ವಸುಂಧರಾ ಕದಲೂರು
ನಿನ್ನ ಕಂಗಳ ಪ್ರಾಮಾಣಿಕತೆ
ನನ್ನನು ಹಿಂಬಾಲಿಸುತ್ತಿದೆ.
ಭದ್ರ ಕೋಟೆ ಗಟ್ಟಿ ಬೇಲಿ
ಛಿದ್ರಗೊಳಿಸಿ ಎದೆ ತಟ್ಟುತ್ತಿದೆ.
ನೀನು ಮಂಡಿಯೂರಿ ಬಿಡು
ನೀನೂ ಮಂಡಿಯೂರಿ ಬಿಡು
ಮಾರ್ದನಿಸುವ ಮಾತುಗಳಿಗೆ
ಇನ್ನೆಷ್ಟು ಕಾಲ ಕಿವುಡಾಗಿರಲಿ
ಹಾದಿ ಮರೆವ ಮುನ್ನ ನಾಕು
ಹೆಜ್ಜೆ ನಡೆದು ಬರಲೆ
ಹನಿಮುತ್ತು ಜಲಗರ್ಭದ
ಚಿಪ್ಪೊಳಗೆ ಕಾಣೆಯಾಗಲು
ಬಿಡಬೇಡ ಮುಳುಗಿ ತೆಗೆ
ಪಿಸುಮಾತು ಕೇಳುತ್ತಿದೆ
ಪ್ರತಿಧ್ವನಿ ತರಂಗವಾಗಿ
ಹೃದಯದಲಿ ನಯವಾಗಿ
ನವುರಾಗಿ ಲಯವಾಗಿ
ಕಂಪನ ಎಬ್ಬಿಸುತ್ತಿವೆ.
*******
ಕಾಲ ದುಬಾರಿ ತಾನೆಂದು
ಸಾಬೀತು ಪಡಿಸುತ್ತಿದೆ
ಜಾರಿಹೋದ ನೆನಪುಗಳ
ಈಟಿಯಿಂದ ಇರಿಯುತ್ತಾ.
ನಾನು ಶರಣಾಗಿ ಬಿಡಲೆ
ನಾನೂ ಶರಣಾಗಿ ಬಿಡಲೆ
Wow.super Vasundhara