ಕೃತಿ:ಮೆಟ್ಟಿಲಿಳಿದು ಹೋದ ಪಾರ್ವತಿ’..!
ಲೇಖಕಿ: ಡಾ.ಕಮಲಾ ಹೆಮ್ಮಿಗೆ
ಕೆ.ಶಿವು ಲಕ್ಕಣ್ಣವರ
‘ಅಗ್ನಿದಿವ್ಯ’ದಿಂದೆದ್ದು ಬಂದ ಹೆಣ್ಣುಗಳ ಕಥೆಗಳಿವು ಈ ಡಾ.ಕಮಲಾ ಹಮ್ಮಿಗೆಯವರ ‘ಮೆಟ್ಟಿಲಿಳಿದು ಹೋದ ಪಾರ್ವತಿ’..!
ಕಥೆ ಕಟ್ಟುವುದು ಧ್ಯಾನದ ಪ್ರತೀಕ. ತಾಳ್ಮೆ, ಸಾಮಾಜಿಕ ಕಳಕಳಿ, ಪಾತ್ರದ ವೈವಿಧ್ಯ, ಅಭಿಪ್ರಾಯ ಮತ್ತು ಅಭಿವ್ಯಕ್ತಿಗಳ ನಿಪುಣತೆಯನ್ನು ಬೇಡುತ್ತದೆ ಕಥೆ ಕಟ್ಟುವ ಕಲೆ. ಆ ಕಲೆ ಮತ್ತು ವೈವಿಧ್ಯ ಮತ್ತು ಕಥೆ ಕಟ್ಟುವ ತಾಳ್ಮೆಯ ನಿಪುಣತೆಯನ್ನು ಕಮಲಾ ಹೆಮ್ಮಿಗೆಯವರು ಉಳ್ಳವರುವರಾಗಿದ್ದಾರೆ…
ಸೂಕ್ಷ್ಮ ಕೆನ್ವಾಸಿನಲ್ಲಿ ಒಡಮೂಡುವ ಚಿತ್ರ ಮತ್ತು ಅತೀ ಸೂಕ್ಷ್ಮ ಸಂಗತಿಗಳ ಅತಿ ಅಗತ್ಯತೆಗಳನ್ನು ಕಥೆ ಕೇಳುತ್ತದೆ. ಕಥೆಯ ಸೂಕ್ಷ್ಮತೆಯನ್ನು ಕಮಲಾ ಹೆಮ್ಮಿಗೆ ಬಲ್ಲವರಾಗಿದ್ದಾರೆ. ಮತ್ತು ಆ ಸೂಕ್ಷ್ಮ ಸಂಗತಿಗಳನ್ನು ಪೂರೈಸಿದ್ದಾರೆ ಇಲ್ಲಿ…
ಕಮಲಾ ಹೆಮ್ಮಿಗೆಯವರು ತಮ್ಮ ಜೀವನದುದ್ದಕ್ಕೂ ಇಟ್ಟುಕೊಂಡೇ ಜೀವಿಸಿದ್ದವರಾಗಿರೆ. ಅದಕ್ಕಾಗಿ ಆ ಎಲ್ಲಾ ಸೂಕ್ಷ್ಮಗಳನ್ನೂ ಉಳ್ಳವರಾಗಿದ್ದಾರೆ…
ಡಾ.ಕಮಲಾ ಹಮ್ಮಿಗೆಯವರು ಸಾಹಿತ್ಯ ಪ್ರಕಾರಗಳ ಎಲ್ಲಾ ವಿಧದ ಸಾಹಿತ್ಯ ರಚನೆ ಮಾಡಿದರೂ ಅವರು ಜಾನಪದ ಸಾಹಿತ್ಯಕ್ಕೆ ಬಹು ಒಲವು ಕೊಟ್ಟವರು…
ಡಾ.ಕಮಲಾ ಹಮ್ಮಿಗೆಯವರ ಪ್ರತಿಯೊಂದು ಬರಹಗಳಲ್ಲೂ ಮುಖ್ಯವಾಗಿ ‘ಹೆಣ್ಣು’ ಪ್ರಧಾನವಾಗಿ ಇದ್ದೇ ಇರುತ್ತಾಳೆ. ಆ ಹೆಣ್ಣು ಗಟ್ಟಿಗಿತ್ತಿಯಾಗಿರುತ್ತಾಳೆ ಕೂಡ…
ಈಗ ಮಲಯಾಳಂನ ಗ್ರೇಸಿಯವರ ಈ ಪುಸ್ತಕವನ್ನು ಡಾ.ಕಮಲಾ ಹಮ್ಮಿಗೆಯವರು ‘ಮೆಟ್ಟಿಲಿಳಿದು ಹೋದ ಪಾರ್ವತಿ’ ಕಥೆಗಳ ಸಂಕಲನ ತಂದಿದ್ದಾರೆ…
ಇಲ್ಲಿ ಬರುವ ಗಟ್ಟಗಿತ್ತಿ ‘ಹೆಣ್ಣು’ ‘ಪಾತ್ರ’ ಮಾತ್ರವಾಗಿಲ್ಲ. ಅವಳು ಸ್ವತಃ ಡಾ.ಕಮಲಾ ಹಮ್ಮಿಗೆಯವರೇ ಆಗಿದ್ದಾರೆ…
ಈ ಕಥೆ ಸಂಕಲನದಲ್ಲಿ ಎಲ್ಲೂ ಸಂಕೀರ್ಣವಾದ ವಾಕ್ಯಗಳಿಲ್ಲ. ಗೋಜು ಗೋಜಲುಗಳಾದ ಸಂವೇದನೆಗಳಿಲ್ಲ. ಮೂಲ ಕೃತಿಯಾದ ಗ್ರೇಸಿಯವರ ‘ಪದಿಯೆರಂಗಿ ಪೋಯಾ ಪಾರ್ವತಿ’ ಕೃತಿಯ ನೆರಳಿನಂತಿಯೂ ಇಲ್ಲ. ಅದು ಕಮಲಾ ಹಮ್ಮಿಗೆಯವರ ಸ್ವಂತ ಅಭಿವ್ಯಕ್ತಿಯೂ ಅಗಿದೆ.
ಈ ಕಮಲಾ ಹಮ್ಮಿಗೆಯವರ ಅನುವಾದಿತ ಕೃತಿ ಸರಳ ಭಾಷೆಯಲ್ಲಿದೆ…
ಕಥೆಗಾರರಾಗಿ, ಜಾನಪದ ವಿದುಷಿಯಾಗಿ, ಕವಿಯಿತ್ರಿಯಾಗಿ, ಅನುವಾದಕ ಲೇಖಕಿಯಾಗಿ, ತಮ್ಮ ಹೆಜ್ಜೆ ಗುರುತು ಮೂಡಿಸಿರುವ ಡಾ.ಕಮಲಾ ಹಮ್ಮಿಗೆಯವರು ಈ ಅನುವಾದಿತ ‘ಮೆಟ್ಟಿಲಿಳಿದು ಹೋದ ಪಾರ್ವತಿ’ ಕಥೆಗಳ ಸಂಕಲನ ತಂದಿದ್ದಾರೆ ಡಾ.ಕಮಲಾ ಹಮ್ಮಿಗೆಯವರು…
ಸವಾಲುಗಳಿಗೆಲ್ಲ ಎದೆಯೊಡ್ಡಿ, ಅವುಗಳನ್ನೆಲ್ಲಾ ಹಿಂದಿಕ್ಕಿ ಈ ಅಕ್ಷರ ಜಗತ್ತಿನಲ್ಲಿ ಸಂಚರಿಸಿದ್ದು ಅವರ ವೈಶಿಷ್ಟ್ಯವೂ ಹೌದು…
ಖ್ಯಾತ ಲೇಖಕಿ ಶಶಿ ದೇಶಪಾಂಡೆಯವರ ‘ಭಯದ ಮೂಲ ಕತ್ತಲಲ್ಲ’ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಸೀತಾಕಾಂತ ಮಹಾಪಾತ್ರರ ‘ಶಬ್ದಭರಿತ ಆಕಾಶ’ ಕೃತಿಗಳ ಅನುವಾದದಿಂದ ಸಾಹಿತ್ಯ ಜಗತ್ತಿನಲ್ಲಿ ಹೆಸರು ಡಾ.ಕಮಲಾ ಹಮ್ಮಿಗೆಯವರು ‘ಅಗ್ನಿಶಾಕ್ಷಿ’ಯ ಮೂಲ ಮಲಯಾಳಂನ ಲಲಿತಾಂಬಿಕಾ ಅಂತರ್ಜನಂ ಮತ್ತು ಇದೇ ಮಲಯಾಳಂನ ಕಥೆಗಳು ಕಮಲಾದಾಸರ ‘ಗಂಧದ ಗಿಡಗಳು’ ಕೃತಿಗಳನ್ನು ಸುಲಭವಾಗಿ ಮತ್ತು ಸರಳವಾಗಿ ಕನ್ನಡಕ್ಕೆ ತಂದವರು ಕಮಲಾ ಹಮ್ಮಿಗೆಯವರು…
ಶ್ರೀಮತಿ ಕಮಲಾದಾಸರ ಉತ್ತರಾಧಿಕಾರಿಯಾಗಿರುವ ಶ್ರೀಮತಿ ಗ್ರೇಸಿಯವರ ‘ಮೆಟ್ಟಿಲಿಳಿದು ಹೋದ ಪಾರ್ವತಿ’ಯನ್ನು ಕನ್ನಡ ಓದುಗರಿಗೆ ಉಣಬಡಿಸಾದ್ದಾರೆ ಕಮಲಾ ಹಮ್ಮಿಗೆಯವರು…
ತಮ್ಮನ್ನು ಓರ್ವ ಸ್ತ್ರೀವಾದಿ ಎಂದು ಹೇಳಿಕೊಳ್ಳದಿದ್ದರೂ ಲಿಂಗ ತಾರತಮ್ಯ ಸಮಾಜದ ಅಘೋಷಿತ ನೀತಿ ಸಂಹಿತೆಗಳ ಉಲ್ಲಂಘನೆ, ಪುರಾಣ ಭಂಜನ, ಇವುಗಳಿಂದ ‘ಗೇಸಿ’ಯವರು ವಿಶಿಷ್ಟ ಛಾಪನ್ನು ಒತ್ತಿರುವುದು ಇಲ್ಲಿಯ ಕಥೆಗಳಿಂದ ಸ್ಪಷ್ಟವಾಗುತ್ತದೆ. ಇದಕ್ಕೆ ಸಾಕ್ಷಿಯಾಗಿವೆ ಇಲ್ಲಿಯ ‘ಒಂದು ಸತ್ಯಸಂಧ ಪುಟದ ನೆರಳು’ ಮತ್ತು ‘ಪಾಂಚಾಲಿ’ ಕಥೆಗಳು…
‘ಪಾಂಚಾಲಿ ಕಥೆಯ ನಾಯಕನಲ್ಲಿ ಪಾಂಡವರ ಗುಣ ಲಕ್ಷಣಗಳು ಇವೆ! ಆದುನಿಕ ಭೂಮಿಕೆಯ ಇಲ್ಲಿಯ ನಾಯಕಿ ಐದು ಮಂದಿಯಲ್ಲಿ ಆಸಕ್ತಿ ತೋರಿ, ಕಡೆಗೆ ‘ಫಲ್ಗುಣ’ನನ್ನು ವರಿಸುತ್ತಾಳೆ! ಆದರೆ ಕಡೆಗೂ ಆಕೆ ಬಯಸುವುದು ಕಷ್ಟಗಳಿಗೆ ಕಿವಿಯಾಗುವ ಸಖ ‘ಕೃಷ್ಣನನ್ನು!
ಮುಗ್ಧ ಬದುಕುಗಳು ನಗರದಲ್ಲಿ ಮೋಸಗಾರರಿಂದ ಹೇಗೆ ನಾಶವಾಗುತ್ತವೆ ಎಂಬುದನ್ನು ‘ದೂರದಿಂದ ಬಂದ ಜಾದೂಗಾರ’ ಹೇಳುತ್ತದೆ. ಇಲ್ಲಿ ಬರುವ ‘ಇಂದ್ರಜಾಲ’ ಅಕ್ಷರಶಃ ನಿಜವಲ್ಲದಿರಬಹುದು, ಆದರೆ ‘ಕಾಪಟ್ಯ’ ಕಣ್ಣಿಗೆ ಹೊಡೆಯುವ ಅಂಶ. ಪಿಂಗಾಣಿ ಬಟ್ಟಲು, ಬಿದ್ದು ಛಿದ್ರವಾದಂತೆ ಭಾಸವಾಗಿ ಮನ ಮರುಕ ಪಡುತ್ತದೆ…
‘ಗ್ರೇಸಿ’ಯವರಿಗೆ ಕಮಲಾದಾಸರಂತೆ ಕಾಮವೊಂದು ವ್ಯಸನವಲ್ಲ..ಬದುಕಿನ ವಿವಿಧ ಮಗಲಗಳೂ ಮುಖ್ಯವಾಗುತ್ತವೆ. ಓದುಗರಿಗೆ’ ಶಾಕ್’ ನೀಡುವ ಗೋಜಿಗವರು ಹೋಗರು. ‘ಅಳಿದ ಮೇಲೆ’ ಎಂಬ ಕಥೆಯನ್ನೇ ನೋಡಿದರೂ ಇದು ಸ್ಪಷ್ಟವಾಗುವುದು. ಗಂಡ, ತಾಯಿ, ತಂದೆ ಎಲ್ಲರೂ ಪ್ರತಿಕ್ರಿಯಿಸುವ ರೀತಿಯನ್ನು ತೀರಾ ವಾಸ್ತವವಾಗಿ, ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾರೆ. ಇಲ್ಲೂ ತಾಯಿ ಕೂಡ ತನ್ನ ಹೆತ್ತ ಮಗಳ ದುಃಖವನ್ನು ಅರಿಯಲು ಯತ್ನಸುಲೆಸುದಿಲ್ಲವಲ್ಲ ಶವದ ‘ಸ್ವಗತ’ ಕಥೆ ಸಶಕ್ತವಾಗಿದೆ…
ನನ್ನನ್ನು ತೀರಾ ಸೆಳೆದಿದ್ದೆಂರೆ ‘ಹೀಗೊಂದು ಜಾಗ’! ಆ ತಂದೆಯಿಲ್ಲದ ಪುಟ್ಟ ಹುಡುಗಿ, ಭ್ರಮಿಷ್ಠ ತಾಯಿ ನೋಡಿಕೊಳ್ಳುವ ಅನಿಯಮ್ಮನೆಂಬ ಹೆಂಗಸು, ಇದಿಷ್ಟೇ ಸೀಮಿತ ಜಗತ್ತು! ಒಮ್ಮೆ ಇದುರಿಗಿದ್ದ ಮನೆಯಲ್ಲಿ ಪತ್ನಿ ಮನೆಯಲ್ಲಿರದಾಗ ನಡೆದ ಕೆಲಸದಾಕೆಯೊಂದಗಿನ ಪತಿಯ ಭಾನಗಡಿ, ಹುಡುಗಿಯ ಮನ ಕದಕಿ, ಗವಾಕ್ಷಿ ಮುಚ್ಚಿಡುವುದು, ಆಕೆ ಪುಸ್ತಕಗಳಲ್ಲಿ ಮುಳುಗುವುದು, ತಾಯಿಯ ಸಾವು ಕೂಡ ಏನೂ ಅನ್ನಿಸದೆ, ಬೃಹದ್ಗಂಥದೊಳಗೊಂದು ಪುಟವಾಗಿ ಸೇರಿಹೋಗುವುದು… ಅಬ್ಬ! ದೀಡು ಪುಟದ ಕಥೆಯಲ್ಲಿ ಅದ್ಭುತ ‘ಫ್ಯಾಂಟಸಿ’ ಬದುಕಿನ ‘ಒಜ್ಜೆ’ ಇವನ್ನೆಲ್ಲಾ ಗ್ರೇಸಿಯವರು ಸುಲಲಿತವಾಗಿ ಮತ್ತು ಸರಳವಾಗಿ ಧ್ವನಿಪೂರ್ಣವಾಗಿ ಹೇಗೆ ಚಿತ್ರಿಸಿದ್ದಾರೆ!
ಇನ್ನು ‘ಅರುಂಧತಿ’ಯಂಥ ಎಷ್ಟೋ ಹೆಣ್ಣುಗಳಿಗೆ ಗ್ರೇಸಿಯವರು ಧ್ವನಿಯಾಗಿದ್ದಾರೆ. ಆ ಧ್ವನಿಯನ್ನೇ ನಮ್ಮ ಡಾ.ಕಮಲಾ ಹಮ್ಮಿಗೆ ಕನ್ನಡಕ್ಕೆ ತಂದಿದ್ದು ಸ್ತುತಾರ್ಹ. ಇಲ್ಲಿ ಆಕ್ರೋಶವಿರದೇ ತೀವ್ರ ಅನುಕಂಪವಿದೆ. ಮನೋವಿಶ್ಲೇಷಣೆಯ ನಿರೂಪಣೆ ಇದೆ…
‘ಪರದೇಶಿಯ ಪ್ರಸಂಗ’, ‘ಬೆಕ್ಕು’ ಇವುಗಳೂ ಕೂಡ. ಅರೆ ವಾಸ್ತವವಾಗಿ ಹಾಗೂ ಕಾಲ್ಪನಿಕತೆಗಳ ನಡುವೆ ಸುಳಿವ ಕಥೆಗಳಿವು. ತೃತೀಯ ಲಿಂಗಿಯ ಅಳಲನ್ನು ಬಹುಶಃ ಮೊದಲು ಹೇಳಿದ ಕಥೆಗಳಿವು…
‘ಬೆಕ್ಕು’ ಮೂರನೇ ‘ಅವನ’ ಕುರಿತದ್ದು. ಗಂಡನಿಗೆ ಪತ್ನಿ, ಬೆಕ್ಕಿನಂತೆ ಕಾಣುವುದು, ಬಹು ದೊಡ್ಡ ‘ಐರನಿ’ಯಾಗಿದೆ.
ಇಲ್ಲಿಯ ‘ಅಗ್ನಿಚಾಮುಂಡಿ’ ಒಂದು ದೀರ್ಘ ಮತ್ತು ಸಂಕೀರ್ಣ ಕಥೆ. ಧರ್ಮದಾಂತರ, ನಂತರದ ಘಟಕಗಳು, ಸರ್ಪಾರಾಧನೆ (ಲೈಂಗಿಕತೆಯ ಸಂಕೇತವೂ ಆಗುವುದು) ಅಜ್ಜನ ವಾಸ್ತವಿಕ ದೃಷ್ಟಿಕೋನ, ಹುಡುಗಿಯ ದುರಂತ, ಇವೆಲ್ಲವನ್ನೂ ಚಿತ್ರಮಯ ಭಾಷೆಯಲ್ಲಿ ಹಿಡಿದಿಟ್ಟಿದ್ದಾರೆ ಗ್ರೇಸಿ. ಈ ಗ್ರೇಸಿಯವರ ಈ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಡಾ.ಕಮಲಾ ಹಮ್ಮಿಗೆ. ಇದು ಅತ್ಯಂತ ಕುತೂಹಲಕಾರಿ ನಿರೂಪಣೆಯಿಂದ ಮಹತ್ವದ್ದಾಗಿದೆ…
‘ಮೆಟ್ಟಿಲಿಳಿದು ಹೋದ ಪಾರ್ವತಿ’ ಅಲ್ಲಲ್ಲ ಮನದ ಮೆಟ್ಟಿಲಿಂದ ಇಳಿದು ಹೋದ ‘ಸಖಿ’ಯ ವೃತ್ತಾಂತವಿದು!
ಇನ್ನು ‘ನಕ್ಷತ್ರ ಜಾರುವ ಸಮಯ’ದ ಬಗೆಗೆ ರಹಸ್ಯವೊಡೆಯಲಾರೆನಾದರೂ, ಗಂಡನ ಬಗೆಗೆ ಅಸಹನೆ ತಾಳಿದ ಹೆಣ್ಣೋರ್ವಳ ಉರಿಯಿದು ಎಂದಷ್ಟೇ ಹೇಳಿ ಈ ಡಾ.ಕಮಲಾ ಹಮ್ಮಿಗೆಯವರ ‘ಮೆಟ್ಟಿಲಿಳಿದು ಹೋದ ಪಾರ್ವತಿ’ ಬಗೆಗಿನ ವಿಮರ್ಶೆಯನ್ನು ನಿಲ್ಲಿಸುವೆ! ಗದ್ಯವಲ್ಲ ಇದು ಪದ್ಯವೂ ಕೂಡ ಹೌದು…
ಕೊನೆಯದಾಗಿ ಡಾ.ಕಮಲಾ ಹಮ್ಮಿಗೆಯವರ ಪ್ರತಿ ‘ಬರಹ’ಗಳಲ್ಲೂ ‘ಹೆಣ್ಣು’ವೊಬ್ಬಳು ಇರುತ್ತಾಳೆ. ಈ ಕಥಾ ಸಂಕಲನದಲ್ಲೂ ಕೂಡ ಆ ‘ಹೆಣ್ಣಿ’ನ ಮೆಲಕು ಇದೆ. ಹೀಗೆ ಹೇಳುತ್ತಾ ಡಾ.ಕಮಲಾ ಹಮ್ಮಿಗೆ ಕೇರಳದಿಂದ ಹಿಂತಿರುಗಿ ಬರುವಾಗ ಇಂತಹ ಮತ್ತಷ್ಟು ‘ಕೃತಿ’ಗಳನ್ನು ಹೊತ್ತು ತರಲಿ ಎಂದು ಆಸಿಸುತ್ತಾ ಇಲ್ಲಿಗೆ ‘ಮೆಟ್ಟಿಲಿಳಿದು ಹೋದ ಪಾರ್ವತಿ’ಯ ನೆನಕೆಗಳನ್ನು ಮುಗಿಸುವೆ…
-======