ಎದುರೇ ಪ್ರೀತಿ ಇರುವಾಗ

ಎದುರೇ ಪ್ರೀತಿ ಇರುವಾಗ

ನಾಗರಾಜ್ ಹರಪನಹಳ್ಳಿ -೧-ಎದುರೆ ಪ್ರೀತಿ ಇರುವಾಗಎಲ್ಲಿ ಹೊರಡಲಿಅಲೆಯಲು -೨-ಇಳೆಗೆ ಮಳೆಯ ಧ್ಯಾನನನಗೆ ಅವಳ ಹೆರಳಪರಿಮಳದ ಧ್ಯಾನ. -೩-ಅವಳ ತುಟಿಗಳು ಮಾತಾಡಿದವುಕವಿತೆ ಹುಟ್ಟಿತು -೪- ತುಟಿಗೆ ತುಟಿ ಇಟ್ಟೆಜನ್ಮ ಜನ್ಮದಬಂಧನ ನೆನಪಾಯಿತು -೫-ಅವಳು ಅಂಗೈಗೆಮುತ್ತಿಟ್ಟಳುಪ್ರೇಮದ ಉದಯವಾಯಿತು -೬-ಅವಳ ಅಂಗೈಗೆಅದ್ಭುತ ಶಕ್ತಿಅದಕೆಬೆಸುಗೆಗೆ ಬಿಸಿ -೭-ನನ್ನ ಬಲ ಅಂಗೈ ನೋಡಿಕೊಂಡಾಗಲೆಲ್ಲಾಅವಳ ಮುಖದ್ದೇ ನೆನಪುಕಾರಣಮೊದಲು‌ ಅವಳ ತುಟಿ ತಾಗಿದ್ದುಅಂಗೈಗೆ* -೮-ಆಕೆ‌ ಹೇಳುವುದುಒಂದೇಉಸಿರಾಟದ ಏರಿಳಿತಎದೆ‌ ಬಡಿತ ನೀನು‌ -೯-ಎದೆಯ ಮೇಲೆ‌ ಕೈಯಿಟ್ಟರೆಅವಳ ಹೆಸರುಕಿವಿಗೆ ಅಪ್ಪಳಿಸಿತ -೧೦-ಕುಡಿಯುತ್ತಿದ್ದೆ ಅಲೆಯುತ್ತಿದ್ದೆಅವಳ ದರ್ಶನವಾಯಿತುಎದೆಗೆ ಪ್ರೀತಿಯ ಬೀಜಹಾಕಿದಳುಅದೀಗ ಹೆಮ್ಮರವಾಗಿದೆ**********

ಸಂಮಿಶ್ರಣ

ಡಾ.ಪ್ರತಿಭಾ ಅಬ್ಬರಿಸುವ ಕಡಲಿಗೆಯಾವತ್ತೂ ಶಾಂತವಾಗಿಹರಿಯುವ ನದಿಗಳು ಸಾಕ್ಷಿ ಖಾಲಿಯಾಯಿತೆ ಸಿಹಿನೀರಿನ ಒರತೆಹಾಕಿಕೊಂಡು ತನಗೆತಾನೇ ಪ್ರಶ್ನೆಗಳ ಸ್ವಂತಿಕೆಯ ಕಳೆದುಕೊಳ್ಳುವಅಪಾಯ ಇದ್ದರೂಒಂದು ನೆಮ್ಮದಿ ಯ ಭಾವ. ಅಬ್ಬರದ ಅಲೆಗಳುಸದ್ದು ಮಾಡಿ ಸುಮ್ಮನಾಗಲುಮೂಡಿತು ನೆಮ್ಮದಿಯಭಾವ ಶಾಶ್ವತವೇನಲ್ಕ ಈ ಬದುಕುನೋವು, ನಲಿವುಸುಖ,ದುಃಖಗಳ ಸಂಮ್ಮಿಶ್ರಣ ********

ಕಡಲಲೆಗಳ ಲೆಕ್ಕ

ಕಥೆ ಸುಧಾ ಹೆಚ್.ಎನ್ ರುಕ್ಮಿಣಮ್ಮ  ಕಡಲಿನ ಮಗಳು.  ಹುಟ್ಟಿದ್ದು, ಬೆಳೆದದ್ದು, ಪ್ರತಿ ಬೆಳಗು, ಪ್ರತಿರಾತ್ರಿ  ಕಳೆದದ್ದು  ಸಮುದ್ರದ ಜೊತೆಗೇ. ಮೀನುಗಳ ವ್ಯಾಪಾರ ಮಾಡುತ್ತಿದ್ದ ತಂದೆಯ, ಜೀವನದ ಜೊತೆಗಾರನಾದ  ಪಾಂಡುರಂಗನ ಮನೆಯಿದ್ದದ್ದು ಕಡಲತೀರದಲ್ಲೇ.  ತಮ್ಮ ಸುಮಾರು ಎಂಬತ್ತು ವರ್ಷದ ಜೀವಮಾನವನ್ನು     ಕಣ್ಣಳತೆಯಲ್ಲಿದ್ದ  ಅಗಾಧ ಸಮುದ್ರ,  ಅವಿರತವಾಗಿ  ಕೇಳಿಬರುತ್ತಿದ್ದ ಅಲೆಗಳ ಮೊರೆತ,  ಮೀನು….ಇತರೆ    ವಾಸನೆಯ ಜೊತೆಗೆ ಜೀವನ  ಸವೆಸಿದ್ದರು  ರುಕ್ಮಿಣಮ್ಮ.   ರುಕ್ಮಿಣಮ್ಮ ಮತ್ತು ಪಾಂಡುರಂಗಪ್ಪ   ಐವರು ಮಕ್ಕಳಿಗೆ ತಮ್ಮ ಕೈಲಾದ ಮಟ್ಟಿಗೆ ವಿದ್ಯಾಭ್ಯಾಸ ಕೊಡಿಸಿ, ಮದುವೆ ಮಾಡಿದ್ದರು. ಎಲ್ಲಾ […]

ಗಝಲ್

ಎ ಎಸ್. ಮಕಾನದಾರ ನೀನು ಹೋದ ಅರೆಗಳಿಗೆಗೆ ಬಾಗಿಲ ಕಿಟಕಿಗಳು ಬೋರಾಡಿ ಅಳುತಿವೆಇಂದಲ್ಲ ನಾಳೆ ಬರುತ್ತೀಯೆಂದು ಹೊಸ್ತಿಲ ಭರವಸೆಯಿಂದ ಕಾಯುತಿವೆ ಅಂಗಾಲಿಗೆ ಮುತ್ತಿಕ್ಕಿದ ಮಣ್ಣು ಹಿಮ್ಮಡಿಯಲಿ ಹಿಮ್ಮೇಳಹಾಕಿವೆ ಸಾಕಿದಣಿದ ದೇಹಕೆ ಖಬರಸ್ತಾನಿನ ಹೂಗಳು ಸದಾ ಸಾಂತ್ವನ ಹೇಳುತಿವೆ ಬೀದಿ ದೀಪಗಳು ಕಣ್ಣುಗಳನ್ನು ಪಿಳುಕಿಸಿ ಮಿಂಚುಹುಳು ವಾಗಿಸುತ್ತಿವೆನೆನಪುಗಳು ಮಗ್ಗುಲು ಬದಲಿಸಿ ನೇಸರನಿಗೆ ಕರೆದು ಸಾವು ತರಿಸುತಿವೆ ಹರಿದ ಅಂಗಿಗೆ ಬೆವರ ಉಣಿಸಿ ಬೆಂದ ಹಾಲಿಗೆ ನೆಮ್ಮದಿ ಬೇಡುತ್ತಿವೆತುಕ್ಕು ಹಿಡಿದ ತೊಟ್ಟಿಲಲಿ ಜೋಗುಳ ತೂಗಿ ಹರತಾಳವನು ಹೂಡುತಿವೆ ಸಾಹೇಬನ ಹಸಿವು […]

ಪುಸ್ತಕ ಸಂಗಾತಿ

ಆಲದ ನೆರಳು ಈ ಕಥಾ ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಕತೆಗೆ ಬೇಕಾದ ವಸ್ತು, ಅದರಲ್ಲಿ ತುಂಬಿಕೊಳ್ಳುವ ಪಾತ್ರಗಳು, ಪ್ರಾದೇಶಿಕ ಭಾಷೆಯ ಸೊಗಡು,ಅದರ ನಿರ್ವಹಣೆ, ಅನಿರೀಕ್ಷಿತ ತಿರುವುಗಳು, ಕಾಡುವ ಪಾತ್ರಗಳ ಹೆಣಿಗೆ, ಕೃತಕತೆಯಲ್ಲೂ ಮೈಮರೆಯದ ವಾಸ್ತವೀಕತೆ… ಇವುಗಳಿಂದ ಮಧುರಾ ಅವರು ಕತೆಗಳ ಮೂಲಕ ನಮ್ಮನ್ನು ಬಂಧಿಸಿಡುವಲ್ಲಿ ಯಶಸ್ವಿ ಆಗಿದ್ದಾರೆ. ಆಲದ ನೆರಳು – ಪುರುಷ ಪ್ರಧಾನ ಸಮಾಜದಲ್ಲಿ ಎರಡು ಹೆಣ್ಣು ಜೀವಗಳು ಸಾಂಸ್ಕೃತಿಕವಾಗಿ ನಲುಗಿ,ಕೊರಗಿ ಹೋಗುವ ಕಥಾ ಹಂದರ ಹೊಂದಿದೆ. ‘ ಬರೀ ನೆರಳಿದ್ರೆ ಉಳಕಿ ಗಿಡಗೋಳು […]

ಸ್ವಾತ್ಮಗತ

ಮರಗಳ ಮಹಾತಾಯಿ ನಾನು ಎಕೋ ಇಷ್ಟು ಬರಹವನ್ನು ಬರೆದರೂ ಅದ್ಯಾಕೋ ಈ ‘ಸಾಲು ಮರಗಳ ತಿಮ್ಮಕ್ಕ’ನ ಬಗೆಗೆ ಬರೆಯಲಾಗಿರಲಿಲ್ಲ. ಈ ತಿಮ್ಮಕ್ಕನ ಬಗೆಗೆ ಟಿಪ್ಪಣಿ ಬರೆದಿಟ್ಟುಕೊಂಡು ಬಹಳ ದಿನಗಳಾದವು. ಈಗ ಸಾಲು ಮರದ ಈ ತಿಮ್ಮನ ಬಗೆಗೆ ಬರೆಯಬೇಕು ಎಂಬ ತವಕ ಅದ್ಯಾಕೋ ಹೇಚ್ಚಾಯಿತು. ಅದಕ್ಕಾಗಿ ಇಂದು ಈ ಬರಹ ಬರೆದನು.ಅದೋ ಈ ಲೇಖನ ‘ಮರಗಳ ತಾಯಿ ತಿಮ್ಮಕ್ಕ’..! ಮರ ಎಂದಾಕ್ಷಣ ನಮ್ಮ ಮನದಲ್ಲಿ ಮೂಡಿ ಬರುವವರೇ ತಿಮ್ಮಕ್ಕನರವರು. ಬರೀ ತಿಮ್ಮಕ್ಕನೆಂದರೆ ಬಹುಶಃ ಯಾರಿಗೂ ಗೊತ್ತಾಗಲಾರದು. ಸಾಲು […]

ಕುಟುಕು

ಲಕ್ಷ್ಮೀ ಪಾಟೀಲ್ ನರ‍್ವಾತ ವಲಯದಿಂದಪೋನಾಯಿಸಿದಾತನೊಬ್ಬ”ಹಲೋ ನಿಮ್ಮಮನೆಯಲ್ಲಿ ದೀಪಾ ಇದ್ದಾರೆಯೇ? “ಎಂದುಮಾತಿಗೆ ಪೀಠಿಕೆಯಾದಕೆಂಪಾದ ನಾನು “ಈ ಮನೆಯಲ್ಲಿದೀಪವಾಗಿ ಉರಿಯುವವಳು ನಾನೇ”ಎಂದು ಕುಕ್ಕಿದೆ ಪಾಪ ಆತನ ಬದುಕುಕತ್ತಲಲ್ಲಿ ಕೂತಿರುವುದಕ್ಕೆ ಕೊರಗಿದೆನನ್ನ ಕಣ್ಣ ಕೆಳಗಿನ ಕಪ್ಪಿಗೂ ಬೆದರಿದೆ ಆಗಂತುಕನೊಬ್ಬ ಫೋನಾಯಿಸಿಏರು ದನಿಯಲ್ಲಿ ಭಾವ ಬಣ್ಣ ಬದಲಿಸಿ” ನಾಗಮ್ಮನವರು ಇದ್ದಾರಾ? “ಎಂದಅವನ ಕುಟುಕುವ ದನಿಗೆ ಕಟಕಿ ಬೆರಸಿ“ಮೊಬೈಲ್ ನಾಗಪ್ಪಗಳೆಲ್ಲಭೂಮಿಯ ತುಂಬಾ ಹರಡಿವಿಷ ಬಿಡುತ್ತಿರುವಾಗ ಮನೆಯನಾಗಮ್ಮನವರೆಲ್ಲ ರಸಾತಳ ಸೇರಿನಾಗನೃತ್ಯಕ್ಕೆ ಅಣಿಯಾಗಿದ್ದಾರೆ” ಎಂದೆಹಿಡಿದ ಫೊನೀಗ ನೆಗೆದು ಬಿದ್ದುಸೂತಕ ಹರಡಿದೆ ಈ ಮೊಬೈಲ್ ವಿಚಿತ್ರ ರೀತಿಯಚಕ್ರವ್ಯೂಹಗಳನ್ನು ಕಟ್ಟುತ್ತದೆಒಂದನ್ನು […]

ಶರಣಾಗಿ ಬಿಡಲೆ

ವಸುಂಧರಾ ಕದಲೂರು ನಿನ್ನ ಕಂಗಳ ಪ್ರಾಮಾಣಿಕತೆನನ್ನನು ಹಿಂಬಾಲಿಸುತ್ತಿದೆ.ಭದ್ರ ಕೋಟೆ ಗಟ್ಟಿ ಬೇಲಿಛಿದ್ರಗೊಳಿಸಿ ಎದೆ ತಟ್ಟುತ್ತಿದೆ. ನೀನು ಮಂಡಿಯೂರಿ ಬಿಡುನೀನೂ ಮಂಡಿಯೂರಿ ಬಿಡು ಮಾರ್ದನಿಸುವ ಮಾತುಗಳಿಗೆಇನ್ನೆಷ್ಟು ಕಾಲ ಕಿವುಡಾಗಿರಲಿಹಾದಿ ಮರೆವ ಮುನ್ನ ನಾಕುಹೆಜ್ಜೆ ನಡೆದು ಬರಲೆ ಹನಿಮುತ್ತು ಜಲಗರ್ಭದಚಿಪ್ಪೊಳಗೆ ಕಾಣೆಯಾಗಲುಬಿಡಬೇಡ ಮುಳುಗಿ ತೆಗೆಪಿಸುಮಾತು ಕೇಳುತ್ತಿದೆ ಪ್ರತಿಧ್ವನಿ ತರಂಗವಾಗಿಹೃದಯದಲಿ ನಯವಾಗಿನವುರಾಗಿ ಲಯವಾಗಿಕಂಪನ ಎಬ್ಬಿಸುತ್ತಿವೆ. ******* ಕಾಲ ದುಬಾರಿ ತಾನೆಂದುಸಾಬೀತು ಪಡಿಸುತ್ತಿದೆಜಾರಿಹೋದ ನೆನಪುಗಳಈಟಿಯಿಂದ ಇರಿಯುತ್ತಾ. ನಾನು ಶರಣಾಗಿ ಬಿಡಲೆನಾನೂ ಶರಣಾಗಿ ಬಿಡಲೆ

ಶಿಕ್ಷಣ ಆನ್ ಲೈನ್!

ವಿನುತಾ ಹಂಚಿನಮನಿ ವಿಕಾಸ ವಾದ (Evolution theory) ದ ಪ್ರಕಾರ ಜೀವಿಗಳ ಅಳಿವು ಉಳಿವು ಯಾವುದರ ಮೇಲೆ ಅವಲಂಬಿಸಿದೆ? ಯಾರು ಬದಲಾಗುತ್ತಿರುವ ಪರಿಸರಕ್ಕೆ ಹೊಂದಾಣಿಕೆ ಮಾಡಿಕೊಂಡರೋ ಅವರು ಗೆದ್ದವರು. ಬಲವಾನರು, ಬುದ್ಧಿವಂತರು ಇದರಲ್ಲಿ ಸೋತರು. ಪ್ರಾಣಿ ಇರಲಿ ಮನುಷ್ಯನಿರಲಿ ಪರಿಸರಕ್ಕೆ, ಪರಿಸ್ಥಿತಿಗೆ ಹೊಂದಿಕೊಂಡು ಜೀವಿಸುವದನ್ನು ಕಲಿತರಷ್ಟೇ ಬದುಕಬಹುದು. ಅದೇ ಸೂಕ್ತರು ಬದುಕುವರು ಸಶಕ್ತರಲ್ಲ ಅನ್ನುವುದು (survival of the fittest). ಈ ಬದಲಾಗುವ ಕ್ರಮ ಪ್ರಕೃತಿಯಲ್ಲಿ ಅನಿವಾರ್ಯ. ಪರಿವರ್ತನೆ ಜಗದ ನಿಯಮ. ಇದು ಎಲ್ಲ ಕ್ರಾಂತಿಗಳಿಗೂ ಅನ್ವಯಿಸುವುದು. […]

ಆನ್ಲೈನ್ ಶಿಕ್ಷಣ – ಪ್ರಯೋಗ?

ಅರ್ಪಣಾ ಮೂರ್ತಿ ಪ್ರಸ್ತುತ ಪರಿಸ್ಥಿತಿಯಲ್ಲಿ ಶೈಕ್ಷಣಿಕ ವರ್ಷದ ಆರಂಭವೇ ಗೊಂದಲಗಳಿಂದ ಕೂಡಿರುವ ಈ ಸಂದರ್ಭದಲ್ಲಿ, ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಇದಾಗಲೇ ಕಂಡುಕೊಂಡಿರುವ ಶಿಕ್ಷಣದ ಪರ್ಯಾಯ ಮಾರ್ಗದ ಹೆಸರೇ ಈ ಆನ್ಲೈನ್ ಶಿಕ್ಷಣ, ಈ ಪರ್ಯಾಯ ಮಾರ್ಗದ ಶಿಕ್ಷಣಕ್ಕೆ ಸರ್ಕಾರವು ಸಹ ಸಮ್ಮತಿಯ ಮುದ್ರೆ ಒತ್ತಿದೆ. ಈಗಿರುವ ಪ್ರಶ್ನೆಯೆಂದರೆ ಈ ಆನ್ಲೈನ್ ಶಿಕ್ಷಣ ಎಷ್ಟು ಪರಿಣಾಮಾತ್ಮಕವಾಗಿದೆ, ಮಕ್ಕಳ ಕಲಿಕೆಯ ಮಟ್ಟಕ್ಕೆ ಅದೆಷ್ಟು ಪೂರಕವಾಗಿದೆ ಅನ್ನುವುದು. ಮೊದಲಿಗೆ ಪ್ರಾಥಮಿಕ ಶಾಲಾ ಹಂತದ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನೀಡುವುದರ ಕುರಿತು […]

Back To Top