ಪ್ರಸ್ತುತ

ಪ್ರಸ್ತುತ

ಬಸವಣ್ಣನವರು ಉಮೇಶ ಮುನವಳ್ಳಿ ಶಿಕ್ಷಿತರಲ್ಲಿ ಅನೇಕರು ನಾವು ಬಸವಣ್ಣನವರನ್ನು ಕೇವಲ ಸಮಾಜ ಸುಧಾರಕ, ಕ್ರಾಂತಿಕಾರಿ, ದಾರ್ಶನಿಕ ಇದೇ ಪರಿಧಿಗೆ ಸೀಮಿತಗೊಳಿಸಿದ್ದೇವೆ. ಇದರಾಚೆ ಅವನನ್ನು ಕಂಡುಕೊಳ್ಳುವ ಒಳಗಣ್ಣಿನ ಕೊರತೆ ನಮ್ಮಲ್ಲಿ ಎದ್ದುಕಾಣುತ್ತದೆ. ಅದೇ ನಮ್ಮ ಗ್ರಾಮೀಣ ಜನಕ್ಕೆ ಬಸವಣ್ಣ ಒಬ್ಬ ದೇವ, ದೈವ, ಕೇಳಿದ್ದನ್ನು ಕೊಡುವ ಕಲ್ಪವೃಕ್ಷ! ಕೇವಲ ಶಬ್ದಗಳಲ್ಲಿ ಹಿಡಿದಿಡಲಾಗದ ‘ಅಗಮ್ಯ, ಅಗೋಚರ, ಅಪ್ರತಿಮ’ ವ್ಯಕ್ತಿತ್ವ ಅವನದು. ಅವನ ಆ ಘನ ವ್ಯಕ್ತಿತ್ವವನ್ನು ಒಳಗೊಳ್ಳದಷ್ಟು ಚಿಕ್ಕವಾದವೇ ನಮ್ಮ ಮನಸ್ಸಿನ ಪಾತ್ರೆಗಳು? ದೋಷ ನಮ್ಮ ಪಾತ್ರೆಯಲ್ಲಿದೆ. ಮೇಲಾಗಿ ಅವನನ್ನು […]

ಕಾವ್ಯಯಾನ

ನಿಶ್ಯಬ್ದ ವೀಣಾ ರಮೇಶ್ ಕತ್ತಲೆಯ ಬಿಳಿ ಮಂಚದಲಿ ಮಲಗಿರುವೆ ಕನಸುಗಳು ಬೀಳುತ್ತಿವೆ ಎಬ್ಬಿಸಬೇಡಿ ನೆನಪುಗಳೆ, ಸದ್ದು ಮಾಡದಿರಿ ಎದೆಯ ಬಡಿತದ ಸದ್ದು ಇಲ್ಲಿಗೂ ಕೇಳಿಸುತ್ತಿದೆ ಮತ್ತೆ ಬೆಳಕಾದರೆ ನನಗಿಲ್ಲ ಬಿಡುವು ಮತ್ತೆ ನೀ ನಸು ನಾಚಿ ಬಂದರೆ ಬಾವನೆಗಳ ಹರಿವು, ನನ್ನೊಳಗೂ ನೀನು ಹೊರಗೂ ನೀನು ನಿನ್ನ ಕನಸುಗಳ ಹೊದಿಕೆ ಬೇಕಾಗಿತ್ತು,ಮತ್ತೆ ನೆನಪುಗಳು ದಾಳಿ ಮಾಡದಿರಲಿ ಸೂರ್ಯೋದಯದ ಮೊದಲು ನಿನ್ನ ನಗುವಿನ ನಂದಾದೀಪ ನೋಡಬೇಕು ನಾನು ಬಂದು ಬಿಡು ಕಾರಣವಿಲ್ಲದೆ ಮತ್ತೆ ತೆರಳಬೇಡ ಸದ್ದಿಲ್ಲದೆ. ***********

ಸ್ವಾತ್ಮಗತ

ಶಾಂತಾದೇವಿ ಕಣವಿ ಚೆನ್ನವೀರ ಕಣವಿಯವರ ಪತ್ನಿ ಶಾಂತಾದೇವಿ ಕಣವಿಯವರ ಸಾಹಿತ್ಯಕ ಕೊಡುಗೆಯೂ..! ಅಲ್ಲದೇ ಇವರಂತೆ ಸಾಹಿತ್ಯಕ್ಕೆ ಕೊಡುಗೆ ನೀಡಿದ ಸಾಹಿತ್ಯಕ ದಂಪತಿಗಳೂ..!! ಶಾಂತಾದೇವಿ ಕಣವಿ ಅವರು ಈಗ ತೀರಿದ್ದಾರೆ. ಅವರಿಗೆ ಗೌರವ ನಮನ ಸಲ್ಲಿಸುತ್ತಾ ಅವರಂತೆಯೇ ಇತರ ಸಾಹಿತ್ಯಕ ದಂಪತಿಗಳ ಬಗೆಗೂ ನೋಡೋಣ. ಅವರು ಹೀಗಿದ್ದಾರೆ ನೋಡಿ. ಶಾಂತಾದೇವಿ ಕಣವಿ, ಅವರು ಜನಿಸಿದ್ದು1933ರ ಜನೆವರಿ 17 ರಂದು ವಿಜಾಪುರದಲ್ಲಿ. ತಂದೆಯವರು ಸಿದ್ದಬಸಪ್ಪ ಗಿಡ್ನವರ, ತಾಯಿಯವರು ಭಾಗೀರಥಿ ದೇವಿ. ಇಂತಹ ಶಾಂತಾದೇವಿ ಕಣವಿಯವರ ಪ್ರಕಟಿತ ಕೃತಿಗಳು– ಸಂಜೆ ಮಲ್ಲಿಗೆ […]

ಕಾವ್ಯಯಾನ

ಸಾಕ್ಷಿ ವೀಣಾ ನಿರಂಜನ್ ರೆಕ್ಕೆಯಿಲ್ಲದ ಹಕ್ಕಿಯೊಂದು ಹಾರುವುದ ಕಂಡಿರಾ ಹಾಯಿಯಿಲ್ಲದ ದೋಣಿಯೊಂದು ಚಲಿಸುವುದ ಕಂಡಿರಾ ನೆರಳಿಲ್ಲದ ಜೀವವೊಂದು ನಡೆಯುವುದ ಕಂಡಿರಾ ಬಿಸಿಲು, ಗಂಧ, ಗಾಳಿ ಸೋಂಕದ ನೆಲೆಯೊಂದ ಕಂಡು ನಿಟ್ಟುಸಿರು ಬಿಟ್ಟಿತು ಕವಿತೆ ಚಿತ್ರ ಕಟ್ಟಿ ಕೊಟ್ಟ ಶಬ್ದಗಳೆಲ್ಲ ಒಣಗಿ ಬಿಟ್ಟವು ಎಲ್ಲಿತ್ತೊ? ಹೇಗಿತ್ತೊ? ಮಾಯದ ಚಿಟ್ಟೆಯೊಂದು ಹಾರಿ ಬಂದು ಅವಳ ನೆತ್ತಿ ಮೂಸಿ ಮುತ್ತನಿಟ್ಟಿತು ಕನಸುಗಳು ಅರಳಿದವು ನೆನಪುಗಳು ಮರುಕಳಿಸಿದವು ನೆಲ ನಗ ತೊಡಗಿತ್ತು! ********

ಕಾವ್ಯಯಾನ

ಅಸ್ತಿತ್ವ ಮೇಗರವಳ್ಳಿ ರಮೇಶ್ ನಾನೊಬ್ಬ ಸಾಧಾರಣ ಮನುಷ್ಯ!ಬರೀ ಮನುಷ್ಯನಲ್ಲತನ್ನನ್ನು ಜನ ಗುರುತಿಸ ಬೇಕೆಂಬ ಹಂಬಲದಒಬ್ಬ ಕವಿಯೂ ಇದ್ದಾನೆ ನನ್ನೊಳಗೆ! ಹಾಗೆ ನೋಡಿದರೆ ನಾನೂ ಬರೆದಿದ್ದೇನೆಹಲವಾರು ವರ್ಷಗಳಿಂದ ನೂರಾರು ಕವಿತೆಗಳನ್ನ.ಪತ್ರಿಕೆಗಳಲ್ಲೂ ಬೆಳಕು ಕಂಡಿವೆ ಹಲವಾರು ಕವಿತೆಗಳು.ನನ್ನದೊಂದು ಕವಿತಾ ಸಂಕಲನವೂ ಹೊರಬಂದಿದೆ!ಆದರೂ ನಾನು ಗುರುತಿಸಲ್ಪಡುವುದಿಲ್ಲ!ಎದುರು ಬಂದವರು ಸುಮ್ಮನೇ ನಕ್ಕು ಮುಂದೆ ಸಾಗಿ ಬಿಡುತ್ತಾರೆನಾನು ಏನೂ ಅಲ್ಲವೆಂಬಂತೆ!ಸಾಹಿತ್ಯ ದಿಗ್ಗಜರ ಕಣ್ಣಲ್ಲಂತೂನಾನೊಬ್ಬ ನಗಣ್ಯ ಕವಿ! ಮೊನ್ನೆ ಮೇಗರವಳ್ಳಿಗೆ ಹೋದವನುಬೆಳಗಿನ ವಾಕಿಂಗ್ ಮಾಡುತ್ತಾ ಸಾಗಿದ್ದೆನಿಃಶಬ್ದ, ಪ್ರಶಾಂತ ಪರಿಸರದ ನಡುವೆ ಸಾಗುವ ಹಾದಿ ಗುಂಟ!ಥಟ್ಟನೇ ಕಾಣಿಸಿತಾಗ […]

ಅನುವಾದ ಸಂಗಾತಿ

ಚಿರಂಜೀವಿ ಮೂಲ ಮಲಯಾಳಂ:ರಾಧಾಕೃಷ್ಣ ಪೆರುಂಬಳ ಕನ್ನಡಕ್ಕೆ:ಚೇತನಾ ಕುಂಬ್ಳೆ ಮರಣ ಇತರರಿಗಿರುವುದು ರೋಗಗಳೂ ದುರಂತಗಳೂ ಅವರಿಗಾಗಿಯೇ ನನಗಲ್ಲ ಮರಣ ಪಕ್ಕದಮನೆಯಲ್ಲೇ ಇದೆ ಅನ್ಯ ಜಾತಿ ಮತದವರಿಗೆ ಬೇರೆ ಪಕ್ಷದಲ್ಲಿರುವವರಿಗೆ ನನ್ನ ಯಾರಾದರೂ ಬಂಧುಗಳೋ, ಗೆಳೆಯರೋ ಅಥವಾ ಯಾರಾದರೂ ನಾಯಕರು ಅದೇ ರೀತಿ ನೆರೆಕರೆಯವರು ನಿಧನರಾದಾಗಲೋ, ರೋಗಬಾಧಿತರಾದಾಗಲೋ ಅಪಘಾತಕ್ಕೊಳಗಾದಾಗಲೋ ಅಂಥ ದುಃಖದಲ್ಲಿ ನನಗೂ ಪಾಲ್ಗೊಳ್ಳುವ ಅವಕಾಶವಿದೆ ಆಗ ನಾನೂ ದುಃಖಪಡುತ್ತೇನೆ ಅಲ್ಲಿಗೆ ಭೇಟಿ ನೀಡುತ್ತೇನೆ ಅವರ ನೋವಿನಲ್ಲಿ ಭಾಗಿಯಾಗುತ್ತೇನೆ ಸಾಂತ್ವನ ಪಡಿಸುತ್ತೇನೆ, ಸಹಾಯ ಮಾಡುತ್ತೇನೆ ಹೂ ಇಡುತ್ತೇನೆ, ಭಾಷಣ ಮಾಡುತ್ತೇನೆ […]

ಕಾವ್ಯಯಾನ

ಗಝಲ್ ರತ್ನರಾಯಮಲ್ಲ ಬಾಳಲ್ಲಿ ಎಡರು ತೊಡರುಗಳು ಬಂದಾಗ ನಿನ್ನ ಸಹಾಯ ಬೇಕು ಸಾಮಾಜಿಕ ವ್ಯವಸ್ಥೆಯು ಎದುರಾದಾಗ ನಿನ್ನ ಸಹಾಯ ಬೇಕು ಈ ಜೀವನದಲ್ಲಿ ನಿನ್ನನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲ ಅನುದಿನವು ನಾನು ಹೊಸ್ತಿಲು ದಾಟುವಾಗ ನಿನ್ನ ಸಹಾಯ ಬೇಕು ರಜನಿಗೆ ರಜನೀಚರ ಬೆಂಗಾವಲಾಗಿರುವನು ರವಿ ಮೂಡೊವರೆಗೆ ಕರಾಳ ಅಂಧಕಾರವು ನನಗೆ ಅಪ್ಪಿದಾಗ ನಿನ್ನ ಸಹಾಯ ಬೇಕು ಅನುರಾಗದ ನಿಷ್ಠೆಯಿಂದ ನಾನು ನಿನ್ನನ್ನು ಹಿಂಬಾಲಿಸುತಿದ್ದೇನೆ ಜೀವನದಲ್ಲಿ ಉಸಿರಿನೊಂದಿಗೆ ಆಡುವಾಗ ನಿನ್ನ ಸಹಾಯ ಬೇಕು ನಾವು ಮೊದಲೇ ಭೇಟಿಯಾಗಿದ್ದೆವೆಂದು […]

ಕಾವ್ಯಯಾನ

ಮೌನ ಭಾಷೆ ಸರೋಜಾ ಶ್ರೀಕಾಂತ್ ಅದಾವುದೋ ದೂರದ ಭಾವಗಳೂರಿಗೆ ಬರಸೆಳೆದ ಗಳಿಗೆಯಲ್ಲೇ..! ಮತ್ತಾವುದೂ ನೆನಪಾಗದಂತೆ ಮರೆಸಿ ಕಾಡಿದವನು ಕ್ಷಣದಲ್ಲೇ..!! ತಣ್ಣನೆಯ ತಂಗಾಳಿಯಲ್ಲೂ ನುಸುಳಿ ನಸು ನಾಚಿಸಿದವನಿವನೆ..! ಹೊಂಬಿಸಿಲಿನ ಹೊನ್ನ ರಶ್ಮಿಯಲ್ಲೂ ತುಸು ಸಂಚರಿಸಿದವನಿವನೇ..!! ಹಸಿರಸಿರಿನ ತುಂತುರು ಹನಿ ಹನಿಯಲ್ಲೂ ನಿನ್ನಿರುವಿನ ರೋಮಾಂಚನ..! ಅರಳಿದ ಸುಮದೊಳಗಿನ ಘಮವೂ ನಿನ್ನರಿವಿನ ಅನಾವರಣ..!! ಸ್ಪರ್ಶದುಸಿರಿಗೆ ಸಂಪ್ರೀತಿಯ ಹೂಬಾಣ ಬಿಟ್ಟು ಪ್ರೇಮದ ಹೆಸರಿಟ್ಟವ ನೀನೆ..! ಮೊದಲೊಲವಿನ ಮೌನ ಭಾಷೆಗೆ ಮರುಧ್ವನಿಯ ಮಾತು ಶುರು ನಿನ್ನಿಂದಲೇ..!! *********

ಗಾಳೇರ್ ಬಾತ್

ಗಾಳೇರ್ ಬಾತ್-05 ಬಿ.ಸಿ.ಎಮ್ hostelನಲ್ಲಿ ಅಡ್ಡ ಹೆಸರುಗಳು……. ಇವತ್ತು ನಾನೇನಾದರೂ ಒಂದೆರಡು ಅಕ್ಷರ ಬರೆದು ನಿಮಗೆ ಓದ್ಲಿಕ್ ಹಚ್ಚಿನಂದ್ರ ಆಯಪ್ಪನ ಋಣನ ನಾನ್ಯಾವತ್ತೂ ಮರೆಯೋ ಆಗಿಲ್ಲ. ನಾನಷ್ಟೇ ಅಲ್ಲ! ಎಷ್ಟೋ ಬಡ ವಿದ್ಯಾರ್ಥಿಗಳಿಗೆ ದೇವರಾಜ ಅರಸರು ನನ್ನಂತ ಆರಕ್ಕೇರದ ಮೂರಕ್ಕಿಳಿಯದ ಕುಟುಂಬದ ಮಕ್ಕಳಿಗೆ ತಂದೆತಾಯಿ ಎಲ್ಲವನ್ನೂ ಆಗಿಬಿಟ್ಟಿದ್ದ. ಇಂತಹ ದೇವರಾಜ ಅರಸುರವರ ಸ್ಥಾಪಿಸಿದ ಬಿಸಿಎಂ ಹಾಸ್ಟೆಲ್ನಲ್ಲಿ ನನ್ನ ಪ್ರೌಢಶಿಕ್ಷಣ ಮುಗಿಸಿದೆ.       ಆ ವಯಸ್ಸಿನಲ್ಲಿ  ಅಲವಾರು ಸ್ವಾರಸ್ಯಕರ ಘಟನೆಗಳು, ವಿಚಿತ್ರವಾದ ಸಂಗತಿಗಳು ನಡೆದಿದ್ದವು. ಅವು ನನಗಷ್ಟೇ ಅಲ್ಲ […]

ಕಾವ್ಯಯಾನ

ಇಂದಿನ ಕವಿತೆ ಡಾ.ವೈ.ಎಂ.ಯಾಕೊಳ್ಳಿ ಬೇಡ ಗೆಳೆಯ ನನ್ನ ಕವಿತೆಗಳಲ್ಲಿ ನನ್ನ ಹುಡುಕಬೇಡ ಬರೀ ನನ್ನ ಬಗ್ಗೆ ನಾನು ಬರೆದರೆ ಕವಿಯಾಗಲಾರೆ ಕೂಡ ಪಕ್ಕದ‌ಮನೆಯಲಿ ಹಸಿದವರ ಅರೆಹೊಟ್ಟೆಯ‌ ಬಗ್ಗೆ ಬರೆಯದಿರೆ ನನ್ನ ಕವಿತೆ ಆಗಬಹುದು ಬರೀ ಪದಗಳ ಸಂತೆ ಸುತ್ತಲಿನ ಜಗದಲಿ ನೋವಿಂದ ನಲುಗಿರಲು ನನ್ನ ಮಂದಿ ಚಂದ್ರ ತಾರೆಗಳ ಬಗ್ಗೆ ಹಾಡು ಕಟ್ಟಿದರೆ ನಾ ಎಂಥ ಕವಿಯು ಅಂದಿ ನನ್ನ ಹಾಡು ಜೊತೆಯಾಗಬೇಕು ಗೆಳೆಯ ನನ್ನೂರ ರೈತ ಗೆಳೆಯನ ನೇಗಿಲ ಕುಳಕೆ ರಾಟಿಯ ಎತ್ತುಗಳ ನೊಗದಿ ಬಾವಿಯಾಳವ […]

Back To Top