ನಾಗರಾಜ್ ಹರಪನಹಳ್ಳಿ
-೧-
ಎದುರೆ ಪ್ರೀತಿ ಇರುವಾಗ
ಎಲ್ಲಿ ಹೊರಡಲಿ
ಅಲೆಯಲು
-೨-
ಇಳೆಗೆ ಮಳೆಯ ಧ್ಯಾನ
ನನಗೆ ಅವಳ ಹೆರಳ
ಪರಿಮಳದ ಧ್ಯಾನ.
-೩-
ಅವಳ ತುಟಿಗಳು ಮಾತಾಡಿದವು
ಕವಿತೆ ಹುಟ್ಟಿತು
-೪-
ತುಟಿಗೆ ತುಟಿ ಇಟ್ಟೆ
ಜನ್ಮ ಜನ್ಮದ
ಬಂಧನ ನೆನಪಾಯಿತು
-೫-
ಅವಳು ಅಂಗೈಗೆ
ಮುತ್ತಿಟ್ಟಳು
ಪ್ರೇಮದ ಉದಯವಾಯಿತು
-೬-
ಅವಳ ಅಂಗೈಗೆ
ಅದ್ಭುತ ಶಕ್ತಿ
ಅದಕೆ
ಬೆಸುಗೆಗೆ ಬಿಸಿ
-೭-
ನನ್ನ ಬಲ ಅಂಗೈ ನೋಡಿಕೊಂಡಾಗಲೆಲ್ಲಾ
ಅವಳ ಮುಖದ್ದೇ ನೆನಪು
ಕಾರಣ
ಮೊದಲು ಅವಳ ತುಟಿ ತಾಗಿದ್ದು
ಅಂಗೈಗೆ
*
-೮-
ಆಕೆ ಹೇಳುವುದು
ಒಂದೇ
ಉಸಿರಾಟದ ಏರಿಳಿತ
ಎದೆ ಬಡಿತ ನೀನು
-೯-
ಎದೆಯ ಮೇಲೆ ಕೈಯಿಟ್ಟರೆ
ಅವಳ ಹೆಸರು
ಕಿವಿಗೆ ಅಪ್ಪಳಿಸಿತ
-೧೦-
ಕುಡಿಯುತ್ತಿದ್ದೆ ಅಲೆಯುತ್ತಿದ್ದೆ
ಅವಳ ದರ್ಶನವಾಯಿತು
ಎದೆಗೆ ಪ್ರೀತಿಯ ಬೀಜ
ಹಾಕಿದಳು
ಅದೀಗ ಹೆಮ್ಮರವಾಗಿದೆ
**********
ಕವಿತೆ ಚೆನ್ನಾಗಿದೆ bro…
ಥ್ಯಾಂಕ್ಸ ಸಹೋದರಿ….
ಮಧು ಬಟ್ಟಲಿನಿಂದ ಅದ್ದಿ ತಗೆದಂತಿದೆ ಕವಿತೆ.ಪ್ರತಿಯೊಂದು ಇಬ್ಬನಿಯೂ ಪ್ರೀತಿಯ ಎಳೆಬಿಸಿಲ ಸ್ಪರ್ಶಕ್ಕೆ ಹೆಣ್ಣ ನತ್ತಿನಂತೆ ಹೊಳೆಯುತ್ತವೆ.ಚಂದವೋ ಚಂದ..
ಥ್ಯಾಂಕ್ಯೂ ಗೌಡ್ರೇ..
ಪ್ರೇಮದ ಭಾಷೆ ಅರಿತವನೇ ಬಲ್ಲ….ಆತನಲ್ಲಿ ಪ್ರೀತಿ ಕುಡಿಯೊಡೆದರೆ ಮಾತ್ರ ಚಿಗುರು ಗಟ್ಟಿ ಸುಂದರ ಭಾವ…ಸೂಪರ್… ಕಣ್ರಿ