ಲಕ್ಷ್ಮೀ ಪಾಟೀಲ್
ನರ‍್ವಾತ ವಲಯದಿಂದ
ಪೋನಾಯಿಸಿದಾತನೊಬ್ಬ”ಹಲೋ ನಿಮ್ಮ
ಮನೆಯಲ್ಲಿ ದೀಪಾ ಇದ್ದಾರೆಯೇ? “ಎಂದು
ಮಾತಿಗೆ ಪೀಠಿಕೆಯಾದ
ಕೆಂಪಾದ ನಾನು “ಈ ಮನೆಯಲ್ಲಿ
ದೀಪವಾಗಿ ಉರಿಯುವವಳು ನಾನೇ”
ಎಂದು ಕುಕ್ಕಿದೆ ಪಾಪ ಆತನ ಬದುಕು
ಕತ್ತಲಲ್ಲಿ ಕೂತಿರುವುದಕ್ಕೆ ಕೊರಗಿದೆ
ನನ್ನ ಕಣ್ಣ ಕೆಳಗಿನ ಕಪ್ಪಿಗೂ ಬೆದರಿದೆ
ಆಗಂತುಕನೊಬ್ಬ ಫೋನಾಯಿಸಿ
ಏರು ದನಿಯಲ್ಲಿ ಭಾವ ಬಣ್ಣ ಬದಲಿಸಿ
” ನಾಗಮ್ಮನವರು ಇದ್ದಾರಾ? “ಎಂದ
ಅವನ ಕುಟುಕುವ ದನಿಗೆ ಕಟಕಿ ಬೆರಸಿ
“ಮೊಬೈಲ್ ನಾಗಪ್ಪಗಳೆಲ್ಲ
ಭೂಮಿಯ ತುಂಬಾ ಹರಡಿ
ವಿಷ ಬಿಡುತ್ತಿರುವಾಗ ಮನೆಯ
ನಾಗಮ್ಮನವರೆಲ್ಲ ರಸಾತಳ ಸೇರಿ
ನಾಗನೃತ್ಯಕ್ಕೆ ಅಣಿಯಾಗಿದ್ದಾರೆ” ಎಂದೆ
ಹಿಡಿದ ಫೊನೀಗ ನೆಗೆದು ಬಿದ್ದು
ಸೂತಕ ಹರಡಿದೆ
ಈ ಮೊಬೈಲ್ ವಿಚಿತ್ರ ರೀತಿಯ
ಚಕ್ರವ್ಯೂಹಗಳನ್ನು ಕಟ್ಟುತ್ತದೆ
ಒಂದನ್ನು ಭೇದಿಸಿದರೆ
ಮತ್ತೊಂದು ತೆರೆಯುತ್ತದೆ
ಎದುರಿಸಿ ಕಲಿಯಾಗದೇ
ಎಗರಿಸಿ ಕವಿಯಾದೆ
ಕಲಿಯಾಗಿದ್ದರೆ ಯುಗದ ಭಾರ ಹರ‍್ತಿದ್ದೆ
ಕವಿಯಾಗಿ ಹೊತ್ತ ಭಾರ
ಯುಗಕ್ಕೆ ರ‍್ಗಾಯಿಸಿದೆಮೊಬೈಲ್ ಯುಗ
ಭಾರ ಹೊತ್ಕೊಂಡು ನೇತಾಡುತ್ತಿದೆ
ತಿದ್ದುಪಡಿ–1)- ನಿರ್ವಾತ
2)-ವರ್ಗಾಯಿಸಿದೆ