ನಿಮ್ಮೊಂದಿಗೆ

Black Magnifying Glass

ಸಂಗಾತಿ (ಸಾಹಿತ್ಯದ ಅಂತರ್ಜಾಲ ಬ್ಲಾಗ್) ಶುರು ಮಾಡಿ ಎರಡು ತಿಂಗಳು-ಇವತ್ತಿಗೆ ಅರವತ್ತಾರು ದಿನಗಳಾದವು. ಅಂದಾಜು 40ರಿಂದ 50 ಲೇಖಕರ ಸುಮಾರು238 ಬರಹಗಳನ್ನು ಪ್ರಕಟಿಸಲಾಗಿದೆ. 16 ಸಾವಿರ ಜನ ಈ ದಿನದವರೆಗು ಪತ್ರಿಕೆಯ ಸೈಟಿಗೆ ಬೇಟಿ ನೀಡಿದ್ದಾರೆ. ಪತ್ರಿಕೆಯ ಉದ್ದೇಶ ಈಡೇರುತ್ತಿದೆಯಾ ಇನ್ನೂ ನನಗೆ ಅರ್ಥವಾಗಿಲ್ಲ.ಪತ್ರಿಕೆಯ ಗುಣಮಟ್ಟದ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕಿದೆ, ಕೆಲವು ಹಿರಿಯ ಬರಹಗಾರರ ಜೊತೆ ಹಲವು ಹೊಸಬರಹಗಾರರೂ ಬರೆಯುತ್ತಿರುವುದರಿಂದ ಪ್ರಕಟವಾದದ್ದೆಲ್ಲ ಶ್ರೇಷ್ಠವೆಂದೊ ಇಲ್ಲ ಕಳಪೆಯೆಂದು ಜನರಲೈಸ್ ಮಾಡಿ ಬಿಡಲಾಗುವುದಿಲ್ಲ. ಇನ್ನು ಈಗಾಗಲೇಬರೆದು ಹೆಸರು ಮಾಡಿರುವ ಬರಹಗಾರರಿಗೆಹೊಸ ಪತ್ರಿಕೆಯೊಂದಕ್ಕೆ ಬರೆಯುವ ಮನಸಿದ್ದಂತಿಲ್ಲ, ಅವರದೇನಿದ್ದರೂ ಈಗಾಗಲೇ ಎಸ್ಟಾಬ್ಲಿಶ್ ಆಗಿರುವ ಜನಪ್ರಿಯ ಪತ್ರಿಕೆಗಳಿಗೆ ಮಾತ್ರ ಬರೆಯುವ ಉದ್ದೇಶವಿದ್ದಂತಿದೆ. ಹಿರಿಯ ಬರಹಗಾರರ ಶ್ರೇಷ್ಠತೆಯ ವ್ಯಸನಕ್ಕೆಮದ್ದಿಲ್ಲ. ಆದರೆ ತಾವು ಬರೆಯದೇ ದೂರ ಉಳಿದು,ಸಂಗಾತಿಯ ಗುಣಮಟ್ಟದ ಬಗ್ಗೆ ಟೀಕಿಸುವುದನ್ನು ನಾನು ಒಪ್ಪುವುದಿಲ್ಲ.ಸೋ ನಿಮ್ಮ ಗುಣಮಟ್ಟವಿಲ್ಲ ಎನ್ನುವ ಟೀಕೆಗಳಿಗೆ ಉತ್ತರ ಕೊಡುತ್ತ ಕೂರಲು ನಾನು ಸಿದ್ದನಿಲ್ಲ…. ಕೋಳಿ ಕೂಗದೆಯೂ ಬೆಳಗಾಗುವುದು ಎನ್ನುವುದನ್ನು ಯಾರೂ ಮರೆಯಬಾರದು…

ಇದುವರೆಗು ಸಂಗಾತಿಗೆ ಬರೆದವರಿಗು ಓದಿದವರಿಗು ನಾನು ಋಣಿ

ಬರಲಿರುವ ಹೊಸ ವರ್ಷದಲ್ಲಿ ಮತ್ತಷ್ಟು ಬದಲಾವಣೆಗಳೊಂದಿಗೆ ಸಂಗಾತಿ ಹೊರಬರಲಿದೆ

One thought on “ನಿಮ್ಮೊಂದಿಗೆ

  1. ಬಹಳ ಒಪ್ಪುವಂತಹ ವಿಷಯ.
    ಹೊಸಬರು ಹಳಬರು ಶ್ರೇಷ್ಠ ಶ್ರೇಷ್ಠವಲ್ಲ ದ್ದು ಇದರ ಬಗ್ಗೆ ಹೆಚ್ಚು ಪರಿಚಯವಿಲ್ಲ.
    ನನ್ನ ಮಟ್ಟಿಗೆ ಈ ಬರಹ ಲೋಕಕ್ಕೆ ನಾನು ಅಂಬೆಗಾಲಿಡುತ್ತಿರುವ ಮಗು… ಈ ಪತ್ರಿಕೆ ನನಗೆ ತಂದೆ ತಾಯಿಯಾಗಿ ಯೂ, ಗುರು ವಾಗಿಯೂ, ಸ್ನೇಹಮಯಿ ಯಾಗಿಯೇ ಪ್ರೀತಿ ವಿಶ್ವಾಸಗಳಿಂದ ಸಾಂಗತ್ಯವನ್ನು ನೀಡಿದೆ…
    ನನ್ನ ಬರವಣಿಗೆಯನ್ನು ಪ್ರಕಾಶಿಸಿದ ವರಿಗೂ, ಓದಿದವರಿಗೂ, ಇಷ್ಟಪಟ್ಟವರಿಗೂ, share ಹಾಗು commentದವರಿಗೆಲ್ಲಾ ಚಿರಋಣಿ…
    .

Leave a Reply

Back To Top