ಕಾವ್ಯಯಾನ

Crucifix

ಆತನೊಲವು ಆತ್ಮ ಭಲವು

ಜಗವ ಪ್ರೀತಿಸಿದ ಸಂತನ ಹುಟ್ಟು ಹಬ್ಬದ ಶುಭಾಷಯಗಳು

ಸತ್ಯಮಂಗಲ ಮಹಾದೇವ

ಕೇಳುತ್ತೀರಿ ನೀವು
ನೀನು ಯಾರು ಎಂದು
ಉತ್ತರಿಸಿದರೆ ಸಾಕು ನಿಮ್ಮದೇ ಉಯಿಲು
ಲೋಕದ ಪಡಸಾಲೆಯಲ್ಲಿ
ಹೇಳುವುದನ್ನು ಹೇಳಲೇ ಬೇಕು

ಕಲ್ಲು ಮುಳ್ಳಿನ ಹಾದಿಯಲಿ
ಮುಳ್ಳಿನ ಕಿರೀಟ ಹೊತ್ತ ಸಂತ
ಮೈ ತುಂಬಾ ರಕ್ತದ ಧಾರೆ ಹರಿಯುತ್ತಿರಲು
ಪ್ರೇಮದ ಸಾಕ್ಷಿ ಈ ರಕುತವೆಂದ
ತಿವಿದವರ ತಿಳುವಳಿಕೆಯ ಕ್ಷಮಿಸಿರೆಂದ
ಸಂಕಟಪಡುವವರ ಆತ್ಮ ಸಖನಾದ
ನನ್ನೊಳಗೆ ನನ್ನನ್ನು ತಿಳಿಸಿದ

ನೀನು ಯಾರು
ಯಾವ ಊರು, ಯಾರಮಗ, ಯಾವ ಜಾತಿ
ಆತ ಯಾವುದನ್ನು ಕೇಳದೆ
ನನ್ನವನು ನೀನೆಂದ
ಸಂತಸವು ಏನೆಂದು ತಿಳಿಸಿಕೊಟ್ಟ
ಊರ ಹೊರಗಿನ ಹಟ್ಟಿಹುಡುಗನಿಗೆ
ಗೆಳೆಯನಾದ ನಿನಾದದ ನಾದದಂತಾದ

ಕೊಟ್ಟಿಗೆಯಲಿ ಹುಟ್ಟಿದ
ಕಟ್ಟಕಡೆಯವನ ಮುಟ್ಟಿದ
ತನ್ನಂತೆ ಇತರರನು ನೋಡೆಂದ
ನೋವುಂಡು ನಲಿವಿನ ರಾಜ್ಯದ ಭರವಸೆಯ ಕೊಟ್ಟ
ಈತ ಹೇಳುವುದು ನಾನು ಶಾಶ್ವತ ಗೆಳೆಯ
ಹುಡುಕಿ ಕೊಡಿ ಯಾರಾದರು ಇದ್ದಾರೆಯೇ ಇವನಂತೆ

ನೊಂದವರಿಗೆ ಅವ ಕಣ್ಣೀರು ಒರೆಸುವ ಸೇವಕ
ನಮ್ಮೂರ ಸಂತೆಯ ಗೆಣೆಕಾರ
ಯಾರು ಎಂದು ಮತ್ತೆ ಕೇಳಬೇಡಿ
ಆತನೊಲವು ಆತ್ಮ ಭಲವು ಬೇರೆ ಬೇಕೆ ಸಾಕ್ಷಿಗೆ.

==================================

Leave a Reply

Back To Top