಶಬ್ದಗಳು , ಇತ್ತೀಚೆಗೆ ಬಿಡುಗಡೆಯಾದ, ಖ್ಯಾತ ಗಣಿತಜ್ಞೆ , ಸಂಖ್ಯಾ ನಿಪುಣೆ, ಮಾನವ ಕಂಪ್ಯೂಟರ್ ಎಂದೇ ಹೆಸರಾಗಿದ್ದ ಶಕುಂತಲಾ ದೇವಿ ಅವರ ಜೀವನಾಧಾರಿತ ಹಿಂದಿ ಚಲನಚಿತ್ರದಲ್ಲಿ ಬಹಳ ವಿಶೇಷವಾಗಿ ಉಪಯೋಗಿಸಲ್ಪಡುತ್ತವೆ. ಈ ವಿದ್ಯಾ ಕಸಂ ಎಂಬ ಆಣೆ- ಪ್ರಮಾಣ ಚಿತ್ರದುದ್ದಕ್ಕೂ ಬೇರೆ ಬೇರೆ ಸಂದರ್ಭಗಳಲ್ಲಿ ಹೊಸ ತಿರುವನ್ನು ಕೊಡುತ್ತ ಹೋಗುತ್ತದೆ. ಅಮೇಜಾನ್ ಪ್ರೈಂನಲ್ಲಿ ಜುಲೈ 31 ರಂದು ಬಿಡುಗಡೆಯಾದ ಈ ಚಿತ್ರವನ್ನು ನಾನು ನೋಡಿದ್ದು ವಿದ್ಯಾ […]
ಶಿಕಾರಿ
ಕವಿತೆ ಫಾಲ್ಗುಣ ಗೌಡ ಅಚವೆ ಚಂದ್ರ ಎಷ್ಟೇ ಕಣ್ಣು ತೆರೆಯಲುಪ್ರಯತ್ನಿಸಿದರೂಕಿಕ್ಕಿರಿದ ಮೋಡಗಳು ಮರ ಮರಗಳ ಕತ್ತಲನ್ನೂಹೊಸಕಿ ಹಾಕುತ್ತವೆಇಂತಹ ಅಪರಾತ್ರಿಯಂತಹಕತ್ತಲನ್ನು ನೋಡಿದರೆಶಂಕ್ರ ಕೋವಿ ಹೆಗಲಿಗೆ ಹಾಕಿಶಿಕಾರಿ ಹೋದನೆಂದೆ ತಿಳಿಯಬೇಕುಹೋಗುವುದು ದೂರವೇನಲ್ಲಒಂದು ಬರ್ಕ ಹೊಡೆದೂ ಗೊತ್ತಿಲ್ಲಕಳ್ಳರಗದ್ದೆ ಸುಕ್ರು ಮನೆ ಬೇಲಿ ಆಚೆ ಒಂದು ಹತ್ತು ಮಾರು ಅಷ್ಟೇಹಂದಿ ಮಲಗಿದೆಯೆಂದುಥರಗುಟ್ಟಿದವನು ಅದರ ತಲೆಗೆಗುಂಡು ಹೊಡೆದೇ ಬಿಟ್ಟವಅದೆಂಗೆ ಮನೆಗೆ ಬಂದನೋಮಲಗಿದನೊ ಗೊತ್ತಿಲ್ಲ ಮರುದಿನ ಮಾದೊಡ್ ಈಡಾಗಿದೆಂದು ನಮ್ಮೂರ ಪೆಕರನಂತ ಪೊರಗೋಳುಹುಡುಕಾಡಿ ಏನೂ ಕಾಣದೇತಿರುಗಿ ಬಂದರುಮುಚ್ಚಾಕಿ ಮಲಗಿದ ಶಂಕ್ರಒಂಬತ್ತಾಸಾದರೂ ಎದ್ದೇ ಇರಲಿಲ್ಲಭಯ ಒದ್ದುಕೊಂಡು ಬಂದುಎದೆ […]
ಯಡ್ರಾಮಿಯ ಉಡುಪಿ ಹೋಟೆಲ್
ಪ್ರಬಂಧ ಮಲ್ಲಿಕಾರ್ಜುನ ಕಡಕೋಳ ಹಾಗೆ ನೋಡಿದರೆ ನಮ್ಮ ಯಡ್ರಾಮಿಗೆ ಬೆಳ್ಮಣ್ಣು ಶಂಕರಭಟ್ಟರ ಉಡುಪಿ ಹೋಟೆಲ್ ಬರುವ ಪೂರ್ವದಲ್ಲೇ ನಿಯತ್ತಿನ ನಾಯಿಗುರುತು ಬ್ಯಾಂಕ್ ಬಂದಿತ್ತು. ಸುಂಬಡ ಹಾದಿಬದಿಯ ಬಹುಪಾಲು ಬೆಳಕಿಲ್ಲದ ಬ್ಯಾಂಕಿಗೂ ಭಟ್ಟರ ಹೋಟೆಲಿಗೂ ಕೂಗಳತೆ ದೂರ. ಅಜಮಾಸು ಮುವತ್ತು ವರ್ಷಗಳ ಹಿಂದಿನ ಮಜಕೂರವಿದು. ಹಣಮಂದೇವರ ಗುಡಿ ಬಳಿಯ ಹಳೆಯ ಬಸ್ ನಿಲ್ದಾಣದಲ್ಲಿ ಉಡುಪಿ ಹೋಟೆಲ್. ಆಗೆಲ್ಲ ರುದ್ರಯ್ಯ ಮುತ್ಯಾನ ಹೋಟೆಲ್ ಹಾಗೂ ಹಲಕರ್ಟಿ ಶಿವಣ್ಣನವರ ಹೋಟೆಲಗಳದ್ದೇ ಸ್ಟಾರ್ ಹೋಟೆಲ್ ಹವಾ. ಯಥೇಚ್ಛ ಹೊಗೆಯುಂಡು ಮಸಿಬಟ್ಟೆ ಬಣ್ಣಕ್ಕಿಳಿದ […]