ನಿಮ್ಮೊಂದಿಗೆ
ಸಂಗಾತಿ (ಸಾಹಿತ್ಯದ ಅಂತರ್ಜಾಲ ಬ್ಲಾಗ್) ಶುರು ಮಾಡಿ ಎರಡು ತಿಂಗಳು-ಇವತ್ತಿಗೆ ಅರವತ್ತಾರು ದಿನಗಳಾದವು. ಅಂದಾಜು 40ರಿಂದ 50 ಲೇಖಕರ ಸುಮಾರು238 ಬರಹಗಳನ್ನು ಪ್ರಕಟಿಸಲಾಗಿದೆ. 16 ಸಾವಿರ ಜನ ಈ ದಿನದವರೆಗು ಪತ್ರಿಕೆಯ ಸೈಟಿಗೆ ಬೇಟಿ ನೀಡಿದ್ದಾರೆ. ಪತ್ರಿಕೆಯ ಉದ್ದೇಶ ಈಡೇರುತ್ತಿದೆಯಾ ಇನ್ನೂ ನನಗೆ ಅರ್ಥವಾಗಿಲ್ಲ.ಪತ್ರಿಕೆಯ ಗುಣಮಟ್ಟದ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕಿದೆ, ಕೆಲವು ಹಿರಿಯ ಬರಹಗಾರರ ಜೊತೆ ಹಲವು ಹೊಸಬರಹಗಾರರೂ ಬರೆಯುತ್ತಿರುವುದರಿಂದ ಪ್ರಕಟವಾದದ್ದೆಲ್ಲ ಶ್ರೇಷ್ಠವೆಂದೊ ಇಲ್ಲ ಕಳಪೆಯೆಂದು ಜನರಲೈಸ್ ಮಾಡಿ ಬಿಡಲಾಗುವುದಿಲ್ಲ. ಇನ್ನು ಈಗಾಗಲೇಬರೆದು ಹೆಸರು […]
ಸ್ವಾತ್ಮಗತ
ಹೈದರಾಬಾದ್ ಕರ್ನಾಟಕ 371ನೆ ಕಲಂ ತಿದ್ದುಪಡಿಯ ಬಗ್ಗೆ ಕೆ.ವು ಲಕ್ಕಣ್ಣವರ ಸಮಗ್ರ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ೩೭೧ ನೇ ಕಲಂ ತಿದ್ದುಪಡಿ ಮಾಡಲೇಬೇಕು..! ದಕ್ಷಿಣ ಕರ್ನಾಟಕಕ್ಕೆ ಉತ್ತರ ಕರ್ನಾಟಕವೆಂದರೆ ಮುಂಬೈ ಕರ್ನಾಟಕ ಹಿಂದುಳಿದ ಪ್ರದೇಶ. ಇನ್ನೂ ಮುಂಬೈ ಕರ್ನಾಟಕಕ್ಕೆ ಹೋಲಿಸಿದರೆ ಹೈದರಾಬಾದ್ ಕರ್ನಾಟಕ ತೀರಾ ಹಿಂದುಳಿದ ಪ್ರದೇಶವಾಗಿದೆ. ಈ ಕಾರಣಕ್ಕಾಗಿಯೇ ಈ ಹೈದರಾಬಾದ್ ಕರ್ನಾಟಕಕ್ಕೆ ೩೭೧ನೇ ಕಲಂ ಜಾರಿ ಮಾಡಿರುವುದು. ಆದರೆ ಈ ೩೭೧ನೇ ಕಲಂ ಜಾರಿಯಾದರೂ ಈ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಗಗನಕುಸುಮವಾಗಿದೆ. ಈ ಕಾರಣಕ್ಕಾಗಿಯೇ […]
ಪುಸ್ತಕ ವಿಮರ್ಶೆ
ಕೃತಿ:ಮೆಟ್ಟಿಲಿಳಿದು ಹೋದ ಪಾರ್ವತಿ’..! ಲೇಖಕಿ: ಡಾ.ಕಮಲಾ ಹೆಮ್ಮಿಗೆ ಕೆ.ಶಿವು ಲಕ್ಕಣ್ಣವರ ‘ಅಗ್ನಿದಿವ್ಯ’ದಿಂದೆದ್ದು ಬಂದ ಹೆಣ್ಣುಗಳ ಕಥೆಗಳಿವು ಈ ಡಾ.ಕಮಲಾ ಹಮ್ಮಿಗೆಯವರ ‘ಮೆಟ್ಟಿಲಿಳಿದು ಹೋದ ಪಾರ್ವತಿ’..! ಕಥೆ ಕಟ್ಟುವುದು ಧ್ಯಾನದ ಪ್ರತೀಕ. ತಾಳ್ಮೆ, ಸಾಮಾಜಿಕ ಕಳಕಳಿ, ಪಾತ್ರದ ವೈವಿಧ್ಯ, ಅಭಿಪ್ರಾಯ ಮತ್ತು ಅಭಿವ್ಯಕ್ತಿಗಳ ನಿಪುಣತೆಯನ್ನು ಬೇಡುತ್ತದೆ ಕಥೆ ಕಟ್ಟುವ ಕಲೆ. ಆ ಕಲೆ ಮತ್ತು ವೈವಿಧ್ಯ ಮತ್ತು ಕಥೆ ಕಟ್ಟುವ ತಾಳ್ಮೆಯ ನಿಪುಣತೆಯನ್ನು ಕಮಲಾ ಹೆಮ್ಮಿಗೆಯವರು ಉಳ್ಳವರುವರಾಗಿದ್ದಾರೆ… ಸೂಕ್ಷ್ಮ ಕೆನ್ವಾಸಿನಲ್ಲಿ ಒಡಮೂಡುವ ಚಿತ್ರ ಮತ್ತು ಅತೀ ಸೂಕ್ಷ್ಮ ಸಂಗತಿಗಳ […]
ಅವ್ಯಕ್ತಳ ಅಂಗಳದಿಂದ
ಅವ್ಯಕ್ತ ಸಿಟ್ಟು ಸಿಟ್ಟು ಒಬ್ಬ ಮನುಷ್ಯ ಅಂದಮೇಲೆ ಅವನಿಗೆ ಎಲ್ಲಾತರದ ಭಾವನೆಗಳು ಇರುವುದು ಸಹಜ. ಭಾವನೆಗಳ ಸರಮಾಲೆಯಲ್ಲಿ ಅವನು ತನ್ನನ್ನು ತಾನು ವೈಯಕ್ತಿಕವಾಗಿ, ಮಾನಸಿಕವಾಗಿ ಬೆಳೆಸುತ್ತಾನೆ.ಶಾಲೆಗಳಲ್ಲಿ ಈ ನಿಟ್ಟಿನಲ್ಲಿ ಮಕ್ಕಳ ಮೇಲೆ ಪ್ರಭಾವಗಳು ಕಡಿಮೆಯೇ. ಸಮಯದ ಅಭಾವವೊ, ಹೊಸ ಹೊಸ ಕಾನೂನುಗಳ ಮಧ್ಯಸ್ತಿಕೆಯೊ, ಅಂಕಪಟ್ಟಿ ಹಾಗೂ ಅಂಕಗಳ ನಡುವಿನ ಹೋರಾಟವೋ, ತಿಳಿಯದು. ಹೀಗೆ ಒಬ್ಬ ಭಾವನಾ ಲೋಕದ ತಿರುವುಗಳಲ್ಲಿ ಸಿಲುಕಿಕೊಂಡು ಒದ್ದಾಡುತ್ತಾನೆ. ಇವನೊಬ್ಬ ಅತಿ ತೆಳು ಮೈಕಟ್ಟಿನ ಸರಳ ಜೀವಿ. ‘ಮಿಸ್’ ‘ಮಿಸ್’ ಎಂದು ಹೇಳಿಕೊಂಡು ಇರುವುದೇ ಒಂದು […]
ಸ್ವಾತ್ಮಗತ
“ಕರ್ನಾಟಕ ಗಾಂಧಿ” ಹಾಗೂ ವಿಭೂತಿ ಪುರುಷ ಹರ್ಡೇಕರ ಮಂಜಪ್ಪ ..! ಕೆ.ಶಿವು ಲಕ್ಕಣ್ಣವರ್ ದೇಶದ ಸ್ವಾತಂತ್ರಕ್ಕಾಗಿನ ಹೋರಾಟದಲ್ಲಿ ತಮ್ಮ ನಿಸ್ವಾರ್ಥ ಸೇವೆಯಿಂದ ಶಿಕ್ಷಣ, ಸಮಾಜ ಸೇವೆ, ವೈದ್ಯಕೀಯ ಮತ್ತು ಕರಕುಶಲ ಕಲೆಗಳಲ್ಲಿ ನುರಿತವರಾದ ಹಲವಾರು ಮಂದಿ ಹೆಸರಾಗಿದ್ದಾರೆ… ಮಹಾತ್ಮ ಗಾಂಧೀಜಿಯವರ ನೇರ ಪ್ರಭಾವಕ್ಕೆ ಒಳಗಾದ ಕರ್ನಾಟಕದ ಹಲವಾರು ಮಹಾಪುರುಷರು ಮತ್ತು ಮಹಿಳೆಯರು ಕೂಡಾ ಇಂತಹ ಮಹನೀಯರ ಸಾಲಿನಲ್ಲಿ ಪ್ರಮುಖರಾಗಿದ್ದು ಈ ನಿಟ್ಟಿನಲ್ಲಿ, ಉಮಾಬಾಯಿ ಕುಂದಾಪುರ್, ಕಮಲಾದೇವಿ ಚಟ್ಟೋಪಾದ್ಯಾಯ, ಎನ್. ಎಸ್. ಹರ್ಡೇಕರ್ ಅವರುಗಳು ಸಮಾಜ ಸೇವೆಯಲ್ಲಿ ಮಹತ್ವವಾದ […]
ಲಹರಿ
ಕವಿತೆಯ ಜಾಡು ಹಿಡಿದು ಸ್ಮಿತಾಅಮೃತರಾಜ್. ಸಂಪಾಜೆ ಈ ಕವಿತೆ ಒಮ್ಮೊಮ್ಮೆ ಅದೆಷ್ಟು ಜಿಗುಟು ಮತ್ತುಅಂಟಂಟು ಅಂದ್ರೆ ಹಲಸಿನ ಹಣ್ಣಿನ ಮೇಣದ ತರ.ಮತ್ತೆ ಮತ್ತೆ ತಿಕ್ಕಿದಷ್ಟೂ ಅಂಟಿಕೊಳ್ಳುತ್ತಾ,ಬಿಡದೇ ಕಾಡುತ್ತಾ ,ಸತಾಯಿಸುತ್ತಾ,ಹಿಂದೆ ಮುಂದೆ ಸುತ್ತಿಸುಳಿದು ಯಾವುದೋ ಭಾವನಾ ತೀರಕ್ಕೆ ಲಗ್ಗೆಯಿಡುತ್ತಾ ತನ್ನನ್ನು ತಾನು ಮರೆವಿಗೆ ನೂಕಿಬಿಡುತ್ತದೆ.ಅರೆ ಕ್ಷಣವೂ ಬಿಟ್ಟೂ ಬಿಡದ ಆತ್ಮಸಂಗಾತಿಯಂತೆ ಪಕ್ಕಕ್ಕಿರುತ್ತದೆ.ಕವಿತೆ ಯಾವೊತ್ತೂ ನನ್ನ ಕೈ ಬಿಡಲಾರದು ಎಂಬ ಗುಂಗಿನಲ್ಲೇ, ತುಸು ಹೆಚ್ಚೇ ಹಚ್ಚಿಕೊಂಡು,ಯಾವುದಕ್ಕೂವಿನಾಕಾರಣ ತಲೆಕೆಡಿಸಿಕೊಳ್ಳದೇ,ಕವಿತೆಯನ್ನು ನನ್ನ ತೆಕ್ಕೆಯೊಳಗಿಟ್ಟೋ..ಅಥವಾ ಕವಿತೆಯತೆಕ್ಕೆಯೊಳಗೆ ತಾನು ಬಿದ್ದೋ,ಒಟ್ಟಿನಲ್ಲಿ ಕವಿತೆಯ ಸಾಂಗತ್ಯದಲ್ಲಿ ಬದುಕು ಸುಖಿ ಅಂತಗುನುಗಿಕೊಳ್ಳುತ್ತಿರುವಾಗಲೇ..ಹಾದಿಯುದ್ದಕ್ಕೂ […]
ಗಝಲ್ ಸಂಗಾತಿ
ಗಝಲ್ ಡಾ.ಗೋವಿಂದ ಹೆಗಡೆ ತಪ್ಪು ನನ್ನದೇ ಗೆಳತಿ,ಬಿಡದೆ ಚುಂಬಿಸಿದೆ ಕೊಳ್ಳಿಯನ್ನು ಊದಿ ಊದಿ ಉರಿಸಬಾರದಿತ್ತು ಹೀಗೆ ನಿನ್ನ ಒಡಲನ್ನು ಎದೆಯ ಆಳ-ಅಗಲಗಳ ನಾನೇಕೆ ಕುಗ್ಗಿಸಿಕೊಂಡೆ ಅಗ್ಗವಾಗಿಸಬಾರದಿತ್ತು ಹೀಗೆ ನನ್ನ ನಿಲುವುಗಳನ್ನು ಕಂಬನಿಯಿಂದಲ್ಲವೇ ಕಿಲುಬೆದೆಯ ತೊಳೆಯುವುದು? ನಿಚ್ಚಳ ನೋಡಬೇಕಿನ್ನು ಹರಿದೆಲ್ಲ ಪೊರೆಗಳನ್ನು ಹಸಿದಿರುವೆನೆಂದು ಸಿಕ್ಕಿದ್ದನ್ನೆಲ್ಲ ತಿನ್ನಲಾದೀತೇನು ಉಳಿಸಿಕೊಳ್ಳಲೇಬೇಕು ನೀನು ಕೊಟ್ಟ ಒರೆಗಳನ್ನು ಬಿದ್ದಾಗಲೂ ನಾನು ನಾನೇ ಮರೆಯಬಾರದು, ಸಖೀ ಉಳಿಸುವೆ ಉಡುಗಲು ಬಿಡದೆ ಎದೆಯ ಪಿಸುದನಿಗಳನ್ನು =============
ಅನುವಾದ ಸಂಗಾತಿ
ಮೂಲ: ಜಾವಿದ್ ಆಖ್ತರ್.. ಅನುವಾದ ಸಂಗೀತ ಶ್ರೀಕಾಂತ ಯಾವಗಲೆಲ್ಲ ನೋವಿನ ಮೋಡ ಹರಡುತ್ತದೆಯೊ, ಯಾವಗಲೆಲ್ಲ ಬೇಸರದ, ನೆರಳು ಹರಡುತ್ತದೆಯೋ, ಯಾವಗಲೆಲ್ಲಾ ಕಣ್ಣಿಂದ ಹನಿ ರೆಪ್ಪೆಯ ಬಳಿ ಬರುತ್ತದೆಯೋ, ಯಾವಗಲೆಲ್ಲಾ ಏಕಾಂತದಿಂದ ಹೃದಯ ಹೆದರುತ್ತದೆಯೋ, ಆಗೆಲ್ಲ ನಾನು ನನ್ನ ಹೃದಯವನ್ನು ಸಂತೈಸಿದ್ದೆನೆ ಏ ಹೃದಯವೇ ನೀನೆಕೆ ಹೀಗೆ ಆಳುತ್ತಿದ್ದಿಯಾ ಜಗತ್ತಿನಲ್ಲಿ ಎಲ್ಲರಿಗೂ ಹೀಗೆ ಆಗುತ್ತದೆ. =======
ಸ್ವಾತ್ಮಗತ
ಡಾ.ಕಾಳೇಗೌಡ ನಾಗವಾರ ಅಕ್ಷರಲೋಕದ ಮಹಾತಪಸ್ವಿ ಕೆ.ಶಿವು ಲಕ್ಕಣ್ಣವರ ಅಕ್ಷರಲೋಕದ ಮಹಾತಪಸ್ವಿ ಡಾ.ಕಾಳೇಗೌಡ ನಾಗವಾರರು..! ಮೊನ್ನೆ ನನ್ನ ಪುಸ್ತಕದ ಸಂದೂಕದಲ್ಲಿ ಏನೋ ಒಂದು ಪುಸ್ತಕ ಹುಡುಕುತ್ತಿದ್ದೆ. ಆಗ ಅಕಸ್ಮಾತ್ತಾಗಿ ನನ್ನ ನೆಚ್ಚಿನ ಬರಹಗಾರ ಕಾಳೇಗೌಡ ನಾಗವಾರರ ‘ಬೆಟ್ಟಸಾಲು ಮಳೆ’ ಕತಾ ಸಂಕಲನ ಕೈಗೆಟುಕಿತು. ಆ ಕತಾ ಸಂಕಲನವನ್ನು ಸಮಾಜವಾದಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎನ್. ಎನ್. ಕಲ್ಲಣ್ಣನವರ ಮಗ, ನನ್ನ ಆತ್ಮೀಯ ಗೆಳೆಯನಾದ ಚಿತ್ತರಂಜನ ಕಲ್ಲಣ್ಣನವರ (ಈ ಚಿತ್ತರಂಜನ ಕಲ್ಲಣ್ಣನವರ ಈಗಿಲ್ಲ) ಕೊಟ್ಟಿದ್ದನು. ಅದನ್ನು ಹಾಗೇ […]
ಕಾವ್ಯಯಾನ
ಆತನೊಲವು ಆತ್ಮ ಭಲವು ಜಗವ ಪ್ರೀತಿಸಿದ ಸಂತನ ಹುಟ್ಟು ಹಬ್ಬದ ಶುಭಾಷಯಗಳು ಸತ್ಯಮಂಗಲ ಮಹಾದೇವ ಕೇಳುತ್ತೀರಿ ನೀವು ನೀನು ಯಾರು ಎಂದು ಉತ್ತರಿಸಿದರೆ ಸಾಕು ನಿಮ್ಮದೇ ಉಯಿಲು ಲೋಕದ ಪಡಸಾಲೆಯಲ್ಲಿ ಹೇಳುವುದನ್ನು ಹೇಳಲೇ ಬೇಕು ಕಲ್ಲು ಮುಳ್ಳಿನ ಹಾದಿಯಲಿ ಮುಳ್ಳಿನ ಕಿರೀಟ ಹೊತ್ತ ಸಂತ ಮೈ ತುಂಬಾ ರಕ್ತದ ಧಾರೆ ಹರಿಯುತ್ತಿರಲು ಪ್ರೇಮದ ಸಾಕ್ಷಿ ಈ ರಕುತವೆಂದ ತಿವಿದವರ ತಿಳುವಳಿಕೆಯ ಕ್ಷಮಿಸಿರೆಂದ ಸಂಕಟಪಡುವವರ ಆತ್ಮ ಸಖನಾದ ನನ್ನೊಳಗೆ ನನ್ನನ್ನು ತಿಳಿಸಿದ ನೀನು ಯಾರು ಯಾವ ಊರು, ಯಾರಮಗ, […]